ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ರಾಷ್ಟ್ರದಾದ್ಯಂತ ಆಚರಿಸಲಾಯಿತು. ಹೆಣ್ಣುಮಗುವಿನ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಯಿತು


ಹೆಣ್ಣುಮಗುವಿನ ಸಬಲೀಕರಣದ ಪ್ರಯತ್ನಗಳನ್ನು ಸದೃಢಗೊಳಿಸುವ ಬದ್ಧತೆಯನ್ನು ಈ ದಿನಾಚರಣೆ ಎಚ್ಚರಿಸುತ್ತಿದೆ: ಪ್ರಧಾನಮಂತ್ರಿ ನರೇಂದ್ರಮೋದಿ

ಸಮಾನತೆ ಮತ್ತು ಸಮನ್ವಿತ ಸಮಾಜದ ನಿರ್ಮಾಣಕ್ಕೆ ಮತ್ತು ಲಿಂಗ ತಾರತಮ್ಯದಲ್ಲಿ ಸೇತುವೆ ನಿರ್ಮಿಸಲು ಈ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಜ್ಞೆ ಕೈಗೊಳ್ಳಲಾಗುತ್ತಿದೆ: ಸ್ಮೃತಿ ಇರಾನಿ

Posted On: 25 JAN 2022 2:48PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು .24ರಂದು ಾಚರಿಸಲಾಯಿತು. 2022 ಸಾಲಿನ ಆಚರಣೆಯನ್ನು ಕೋವಿಡ್‌ ಸಂದರ್ಭದಲ್ಲಿ ಎಲ್ಲವನ್ನೂ ಆನ್‌ಲೈನ್‌ ಹಾಗೂ ವರ್ಚುವಲ್‌ ಸಮಾರಂಭವನ್ನು ಆಯೋಜಿಸಲಾಗಿತ್ತು. ಹೆಣ್ಣುಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ಹೆಣ್ಣುಮಕ್ಕಳ ಸಾಹಸ, ವಿವಿಧ ಕ್ಷೇತ್ರಗಳಲ್ಲಿನ ಅವರ ಸಾಧನೆಯನ್ನು ಸಂಭ್ರಮಿಸಲು ಮತ್ತು ಜಾಗೃತಿ ಮೂಡಿಸಲು ದಿನವನ್ನು ಹಮ್ಮಿಕೊಳ್ಳಲಾಯಿತು.

ಆನ್‌ಲೈನ್‌ನಲ್ಲಿ ಸಂವಾದಿ ಕಾರ್ಯಕ್ರಮಗಳು

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ 2022ನ್ನು ಹಮ್ಮಿಕೊಳ್ಳಲಾಗಿದೆ. ಸಾಲಿನ ವಿಜೇತರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆನ್‌ಲೈನ್‌ನಲ್ಲಿ ಸಂವಾದ ಮಾಡಿದರು. ಪ್ರೋತ್ಸಾಹಿಸಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತ ಮಕ್ಕಳು ತಮ್ಮ ಪಾಲಕರೊಂದಿಗೆ, ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಒಡಗೂಡಿ, ಜಿಲ್ಲಾಧಿಕಾರಿ ಕಚೇರಿಯಿಂದಲೇ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಆನ್‌ಲೈನಿನಲ್ಲಿ  ಸಂವಾದಿ ಕಾರ್ಯಕ್ರಮಗಳನ್ನು ಲೈವ್‌ ಆಗಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸರಣಿ ಕಾರ್ಯಕ್ರಮಗಳಲ್ಲಿ ವಿವಿಧ ಸಚಿವಾಲಯದ ಸಚಿವರ ಪಾಲ್ಗೊಳ್ಳುವರು. ಯುವತಿಯರನ್ನು ಮಾತನಾಡಿಸಿ, ಅವರಿಗೆ ಪ್ರೇರಣೆ ನೀಡಲಿದ್ದಾರೆ. ಯುವತಿಯರು ತಮ್ಮ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಅಗತ್ಯ ಇರುವ ಎಲ್ಲವನ್ನೂ ಮಾಡಲು ಬೆಂಬಲವಾಗಿ ನಿಲ್ಲಲಿದ್ದಾರೆ...

