ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಡಾ. ಮದನ್ ಮೋಹನ್ ತ್ರಿಪಾಠಿ ಎನ್‌ಐಇಎಲ್‌ಐಟಿಯ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕಾರ

Posted On: 02 FEB 2022 12:24PM by PIB Bengaluru

ಡಾ. ಮದನ್ ಮೋಹನ್ ತ್ರಿಪಾಠಿ ಅವರು ಸೋಮವಾರದಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಷ್ಟ್ರೀಯ ಸಂಸ್ಥೆ (NIELIT) ಪ್ರಧಾನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT) ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ.

NIELIT ಗೆ ನೇಮಕವಾಗುವ ಮುನ್ನ, ಡಾ. ಮದನ್ ಮೋಹನ್ ತ್ರಿಪಾಠಿ ಅವರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (DTU), ನವದೆಹಲಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. DTU ನಲ್ಲಿ ಅವರು ಆಂತರಿಕ ಗುಣಮಟ್ಟ ಭರವಸೆ ಕೇಂದ್ರ (IQAC) ನಿರ್ದೇಶಕ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಕೋಶದ ಸಂಯೋಜಕರಾಗಿಯೂ ಸೇವೆವಸಲ್ಲಿಸಿದ್ದಾರೆ.

ಅವರು 1994 ರಲ್ಲಿ ಇನ್ ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ (IPR), ಗಾಂಧಿನಗರ (ಭಾರತದ ಪರಮಾಣು ಶಕ್ತಿ ಇಲಾಖೆ) ನಲ್ಲಿ ಸಂಶೋಧನಾ ವಿಜ್ಞಾನಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು ಅನೇಕ  ಆರ್ ಮತ್ತು ಡಿ ಯೋಜನೆಗಳಲ್ಲಿ 5 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. 1999 ರಲ್ಲಿ, ಅವರು ಗೋರಖ್‌ಪುರದ ಭಾರತದ ವಿದ್ಯುನ್ಮಾನ ವಿನ್ಯಾಸ ಮತ್ತು ತಂತ್ರಜ್ಞಾನಕ್ಕೆ ಹಿರಿಯ ವಿನ್ಯಾಸ ಎಂಜಿನಿಯರ್ ಆಗಿ ಸೇರಿದರು ಮತ್ತು ಮಾಹಿತಿ, ವಿದ್ಯುನ್ಮಾನ ಮತ್ತು ಸಂವಹನ ತಂತ್ರಜ್ಞಾನ (IECT) ಕ್ಷೇತ್ರಗಳಲ್ಲಿ ವಿವಿಧ ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ 10 ವರ್ಷ ಕಾರ್ಯ ನಿರ್ವಹಿಸಿದರು ಮಾಡಿದರು. 2009 ರಿಂದ 2012 ರವರೆಗೆ ಅವರು NIELIT ಕೇಂದ್ರ ಕಚೇರಿಯಲ್ಲಿ ಜಂಟಿ ನಿರ್ದೇಶಕರಾಗಿದ್ದರು, ಅಲ್ಲಿ ಅವರು ಭಾರತದ ಸಾಮಾನ್ಯ ನಿವಾಸಿಗಳ ಡಿಜಿಟೈಸೇಶನ್ ಮತ್ತು ಬಯೋಮೆಟ್ರಿಕ್ ಕ್ಯಾಪ್ಚರ್ (NPR), IECT ಕೌಶಲ್ಯಗಳಲ್ಲಿ ಮಾನವಶಕ್ತಿಯ ಅಭಿವೃದ್ಧಿ, ICT ಆಧಾರಿತ ಕೌಶಲ್ಯ ಪರೀಕ್ಷೆ ಮತ್ತು ಪ್ರಮಾಣೀಕರಣದಂತಹ ವಿವಿಧ ಯೋಜನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

***


(Release ID: 1794775) Visitor Counter : 234