ನೀತಿ ಆಯೋಗ
azadi ka amrit mahotsav

ನೀತಿ ಆಯೋಗದ ಫಿನ್ ಟೆಕ್ ಮುಕ್ತ ಶೃಂಗಸಭೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

Posted On: 07 FEB 2022 4:11PM by PIB Bengaluru

ಫಿನ್ ಟೆಕ್ ಉದ್ಯಮದ ಮಹತ್ವವನ್ನು ಪ್ರದರ್ಶಿಸುವ ಪ್ರಯತ್ನವಾಗಿ, ನೀತಿ ಆಯೋಗವು ಫೋನ್ ಪೆ, ಎಡಬ್ಲ್ಯುಎಸ್ ಮತ್ತು ಇವೈ ಸಹಯೋಗದೊಂದಿಗೆ ಫೆಬ್ರವರಿ 7ರಿಂದ 28 ರವರೆಗೆ 'ಫಿನ್ ಟೆಕ್ ಓಪನ್' ಎಂಬ ಮೂರು ವಾರಗಳ ವರ್ಚುವಲ್ ಶೃಂಗಸಭೆಯನ್ನು ಆಯೋಜಿಸಿದೆ. ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರ ಸಮ್ಮುಖದಲ್ಲಿ ಶೃಂಗಸಭೆಯನ್ನು ಕೇಂದ್ರ ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಉದ್ಘಾಟಿಸಿದರು. ಅವರ ಭಾಷಣವನ್ನು ಇಲ್ಲಿ ವೀಕ್ಷಿಸಿ.

ಶೃಂಗಸಭೆಯ ಎಲ್ಲಾ ಕಾರ್ಯಕ್ರಮಗಳನ್ನು ಇಲ್ಲಿ ವೀಕ್ಷಿಸಬಹುದು.

ಫಿನ್ ಟೆಕ್ ಓಪನ್ ಎಂಬ ಪ್ರಥಮ ಉಪಕ್ರಮವು ನಿಯಂತ್ರಕರು, ಫಿನ್ ಟೆಕ್ ವೃತ್ತಿಪರರು ಮತ್ತು ಉತ್ಸಾಹಿಗಳು, ಉದ್ಯಮ ನಾಯಕರು, ನವೋದ್ಯಮ ಸಮುದಾಯ ಮತ್ತು ಡೆವಲಪರ್ ಗಳಿಗೆ ಸಹಯೋಗಕ್ಕೆ, ವಿಚಾರ ವಿನಿಮಯಕ್ಕೆ ಮತ್ತು ಆವಿಷ್ಕಾರಗಳಿಗಾಗಿ ಒಟ್ಟುಗೂಡಿಸಲಿದೆ.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, 'ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಆರೋಗ್ಯ ರಕ್ಷಣೆ, ಸಾಗಣೆ ಮತ್ತು ಇತರ ವಲಯಗಳಿಗಾಗಿ ಕೋವಿನ್ ಮತ್ತು ಯುಪಿಐನಂತಹ ಮುಕ್ತ ವೇದಿಕೆಗಳನ್ನು ರೂಪಿಸುವಲ್ಲಿ ನಾವು ವಿಶ್ವಾಸ ಇಟ್ಟಿದ್ದೇವೆ ಎಂದರು. ಸಾರ್ವಜನಿಕ ಹೂಡಿಕೆಯನ್ನು ಬಳಸಿಕೊಂಡು ಮುಕ್ತ ವೇದಿಕೆಯನ್ನು ರಚಿಸಲಾಗುತ್ತಿದೆ, ಇದರಲ್ಲಿ ಹಲವಾರು ಖಾಸಗಿ ಉದ್ಯಮಿಗಳು, ನವೋದ್ಯಮಗಳು ಮತ್ತು ಡೆವಲಪರ್ ಗಳು ಹೊಸ ಪರಿಹಾರಗಳನ್ನು ರೂಪಿಸಲು ಸೇರಬಹುದು. ಉದಾಹರಣೆಗೆ, ಇಂದು, 270 ಬ್ಯಾಂಕುಗಳು ಯುಪಿಐನೊಂದಿಗೆ ಸಂಪರ್ಕ ಹೊಂದಿವೆ ಮತ್ತು ಅನೇಕ ಉದ್ಯಮಿಗಳು ಮತ್ತು ನವೋದ್ಯಮಗಳು ದೇಶದ ಫಿನ್ ಟೆಕ್ ಅಳವಡಿಕೆ ದರವನ್ನು ಹೆಚ್ಚಿಸಲು ಸಹಾಯ ಮಾಡಿದ್ದು ಪರಿಹಾರಗಳನ್ನು ಒದಗಿಸಿವೆ-ಇದು ಜಾಗತಿಕವಾಗಿ ಅತಿ ಹೆಚ್ಚು ಶೇ.87ರಷ್ಟಿದೆ ಎಂದರು.

ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು, 'ಭಾರತವು ಡಿಜಿಟಲೀಕರಣವನ್ನು ಹೆಚ್ಚಿಸುತ್ತಿದೆ, ಜನರು ಹಣಕಾಸು ಸೇವೆಗಳಿಗೆ ಹೆಚ್ಚಿನ ಮತ್ತು ಸುಲಭ ಪ್ರವೇಶವನ್ನು ಪಡೆಯುತ್ತಿದ್ದಾರೆ. ಇದು ನಗದು ಹಣದಿಂದ ಇ-ವ್ಯಾಲೆಟ್ ಗಳು ಮತ್ತು ಯುಪಿಐಗೆ -ಗ್ರಾಹಕರ ಆರ್ಥಿಕ ನಡವಳಿಕೆಯಲ್ಲಿ ಬದಲಾವಣೆಗೆ ಕಾರಣವಾಗಿದೆ. ಡಿಜಿಟಲ್ ಪಾವತಿಗಳ ವಿಸ್ತರಣೆಯು ಹೆಚ್ಚು ನ್ಯಾಯಸಮ್ಮತ, ಸಮೃದ್ಧ ಮತ್ತು ಆರ್ಥಿಕವಾಗಿ ಸಮಗ್ರ ಭಾರತವನ್ನು ರೂಪಿಸಲು ಒಂದು ಪ್ರಮುಖ ಅಂಶವಾಗಿದೆ. ಫಿನ್ ಟೆಕ್ ನ ಏರಿಕೆಯು ಹಣ ಪೂರಣವನ್ನು ವೇಗಗೊಳಿಸಿದೆ.. ಮುಂದಿನ ಕೆಲವು ವಾರಗಳಲ್ಲಿ ನಮ್ಮ ದೇಶದ ಉಜ್ವಲ ಮನಸ್ಸುಗಳು ಪ್ರಸ್ತುತಪಡಿಸುವ ಅಸಂಖ್ಯಾತ ಸಾಧ್ಯತೆಗಳನ್ನು ನೋಡಲು ನಾನು ಉತ್ಸುಕನಾಗಿದ್ದೇನೆ.' ಎಂದರು.

ಫಿನ್ ಟೆಕ್ ಓಪನ್ ತಲ್ಲೀನತೆಯ ಕಲಿಕೆಯ ಅನುಭವವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇದು ಮೂರು ಉದ್ದೇಶಗಳನ್ನು ಹೊಂದಿದೆ:

1. ಫಿನ್ ಟೆಕ್ ಉದ್ಯಮದಾದ್ಯಂತ ಮುಕ್ತ ಪರಿಸರ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದು

2. ನಾವಿನ್ಯತೆ ಮತ್ತು ವೃದ್ಧಿಯನ್ನು ಪೋಷಿಸುವುದು

3. ಹಣಕಾಸು ಪೂರಣವನ್ನು ಖಚಿತಪಡಿಸಿಕೊಂಡು, ಫಿನ್ ಟೆಕ್ ನಾವಿನ್ಯತೆಯ ಮುಂದಿನ ಅಲೆಯನ್ನು ಬಿಚ್ಚಿಡಲು ಖಾತೆಗಳ ಅಗ್ರಿಗೇಟರ್ ನಂತಹ ಹೊಸ ಮಾದರಿಗಳನ್ನು ಬಳಸುವುದು.

ಈ ಶೃಂಗಸಭೆಯು ಆಳವಾದ ಮಾತುಕತೆಗಳು, ಆಳವಾದ ಡೈವ್ ಗಳು, ವೆಬಿನಾರ್ ಗಳು, ದುಂಡು ಮೇಜಿನ ಚರ್ಚೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ, ಇದು ವಿವಿಧ ನವೋದ್ಯಮಗಳು ಕೈಗೊಂಡ ಆವಿಷ್ಕಾರಗಳು ಮತ್ತು ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಹೆಚ್ಚುವರಿಯಾಗಿ, ಫಿನ್ ಟೆಕ್ ಸಂಬಂಧಿತ ಕಾರ್ಯವನ್ನು ಸಹ ಪ್ರದರ್ಶಿಸಲಾಗುವುದು, ಮತ್ತು ಅತ್ಯಂತ ನಾವೀನ್ಯ ನವೋದ್ಯಮವನ್ನು ವರ್ಚುವಲ್ ಅಭಿನಂದನಾ ಸಮಾರಂಭದಲ್ಲಿ ಗೌರವಿಸಲಾಗುತ್ತದೆ.