  1. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಯುನಿಸೆಫ್‌ಕನ್ಯಾ ಮಹೋತ್ಸವ್‌ಹೆಣ್ಣುಮಕ್ಕಳ ಉತ್ಸವವನ್ನು ಆಚರಿಸಲಾಯಿತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಜುಬೇನ್‌ ಇರಾನಿ ಅವರು ಒಂಬತ್ತು ವಿವಿಧ ರಾಜ್ಯಗಳ ಹದಿಹರೆಯದ ಹೆಣ್ಣುಮಕ್ಕಳೊಡನೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ‘ಹರ್‌ ಲಡಕಿ ಖಾಸ್‌ ಹೈಪ್ರತಿ ಹುಡುಗಿಯೂ ಅಮೂಲ್ಯಳು ಎಂಬ ಘೋಷವಾಕ್ಯದ ಅಡಿ ಸಂವಾದವನ್ನು ಏರ್ಪಡಿಸಲಾಗಿತ್ತು.

ಸಂವಾದದಲ್ಲಿ ಮುಖ್ಯ ಭಾಷಣಕಾರರಾಗಿ ಮಾತಾಡುತ್ತ ಹದಿಹರೆಯದ ಹುಡುಗಿಯರು ಹುಡುಗರು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸ್ಥೈರ್ಯದ ಕತೆಗಳನ್ನು ಹಂಚಿಕೊಂಡ ಬಗೆ, ಅವರ ದೃಢನಿಶ್ಚಯ ಹಾಗೂ ಭರವಸೆಯ ಕುರಿತು ಹೆಚ್ಚಿನ ಬೆಳಕು ಚೆಲ್ಲಿದರು. ಸಂವಾದ ಕಾರ್ಯಕ್ರಮಕ್ಕೆ ಯುನಿಸೆಫ್‌ ನೀಡಿರುವ ಬೆಂಬಲ ಹಾಗೂ ಪಾಲ್ಗೊಂಡಿರುವ ಬಗೆಯನ್ನು ಬಣ್ಣಿಸುತ್ತ, ದೇಶದಾದ್ಯಂತ ಹದಿಹರೆಯದ ಮಕ್ಕಳು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು, ಸಲಹೆಗಳನ್ನು ನೀಡಿದರು. ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚು ಮಹತ್ವ ನೀಡಲು ಸೂಚಿಸಿದರು. ಮಾನಸಿಕ ಆರೋಗ್ಯದ ಸವಾಲುಗಳನ್ನು ಎದುರಿಸಲು ಹೆಚ್ಚು ಗಮನ ಹರಿಸಲು ತಿಳಿಸಿದರು. ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಲು ತಿಳಿಸಿದರು.

ಮಿಷನ್ ವಾತ್ಸಲ್ಯದ ಮೂಲಕ, ಹದಿಹರೆಯದ ಹೆಣ್ಣುಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸಲಾಗುವುದು. ಅವರ ಆರೋಗ್ಯ, ಶಿಕ್ಷಣ ಮುಂತಾದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಲಾಗುವುದು. ಪರ್ಯಾಯ ಕಾಳಜಿ ಹಾಗೂ ಕೌಟುಂಬಿಕ ಪ್ರೀತಿಯನ್ನು ತೋರುವ, ಬಾಲ್ಯವಿವಾಹಕ್ಕೆ ಒಳಗಾದ ಮಕ್ಕಳಿಗೆ ಬೆಂಬಲ ಸೂಚಿಸಲಾಗುವುದು ಎಂದರು.

