ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಬಿಎಆರ್‌ಸಿಯಿಂದ ‘ಸುದ್ದಿ ಪ್ರಕಾರ’ಕ್ಕಾಗಿ ಟೆಲಿವಿಷನ್‌ ಪ್ರೇಕ್ಷ ಕರ ಮಾಪನ ಶ್ರೇಯಾಂಕ ಪುನರಾರಂಭ

Posted On: 12 JAN 2022 5:19PM by PIB Bengaluru

ಟಿಆರ್‌ಪಿ ಸಮಿತಿ ವರದಿ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) 2020ರ ಏಪ್ರಿಲ್‌ 28ರ ಶಿಫಾರಸಿನಂತೆ ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ (ಬಾರ್ಕ್‌) ತನ್ನ ಪ್ರಕ್ರಿಯೆಗಳು, ನಿಯಮಗಳು, ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಪರಿಷ್ಕರಿಸಿ ಸುಧಾರಣೆಗಳನ್ನು ತಂದಿದೆ. ಈ ಹೊಸ ಬದಲಾವಣೆಗಳೊಂದಿಗೆ ಟಿಆರ್‌ಪಿ ಮಾಪನ ಕಾರ್ಯವನ್ನು ಪ್ರಾರಂಭಿಸಿದೆ. ಸ್ವತಂತ್ರ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲು ಮಂಡಳಿ ಮತ್ತು ತಾಂತ್ರಿಕ ಸಮಿತಿಯ ಪುನರ್‌ ರಚನೆಯನ್ನು ಬಾರ್ಕ್‌ ಕೂಡ ಪ್ರಾರಂಭಿಸಿದೆ. ಶಾಶ್ವತ ಮೇಲುಸ್ತುವಾರಿ ಸಮಿತಿಯನ್ನೂ ರಚಿಸಲಾಗಿದೆ. ಖಾಸಗಿ ಮಾಹಿತಿಗಳನ್ನು ಪಡೆಯಲು ಇರುವ ನಿಯಮಗಳನ್ನು ಪರಿಷ್ಕರಿಸಿ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಬಿಎಆರ್‌ಸಿ, ತಾನು ಕೈಗೊಂಡ ಬದಲಾವಣೆಗಳ ಹಿನ್ನೆಲೆಯಲ್ಲಿ, ಹೊಸ ಪ್ರಸ್ತಾಪಗಳನ್ನು ವಿವರಿಸಲು ಸಂಬಂಧಿತ ಕ್ಷೇತ್ರಗಳನ್ನು ತಲುಪುತ್ತಿದೆ ಮತ್ತು ಹೊಸ ಶಿಷ್ಟಾಚಾರಗಳ ಪ್ರಕಾರ ಬಿಡುಗಡೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಸೂಚಿಸಿದೆ.

ಈ ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ತಕ್ಷ ಣದಿಂದ ಜಾರಿಗೆ ಬರುವಂತೆ ಸುದ್ದಿ ರೇಟಿಂಗ್‌(ಶ್ರೇಯಾಂಕ) ಗಳನ್ನು ಬಿಡುಗಡೆ ಮಾಡುವಂತೆ ಮತ್ತು ನಿಜವಾದ ಪ್ರವೃತ್ತಿಗಳ ನ್ಯಾಯಯುತ ಮತ್ತು ನ್ಯಾಯಸಮ್ಮತ ಪ್ರಾತಿನಿಧ್ಯಕ್ಕಾಗಿ, ಮಾಸಿಕ ಸ್ವರೂಪದಲ್ಲಿ ಪ್ರಕಾರಕ್ಕಾಗಿ ಕಳೆದ ಮೂರು ತಿಂಗಳ ಡೇಟಾವನ್ನು ಬಿಡುಗಡೆ ಮಾಡುವಂತೆ ಬಿಎಆರ್‌ಸಿಗೆ ಸೂಚಿಸಿದೆ. ಪರಿಷ್ಕೃತ ವ್ಯವಸ್ಥೆಯ ಪ್ರಕಾರ, ಸುದ್ದಿ ಮತ್ತು ನೀಚ್‌ ಪ್ರಕಾರಗಳ ವರದಿಯು ‘ನಾಲ್ಕು ವಾರಗಳ ರೋಲಿಂಗ್‌ ಸರಾಸರಿ ಪರಿಕಲ್ಪನೆ’ಯಲ್ಲಿರಬೇಕು ಎಂದಿದೆ.

ಸಚಿವಾಲಯವು ಪ್ರಸಾರ ಭಾರತಿ ಸಿಇಒ ಅವರ ಅಧ್ಯಕ್ಷತೆಯಲ್ಲಿ ‘ಕಾರ್ಯಗುಂಪು’ಅನ್ನು ಸಹ ಸ್ಥಾಪಿಸಿದೆ; ಟ್ರಾಯ್‌ ಮತ್ತು ಟಿಆರ್‌ಪಿ ಸಮಿತಿ ವರದಿ ಶಿಫಾರಸು ಮಾಡಿರುವಂತೆ, ಟಿಆರ್‌ಪಿ ಸೇವೆಗಳ ಬಳಕೆಗಾಗಿ ರಿಟರ್ನ್‌ ಪಾತ್‌ ಡೇಟಾ (ಆರ್‌ಪಿಡಿ) ಸಾಮರ್ಥ್ಯ‌ಗಳನ್ನು ಬಳಸಿಕೊಳ್ಳುವ ಪರಿಗಣನೆಗಾಗಿ ಸಮಿತಿಯು ತನ್ನ ವರದಿಯನ್ನು ನಾಲ್ಕು ತಿಂಗಳ ಅವಧಿಯಲ್ಲಿ ಸಲ್ಲಿಸಬೇಕು.

***


(Release ID: 1789487) Visitor Counter : 195