ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರವಿದಾಸ್ ಜಯಂತಿಯಂದು ದೆಹಲಿಯ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ್ ದೇವಾಲಯಕ್ಕೆ ಪ್ರಧಾನಿ ಭೇಟಿ ನೀಡಿದರು

प्रविष्टि तिथि: 16 FEB 2022 10:32AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರವಿದಾಸ್ ಜಯಂತಿಯ ಸಂದರ್ಭದಲ್ಲಿ ದೆಹಲಿಯ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ್ ದೇವಾಲಯಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ಬಗ್ಗೆ ಸರಣಿ ಟ್ವೀಟ್‌ಗಳಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ:

"ಇಂದು, ರವಿದಾಸ್ ಜಯಂತಿಯ ಶುಭ ಸಂದರ್ಭದಲ್ಲಿ ನಾನು ದೆಹಲಿಯ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ್ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ.

ನಾಡಿನ ಸಮಸ್ತ ಜನತೆಗೆ ರವಿದಾಸ್ ಜಯಂತಿಯ ಶುಭಾಶಯಗಳು."

"ಸಂತ ರವಿದಾಸ್ ಜಿಯವರ ಪವಿತ್ರ ಕ್ಷೇತ್ರವು ಜನರಿಗೆ ಸ್ಫೂರ್ತಿದಾಯಿಯಾಗಿದೆ. ಸಂಸದನಾಗಿ ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ."

"ದೆಹಲಿಯ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ ಮಂದಿರದಲ್ಲಿ ಬಹಳ ವಿಶೇಷ ಕ್ಷಣಗಳು."

***


(रिलीज़ आईडी: 1798670) आगंतुक पटल : 240
इस विज्ञप्ति को इन भाषाओं में पढ़ें: Marathi , English , Urdu , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam