ಕೃಷಿ ಸಚಿವಾಲಯ

ಸರ್ಕಾರ ಕೃಷಿಯಲ್ಲಿ ಡ್ರೋನ್ ಬಳಕೆ ಉತ್ತೇಜಿಸಲಿದೆ - 'ಕೃಷಿ ಯಾಂತ್ರೀಕರಣದ ಉಪಮಿಷನ್' ಅಡಿ ಆರ್ಥಿಕ ಬೆಂಬಲ ವಿಸ್ತರಿಸಲಾಗುತ್ತಿದೆ


ಡ್ರೋನ್ ಗಳನ್ನು ಖರೀದಿಸಲು ಕೃಷಿ ಸಂಸ್ಥೆಗಳಿಗೆ 10 ಲಕ್ಷ ರೂ.ವರೆಗೆ ಸಹಾಯಧನ ಒದಗಿಸಲಾಗುವುದು – ಕೃಷಿ ಸಚಿವಾಲಯ

ಗ್ರಾಹಕರ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸುವ ರೈತರ ಸಹಕಾರಿ ಸೊಸೈಟಿಗಳು, ಎಫ್ ಪಿ ಒಗಳು ಮತ್ತು ಗ್ರಾಮೀಣ ನವೋದ್ಯಮಿಗಳಿಗೆ(ಉದ್ಯಮಶೀಲರು) ಡ್ರೋನ್ ಖರೀದಿಸಲು ಸಿಗಲಿದೆ ಸಹಾಯಧನ

ಸಬ್ಸಿಡಿ ದರದ ಖರೀದಿಯಿಂದ ಸಾಮಾನ್ಯ ರೈತರಿಗೆ ಡ್ರೋನ್ ಗಳ ಲಭ್ಯತೆ ಸುಲಭವಾಗಿಸುತ್ತದೆ ಮತ್ತು ದೇಶೀಯ ಡ್ರೋನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ

Posted On: 22 JAN 2022 4:51PM by PIB Bengaluru

ಭಾರತದಲ್ಲಿ ಕರಾರುವಕ್ಕಾದ ಆಧುನಿಕ ಕೃಷಿ ಪದ್ಧತಿಯ ಉತ್ತೇಜನಕ್ಕೆ ಬಲ ನೀಡುವ ಭಾಗವಾಗಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕೃಷಿ ವಲಯದ ಪಾಲುದಾರರಿಗೆ ಡ್ರೋನ್ ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಲು ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೃಷಿ ಯಾಂತ್ರೀಕರಣ ಉಪಮಿಷನ್(ಎಸ್ಎಂಎಎಂ)ನ  ಮಾರ್ಗಸೂಚಿಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದು ಕೃಷಿ ಡ್ರೋನ್ ವೆಚ್ಚದ 100% ವರೆಗೆ ಅಥವಾ 10 ಲಕ್ಷ ರೂ. ಇವೆರಡರಲ್ಲಿ ಕಡಿಮೆಯೋ ಅದನ್ನು ಡ್ರೋನ್‌ಗಳನ್ನು ಖರೀದಿಸಲು ಅನುದಾನವಾಗಿ ಕೃಷಿ ಯಂತ್ರೋಪಕರಣಗಳ ತರಬೇತಿ ಮತ್ತು ಪರೀಕ್ಷಾ ಸಂಸ್ಥೆಗಳು, ಐಸಿಎಆರ್ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಿಗೆ ನೀಡಲಾಗುತ್ತದೆ. ಈ ಸಂಸ್ಥೆಗಳು ರೈತರ ಹೊಲಗಳಲ್ಲಿ ಡ್ರೋನ್ ತಂತ್ರಜ್ಞಾನದ ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.

Text Box:

ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒಗಳು) ಡ್ರೋನ್‌ ಖರೀದಿಗೆ ಡ್ರೋನ್  ವೆಚ್ಚದ 75% ವರೆಗೆ ಅನುದಾನ ಪಡೆಯಲು ಅರ್ಹವಾಗಿರುತ್ತವೆ.

ಡ್ರೋನ್‌ಗಳನ್ನು ಖರೀದಿಸಲು ಬಯಸದ ಆದರೆ ಕಸ್ಟಮ್ ಹೈರಿಂಗ್ ಕೇಂದ್ರಗಳು, ಹೈಟೆಕ್ ಹಬ್‌ಗಳು, ಡ್ರೋನ್ ತಯಾರಕರು ಮತ್ತು ಸ್ಟಾರ್ಟ್‌ಅಪ್‌ಗಳಿಂದ ಪ್ರಾತ್ಯಕ್ಷಿಕೆಗಳಿಗಾಗಿ ಡ್ರೋನ್‌ಗಳನ್ನು ಬಾಡಿಗೆಗೆ ಪಡೆಯುವ ಅನುಷ್ಠಾನ ಏಜೆನ್ಸಿಗಳಿಗೆ ಪ್ರತಿ ಹೆಕ್ಟೇರ್‌ಗೆ ರೂ.6000 ಆಕಸ್ಮಿಕ ವೆಚ್ಚವನ್ನು ಒದಗಿಸಲಾಗುತ್ತದೆ. ಡ್ರೋನ್ ಪ್ರದರ್ಶನಗಳಿಗಾಗಿ ಡ್ರೋನ್‌ಗಳನ್ನು ಖರೀದಿಸುವ ಅನುಷ್ಠಾನ ಏಜೆನ್ಸಿಗಳಿಗೆ ಅನಿಶ್ಚಿತ ವೆಚ್ಚವು ಪ್ರತಿ ಹೆಕ್ಟೇರ್‌ಗೆ ರೂ.3000 ಕ್ಕೆ ಸೀಮಿತವಾಗಿರುತ್ತದೆ. ಹಣಕಾಸಿನ ನೆರವು ಮತ್ತು ಅನುದಾನವು ಮಾರ್ಚ್ 31, 2023 ರವರೆಗೆ ಲಭ್ಯವಿರುತ್ತದೆ.

ಡ್ರೋನ್ ಖರೀದಿಸಲು ಬಯಸದ, ಆದರೆ ಗ್ರಾಹಕ ಬಾಡಿಗೆ ಕೇಂದ್ರಗಳು, ಹೈಟೆಕ್ ಹಬ್ ಗಳು, ಡ್ರೋನ್ ತಯಾರಿಕಾ ಕಂಪನಿಗಳು ಮತ್ತು ನವೋದ್ಯಮಗಳಿಂದ ಬಾಡಿಗೆ ಪಡೆದು ರೈತರ ಹೊಲಗಳಲ್ಲಿ ಡ್ರೋನ್ ತಂತ್ರಜ್ಞಾನ ಅನುಷ್ಠಾನಗೊಳಿಸುವ ಏಜೆನ್ಸಿಗಳು ಅಥವಾ ಸಂಸ್ಥೆಗಳಿಗೆ ಪ್ರತಿ ಹೆಕ್ಟೇರ್ ಭೂಮಿಗೆ 6 ಸಾವಿರ ರೂ. ಅನಿರೀಕ್ಷಿತ ವೆಚ್ಚ ಒದಗಿಸಲಾಗುತ್ತದೆ. ಆದರೆ ಡ್ರೋನ್ ಗಳನ್ನು ಸ್ವತಃ ಖರೀದಿಸುವ ಅನುಷ್ಠಾನ ಏಜೆನ್ಸಿಗಳಿಗೆ ನೀಡುವ ಅನಿರೀಕ್ಷಿತ ವೆಚ್ಚವನ್ನು ಪ್ರತಿ ಹೆಕ್ಟೇರ್ ಗೆ 3 ಸಾವಿರ ರೂ.ಗೆ ಸೀಮಿತಗೊಳಿಸಲಾಗಿದೆ. ಈ ಆರ್ಥಿಕ ನೆರವು ಮತ್ತು ಸಹಾಯಧನ 2023 ಮಾರ್ಚ್ 31ರ ವರೆಗೆ ಮಾತ್ರ ಅನ್ವಯವಾಗುತ್ತದೆ.

