ಕಲ್ಲಿದ್ದಲು ಸಚಿವಾಲಯ 
                
                
                
                
                
                    
                    
                        ಕಲ್ಲಿದ್ದಲು ಸಚಿವಾಲಯವು ಇತ್ತೀಚಿಗೆ ಐದು ರಾಜ್ಯಗಳ ಹತ್ತು ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಿದೆ
                    
                    
                        ಒಟ್ಟು ಕಲ್ಲಿದ್ದಲು ನಿಕ್ಷೇಪಗಳು 1716.21 ಮಿಲಿಯನ್ ಟನ್ ಆಗುವ ಸಾಧ್ಯತೆಯಿದೆ
ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಅಡಿಯಲ್ಲಿ ಇದುವರೆಗೆ ನಲವತ್ತೆರಡು ಗಣಿಗಳನ್ನು ಹರಾಜು ಮಾಡಲಾಗಿದೆ
                    
                
                
                    Posted On:
                12 FEB 2022 1:21PM by PIB Bengaluru
                
                
                
                
                
                
                ಕಲ್ಲಿದ್ದಲು ಸಚಿವಾಲಯವು ವಾಣಿಜ್ಯ ಗಣಿಗಾರಿಕೆಗಾಗಿ ಕಲ್ಲಿದ್ದಲು ಗಣಿಗಳ ಹರಾಜನ್ನು ಸಿ ಎಂ ಎಸ್ ಪಿ ಕಾಯಿದೆಯ 13 ನೇ ಕಂತು ಮತ್ತು ಎಂಎಂಡಿಆರ್ ಕಾಯಿದೆಯ 3 ನೇ ಕಂತಿನ ಅಡಿಯಲ್ಲಿ ಅಕ್ಟೋಬರ್ 12, 2021 ರಂದು ಪ್ರಾರಂಭಿಸಿದೆ. ಇ-ಹರಾಜಿನ ಸಂದರ್ಭದಲ್ಲಿ ಒಟ್ಟು 10 ಕಲ್ಲಿದ್ದಲು ಗಣಿಗಳನ್ನು ಹರಾಜಿಗೆ ಇಡಲಾಯಿತು. ಅದರಲ್ಲಿ ಆರು ಕಲ್ಲಿದ್ದಲು ಗಣಿಗಳು ಸಿ ಎಂ ಎಸ್ ಪಿ ಕಲ್ಲಿದ್ದಲು ಗಣಿಗಳು ಮತ್ತು ಉಳಿದ ನಾಲ್ಕು ಎಂಎಂಡಿಆರ್ ಕಲ್ಲಿದ್ದಲು ಗಣಿಗಳಾಗಿವೆ. ಎಲ್ಲಾ ಕಲ್ಲಿದ್ದಲು ಗಣಿಗಳ ವಿವರಗಳು ಕೆಳಕಂಡಂತಿವೆ:-
ಒಂಬತ್ತು ಕಲ್ಲಿದ್ದಲು ಗಣಿಗಳನ್ನು ಸಂಪೂರ್ಣವಾಗಿ ಮತ್ತು ಒಂದು ಗಣಿಯನ್ನು ಭಾಗಶಃ ಪರಿಶೋಧಿಸಲಾಗಿದೆ;
ಈ ಗಣಿಗಳ ಒಟ್ಟು ನಿಕ್ಷೇಪ 1,716.211 ಮಿಲಿಯನ್ ಟನ್.
ಈ ಕಲ್ಲಿದ್ದಲು ಗಣಿಗಳಿಗೆ ಒಟ್ಟು ಪಿ ಆರ್ ಸಿ  22.014 ಎಂ ಟಿ ಪಿ ಎ ಆಗಿದೆ.
ಗಣಿವಾರು ವಿವರಗಳು ಕೆಳಗಿನಂತಿವೆ:
	
		
			| ಕ್ರ.ಸಂ. | ರಾಜ್ಯದ ಹೆಸರು | ಗಣಿ ಹೆಸರು | ನಿಕ್ಷೇಪ ಸಂಗ್ರಹ (ಎಂಟಿ) | ಪಿ ಆರ್ ಸಿ (ಎಂ ಟಿ ಪಿ ಎ) | ಗಣಿಯ ಪಿ ಆರ್ ಸಿ ಆಧಾರದಲ್ಲಿ ವಾರ್ಷಿಕ ಆದಾಯ ಅಂದಾಜು (ಕೋ.ರೂ.) | ಅಂದಾಜು ಬಂಡವಾಳ ಹೂಡಿಕೆ (ಕೋ.ರೂ.) | ಅಂದಾಜು ಒಟ್ಟು ಉದ್ಯೋಗ | 
		
