ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಎನ್‌ಐಸಿ ತಾಂತ್ರಿಕ ಸಮ್ಮೇಳನ 2022 ಅನ್ನು ಉದ್ಘಾಟಿಸಿದರು


ಸಮ್ಮೇಳನವು ವಿಶೇಷವಾಗಿ ಇ-ಆಡಳಿತದಲ್ಲಿ ಅನ್ವಯವಾಗುವ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕೃತ

Posted On: 04 MAR 2022 9:16AM by PIB Bengaluru

ರಾಷ್ಟ್ರೀಯ ಮಾಹಿತಿ ಕೇಂದ್ರ  (ಎನ್‌ಐಸಿ) #TechConclave2022  - ಟೆಕ್‌ ಕಾನ್ಕ್ಲೇವ್2022 (ತಾಂತ್ರಿಕ ಸಮ್ಮೇಳನ) ಅನ್ನು ವಿಶೇಷವಾಗಿ -ಆಡಳಿತದಲ್ಲಿ ಅನ್ವಯಿಸುವ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದೆ - “ಡಿಜಿಟಲ್ ಸರ್ಕಾರಕ್ಕಾಗಿ ಮುಂದಿನ ತಲೆಮಾರಿನ ತಂತ್ರಜ್ಞಾನಗಳು”. ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತ್ತು  ಮಾಹಿತಿ ತಂತ್ರಜ್ಞಾನ  ಸಚಿವಾಲಯದ  ಕಾರ್ಯದರ್ಶಿ ಶ್ರೀ ಕೆ. ರಾಜಾರಾಮನ್, ಹೆಚ್ಚುವರಿ ಕಾರ್ಯದರ್ಶಿ ಡಾ. ರಾಜೇಂದ್ರ ಕುಮಾರ್, ಎನ್‌ಐಸಿ ಮಹಾನಿರ್ದೇಶಕಿ ಡಾ. ನೀತಾ ವರ್ಮಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್, ಸರ್ಕಾರ ಮತ್ತು ಆಡಳಿತದಲ್ಲಿ ತಂತ್ರಜ್ಞಾನವನ್ನು ತರುವಲ್ಲಿ ಎನ್‌ಐಸಿ ಪ್ರಮುಖ ಪಾತ್ರ ವಹಿಸುತ್ತಿದೆ. ತಂತ್ರಜ್ಞಾನದ ಭವಿಷ್ಯಕ್ಕಾಗಿ ಯೋಜನೆಯನ್ನು ರೂಪಿಸುವುದು, ಎನ್‌ಐಸಿಯ ಗುಣಲಕ್ಷಣವಾಗಿದೆ ಎಂದು ಅವರು ಹೇಳಿದರು.

ಸಚಿವಾಲಯದ ಕಾರ್ಯದರ್ಶಿ ಶ್ರೀ ಕೆ. ರಾಜಾರಾಮನ್, ಎನ್‌ಐಸಿಯನ್ನು ತನ್ನ ವಿನೂತನ ಉತ್ಪನ್ನಗಳಿಗಾಗಿ ಅಭಿನಂದಿಸಿದರು ಮತ್ತು ಸಮ್ಮೇಳನವು ನವೀನ ಕಾರ್ಯ ವಿಧಾನಗಳನ್ನು ಮತ್ತು ನಾಗರಿಕರಿಗೆ ಮಾಡಬಹುದಾದ ಹೊಸ ವ್ಯವಸ್ಥೆಗಳನ್ನು ರೂಪಿಸಲು ಒಂದು ಅವಕಾಶವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ಅವರು ಎನ್‌ಐಸಿ ತಂಡವನ್ನು ಅದರ ಆಮೂಲಾಗ್ರವಾಗಿ ಬದಲಾದ ಪ್ರಮುಖ ಉತ್ಪನ್ನವಾದ -ಆಫೀಸ್‌  ಗಾಗಿ ಅಭಿನಂದಿಸಿದರು.

ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ರಾಜೇಂದ್ರ ಕುಮಾರ್ ರವರು ತಮ್ಮ ಭಾಷಣದಲ್ಲಿ, ಡಿಜಿಟಲ್ ಸರ್ಕಾರದ ಸಂಪೂರ್ಣ ಮಾದರಿಯನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ದೊಡ್ಡ ವೇದಿಕೆಗಳನ್ನು ನಿರ್ಮಿಸುವಲ್ಲಿ ವಿದ್ಯುನ್ಮಾನ ಮತ್ತು  ಮಾಹಿತಿ ತಂತ್ರಜ್ಞಾನ  ಸಚಿವಾಲಯ ಮತ್ತು ಎನ್‌ಐಸಿ ನಿರಂತರ ಪ್ರಯತ್ನಗಳು ಮತ್ತು ಸೇವೆಗಳನ್ನು ತಡೆರಹಿತ, ಸುಲಭವಾಗಿ ಎಟುಕುವ, ಜೀವನ ಸೌಕರ್ಯವನ್ನು ಸುಧಾರಿಸುವ ಅವಕಾಶ ಮತ್ತು ವ್ಯಾಪಾರ ಮಾಡುವುದು, ಮುಂಬರುವ ಸಮಯದಲ್ಲಿ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಿದರು.

ಡಾ.ನೀತಾ ವರ್ಮಾ, ಡಿಜಿ, ಎನ್‌ಐಸಿ ಸ್ವಾಗತ ಭಾಷಣದಲ್ಲಿ, ಮಾನ್ಯ ಪ್ರಧಾನ ಮಂತ್ರಿಗಳು ಪ್ರಾರಂಭಿಸಿದ ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ದೇಶದ ಡಿಜಿಟಲ್ ರೂಪವನ್ನು ಬದಲಾಯಿಸಿದೆ ಎಂದು ಹೇಳಿದರು. ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು, ಡಿಜಿಟಲ್ ಪಾವತಿಗಳು, ಕ್ಲೌಡ್ ಮೂಲಸೌಕರ್ಯ ಮತ್ತು ನವೋದ್ಯಮಗಳ ಪರಿಸರ ವ್ಯವಸ್ಥೆಗಳಲ್ಲಿನ ಪ್ರಚಂಡ ಬೆಳವಣಿಗೆಯು ನಮ್ಮ ಸುತ್ತಲೂ ತಂತ್ರಜ್ಞಾನ ಚಾಲಿತ  ನಾವೀನ್ಯತೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಎನ್‌ಐಸಿ ಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ  ಶ್ರೀ ರಾಜೀವ್ ಚಂದ್ರಶೇಖರ್ ಅವರುʼ #75 ಡಿಜಿಟಲ್‌ ಸಲ್ಯೂಶನ್ಸ್ ಫ್ರಂ ಎನ್‌ಐಸಿʼ ಶೀರ್ಷಿಕೆಯ -ಪುಸ್ತಕವನ್ನು ಬಿಡುಗಡೆ ಮಾಡಿದರು. ನಾಗರಿಕರು, ವ್ಯವಹಾರಗಳು ಮತ್ತು ಸರ್ಕಾರಕ್ಕಾಗಿ ಎನ್‌ಐಸಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ-ಚಾಲಿತ ಪರಿಹಾರಗಳ ಸಹಾಯದಿಂದ ಡಿಜಿಟಲ್ ರೂಪಾಂತರದ ಮೂಲಕ ಸಾಧಿಸಲಾದ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಉಪಕ್ರಮಗಳ ಪ್ರಯೋಜನಗಳನ್ನು -ಪುಸ್ತಕ ವಿವರಿಸುತ್ತದೆ. -ಪುಸ್ತಕವು ಕೊಂಡಿಯಲ್ಲಿ ಲಭ್ಯವಿದೆhttps://uxdt.nic.in/flipbooks/75-Digital-Solutions-from-NIC/  

ಎನ್‌ಐಸಿ  ಮಹಾನಿರ್ದೇಶಕರಾದ  ಡಾ. ನೀತಾ ವರ್ಮಾ ಅವರ ಸಂಪಾದಿತ ಕೃತಿ  ”ಸಿಟಿಝೆನ್ ಎಂಪವರ್‌ಮೆಂಟ್ ತ್ರೂ ಡಿಜಿಟಲ್‌ ಟ್ರಾನ್ಸ್ ಫಾರ್ಮೇಶನ್ ಇನ್‌ ಗೌರ್ನಮೆಂಟ್‌ಎಂಬ ಪುಸ್ತಕವನ್ನು ಕೂಡ ಸಚಿವರು ಬಿಡುಗಡೆ ಮಾಡಿದರುದೇಶಾದ್ಯಂತ ಡಿಜಿಟಲ್ ಮೂಲಸೌಕರ್ಯ ಮತ್ತು ಸೇವೆಗಳಲ್ಲಿ ಕೆಲಸ ಮಾಡುವ NIC ಅಧಿಕಾರಿಗಳ ದೃಷ್ಟಿಯಿಂದ ಪ್ರಸ್ತುತಪಡಿಸಲಾದ ವಿವಿಧ ಕ್ಷೇತ್ರಗಳ ತಂತ್ರಜ್ಞಾನ ಚಾಲಿತ  ರೂಪಾಂತರ ಮತ್ತು ಅವುಗಳ ವಿಕಾಸವನ್ನು ಪುಸ್ತಕವು ತಿಳಿಸುತ್ತದೆ.

ಪರ್ಸಿಸ್ಟೆಂಟ್ ಸಿಸ್ಟಮ್ಸ್ ಸಂಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ದೇಶಪಾಂಡೆಡಿಜಿಟಲ್ ಸರ್ಕಾರಕ್ಕಾಗಿ ಮುಂದಿನ ಪೀಳಿಗೆಯ ತಂತ್ರಜ್ಞಾನಗಳು" ಕುರಿತು ಮುಖ್ಯ ಭಾಷಣ ಮಾಡಿದರು.