ಡ್ರೋನ್ ಅಪ್ಲಿಕೇಶನ್ ಮೂಲಕ ಎಲ್ಲ ರೀತಿಯ ಕೃಷಿ ಸೇವೆಗಳನ್ನು ಒದಗಿಸುವ ಸಲುವಾಗಿ ರೈತರ ಸಹಕಾರಿ ಸೊಸೈಟಿಗಳು , ಎಫ್‌ಪಿಒಗಳು ಮತ್ತು ಗ್ರಾಮೀಣ ಉದ್ಯಮಿಗಳು ಈಗಾಗಲೇ ಸ್ಥಾಪಿಸಿರುವ ಗ್ರಾಹಕ ಬಾಡಿಗೆ ಕೇಂದ್ರಗಳು  ಡ್ರೋನ್‌ ಖರೀದಿಸಲು ಡ್ರೋನ್ ಮೂಲ ವೆಚ್ಚದ 40% ಮತ್ತು ಅದರ ಲಗತ್ತುಗಳು ಅಥವಾ ರೂ. 4 ಲಕ್ಷ ರೂ. ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಹಣಕಾಸಿನ ನೆರವು ಲಭ್ಯವಾಗುತ್ತದೆ. ಕೃಷಿ ಯಾಂತ್ರೀಕರಣ ಉಪಮಿಷನ್(ಎಸ್ಎಂಎಎಂ) ಅಥವಾ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಅಥವಾ ಇನ್ನಿತರೆ ಯೋಜನೆಗಳ ಮೂಲಕ ಆರ್ಥಿಕ ನೆರವು ಪಡೆದಿರುವ ರೈತರ ಸಹಕಾರಿ ಸೊಸೈಟಿಗಳು, ಎಫ್ ಪಿ ಒಗಳು ಮತ್ತು ಗ್ರಾಮೀಣ ಉದ್ಯಮಶೀಲರು ಸ್ಥಾಪಿಸಿರುವ ಹೊಸ ಗ್ರಾಹಕ ಬಾಡಿಗೆ ಕೇಂದ್ರಗಳು ಅಥವಾ ಹೈಟೆಕ್ ಹಬ್ ಗಳು ಸಹ ಕೃಷಿ ಯಂತ್ರೋಪಕರಣಗಳ ಜತೆಗೆ ಡ್ರೋನ್ ಅನ್ನು ಸಹ ಯಂತ್ರವಾಗಿ ಸೇರ್ಪಡೆ ಮಾಡಬಹುದು.

ಗ್ರಾಹಕರ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸುವ ಕೃಷಿ ಪದವೀಧರರು ಡ್ರೋನ್‌ನ ಮೂಲ ವೆಚ್ಚದ 50% ಅಥವಾ ಡ್ರೋನ್ ಖರೀದಿಗೆ 5 ಲಕ್ಷ ರೂ. ವರೆಗೆ ಅನುದಾನ ಪಡೆಯಲು ಅರ್ಹರಾಗಿರುತ್ತಾರೆ. ಗ್ರಾಮೀಣ ಉದ್ಯಮಶೀಲರು ಮಾನ್ಯತೆ ಪಡೆದ ಪ್ರೌಢಶಿಕ್ಷಣ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)  ಅಥವಾ ಯಾವುದೇ ಅಧಿಕೃತ ರಿಮೋಟ್ ಪೈಲಟ್ ತರಬೇತಿ ಸಂಸ್ಥೆ ನಿರ್ದಿಷ್ಟಪಡಿಸಿದ ಸಂಸ್ಥೆಯಿಂದ ರಿಮೋಟ್ ಪೈಲಟ್ ಪರವಾನಗಿ ಹೊಂದಿರಬೇಕು.

