ಜಲ ಶಕ್ತಿ ಸಚಿವಾಲಯ

9 ಕೋಟಿ ಗ್ರಾಮೀಣ ಮನೆಗಳಿಗೆ ಕೊಳಾಯಿ ಮೂಲಕ ನೀರು ಒದಗಿಸುವ ಮಹತ್ವದ ಮೈಲಿಗಲ್ಲು ಸಾಧಿಸಿದ ಜಲಜೀವನ್ ಮಿಷನ್


2024ರ ವೇಳೆಗೆ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಸರ್ಕಾರದ ಸಂಕಲ್ಪ ಈಡೇರಿಸುವ ಹಾದಿಯಲ್ಲಿ ಜಲಜೀವನ್ ಮಿಷನ್

ಕಳೆದ 30 ತಿಂಗಳಲ್ಲಿ ಸುಮಾರು 5.77 ಕೋಟಿ ಮನೆಗಳಿಗೆ ನೀರು ಪೂರೈಕೆ

‘ಹರ್ ಘರ್ ಜಲ್’ ಮೂಲಕ ದೇಶದ 98 ಜಿಲ್ಲೆಗಳು ಮತ್ತು 1.35 ಲಕ್ಷ ಗ್ರಾಮಗಳಿಗೆ ನೀರು

ಗೋವಾ, ಹರಿಯಾಣ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೆರಿ, ದಾದ್ರ ಮತ್ತು ನಗರ್ ಹವೇಲಿ ಹಾಗೂ ದಾಮನ್ ಮತ್ತು ದಿಯುಗಳಲ್ಲಿ ಪ್ರತಿಯೊಂದು ಕುಟುಂಬಕ್ಕೂ ಕೊಳಾಯಿ ಮೂಲಕ ನೀರಿನ ಸಂಪರ್ಕ

ಮನೆಗಳಿಗೆ ದೂರದಿಂದ ಶತಮಾನಗಳಿಂದ ನೀರು ಹೊತ್ತೊಯ್ಯುತ್ತಿದ್ದ ಕಷ್ಟದಿಂದ ತಾಯಂದಿರು ಮತ್ತು ಸಹೋದರಿಯರಿಗೆ ಮುಕ್ತಗೊಳಿಸಲು ಜಲಜೀವನ್ ಮಿಷನ್ ಶ್ರಮಿಸುತ್ತಿದೆ ಮತ್ತು ಅವರ ಆರೋಗ್ಯ, ಶೈಕ್ಷಣಿಕ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಸುಧಾರಣೆ

16 ತಿಂಗಳ ಅತ್ಯಲ್ಪ ಅವಧಿಯಲ್ಲಿ ದೇಶಾದ್ಯಂತ 8.46 ಲಕ್ಷ ಶಾಲೆಗಳು(ಶೇ.82) ಮತ್ತು 8.67 ಲಕ್ಷ(ಶೇ.78)  ಅಂಗನವಾಡಿ ಕೇಂದ್ರಗಳಿಗೆ  ಶುದ್ಧ ನೀರನ್ನು ಕುಡಿಯಲು ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡುಗೆಗೆ, ಕೈ ತೊಳೆಯಲು ಮತ್ತು ಶೌಚಾಲಯಗಳ ಬಳಕೆಗೆ ಪೂರೈಕೆ

ಸುಸ್ಥಿರ ಜಲ ನಿರ್ವಹಣೆಗಾಗಿ 4.7 ಲಕ್ಷ ಪಾನಿ ಸಮಿತಿಗಳ ರಚನೆ ಮತ್ತು 3.8 ಲಕ್ಷ ಗ್ರಾಮಗಳ ಕ್ರಿಯಾ ಯೋಜನೆ ಅಭಿವೃದ್ಧಿ