ಯುನಿಸೆಫ್‌ನ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ಜಾರ್ಜ್‌, ಲಾರೆಯಾ ಅಡೈ ಅವರು ಭಾರತದಲ್ಲಿ ಬಾಲ್ಯವಿವಾಹ ತಡೆಯಲು ಹಮ್ಮಿಕೊಂಡಿರುವ ಯೋಜನೆಗಳನ್ನು ಶ್ಲಾಘಿಸಿದರು. ಸುಸ್ಥಿರವಾದ ನಿಲುವಿನೊಂದಿಗೆ ಗಟ್ಟಿಯಾದ ಹೆಜ್ಜೆಗಳನ್ನು ಹಾಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹದಿಹರೆಯದ ಸಬಲೀಕರಣ, ಮಹಿಳೆ ಮತ್ತು ಹುಡುಗಿಯರ ಮೇಲಾಗುವ ಹಿಂಸೆ, ಕೌಟುಂಬಿಕ ಕ್ರೌರ್ಯವನ್ನು ತಡೆಯುವಲ್ಲಿ ಭಾರತ ಹಮ್ಮಿಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು. ನಿಟ್ಟಿನಲ್ಲಿ ಇನ್ನೂ ಪರಿಣಾಮಕಾರಿಯಾಗಿ ಶ್ರಮಿಸಲು ಸಂಪೂರ್ಣ ಸಹಕರಿಸುವುದಾಗಿ ತಿಳಿಸಿದರು.

  1. ಜವಳಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮ, ಗ್ರಾಹಕ ವ್ಯವಹಾರ ಮತ್ತು ಆಹಾರ ಹಾಗೂ ಪಡಿತರ ವಿತರಣೆ ಸಚಿವಾಲಯದ  ಕೇಂದ್ರ ಸಚಿವರಾದ,ಪೀಯುಶ್‌ ಗೋಯಲ್‌ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವತಿಯರೊಡನೆ ಸಂವಾದ ನಡೆಸಿದರು.
  2. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕೇಂದ್ರ ಸಚಿವರಾದ ಡಾ.ಜಿತೇಂದ್ರ ಸಿಂಗ್‌ ಅವರು ಯುವ ಉದ್ಯಮಿಗಳೊಡನೆ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ನಾವೀನ್ಯಕ್ಕೆ ಅನ್ವೇಷಣೆಗಳಿಗೆ ಸಂಬಂಧಿಸಿದಂತೆ ಮಾತನಾಡಿ, ಪ್ರೋತ್ಸಾಹಿಸಿದರು.

ವೆಬಿನಾರ್‌ಗಳು:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಆಯ್ಕೆ ಮಾಡಿದ ರಾಷ್ಟ್ರೀಯ ಹೆಣ್ಣುಮಗಳ ದಿನಾಚರಣೆಯ ಅಂಗವಾಗಿ ವೆಬಿನಾರ್‌ಗಳನ್ನು ಏರ್ಪಡಿಸಲಾಗಿತ್ತು

