ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2022ನೇ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುನ್ನ ಪ್ರಧಾನಿಯವರ ಮಾಧ್ಯಮ ಹೇಳಿಕೆ

Posted On: 31 JAN 2022 11:21AM by PIB Bengaluru

ನಮಸ್ಕಾರ ಸ್ನೇಹಿತರೇ,

ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಬಜೆಟ್ ಅಧಿವೇಶನಕ್ಕೆ ನಿಮ್ಮೆಲ್ಲರನ್ನೂ ಮತ್ತು ದೇಶದ ಎಲ್ಲಾ ಗೌರವಾನ್ವಿತ ಸಂಸದರನ್ನು ನಾನು ಸ್ವಾಗತಿಸುತ್ತೇನೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತಕ್ಕೆ ಅನೇಕ ಅವಕಾಶಗಳಿವೆ. ಭಾರತದ ಆರ್ಥಿಕ ಪ್ರಗತಿ, ಅದರ ಲಸಿಕೆ ಅಭಿಯಾನ ಮತ್ತು ಭಾರತದಲ್ಲಿ ತಯಾರಿಸಿದ ಲಸಿಕೆಗಳು ಇಡೀ ವಿಶ್ವದಲ್ಲಿ ವಿಶ್ವಾಸವನ್ನು ಮೂಡಿಸುತ್ತಿವೆ.

ಬಜೆಟ್ ಅಧಿವೇಶನದಲ್ಲಿ ನಮ್ಮ ಮುಕ್ತ ಮನಸ್ಸಿನ ಚರ್ಚೆಗಳು, ವಿಚಾರಗಳು ಮತ್ತು ಸಮಾಲೋಚನೆಗಳು ಜಾಗತಿಕವಾಗಿ ಪರಿಣಾಮ ಬೀರಲು ಉತ್ತಮ ಅವಕಾಶ ಕಲ್ಪಿಸಬಹುದು.

ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರು ಮತ್ತು ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಉತ್ತಮ ಚರ್ಚೆ ನಡೆಸುವ ಮೂಲಕ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಸಹಾಯ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ.

ಪದೇಪದೆ ಚುನಾವಣೆಗಳಿಂದಾಗಿ ಅಧಿವೇಶನಗಳು ಮತ್ತು ಚರ್ಚೆಗಳು ಮೇಲೆ ಸಹ ಪರಿಣಾಮವಾಗುತ್ತದೆ ಎಂಬುದು ನಿಜ. ಆದರೆ ನಾನು ಎಲ್ಲಾ ಗೌರವಾನ್ವಿತ ಸಂಸದರನ್ನು ಪ್ರಾರ್ಥಿಸುತ್ತೇನೆ, ಚುನಾವಣೆಗಳು ಅಲ್ಲೇ ಇರುತ್ತವೆ, ಅವು ನಡೆದೇ ನಡೆಯುತ್ತವೆ. ಆದರೆ ಬಜೆಟ್ ಅಧಿವೇಶನವು ಬಹಳ ಮುಖ್ಯವಾಗಿದೆ. ಏಕೆಂದರೆ ಅದು ಇಡೀ ವರ್ಷದ ಯೋಜನೆಗಳನ್ನು ರೂಪಿಸುತ್ತದೆನಾವು ಬಜೆಟ್ ಅಧಿವೇಶನವನ್ನು ಸಂಪೂರ್ಣ ಬದ್ಧತೆಯೊಂದಿಗೆ ಹೆಚ್ಚು ಫಲಪ್ರದವಾಗುವಂತೆ ಮಾಡಿದಷ್ಟು, ಮುಂಬರುವ ವರ್ಷವು ಅದನ್ನು ಹೊಸ ಆರ್ಥಿಕ ಎತ್ತರಕ್ಕೆ ಕೊಂಡೊಯ್ಯಲು ಉತ್ತಮ ಅವಕಾಶವಾಗಲಿದೆ.

ಒಂದು ಒಳ್ಳೆಯ ಉದ್ದೇಶದೊಂದಿಗೆ ಮುಕ್ತ, ಚಿಂತನಶೀಲ, ವಿವೇಕಯುತ ಚರ್ಚೆ ನಡೆಯಬೇಕು. ನಿರೀಕ್ಷೆಯೊಂದಿಗೆ, ನಿಮ್ಮೆಲ್ಲರಿಗೆ ಅನೇಕ ಧನ್ಯವಾದಗಳು!

ಸೂಚನೆ: ಇದು ಪ್ರಧಾನ ಮಂತ್ರಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

***


(Release ID: 1793803) Visitor Counter : 223