ಗ್ರಾಮಗಳಲ್ಲಿ ಗುಣಮಟ್ಟದ ಪರೀಕ್ಷೆ ನಡೆಸಲು ಸುಮಾರು 9.1

Posted On: 16 FEB 2022 11:07AM by PIB Bengaluru

2024ರವೇಳೆಗೆ ದೇಶದ ಪ್ರತಿಯೊಂದು ಮನೆಗೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರುವ ಒದಗಿಸವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸಲು ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಅಡಚಣೆಗಳ ನಡುವೆಯೇ ಜಲಜೀವನ್ ಮಿಷನ್ ಎರಡೂವರೆ ವರ್ಷಗಳ ಅತ್ಯಲ್ಪ ಅವಧಿಯಲ್ಲಿ 5.77 ಕೋಟಿ ಕೋಟಿಗೂ ಅಧಿಕ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮ ಇಂದು ದೇಶದ 9 ಕೋಟಿ ಗ್ರಾಮೀಣ ಕುಟುಂಬಗಳು ಶುದ್ಧ ಕುಡಿಯುವ ನೀರು ಪೂರೈಕೆಯ ಪ್ರಯೋಜನ ಆನಂದಿಸುವಂತಾಗಿದೆ.

ಮಿಷನ್ ಅನ್ನು 2019 ಆಗಸ್ಟ್ 15ರಂದು ಘೋಷಣೆ ಮಾಡಿದಾಗ ಭಾರತದಲ್ಲಿ ಒಟ್ಟು 19.27ಕೋಟಿ ಮನೆಗಳ ಪೈಕಿ ಕೇವಲ 3.23 ಕೋಟಿ(ಶೇ.17) ಮನೆಗಳಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಸಂಪರ್ಕವಿತ್ತು. ಪ್ರಧಾನಮಂತ್ರಿ ಅವರಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ದೂರದೃಷ್ಟಿಗೆ ಅನುಗುಣವಾಗಿ ಅತ್ಯಲ್ಪ ಅವಧಿಯಲ್ಲಿ 98 ಜಿಲ್ಲೆಗಳು,  1,129 ಬ್ಲಾಕ್ ಗಳು, 66,067 ಗ್ರಾಮ ಪಂಚಾಯಿತಿಗಳು ಮತ್ತು 1,36,135 ಗ್ರಾಮಗಳಿಗೆ ಹರ್  ಘರ್ ಜಲ್ ಮೂಲಕ ನೀರು ಒದಗಿಸಲಾಗಿದೆ. ಗೋವಾ, ಹರಿಯಾಣ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೆರಿ, ದಾದ್ರ ಮತ್ತು ನಗರ್ ಹವೇಲಿ ಹಾಗೂ ದಾಮನ್ ಮತ್ತು ದಿಯುಗಳಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಕೊಳಾಯಿ ಮೂಲಕ ನೀರು ಒದಗಿಸಲಾಗಿದೆ. ಅಲ್ಲದೆ ಹಲವು ರಾಜ್ಯಗಳು ಅಂದರೆ ಪಂಜಾಬ್ (ಶೇ.99), ಹಿಮಾಚಲಪ್ರದೇಶ (ಶೇ.92.4), ಗುಜರಾತ್ (ಶೇ.92) ಮತ್ತು ಬಿಹಾರ (ಶೇ.90), ಇವುಗಳು 2022 ವೇಳೆಗೆಹರ್ ಘರ್ ಜಲ್ಪೂರ್ಣಗೊಳಿಸುವ ಹಂತ ತಲುಪಿವೆ.  

5 ವರ್ಷಗಳ ಅವಧಿಯಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಬೃಹತ್ ಕಾರ್ಯ ಸಾಧನೆಗೆ 3.60 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕೇಂದ್ರ ಬಜೆಟ್ 2022-23ರಲ್ಲಿಹರ್  ಘರ್ ಜಲ್ಯೋಜನೆಯಡಿ 3.8 ಕೋಟಿ ಕುಟುಂಬಗಳಿಗೆ ಕೊಳಾಯಿ ಮೂಲಕ ನೀರಿನ ಸಂಪರ್ಕ ನೀಡಲು 60,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ

ಅಲ್ಲದೆ, ಹೆಚ್ಚುವರಿಯಾಗಿ 2021-22 ಸಾಲಿನಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀರು ಮತ್ತು ನೈರ್ಮಲ್ಯಕ್ಕೆ 15ನೇ ಹಣಕಾಸು ಆಯೋಗದ ಅನುದಾನದ ಭಾಗವಾಗಿ  26,940 ಕೋಟಿ ರೂ. ಹಂಚಿಕೆ ಮಾಡಲಾಗಿದೆ. 2025-26ರವರೆಗೆ ಅಂದರೆ ಮುಂದಿನ 5 ವರ್ಷಗಳಿಗೆ 1,42,084 ಕೋಟಿ ರೂ. ಅನುದಾನವನ್ನು ಖಾತ್ರಿಪಡಿಸಲಾಗಿದೆ. ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಹೂಡಿಕೆಯು ಆರ್ಥಿಕ ಚಟುವಟಿಕೆಗಳ ವೇಗ ವೃರ್ಧಿಸುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ, ಜೊತೆಗೆ ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಹಿಂದಿನ ನೀರು ಪೂರೈಕೆ ಕಾರ್ಯಕ್ರಮಗಳಿಗೆ ಬದಲಾಗಿ ಮಹತ್ವದ ಬದಲಾವಣೆಗಳೊಂದಿಗೆ  ಜಲ ಜೀವನ್ ಮಿಷನ್ ನೀರಿನ ಸೇವೆ ವಿತರಣೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಕೇವಲ ನೀರು ಪೂರೈಕೆ ಮೂಲಸೌಕರ್ಯವನ್ನು ನಿರ್ಮಿಸುವುದಲ್ಲ, ಜೊತೆಗೆ  ಜಲ ಜೀವನ್ ಮಿಷನ್‌ನ ಧ್ಯೇಯವಾಕ್ಯವು 'ಯಾರೊಬ್ಬರೂ ಹೊರಗುಳಿಯಬಾರದು’’ ಎಂಬುದಾಗಿದೆ. ಹಾಗಾಗಿ ಪ್ರತಿ ಕುಟುಂಬಕ್ಕೂ ಅದರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಪರಿಗಣಿಸಿದೆ ಕೊಳಾಯಿ ನೀರು ಪೂರೈಕೆ ಸಂಪರ್ಕ ಪಡೆಯುವುದನ್ನು ಖಾತ್ರಿಪಡಿಸುತ್ತದೆ. ಜಲ ಜೀವನ್ ಮಿಷನ್, ತಾಯಂದಿರು ಮತ್ತು ಸಹೋದರಿಯರು ಮನೆಗೆ ನೀರು ತರಲು ಶತಮಾನಗಳ ಹಿಂದಿನಿಂದ ಅನುಭವಿಸುತ್ತಿದ್ದ ಕಷ್ಟದಿಂದ ಮುಕ್ತಗೊಳಿಸಲು ಶ್ರಮಿಸುತ್ತಿದೆ  ಮತ್ತು ಅವರ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಶ್ರಮಿಸುತ್ತದೆ. ಮಿಷನ್  ಜೀವನವನ್ನು ಸುಗಮಗೊಳಿಸುವ ಮೂಲಕ ಗ್ರಾಮೀಣ ಕುಟುಂಬಗಳ ಗೌರವ ಮತ್ತು ಘನತೆಯನ್ನು ಹೆಚ್ಚಿಸಿದೆ.