			| 1 | ಅರುಣಾಚಲ ಪ್ರದೇಶ | ನಾಮ್ಚಿಕ್ ನಂಬುಕ್ | 14.970 | 0.20 | 422.49 | 30.00 | 100** | 
		
			| ಉಪ ಮೊತ್ತ | 14.970 | 0.20 | 422.49 | 30.00 | 100 | 
		
			| 2 | ಅಸ್ಸಾಂ | ಕೊಯಿಲಾಜನ್ | 0.058 | 0.004 | 2.54 | 0.60 | 10*** | 
		
			| 3 |  | ಗರಂಪಾನಿ | 0.468 | 0.020 | 35.90 | 3.00 | 10**** | 
		
			| ಉಪ ಮೊತ್ತ | 0.526 | 0.024 | 38.44 | 3.60 | 20 | 
		
			| 4&5 | ಜಾರ್ಖಂಡ್ | ಬೃಂದಾ ಮತ್ತು ಸಸಾಯಿ | 61.053 | 0.680 | 92.44 | 102.00 | 919 | 
		
			| ಉಪ ಮೊತ್ತ | 61.053 | 0.680 | 2.44 | 102.00 | 919 | 
		
			| 6 | ಮಹಾರಾಷ್ಟ್ರ | ಮಜ್ರಾ | 31.036 | 0.480 | 76.26 | 72.00 | 649 | 
		
			| ಉಪ ಮೊತ್ತ | 31.036 | 0.480 | 76.26 | 72.00 | 649 | 
		
			| 7 | ಒಡಿಶಾ | ಬ್ಯಾಂಕ್‌ಹುಯಿ* | 800.000 | ಇಲ್ಲ | ಇಲ್ಲ | ಇಲ್ಲ | ಇಲ್ಲ | 
		
			| 8 | ಬಿಜಹಾನ್ | 327.049 | 5.260 | 562.49 | 789.00 | 7,112 | 
		
			| 9 | ಮೀನಾಕ್ಷಿ | 285.230 | 12.000 | 1,152.84 | 1,800.00 | 16,224 | 
		
			| 10 | ಉತ್ಕಲ್ ಸಿ | 196.347 | 3.370 | 513.24 | 505.50 | 4,556 | 
		
			| ಉಪ ಮೊತ್ತ | 1,608.626 | 20.630 | 2,228.57 | 3,094.50 | 27,892 | 
		
			| ಒಟ್ಟು | 1,716.211 | 22.014 | 2,858.20 | 3,302.10 | 29,580 | 
	
 
*ಭಾಗಶಃ ಪರಿಶೋಧಿಸಿದ ಕಲ್ಲಿದ್ದಲು ಗಣಿಗಳಿಗೆ ಪಿ ಆರ್ ಸಿ ಲಭ್ಯವಿಲ್ಲ.
** 270 ದಿನಗಳ ಕಾರ್ಯಾಚರಣೆಗಳನ್ನು ಊಹಿಸಿ 
***10 ದಿನಗಳ ಕಾರ್ಯಾಚರಣೆಗಳನ್ನು ಊಹಿಸಿ 
**** 60 ದಿನಗಳ ಕಾರ್ಯಾಚರಣೆಗಳನ್ನು ಊಹಿಸಿ
 
ವಾಣಿಜ್ಯ ಕಲ್ಲಿದ್ದಲು ಗಣಿ 3 ನೇ ಕಂತಿನ ಸಂಚಿತ ಫಲಿತಾಂಶಗಳು ಕೆಳಕಂಡಂತಿವೆ:
	
		
			| ಕ್ರ.ಸಂ. | ಗಣಿ ಹೆಸರು | ರಾಜ್ಯದ ಹೆಸರು | ಪಿ ಆರ್ ಸಿ (ಎಂ ಟಿ ಪಿ ಎ) | ನಿಕ್ಷೇಪ ಸಂಗ್ರಹ (ಎಂಟಿ) | ಅಂತಿಮ ಬಿಡ್  | ಮೀಸಲು ದರ (%) | ಅಂತಿಮ ದರ (%) | 
		
