ಗೃಹ ವ್ಯವಹಾರಗಳ ಸಚಿವಾಲಯ
ಸುಶ್ರೀ ಲತಾ ಮಂಗೇಶ್ಕರ್ ನಿಧನರಾದ ಗೌರವಾರ್ಥ ಫೆಬ್ರವರಿ 6ರಿಂದ ಎರಡು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಣೆ
प्रविष्टि तिथि:
06 FEB 2022 11:15AM by PIB Bengaluru
ಇಂದು ಸುಶ್ರೀ ಲತಾ ಮಂಗೇಶ್ಕರ್ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ತೀವ್ರ ದುಃಖದಿಂದ ಘೋಷಣೆ ಮಾಡಿದೆ. ಮೃತ ಗಣ್ಯರ ಗೌರವಾರ್ಥ, ಭಾರತ ಸರ್ಕಾರ ಇಂದು ಭಾರತಾದ್ಯಂತ ಎರಡು ದಿನಗಳ ರಾಷ್ಟ್ರೀಯ ಶೋಕ ಆಚರಿಸಲು ನಿರ್ಧರಿಸಿದೆ.
ಭಾರತದಾದ್ಯಂತ 06.02.2022 ರಿಂದ 07.02.2022ರ ವರೆಗೆ ರಾಷ್ಟ್ರೀಯ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಮತ್ತು ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ.
ಸುಶ್ರೀ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ನಿರ್ಧರಿಸಲಾಗಿದೆ.
***
(रिलीज़ आईडी: 1795928)
आगंतुक पटल : 343