ಜಲಜೀವನ್ ಮಿಷನ್ ನಡಿ, ಗುಣಮಟ್ಟದ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮಗಳು, ಆಶೋತ್ತರ ಜಿಲ್ಲೆಗಳು, ಎಸ್ ಸಿ/ಎಸ್ ಟಿ ಬಹುಸಂಖ್ಯೆಯಲ್ಲಿರುವ ಜಿಲ್ಲೆಗಳು, ನೀರಿನ ಕೊರತೆ ಇರುವ ಪ್ರದೇಶಗಳು ಮತ್ತು ಸಂಸದ ಆದರ್ಶ ಗ್ರಾಮ ಯೋಜನೆ(ಎಸ್ಎಜಿವೈ) ಯಡಿ ಆಯ್ಕೆಯಾಗಿರುವ ಗ್ರಾಮಗಳಿಗೆ ನಳಾಯಿ ಮೂಲಕ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಳೆದ 24 ತಿಂಗಳಲ್ಲಿ ನಲ್ಲಿ ಮೂಲಕ ನೀರು ಪೂರೈಕೆ ನಾಲ್ಕು ಪಟ್ಟು ಹೆಚ್ಚಿದೆ ಅಂದರೆ 117 ಅಶೋತ್ತರ ಜಿಲ್ಲೆಗಳ ಕುಟುಂಬಗಳಲ್ಲಿ 24 ಲಕ್ಷ (ಶೇ.9.3)ದಿಂದ 1.36 ಕೋಟಿ (ಶೇ.40)ಗೆ  ಹೆಚ್ಚಳವಾಗಿದೆ. ಅಂತೆಯೇ 61  ಜಪಾನೀಸ್  ಎನ್ಸೆಫಾಲಿಟಿಕ್ಸ್ ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್  (ಜೆಇ-ಐಇಎಸ್) ಮೆದುಳು ಜ್ವರಪೀಡಿತ 1.15 ಕೋಟಿ ಮನೆಗಳು (ಶೇ.38) ಗಳಿಗೆ ನಲ್ಲಿ ಮೂಲಕ ನೀರು ಪೂರೈಸಲಾಗಿದೆ. ಜೆಜೆಎಂ ಘೋಷಣೆಗೂ ಮುನ್ನ ಜೆಇ-ಎಇಎಸ್ ಪೀಡಿತ ಕೇವಲ 8 ಲಕ್ಷ ಮನೆಗಳಿಗೆ (ಶೇ.2.64) ಮಾತ್ರ ಕೊಳಾಯಿ ನೀರು ಸಂಪರ್ಕ ಒದಗಿಸಲಾಗಿತ್ತುಒಂದು ವೇಳೆ, ಗುಣಮಟ್ಟದ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಮೇಲ್ಮೈ ನೀರು ಆಧಾರಿತ ವ್ಯವಸ್ಥೆಗಳ ನಿರ್ಮಾಣವು ಸಮಯ ತೆಗೆದುಕೊಳ್ಳುತ್ತದೆ ಎಂದಾದರೆ, ಮಧ್ಯಂತರ ಕ್ರಮವಾಗಿ, ಪ್ರತಿ ಮನೆಗೆ 8-10 ಎಲ್ ಪಿಸಿಡಿ ಯಷ್ಟು ಸುರಕ್ಷಿತ ನೀರನ್ನು ಒದಗಿಸಲು ಸಮುದಾಯ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ.