  1. ರಾಷ್ಟ್ರೀಯ ಮಹಿಆಳ ಆಯೋಗವುಹೆಣ್ಣುಮಗುವನ್ನು ರಕ್ಷಿಸಿವಿಷಯದ ಕುರಿತು ವರ್ಚುವಲ್‌ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಹೆಣ್ಣುಮಕ್ಕಳ ರಕ್ಷಣೆ, ಅವರ ಹಕ್ಕುಗಳ ಕುರಿತು ಜಾಗೃತಿ, ಮಹಿಳಾ ಶಿಕ್ಷಣ ಪ್ರಾಮುಖ್ಯತೆಯ ಕುರಿತು ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಮಾಚಿ ಕೇಂದ್ರ ಸಚಿವ ಹರಿಯಾಣಾದ ಓಮ್‌ ಪ್ರಕಾಶ್ಧನಕರ್‌ ಅವರು ಹೆಣ್ಣುಮಗುವಿನ ರಕ್ಷಣೆಯಲ್ಲಿ ಸಮಾಜದ ತತ್ವ ಸಿದ್ಧಾಂತ ಹಾಗೂ ದೃಷ್ಟಿಕೋನ ವಿಚಾರದ ಕುರಿತು ಮಾತನಾಡಿದರು. ಮಕ್ಕಳನ್ನು ರಕ್ಷಿಸಿ, ಬಾಲ ರಕ್ಷಾ ಭಾರತ್‌ ಅಭಿಯಾನದ ಮುಖ್ಯಸ್ಥರಾದ ಪ್ರಗ್ಯಾ ವತ್ಸ್‌ ಅವರು ಮಾತನಾಡಿ, ಹೆಣ್ಣುಮಕ್ಕಳ ಹಕ್ಕುಗಳು, ಹೆಣ್ಣುಮಕ್ಕಳು ಶಿಕ್ಷಣ, ಮತ್ತು ಇದಕ್ಕೆ ಸಂಬಂಧಿಸಿದ ನೀತಿನಿಯಮಗಳ ಕುರಿತು ಬೆಳಕು ಚೆಲ್ಲಿದರು. ನೀತಿನಿಯಮಗಳ ಪರಿಣಾಮ ಏನಾಗಿದೆಯೆಂದೂ ಚರ್ಚಿಸಿದರು.
  2. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯೊಂದಿಗೆ ಒಡಗೂಡಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ವೆಬಿನಾರ್‌ ಮೂಲಕ ಏರ್ಪಡಿಸಿತ್ತು. ಹದಿಹರೆಯದ ಹುಡುಗಿಯರ ಸಮಗ್ರ ಅಗತ್ಯಗಳ ಕುರಿತಂತೆ ಹೆಣ್ಣುಮಕ್ಕಳಿದ್ದಲ್ಲಿ ಖುಷಿಲಡ್ಕಿಯಾ ಜಹಾಂ, ಖುಷಿಯಾಂ ವಹಾಂ ಎಂಬ ವಿಷಯದ ಕುರಿತು .24ರಂದು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ವಿಚಾರ ಸಂಕಿರಣದ ುದ್ದೇಶ, ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಲಾಗಿತ್ತು. ಹದಿಹರೆಯದ ಹುಡುಗಿಯರಿಗೆ ಪೌಷ್ಟಿಕಾಂಶಗಳ ಅಗತ್ಯ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹದಿಹರೆಯದ ಹುಡುಗಿಯರ ಸಮಸ್ಯೆ ಸವಾಲುಗಳು, ಹುಡುಗಿಯರಲ್ಲಿ ಸಾಮಾಜೋ ಮಾನಸಿಕ ಅಭಿವೃದ್ಧಿಯ ಮಹತ್ವದ ಕುರಿತು ಚರ್ಚಿಸಲಾಯಿತು. ರಾಷ್ಟ್ರದಾದ್ಯಂತದಿಂದ 3000 ಜನರು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

ಮಕ್ಕಳ ಕಾಳಜಿ ಕೇಂದ್ರದ ಹದಿಹರೆಯ ಹುಡುಗಿಯರು, ಕಾಲೇಜು ವಿದ್ಯಾರ್ಥಿನಿಯರು, ಸರ್ಕಾರಿ ಅಧಿಕಾರಿಗಳು, ಸಮಾಲೋಚಕರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ರಕ್ಷಣಾ ಯೋಜನೆಯ ಸಿಬ್ಬಂದಿ, ಪ್ರಾಚಾರ್ಯರು, ಶಿಕ್ಷಕಿಯರು, ಪಿ.ಎಚ್‌.ಡಿ ವಿದ್ಯಾರ್ಥಿಗಳು, ಸಂಘ ಸಂಸ್ಥೆಯವರು, ಸಾಮಾಜಿಕ ಕಾರ್ಯಕರ್ತರು, ಆಡಳಿತಾಧಿಕಾರಿಗಳು ಪಾಲ್ಗೊಂಡಿದ್ದರು.