ಫೋನ್ ಪೆಯ ಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್, 'ಭಾರತದ ಫಿನ್ ಟೆಕ್ ಕ್ರಾಂತಿಯನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿರುವ ಈ ಉಪಕ್ರಮದಲ್ಲಿ ನೀತಿ ಆಯೋಗದೊಂದಿಗೆ ಪಾಲುದಾರರಾಗಲು ನಮಗೆ ಸಂತೋಷವಾಗಿದೆ. ಫಿನ್ ಟೆಕ್ ಉದ್ಯಮವು ದೇಶಾದ್ಯಂತ ಹಣಕಾಸು ಪೂರಣವನ್ನು ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಮುಂದಿನ ಕೆಲವು ವಾರಗಳನ್ನು ನಾವು ಎದುರು ನೋಡುತ್ತಿದ್ದೇವೆ, ಅಲ್ಲಿ ಉದ್ಯಮದಾದ್ಯಂತದ ಸಹೋದ್ಯೋಗಿಗಳೊಂದಿಗೆ ಸಹಯೋಗ ಹೊಂದಲು, ಪರಿಸರ ವ್ಯವಸ್ಥೆಗೆ ಅರ್ಥಪೂರ್ಣ ಚೌಕಟ್ಟುಗಳನ್ನು ಆವಿಷ್ಕರಿಸಲು ಮತ್ತು ನಿರ್ಮಿಸಲು ನಮಗೆ ಅವಕಾಶ ಸಿಗುತ್ತದೆ.' ಎಂದರು.

ಶೃಂಗಸಭೆಯ ಪ್ರಮುಖ ಮುಖ್ಯಾಂಶವೆಂದರೆ ಭಾರತದ ಅತಿದೊಡ್ಡ ಫಿನ್ ಟೆಕ್ ಹ್ಯಾಕಥಾನ್, ಇದು ವೈಯಕ್ತಿಕ ಡೆವಲಪರ್ ಗಳು ಮತ್ತು ನವೋದ್ಯಮ ಸಮುದಾಯಕ್ಕೆ ನೈಜ-ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯದೊಂದಿಗೆ ಪ್ರಗತಿಯ ಆಲೋಚನೆಗಳನ್ನು ಪ್ರಸ್ತುತಪಡಿಸಲು ಅವಕಾಶವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಮಕ್ಕಳಲ್ಲಿ ಸೃಜನಶೀಲತೆ, ನಾವಿನ್ಯತೆ ಮತ್ತು ಉದ್ಯಮಶೀಲತೆಯ ಮನಸ್ಥಿತಿಯನ್ನು ಬೆಳೆಸಲು, ಅಟಲ್ ನಾವೀನ್ಯತೆ ಅಭಿಯಾನ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಜಾಲದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಮತ್ತೊಂದು ಹ್ಯಾಕಥಾನ್ ಅನ್ನು ಸಹ ಆಯೋಜಿಸಲಾಗುವುದು.

ಈ ಶೃಂಗಸಭೆಯಲ್ಲಿ ಇನ್ಫೋಸಿಸ್ ನ ಸಹ ಸಂಸ್ಥಾಪಕ, ಕಾರ್ಯನಿರ್ವಾಹಕರಲ್ಲದ ಅಧ್ಯಕ್ಷ ನಂದನ್ ನಿಲೇಕಣಿ ಮತ್ತು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮತ್ತು ಕ್ರೆಡ್ ಸ್ಥಾಪಕ ಕುನಾಲ್ ಶಾ; ಪಾಲಿಸಿಬಜಾರ್ ಸಿಇಒ ಯಾಶಿಶ್ ದಹಿಯಾ; ಕೇರ್ ಹೆಲ್ತ್ ಇನ್ಶೂರೆನ್ಸ್ ಸ್ಥಾಪಕ ಎಂಡಿ ಮತ್ತು ಸಿಇಒ ಅನುಜ್ ಗುಲಾಟಿ; ಅಕೊ ಜನರಲ್ ಇನ್ಶೂರೆನ್ಸ್ ಸಿಇಒ, ವರುಣ್ ದುವಾ; ಝೆರೋಡಾ ಸಿಇಒ ನಿತಿನ್ ಕಾಮತ್; ಐಸಿಐಸಿಐ ಸೆಕ್ಯುರಿಟೀಸ್ ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಚಂದೋಕ್; ಗ್ರೋವ್ ಸಿಇಒ,ಲಲಿತ್ ಕೆಶ್ರೆ; ಅಪ್ಸ್ಟಾಕ್ಸ್ ಸಹ-ಸಂಸ್ಥಾಪಕಿ ಕವಿತಾ ಸುಬ್ರಮಣಿಯನ್; ಮತ್ತು ರೇಜರ್ಪೇ ಸಿಇಒ, ಸಂಸ್ಥಾಪಕ ಹರ್ಷಿಲ್ ಮಾಥುರ್ ಅವರಂತಹ ಹಲವಾರು ವಾಣಿಜ್ಯ ನಾಯಕರು ಗಣ್ಯ ಭಾಷಣಕಾರರಾಗಿರುತ್ತಾರೆ.

***


(Release ID: 1796276) Visitor Counter : 200