ದೇಶದಲ್ಲಿರುವ ಎಲ್ಲ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕೊಳಾಯಿ ನೀರುವ ಪೂರೈಸುವ ಮೂಲಕ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 100 ದಿನಗಳ ಅಭಿಯಾನ ಘೋಷಣೆ ಮಾಡಿದ್ದರು, ಅದಕ್ಕೆ ಕೇಂದ್ರ ಜಲಶಕ್ರಿ ಶ್ರೀ ಗಜೇಂದ್ರ ಸಿಂಗ್ ಶೆಖಾವತ್2020 ಅಕ್ಟೋಬರ್ 2ರಂದು ಚಾಲನೆ ನೀಡಿದ್ದರು. 16 ತಿಂಗಳ ಅತ್ಯಲ್ಪ ಅವಧಿಯಲ್ಲಿ ದೇಶಾದ್ಯಂತ 8.46 ಲಕ್ಷ ಶಾಲೆಗಳು (ಶೇ.82) ಮತ್ತು 8.67 ಲಕ್ಷ(ಶೇ.78) ಅಂಗನವಾಡಿ ಕೇಂದ್ರಗಳಿಗೆ ಕುಡಿಯಲು ಮತ್ತು ಮಧ್ಯಾಹ್ನದ ಬಿಸಿಯೂಟಕಕ್ಎ, ಕೈ ತೊಳೆಯಲಯ ಮತ್ತು ಶೌಚಾಲಯ ಬಳಕೆಗೆ ಕೊಳಾಯಿ ಮೂಲಕ ನೀರು ಪೂರೈಸಲಾಗುತ್ತಿದೆ. ದೇಶಾದ್ಯಂತ 93ಸಾವಿರ ಮಳೆ ನೀರು ಕೊಯ್ಲು ಸೌಕರ್ಯಗಳು ಮತ್ತು 1.08 ಲಕ್ಷ ಬೂದು ಬಣ್ಣದ ನೀರು ಮರುಬಳಕೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಆಂಧ್ರಪ್ರದೇಶ, ದಾಮನ್ ಮತ್ತು ನಗರ್ ಹವೇಲಿ, ದಿಯು ಮತ್ತು ದಾಮನ್, ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಪುದುಚೆರಿ, ಸಿಕ್ಕಿಂ, ತಮಿಳುನಾಡು, ತೆಲಂಗಾಣ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪ್ರತಿಯೊಂದು ಶಾಲೆಗಳಿಗೂ ಕೊಳಾಯಿ ನೀರಿನ ಸಂಪರ್ಕ ಒದಗಿಸಲಾಗಿದೆ. ಮಕ್ಕಳಿಗೆ ಉತ್ತಮ ಆರೋಗ್ಯ, ಸುಧಾರಿತ ನೈರ್ಮಲ್ಯ ಮತ್ತು ಶುಚಿತ್ವವನ್ನು ಖಾತ್ರಿಪಡಿಸಿಕೊಳ್ಳಲು ಉಳಿದ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕೊಳಾಯಿ ನೀರು ಪೂರೈಕೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಜಲ ಜೀವನ್ ಮಿಷನ್ ಒಂದು 'ತಳಮಟ್ಟದ ಯೋಜನೆಯ' ವಿಧಾನವಾಗಿದ್ದು, ಇದರಲ್ಲಿ ಯೋಜನೆಯಿಂದ ಹಿಡಿದು ಅನುಷ್ಠಾನದವರೆಗೆ, ಉಸ್ತುವಾರಿ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಸಮುದಾಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನು ಸಾಧಿಸಲು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲ್ಯೂಎಸ್ ಸಿ)/ ಪಾನಿ ಸಮಿತಿಗಳನ್ನು ರಚಿಸಲಾಗುತ್ತಿದೆ ಮತ್ತು ಬಲವರ್ಧನೆಗೊಳಿಸಲಾಗುತ್ತಿದೆ; ಸಮುದಾಯವನ್ನು