  1. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಟ್ವಿಟರ್‌ ಮತ್ತು ಫೇಸ್‌ಬುಕ್‌ ಪುಟದಿಂದ ನೇರ ಪ್ರಸಾರ ಮಾಡುವಂತೆ ಹೆಣ್ಣುಮಗುವಿನ ಶಾಸನಾತ್ಮಕ ಹಕ್ಕುಗಳ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಯಿತು. ನ್ಯಾಯಮೂರ್ತಿ ಶ್ರೀ ಕಲ್ಪೇಶ್‌ ಸತ್ಯೇಂದ್ರ ಝವೇರಿ, ಒಡಿಶಾದ ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿಗಳು, ವೆಬಿನಾರ್‌ನಲ್ಲಿ ಮುಖ್ಯ ಉಪನ್ಯಾಸವನ್ನು ನೀಡಿದರು.

ವಿವಿಧ ಸಚಿವಾಲಯಗಳಿಂದ ಏರ್ಪಡಿಸಿದ್ದ ಕಾರ್ಯಕ್ರಮಗಳ ವಿವರ

  1. ಶಿಕ್ಷಣ, ಕೌಶಲ ಅಭಿವೃದ್ಧಿ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಒಟ್ಟುಗೂಡಿ, ಮಾಹಿತಿ ಪೂರ್ಣ ವೆಬಿನಾರ್‌ಗಳನ್ನು ಆಯೋಜಿಸಿತ್ತು. ತಮ್ಮ ಸಂಬಂಧಿತ ಕ್ಷೇತ್ರಗಳಲ್ಲಿ ಯುವ ಸಾಧಕಿಯರನ್ನು ಹುಡುಕಿ, ಅವರ ಸಾಧನೆಯ ಯಶೋಗಾಥೆಯನ್ನು ಹಂಚಿಕೊಳ್ಳುವಂತೆ ಚರ್ಚಿಸುವಂತೆ ಮಾಡಲಾಯಿತು. ಶಿಕ್ಷಣ, ಆರೋಗ್ಯ, ಮದುವೆ, ಸಬಲೀಕರಣ, ಲಿಂಗ ಸಮಾನತೆ ಮುಂತಾದ ವಿಷಯಗಳ ಕುರಿತು ಹೆಣ್ಣುಮಕ್ಕಳ ದಿನ ಆಚರಣೆಯ ಪ್ರಯುಕ್ತ ಆಯೋಜಿಸಲಾಗಿತ್ತು.
  2. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆನ್ನು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಡಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಘೋಷಣೆ, ‘ನಮ್ಮ ಮಗಳು, ನಮ್ಮ ಹೆಮ್ಮೆ’ (ಹಮಾರಿ ಬೇಟಿ, ಹಮಾರಿ ಶಾನ್‌) ಎಂದು ಘೋಷಿಸಲಾಯಿತುಕ್ರೀಡೆ, ಕಲಾ ಉತ್ಸವ, ರಾಷ್ಟ್ರೀಯ ಆವಿಷ್ಕಾರ್‌ ಅಭಿಯಾನ, ಪರಿಸರ ಮತ್ತು ಸಂಸ್ಕೃತಿ ಕ್ಷೇತ್ರಗಳಿಂದ ಆಯ್ದ 75 ಸಾಧಕಿ ಯುವತಿಯರು ರಾಷ್ಟ್ರದಾದ್ಯಂತ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಕು.ಅನಿತಾ ಕಾರವಳಾ, ಕೇಂದ್ರ ಕಾರ್ಯದರ್ಶಿ ಶಿಕ್ಷಣ ಸಚಿವಾಲಯ, ಟೆಸ್ಸಿ ಥಾಮಸ್‌ ವಿಜ್ಞಾನಿ, ಇರಾ ಸಿಂಘಾಲ್‌ ಐಎಎಸ್‌ ಅಧಿಕಾರಿ, ಅಂಕಿತಾ ಶರ್ಮಾ ಐಪಿಎಸ್‌ ಅಧಿಕಾರಿ, ಕಾಂತಾ ಸಿಂಗ್‌, ಜಂಟಿ ಪ್ರತಿನಿಧಿ ವಿಶ್ವಸಂಸ್ಥೆ ಭಾರತ, ಭಾವನಾಕ ಆಂತ್‌ ಮೊದಲ ಫೈಟರ್‌ ಪೈಲೆಟ್‌ ಸಂವಾದದಲ್ಲಿ ಪಾಲ್ಗೊಂಡು ಯುವತಿರಯೊಂದಿಗೆ ಚರ್ಚಿಸಿದರು. ಪ್ರೇರಣೆಯ ಮಾತುಗಳನ್ನಾಡಿದರು. ತಮ್ಮ ಆತ್ಮಕಥನವನ್ನು ಹಂಚಿಕೊಂಡುರ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಧಕಿಯರ ಸಾಧನೆಯನ್ನು ತೋರುವ ರೀಲ್ಸ್‌ಗಳನ್ನು ತೋರಲಾಯಿತು. ತಮ್ಮ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಗಳನ್ನು ಸಾಕ್ಷ್ಯಚಿತ್ರಗಳಂತೆ ಪ್ರದರ್ಶಿಸಲಾಯಿತು. 75 ಜನ ಪಾಲ್ಗೊಂಡಿದ್ದ ಪ್ರತಿನಿಧಿಗಳ ಯಶಸ್ಸನ್ನೂ ತೋರಿಸಲಾಯಿತು.