ಗ್ರಾಹಕ ಬಾಡಿಗೆ ಕೇಂದ್ರಗಳು ಮತ್ತು ಹೈಟೆಕ್ ಹಬ್‌ಗಳು ಸಬ್ಸಿಡಿ ದರದಲ್ಲಿ ಡ್ರೋನ್ ಗಳನ್ನು ಖರೀದಿಸಲು ಅನುವು ಕಲ್ಪಿಸಿದರೆ, ತಂತ್ರಜ್ಞಾನ ಎಲ್ಲರ ಕೈಗೆಟಕುವಂತೆ ಮಾಡಿದಂತಾಗುತ್ತದೆ. ಇದರ ಪರಿಣಾಮವಾಗಿ ಡ್ರೋನ್  ತಂತ್ರಜ್ಞಾನದ ವ್ಯಾಪಕ ಅಳವಡಿಕೆಗೆ ಕಾರಣವಾಗುತ್ತದೆ. ಇದು ಭಾರತದಲ್ಲಿ ಸಾಮಾನ್ಯ ರೈತರಿಗೆ ಡ್ರೋನ್‌ಗಳು ಹೆಚ್ಚು ಲಭ್ಯವಾಗುವಂತೆ ಮಾಡಿದಂತಾಗುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ, ದೇಶೀಯ ಡ್ರೋನ್ ಉತ್ಪಾದನೆಯನ್ನು ಗಣನೀಯವಾಗಿ ಉತ್ತೇಜಿಸಿದಂತಾಗುತ್ತದೆ.

ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಷರತ್ತುಬದ್ಧ ವಿನಾಯಿತಿ ಮಾರ್ಗಗಳಲ್ಲಿ ಡ್ರೋನ್ ಕಾರ್ಯಾಚರಣೆಗೆ ಅನುಮತಿ ನೀಡಿವೆ. ಭಾರತದಲ್ಲಿ ಡ್ರೋನ್‌ಗಳ ಬಳಕೆ ಮತ್ತು ಕಾರ್ಯಾಚರಣೆಯನ್ನು ನಿಯಂತ್ರಿಸಲು ನಾಗರಿಕ ವಿಮಾನಯಾನ ಸಚಿವಾಲಯ, 2021 ಆಗಸ್ಟ್ 25ರಂದು ಜಿಎಸ್ಆರ್ ಸಂಖ್ಯೆ 589(ಇ) ಮೂಲಕ ‘ಡ್ರೋನ್ ನಿಯಮಾವಳಿ-2021’ ಪ್ರಕಟಿಸಿದೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಕೃಷಿ, ಅರಣ್ಯ ಮತ್ತಿತರ ಪ್ರದೇಶಗಳಲ್ಲಿ  ಬೆಳೆ ರಕ್ಷಣೆ, ಕೀಟನಾಶಕ ಸಿಂಪಡಣೆ, ಮಣ್ಣು ಮತ್ತು ಬೆಳೆ ಪೋಷಕಾಂಶಗಳ ಸಿಂಪಡಣೆಗಾಗಿ ಡ್ರೋನ್ ಅಪ್ಲಿಕೇಶನ್‌ಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು(ಎಸ್‌ಒಪಿ) ಹೊರತಂದಿದೆ. ರೈತರ ಹೊಲಗಳು, ಅರಣ್ಯ ಮತ್ತಿತರ ಭೂಮಿಯ ಮೇಲೆ ಡ್ರೋನ್ ತಂತ್ರಜ್ಞಾನ ಬಳಸುವ ಸಂಸ್ಥೆಗಳು ಮತ್ತು ಕೃಷಿ ಸೇವೆಗಳ ಎಲ್ಲಾ ಪೂರೈಕೆದಾರರು ಈ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಬೇಕು.

Click Here for SOP for Use of Drone Application

***



(Release ID: 1791839) Visitor Counter : 398