ತೊಡಗಿಸಿಕೊಳ್ಳುವ ಮೂಲಕ ಗ್ರಾಮ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು; ಅನುಷ್ಠಾನ ಬೆಂಬಲ ಏಜೆನ್ಸಿಗಳು (ಐಎಸ್ ಎಗಳು) ಕಾರ್ಯಕ್ರಮದ ಅನುಷ್ಠಾನದ ಜೊತೆಗೆ ಗ್ರಾಮ ಸಮುದಾಯಗಳನ್ನು ಬೆಂಬಲಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈವೆರೆಗೆ ದೇಶಾದ್ಯಂತ 4.69 ಲಕ್ಷ ವಿಡಬ್ಲೂಎಸ್ ಸಿ (ಪಾನಿ ಸಮಿತಿ)ಗಳನ್ನು ರಚಿಸಲಾಗಿದೆ ಮತ್ತು 3.81 ಲಕ್ಷ ಗ್ರಾಮಗಳ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ನೀರಿನ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸುವ ಸಮುದಾಯದ ಸಾಮರ್ಥ್ಯವನ್ನು ವೃದ್ಧಿಗೆ ಜಲ ಜೀವನ್ ಮಿಷನ್ ಅನುಷ್ಠಾನ ಬೆಂಬಲ ಸಂಸ್ಥೆಗಳು (ಐಎಸ್ಎಎಸ್), 104 ಪ್ರಮುಖ ಸಂಪನ್ಮೂಲ ಕೇಂದ್ರಗಳು  (ಕೆಆರ್ ಸಿಎಸ್) ಮತ್ತು ದೇಶಾದ್ಯಂತ ನೀರಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ವಲಯ ಪಾಲುದಾರರ ಸಹಾಯದಿಂದ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಜಲ ಜೀವನ್ ಮಿಷನ್ ಅಡಿಯಲ್ಲಿ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ನಿಗಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಫೀಲ್ಡ್ ಟೆಸ್ಟ್ ಕಿಟ್‌ಗಳನ್ನು (ಎಫ್‌ಟಿಕೆ) ಬಳಸಿಕೊಂಡು ಯಾವುದೇ ರೀತಿಯ ಮಾಲಿನ್ಯದ ನೀರಿನ ಮಾದರಿಗಳನ್ನು ಪರೀಕ್ಷಿಸಲು ಪ್ರತಿ ಗ್ರಾಮದಲ್ಲಿ ಐವರು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಎಫ್‌ಟಿಕೆಗಳನ್ನು ಖರೀದಿಸಿ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗುತ್ತದೆ. ಎಫ್ ಟಿಕೆ ಒಂಬತ್ತು ಮಾನದಂಡಗಳ ಮೇಲೆ ನೀರನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ; ಪಿಎಚ್, ಕ್ಷಾರೀಯತೆ, ಕ್ಲೋರೈಡ್, ನೈಟ್ರೇಟ್, ಒಟ್ಟಾರೆ ನೀರಿನ ಗಡಸುತನ, ಫ್ಲೋರೈಡ್, ಕಬ್ಬಿಣ, ಉಳಿದಿರುವ ಮುಕ್ತ ಕ್ಲೋರಿನ್ ಮತ್ತು ಎಚ್ 2ಎಸ್. ಈವರೆಗೆ 9.13 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಎಫ್‌ಟಿಕೆ ಮೂಲಕ ನೀರಿನ ಗುಣಮಟ್ಟ ಪರೀಕ್ಷಿಸಲು ತರಬೇತಿ ನೀಡಲಾಗಿದೆ.