  1. ಸಂಸ್ಕೃತಿ ಸಚಿವಾಲಯವು ರಂಗೋಲಿ ಉತ್ಸವಉಮಂಗ್‌ಅನ್ನು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಡಿಯಲ್ಲಿ ಆಚರಿಸಲಾದ ಹೆಣ್ಣುಮಕ್ಕಳ ದಿನದ ಅಂಗವಾಗಿ ಹಮ್ಮಿಕೊಳ್ಳಲಾಯಿತು. ರಾಷ್ಟ್ರದಾದ್ಯಂತ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು 19 ರಾಜ್ಯಗಳ 70 ನಗರಗಳಲ್ಲಿ ರಸ್ತೆಯ ಮೇಲೆ ರಂಗೋಲಿಯನ್ನು ಹಾಕಿ ಸಂಭ್ರಮಿಸಿದರುಸ್ವಾತಂತ್ರ್ಯ ಹೋರಾಟಗಾರ್ತಿಯರ ಸಾಹಸ ಹಾಗೂ ಪ್ರೇರಣಾ ದಾಯಕ ವ್ಯಕ್ತಿತ್ವಗಳನ್ನು ರಂಗೋಲಿಯಲ್ಲಿ ರಚಿಸಲಾಗಿತ್ತು.

ಬೇಟಿ ಬಚಾವೊ ಬೇಡಿ ಪಢಾವೊ ಯೋಜನೆ ಅಡಿಯಲ್ಲಿ ಜಿಲ್ಲಾಕೇಂದ್ರಗಳಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ

ದೇಶದಾದ್ಯಂತ 450 ಜಿಲ್ಲಾ ಕೇಂದ್ರಗಳಲ್ಲಿ ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆಯ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ...

  1. ಗ್ರಾಮ ಸಭೆ ಮತ್ತು ಮಹಿಳಾ ಸಭೆ
  2. ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ, ಹೆಣ್ಣುಮಕ್ಕಳ ಮಹತ್ವವನ್ನು ತಿಳಿಸುವ ಕಾರ್ಯಕ್ರಮಗಳು
  3. ಪೋಸ್ಟರ್‌, ಘೋಷಣೆಗಳ ಬರವಣಿಗೆ, ಚಿತ್ರಕಲೆ, ಬಣ್ಣ ತುಂಬುವ ಸ್ಪರ್ಧೆಯನ್ನು ಸ್ಟೆಮ್‌ ಸಂಬಂಧಿತ ವಿಷಯಗಳನ್ನು ನೀಡಿ ಆಯೋಜಿಸಲಾಗುತ್ತಿದೆ.
  4. ಸ್ಥಳೀಯ ಮಾಧ್ಯಮಗಳಲ್ಲಿ ಬೇಟಿ ಬಚಾವೊ ಬೇಟಿ ಪಡಾವೊ ಹಾಗೂ ಸಾಧಕಿಯರ ಕುರಿತು ಪ್ರಚಾರ ನೀಡುವುದು ಆಗಿದೆ.

