ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, 1971ರ ಇಂಡೋ-ಪಾಕ್ ಯುದ್ಧದ ವಾಯು ಪಡೆಯ ಯೋಧ ನಿರ್ಮಲ್ ಜಿತ್ ಸಿಂಗ್ ಸೆಖೋನ್ ಅವರಿಗೆ ಗೌರವ ಸಲ್ಲಿಸಿದರು

Posted On: 02 FEB 2022 12:54PM by PIB Bengaluru

1971 ರ ಇಂಡೋ-ಪಾಕ್ ಯುದ್ಧದ ವಾಯು ಪಡೆಯ ಯೋಧ ನಿರ್ಮಲ್ ಜಿತ್ ಸಿಂಗ್ ಸೆಖೋನ್ ಅವರಿಗೆ ಗೌರವ ಸಲ್ಲಿಸಲು ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಐತಿಹಾಸಿಕ ಯುದ್ಧದ ಸಮಯದಲ್ಲಿ  ಧೈರ್ಯ ಮತ್ತು ದೃಢತೆಯನ್ನು ಪ್ರದರ್ಶಿಸಿದರು.

ಒಟ್ಟು 21 ಪರಮವೀರ ಚಕ್ರ ಪುರಸ್ಕೃತರ ವಾಯು ಪಡೆಯ ಧೀರನ ಪ್ರತಿಮೆಯನ್ನು ಸ್ಥಾಪಿಸಲಾಗಿರುವ ಸ್ಮಾರಕದಲ್ಲಿರುವ ‘ಪರಮ ಯೋಧ ಸ್ಥಳ’ ಹೆಸರಿನ ಶೌರ್ಯ ಗ್ಯಾಲರಿಯಲ್ಲಿ ಟಿಟಿ ಆಟಗಾರ್ತಿ ಗೌರವ ಸಲ್ಲಿಸಿದರು.

"ನಮ್ಮ ಸೈನಿಕರು ಮಾಡಿದ ಯುದ್ಧ ಮತ್ತು ಅತ್ಯುನ್ನತ ತ್ಯಾಗದ ಬಗ್ಗೆ ಸ್ಮಾರಕದಲ್ಲಿ ಕೆತ್ತಲಾದ ಉಲ್ಲೇಖಗಳು ನನ್ನನ್ನು ಮಂತ್ರಮುಗ್ಧಳನ್ನಾಗಿಸಿದೆ. ಒಬ್ಬ ಭಾರತೀಯಳಾಗಿ, ಇಂದು ನನ್ನ ಹೃದಯವು ಕೃತಜ್ಞತೆ ಮತ್ತು ಹೆಮ್ಮೆಯಿಂದ ತುಂಬಿದೆ" ಎಂದು ಒಲಿಂಪಿಯನ್ ಹೇಳಿದರು.

ಮೆಜೆಸ್ಟಿಕ್ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ತಾದ ಅಸ್ತಿತ್ವದಲ್ಲಿರುವ ವಿನ್ಯಾಸ ಮತ್ತು ಸಮರೂಪತೆಯೊಂದಿಗೆ ಸಾಮರಸ್ಯವನ್ನು ಹೊಂದಿರುವ ಸ್ಮಾರಕವು ರಾಷ್ಟ್ರೀಯ ಯುದ್ಧ ಸ್ಮಾರಕ ಅಪ್ಲಿಕೇಶನ್‌ನ ರಚನೆ ಮತ್ತು ಪರದೆಗಳನ್ನು ಇರಿಸುವುದರೊಂದಿಗೆ ಡಿಜಿಟಲ್ ಮನವಿಯನ್ನು ಹೊಂದಿದೆ ಮತ್ತು ಕರ್ತವ್ಯದ ವೇಳೆ ಮಣಿದವರಿಗೆ ವರ್ಚುವಲ್ ಗೌರವವನ್ನು ಸಲ್ಲಿಸುವ ಅವಕಾಶವನ್ನು ಒದಗಿಸಿದೆ. 

ಮತ್ತೊಬ್ಬ ಯುದ್ಧ ವೀರ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೆ ವರ್ಚುವಲ್ ಗೌರವ ಸಲ್ಲಿಸುವಾಗ, ಮಣಿಕಾ, “ಸ್ಮಾರಕದ ವಾಸ್ತುಶಿಲ್ಪದ ವಿನ್ಯಾಸವು ಹುತಾತ್ಮರನ್ನು ಅಮರರನ್ನಾಗಿ ಮಾಡುವ ರೀತಿಯಲ್ಲಿ, ಮೊಬೈಲ್ ಅಪ್ಲಿಕೇಶನ್ ಆಧಾರಿತ ವರ್ಚುವಲ್ ಟೂರ್ ಗೈಡ್ ಮತ್ತು ವರ್ಚುವಲ್ ಗೌರವಕ್ಕಾಗಿ ಡಿಜಿಟಲ್ ಪ್ಯಾನೆಲ್‌ಗಳಂತಹ ನವೀಕರಿಸಿದ ಡಿಜಿಟಲ್ ಸೌಲಭ್ಯಗಳು ಅದನ್ನು ಸುಲಭವಾಗಿಸುತ್ತದೆ. ಪ್ರತಿಯೊಬ್ಬ ನಾಗರಿಕನಿಗೆ ಎಲ್ಲಿಂದಲಾದರೂ ಪ್ರವೇಶಿಸಬಹುದು ಎಂದು ಹೇಳಿದರು.
ವೀರ ಹುತಾತ್ಮರಿಗೆ ಗೌರವ ಸಲ್ಲಿಸುವ ಮತ್ತು ಸ್ಮಾರಕಕ್ಕೆ ಭೇಟಿ ನೀಡುವ ಎಲ್ಲ ಸಂದರ್ಶಕರ ಆಕರ್ಷಣೆಯ ಕೇಂದ್ರವಾಗಿರುವ ವಿಶಿಷ್ಟ ಸ್ಮರಣಿಕೆ ಮಳಿಗೆ ‘ಸ್ಮರಿಕಾ’ಕ್ಕೂ ಆಟಗಾರ್ತಿ  ಭೇಟಿ ನೀಡಿದರು.

***


(Release ID: 1794838) Visitor Counter : 193