ದೇಶದಲ್ಲಿ 2,022 ನೀರಿನ ಪರೀಕ್ಷಾ ಪ್ರಯೋಗಾಲಯಗಳಿವೆ. ಅವುಗಳಲ್ಲಿ 454 ಪ್ರಯೋಗಾಲಯಗಳು ಎನ್ ಎಬಿಎಲ್ ಮಾನ್ಯತೆ ಪಡೆದಿವೆ. ದೇಶದಲ್ಲಿ ಮೊದಲ ಬಾರಿಗೆ, ಸಾರ್ವಜನಿಕರಿಗೆ ತಮ್ಮ ನೀರಿನ ಮಾದರಿಗಳನ್ನು ಅತ್ಯಲ್ಪ ದರದಲ್ಲಿ ಪರೀಕ್ಷಿಸಲು ನೀರಿನ ಪರೀಕ್ಷಾ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ದೂರದ ದೂರದ ಹಳ್ಳಿಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಲು ಮತ್ತು ಪರೀಕ್ಷಿಸಲು ಅನೇಕ ರಾಜ್ಯಗಳು ಸಂಚಾರಿ ವ್ಯಾನ್ ಒದಗಿಸಿವೆ.

ಜಲ ಜೀವನ್ ಮಿಷನ್ ನಡಿ ತಂತ್ರಜ್ಞಾನದ ಬಳಕೆ ಮಾಡಿಕೊಂಡು ಪಾರದರ್ಶಕತೆ, ಹೊಣೆಗಾರಿಕೆ, ನಿಧಿಯ ಸರಿಯಾದ ಬಳಕೆ ಮತ್ತು ಸೇವಾ ವಿತರಣೆಯನ್ನು ಖಚಿತಪಡಿಸುತ್ತದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಸೃಷ್ಟಿಸಲಾದ ಪ್ರತಿಯೊಂದು ನೀರು ಸರಬರಾಜು ಆಸ್ತಿಯನ್ನು ಜಿಯೋ-ಟ್ಯಾಗ್ ಮಾಡಲಾಗಿದೆ. ನೀರಿನ ಮೂಲಗಳನ್ನು ಗುರುತಿಸಲು ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ನಿರ್ಮಿಸಲು ಏಕ ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲು ಹೈಡ್ರೋ-ಜಿಯೋ ಮಾರ್ಫಲಾಜಿಕಲ್ (ಎಚ್ ಜಿಎಂ) ನಕ್ಷೆಗಳನ್ನು ಯೋಜಿಸಲು ಬಳಸಲಾಗುತ್ತದೆ.

ಜೆಜೆಎಂನಡಿ ಒದಗಿಸಿದ ಮನೆಯ ಕೊಳಾಯಿ ಸಂಪರ್ಕಗಳನ್ನು ಮನೆಯ ಮುಖ್ಯಸ್ಥರ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿದೆ ಮತ್ತು ಹೆಚ್ಚು ಮುಖ್ಯವಾಗಿ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್ ಎಂಎಸ್) ಮೂಲಕ ಕೈಗೊಳ್ಳಲಾಗುತ್ತದೆ.

ಜಲ ಜೀವನ್ ಮಿಷನ್ ಜಾರಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳಲು, ಜಲ ಜೀವನ್ ಮಿಷನ್ ಕುರಿತು ಎಲ್ಲಾ ಮಾಹಿತಿಯು ಸಾರ್ವಜನಿಕ ವಲಯದಲ್ಲಿ  ಮತ್ತು ಜೆಜೆಎಂ ಡ್ಯಾಶ್‌ಬೋರ್ಡ್  https://ejalshakti.gov.in/jjmreport/JJMIndia.aspx ನಲ್ಲಿ ಲಭ್ಯವಿದ್ದು, ಅದನ್ನು ಪಡೆಯಬಹುದಾಗಿದೆ.

ಜನರು ವಿಶೇಷವಾಗಿ ಮಹಿಳೆಯರು ಮತ್ತು ಗ್ರಾಮೀಣ ಸಮುದಾಯಗಳು ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಜಲ ಜೀವನ್ ಮಿಷನ್ ಜನಾಂದೋಲನವಾಗಿದೆ. ದೀರ್ಘಾವಧಿಯಲ್ಲಿ ಕುಡಿಯುವ ನೀರಿನ ಭದ್ರತೆಗಾಗಿ, ಸ್ಥಳೀಯ ಸಮುದಾಯಗಳು ಮತ್ತು ಗ್ರಾಮ ಪಂಚಾಯತ್‌ಗಳು ಮುಂದೆ ಬರುತ್ತಿವೆ ಮತ್ತು ಗ್ರಾಮದ ನೀರು ಸರಬರಾಜು ವ್ಯವಸ್ಥೆಗಳು, ಅವುಗಳ ನೀರಿನ ಸಂಪನ್ಮೂಲಗಳು ಮತ್ತು ಬೂದು ನೀರನ್ನು ನಿರ್ವಹಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿವೆ. ಜಲ ಜೀವನ್ ಮಿಷನ್ 2024 ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ಕೊಳಾಯಿ ನೀರು ಪೂರೈಸುವ ಸರ್ಕಾರದ ಸಂಕಲ್ಪವನ್ನು ಈಡೇರಿಸಲು ಹಾದಿಯಲ್ಲಿದೆ

***



(Release ID: 1798756) Visitor Counter : 372