ಜಿಲ್ಲೆಗಳಿಂದ  ಆಯೋಜಿಸಿಕೊಂಡಿರುವ ಕೆಲಸಗಳು ಹೀಗಿವೆ:

  1. ಮಧ್ಯಪ್ರದೇಶದ ತಿಕಮ್‌ಗಢದಲ್ಲಿ ಹಿಂದುಳಿದವರ ಸಚಿವಾಲಯದ ರಾಜ್ಯ ಸಚಿವರಾದ ಡಾ.ವೀರೇಂದ್ರ ಕುಮಾರ್‌ ಅವರು ಸಾಧಕಿ ಬಾಲಕಿಯರನ್ನು ಸನ್ಮಾನಿಸಿದರು.
  2. ಜಾರ್ಖಂಡ್‌ ರಾಜ್ಯದ ಸಾರಾಕೇಳಾ ಜಿಲ್ಲೆಯಲ್ಲಿ  ಋತುಚಕ್ರ ಸಮಯದ ನೈರ್ಮಲ್ಯದ ಕುರಿತು ವೆಬಿನಾರ್‌ ಏರ್ಪಡಿಸಲಾಯಿತು
  3. ಇದೇ ಜಿಲ್ಲೆಯಲ್ಲಿ ಹತ್ತನೆ ಮತ್ತು ಹನ್ನೆರಡನೆಯ ಕ್ಲಾಸಿನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಲಾಯಿತು
  4. ಒಡಿಶಾ ರಾಜ್ಯದ ಕೇಂದ್ರಪರ ಜಿಲ್ಲೆಯಲ್ಲಿ ರಾಮಚಂಡಿ ಮಕ್ಕಳ ಕೂಟದ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
  5. ಬಿಹಾರ್‌ ರಾಜ್ಯದ ನಳಂದಾದ ಮಕ್ಕಳ ಸಮಗ್ರ ಅಭಿವೃದ್ಧಿ ಸಂಸ್ಥೆ ಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಗೆ ಬಲೂನುಗಳನ್ನು ಹಾರಿಬಿಟ್ಟು, ಹೆಣ್ಣುಮಕ್ಕಳ ಆರೋಗ್ಯ, ಪೌಷ್ಟಿಕಾಂಶ ಹಾಗೂ ಶಿಕ್ಷಣದ ಕುರಿತು ಚರ್ಚಿಸಲಾಯಿತು.
  6. ಉತ್ತರ ಸಿಕ್ಕಿಮ್‌ನಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಅಂಗವಾಗಿ ಮಂಗಶಿಲಾ ಗ್ರಾಮ ಪ್ರಶಾಸನ ಕೇಂದ್ರದಲ್ಲಿ ಶಾಸಕ ಪಿಂಟ್ಸೊ ನಾಮಗ್ಯಾಲ್‌ ಲೇಪ್ಚಾ ಅವರ ಉಪಸ್ಥಿತಿಯಲ್ಲಿ ಪಂಚಾಯಿತಿ, ಜಿಲ್ಲಾ ಸದಸ್ಯರ ಒಡಗೂಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹದಿಹರೆಯದ ಹೆಣ್ಣುಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೆಣ್ಣುಮಕ್ಕಳಿಗಾಗಿ ರೂಪಿಸಿರುವ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನಾ, ಪೋಕ್ಸೊ ಕುರಿತು ಮಾಹಿತಿ ನೀಡಲಾಯಿತು.
  7. ಹರಿಯಾಣ ರಾಜ್ಯದ ರೋಹ್ಟಕ್‌ನ ಜಿಎಸ್‌ಎಸ್ ಎಸ್, ಜೆಎಎಸ್‌ಎಸ್‌ಐಎ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಕೆಲವು ಪ್ರಮುಖ ಟ್ವೀಟ್‌ಗಳು

***


(Release ID: 1793193) Visitor Counter : 305