ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಓಮಿಕ್ರಾನ್ ಕುರಿತ ಇತ್ತೀಚಿನ ವರದಿ


ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ಕೇಂದ್ರ ಸರ್ಕಾರ

ಎಲ್ಲ ಪ್ರಯಾಣಿಕರೂ 7 ದಿನಗಳ ಕಾಲ ಗೃಹ ಕ್ವಾರಂಟೈನ್ ಆಗಬೇಕು ಮತ್ತು ಭಾರತಕ್ಕೆ ಬಂದ 8ನೇ ದಿನ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಳ್ಳಬೇಕು

2022ರ ಜನವರಿ 11ರಂದು (00.01ಗಂಟೆ ಐ.ಎಸ್.ಟಿ.ಯಿಂದ) ಜಾರಿಗೆ ಬರಲಿರುವ ಪರಿಷ್ಕೃತ ಮಾರ್ಗಸೂಚಿ

Posted On: 07 JAN 2022 5:33PM by PIB Bengaluru

ಕೋವಿಡ್ -19ನ ಬದಲಾದ ಸ್ವರೂಪ ಮತ್ತು ಎಸ್.ಎ.ಆರ್.ಎಸ್.-ಸಿಓವಿ-2 ಕಾಳಜಿಯ ರೂಪಾಂತರಿ (ವಿ.ಓ.ಸಿ.ಗಳು) ಅಂದರೆ ಓಮ್ರಿಕಾನ್ ರೂಪಾಂತರಿ ಮತ್ತು ವಿಶ್ವಾದ್ಯಂತ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವಿದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 2022ರ ಜನವರಿ 6ರಂದು ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಈ ಮಾರ್ಗಸೂಚಿಗಳು 2022ರ ಜನವರಿ 11ರಿಂದ (00.01 ಗಂಟೆ ಐ.ಎಸ್.ಟಿ.) ಸಿಂಧುವಾಗಲಿವೆ.

ಇವುಗಳನ್ನು ಕೊನೆಯದಾಗಿ 2021ರ ನವೆಂಬರ್ 30ರಂದು ಪರಿಷ್ಕರಿಸಲಾಗಿತ್ತು.

ಪರಿಷ್ಕೃತ ಮಾರ್ಗಸೂಚಿಗಳನ್ನು ಆರೋಗ್ಯ ಸಚಿವಾಲಯದ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ ಮತ್ತು ಅದು

https://www.mohfw.gov.in/pdf/RevisedGuidelinesforInternationalArrivalsdated7thJanuary2022.pdf ನಲ್ಲಿ ಲಭ್ಯ.

 ಹಿಂದಿನ ಮಾರ್ಗಸೂಚಿ (2021ರ ನವೆಂಬರ್ 30ರ)ಕ್ಕೆ ಹೋಲಿಸಿದಾಗ 2022 ರ ಜನವರಿ 6ರಂದು ಪರಿಷ್ಕರಿಸಲಾಗಿರುವ ಮಾರ್ಗಸೂಚಿಗಳಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ಮಾಡಲಾಗಿದೆ.:

a. ಎಲ್ಲಾ (ಆಗಮಿಸಿದ ಸಮಯದಲ್ಲಿ ಯಾದೃಚ್ಛಿಕವಾಗಿ ಪರೀಕ್ಷೆಗೆ ಆಯ್ಕೆಮಾಡಿದವರಲ್ಲಿ ಶೇ.2ರಷ್ಟು ಮತ್ತು ನಗೆಟಿವ್ ಕಂಡುಬಂದವರು ಸೇರಿದಂತೆ) ಪ್ರಯಾಣಿಕರೂ 7 ದಿನಗಳವರೆಗೆ ಮನೆಯಲ್ಲಿ ಕ್ವಾರಂಟೈನ್‌ ಗೆ ಒಳಗಾಗಬೇಕು ಮತ್ತು ಭಾರತಕ್ಕೆ ಆಗಮಿಸಿದ 8 ನೇ ದಿನದಂದು ಆರ್.ಟಿ.-ಪಿ.ಸಿ.ಆರ್ ಪರೀಕ್ಷೆಯನ್ನು ಮಾಡಿಸಬೇಕು.

b. ಪ್ರಯಾಣಿಕರು ಏರ್ ಸುವಿಧಾ ಪೋರ್ಟಲ್‌ ನಲ್ಲಿ 8 ನೇ ದಿನದಂದು ಕೋವಿಡ್-19 ಗಾಗಿ ಮಾಡಿದ ಆರ್.ಟಿ.-ಪಿ.ಸಿ.ಆರ್. ಪರೀಕ್ಷೆಯ ಫಲಿತಾಂಶಗಳನ್ನು ಅಪ್‌ ಲೋಡ್ ಮಾಡಬೇಕಾಗುತ್ತದೆ (ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮೇಲ್ವಿಚಾರಣೆ ಮಾಡಬೇಕು).

c. ಆಗಮನದ ನಂತರ ಪರೀಕ್ಷೆಯನ್ನು ಮಾಡಿಸಬೇಕಾದ ಎಲ್ಲಾ ಪ್ರಯಾಣಿಕರು, ಸಕಾಲದಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆಯಲು ಮತ್ತು ಅನಾನುಕೂಲತೆಯನ್ನು ತಪ್ಪಿಸಲು ಏರ್ ಸುವಿಧಾ ಪೋರ್ಟಲ್‌ ನಲ್ಲಿ ಆನ್‌ ಲೈನ್‌ ನಲ್ಲಿ ಪರೀಕ್ಷೆಯ ಸಮಯವನ್ನು ಮೊದಲೇ -ಕಾಯ್ದಿರಿಸಬೇಕು

***

MV



(Release ID: 1788467) Visitor Counter : 172