			| 1 | ಬ್ಯಾಂಕ್‌ಹುಯಿ* | ಒಡಿಶಾ | ಇಲ್ಲ | 800.00 | ಯಜ್ದಾನಿ ಸ್ಟೀಲ್ ಮತ್ತು ಪವರ್ ಲಿಮಿಟೆಡ್/ 274545 | 4.00 | 18.00 | 
		
			| 2 | ಬಿಜಹಾನ್ | ಒಡಿಶಾ | 5.26 | 327.05 | ಮಹಾನದಿ ಮೈನ್ಸ್ ಮತ್ತು ಮಿನರಲ್ಸ್ ಪ್ರೈವೇಟ್ ಲಿಮಿಟೆಡ್/ 237318 | 4.00 | 14.00 | 
		
			| 3 & 4 | ಬೃಂದಾ ಮತ್ತು ಸಸಾಯಿ | ಜಾರ್ಖಂಡ್ | 0.68 | 61.05 | ದಾಲ್ಮಿಯಾ ಸಿಮೆಂಟ್ ಭಾರತ್ ಲಿಮಿಟೆಡ್/ 65013 | 4.00 | 8.00 | 
		
			| 5 | ಕೊಯಿಲಾಜನ್ | ಅಸ್ಸಾಂ | 0.004 | 0.06 | ಅಸ್ಸಾಂ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್/ 265144 | 4.00 | 81.50 | 
		
			| 6 | ಮೀನಾಕ್ಷಿ | ಒಡಿಶಾ | 12.00 | 285.23 | ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್/64856 | 4.00 | 10.25 | 
		
			| 7 | ಗರಂಪಾನಿ | ಅಸ್ಸಾಂ | 0.02 | 0.468 | ಅಸ್ಸಾಂ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್/265144 | 4.00 | 288.25 | 
		
			| 8 | ಮಜ್ರಾ | ಮಹಾರಾಷ್ಟ್ರ | 0.48 | 31.036 | ಬಿಎಸ್ ಇಸ್ಪಾಟ್ ಲಿಮಿಟೆಡ್/64979 | 4.00 | 18.25 | 
		
			| 9 | ನಾಮ್ಚಿಕ್ ನಂಬುಕ್ | ಅರುಣಾಚಲ ಪ್ರದೇಶ | 0.20 | 14.970 | ಪ್ಲಾಟಿನಮ್ ಅಲಾಯ್ಸ್ ಪ್ರೈವೇಟ್ ಲಿಮಿಟೆಡ್/274153 | 4.00 | 344.75 | 
		
			| 10 | ಉತ್ಕಲ್ ಸಿ | ಒಡಿಶಾ | 3.37 | 196.347 | ಜಿಂದಾಲ್ ಸ್ಟೀಲ್ ಎಂಡ್ ಪವರ್ ಲಿಮಿಟೆಡ್/64898 | 4.00 | 45.00 | 
	
 
*ಭಾಗಶಃ ಪರಿಶೋಧಿಸಿದ ಕಲ್ಲಿದ್ದಲು ಗಣಿಗಳಿಗೆಪಿ ಆರ್ ಸಿ ಲಭ್ಯವಿಲ್ಲ.
 
ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಹರಾಜು ಪ್ರಕ್ರಿಯೆಯ ಅಡಿಯಲ್ಲಿ ಹಂತ-3 ರಲ್ಲಿ ಹರಾಜಾದ ಮೇಲಿನ 10 ಕಲ್ಲಿದ್ದಲು ಗಣಿಗಳನ್ನು ಒಳಗೊಂಡಂತೆ ಒಟ್ಟು 42 ಕಲ್ಲಿದ್ದಲು ಗಣಿಗಳನ್ನು ಇಲ್ಲಿಯವರೆಗೆ 86.404 ಎಂ ಟಿ ಪಿ ಎ  ಒಟ್ಟು ಸಂಚಿತ ಪಿ ಆರ್ ಸಿ ಯೊಂದಿಗೆ ಯಶಸ್ವಿಯಾಗಿ ಹರಾಜು ಮಾಡಲಾಗಿದೆ.
***
                
                
                
                
                
                (Release ID: 1797985)
                Visitor Counter : 275