ಸಣ್ಣ (ನ್ಯಾನೋ) ಉದ್ಯಮಿಗಳ ಪರಿಕಲ್ಪನೆಯತ್ತ ಗಮನಹರಿಸುವ ಅಗತ್ಯವಿದೆ ಎಂದ ಅವರು ದತ್ತಾಂಶ ಮತ್ತು ಯಂತ್ರ ಕಲಿಕೆ, ಅಪ್ಲಿಕೇಶನ್‌ಗಳು ಮತ್ತು ಎಪಿಐಗಳು, ಮೆಟಾವರ್ಸ್, ವೆಬ್ 3 ಮತ್ತು ಕ್ರಿಪ್ಟೋ ಮತ್ತು ಭದ್ರತೆ ಮತ್ತು ಗೋಪ್ಯತೆ ತಂತ್ರಜ್ಞಾನಗಳಲ್ಲಿನ ಹೂಡಿಕೆಗಳು ಮತ್ತು ಭವಿಷ್ಯದಲ್ಲಿ ಅವುಗಳ ಬಳಕೆಯ ಕುರಿತು ಅವರು ವಿವರಿಸಿದರು.

ಸಿಐಎಸ್‌ಸಿಒ ಇಂಡಿಯಾ ಮತ್ತು ಸಾರ್ಕ್‌ನ ಅಧ್ಯಕ್ಷೆ ಶ್ರೀಮತಿ ಡೈಸಿ ಚಿತ್ತಿಲಪಿಲ್ಲಿ ಅವರು ತಮ್ಮ ಮುಖ್ಯ ಭಾಷಣದಲ್ಲಿ ತಂತ್ರಜ್ಞಾನವು ಭಾರತದ ಶ್ರೇಷ್ಠ ಮಿತ್ರ ಎಂದು ಹೇಳಿದರು.

ಈಗ ಕಾರ್ಯ ವಿಧಾನಗಳನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ ಮತ್ತು ಹೊಸ ವ್ಯವಹಾರ ಮಾದರಿಗಳನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ, ಇದರಿಂದಾಗಿ  ತಂತ್ರಜ್ಞಾನವನ್ನು ಉತ್ತಮ ಮತ್ತು ಹೆಚ್ಚು ಸಮಗ್ರ ಅಭಿವೃದ್ಧಿಗೆ ಬಳಸಬಹುದು.

ಎನ್‌ಐಸಿಯ ಟೆಕ್ ಕಾನ್ಕ್ಲೇವ್ 2022 ಇತ್ತೀಚಿನ ಐಸಿಟಿ ತಂತ್ರಜ್ಞಾನಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳು ಮತ್ತು ಉದ್ಯಮದ ಅತ್ಯುತ್ತಮ ಅಭ್ಯಾಸಗಳು, ಅವುಗಳ ಬಳಕೆಯ ಕುರಿತು ಸರ್ಕಾರದ ಸಚಿವಾಲಯಗಳು/ಇಲಾಖೆಗಳ ಐಟಿ ವ್ಯವಸ್ಥಾಪಕರನ್ನು ಉತ್ಕೃಷ್ಟಗೊಳಿಸುತ್ತದೆ. ರಾಜ್ಯಗಳಲ್ಲಿ ಹೊರತರಬಹುದಾದ ಹೊಸ ತಂತ್ರಜ್ಞಾನಗಳು ಮತ್ತು ಅಪ್ಲಿಕೇಶನ್‌ಗಳನ್ನು ಸೂಕ್ತವಾಗಿ ಅರಿಯಲು ರಾಜ್ಯ ಸರ್ಕಾರಗಳ ಐಟಿ ಕಾರ್ಯದರ್ಶಿಗಳಿಗೆ ಇದು ವೇದಿಕೆಯನ್ನು ಒದಗಿಸುತ್ತದೆ. ಇದು ಸರ್ಕಾರದ ಕೈಗಾರಿಕೆ ಮತ್ತು ಐಟಿ ವ್ಯವಸ್ಥಾಪಕರ ನಡುವೆ ಸಂವಹನವನ್ನು ಸುಗಮಗೊಳಿಸುತ್ತದೆ, ವಿಶೇಷವಾಗಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸರ್ಕಾರದಲ್ಲಿ ಸಾಮರ್ಥ್ಯ ವೃದ್ಧಿಗೆ ಅಪಾರ ಕೊಡುಗೆ ನೀಡುತ್ತದೆ ಮತ್ತು ಉತ್ತಮ ಗುಣಮಟ್ಟದ ನಾಗರಿಕ-ಕೇಂದ್ರಿತ ಸೇವೆಗಳನ್ನು ತಲುಪಿಸಲು ಸಹಾಯ ಮಾಡುತ್ತದೆ.

***



(Release ID: 1802997) Visitor Counter : 199