ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಇದು ನಾಲ್ಕು ಎಸ್- ಸ್ಪೀಡ್(ವೇಗ), ಸ್ಕಿಲ್ (ಕೌಶಲ) ಸ್ಕೇಲ್ (ವ್ಯಾಪ್ತಿ) ಮತ್ತು ಸ್ಟಾಂಡರ್ಡ್ (ಮಾನದಂಡಗಳ) ಯುಗ: ಶ್ರೀ ಪಿಯೂಷ್ ಗೋಯಲ್
ಸಂಪೂರ್ಣ ಗುಣಮಟ್ಟ ನಿಯಂತ್ರಣವೆಂದರೆ ಅದು ಗುಣಮಟ್ಟ,ದಲ್ಲಿ ನಂಬಿಕೆ ಮತ್ತು ಗುಣಮಟ್ಟದಲ್ಲಿ ವಿಶ್ವಾಸ: ಶ್ರೀ ಗೋಯಲ್
ಪ್ರತಿಯೊಂದು ಕ್ರಿಯೆಯೂ ಗುಣಮಟ್ಟವನ್ನು ಬೇಡುತ್ತದೆ, ಅದೇ ನಮ್ಮ ಮಂತ್ರವಾಗಿರಬೇಕು: ಶ್ರೀ ಗೋಯಲ್
ಗುಣಮಟ್ಟ ದುಬಾರಿಯಲ್ಲ, ಅದು ವೆಚ್ಚದಾಯಕ: ಶ್ರೀ ಗೋಯಲ್
75ನೇ ವಾರ್ಷಿಕೋತ್ಸವ ಆಚರಿಸಿದ ಭಾರತೀಯ ಮಾನಕ ಬ್ಯೂರೋ
Posted On:
07 JAN 2022 11:03AM by PIB Bengaluru
ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಸ್ಥಾಪನೆಯಾಗಿ ಇಂದಿಗೆ 2022ರ ಜನವರಿ 6ಕ್ಕೆ 75 ವರ್ಷಗಳನ್ನು ಪೂರ್ಣಗೊಳಿಸಿದೆ. ಬಿಐಎಸ್ 1947ರಲ್ಲಿ ಭಾರತೀಯ ಗುಣಮಟ್ಟ ಸಂಸ್ಥೆಯಾಗಿ ಅಸ್ಥಿತ್ವಕ್ಕೆ ಬಂದಿತ್ತು. ಅದರ ಮುಖ್ಯ ಚಟುವಟಿಕೆ ಎಂದರೆ ಮಾನದಂಡ ನಿಗದಿ ಮತ್ತು ಪ್ರಮಾಣೀಕರಣ, ಆ ಮೂಲಕ ಬಿಐಎಸ್ ಕಳೆದ 75 ವರ್ಷಗಳಿಂಧ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪಡಿತರ ಪೂರೈಕೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್, ಸಂಸ್ಥೆಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲರನ್ನೂ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿನಂದಿಸಿದರು.
ಬಿಐಎಸ್ ಮತ್ತು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪಡಿತರ ಪೂರೈಕೆ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು “ಗೌರವಾನ್ವಿತ ಪ್ರಧಾನಮಂತ್ರಿ ಅವರು ಗುಜರಾತ್ ಮುಖ್ಯಮಂತ್ರಿ ಆಗುವ ಮೊದಲು 3ಎಸ್- ವೇಗ, ಕೌಶಲ್ಯ ಮತ್ತು ವ್ಯಾಪ್ತಿಯ ಪರಿಕಲ್ಪನೆಯನ್ನು ಹೊಂದಿದ್ದರು. ಮತ್ತು ಇದೀಗ 4ಎಸ್ ಅಂದರೆ ಎಸ್- ಸ್ಪೀಡ್ (ವೇಗ), ಸ್ಕಿಲ್ (ಕೌಶಲ) ಸ್ಕೇಲ್ (ವ್ಯಾಪ್ತಿ) ಮತ್ತು ಸ್ಟಾಂಡರ್ಡ್ (ಮಾನದಂಡಗಳ) ಯುಗವಾಗಿದೆ”ಎಂದರು.
ನಾವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕಾಕತಾಳೀಯವೆಂದರೆ ನಾವು ಪ್ರಧಾನಮಂತ್ರಿ ಅವರ ‘ಆಜಾದಿಯ ಅಮೃತ ಕಾಲ’ ಆರಂಭವಾಗಿದೆ ಎಂದು ಪ್ರತಿಬಿಂಬಿಸುವ ಅವಕಾಶ ನಮಗೆ ಒದಗಿದೆ ಎಂದರು. “ರಾಷ್ಟ್ರ ಮತ್ತು ಬಿಐಎಸ್ ಎರಡೂ 2047ಕ್ಕೆ 100 ವರ್ಷಗಳನ್ನು ಪೂರೈಸಲಿದೆ. ಹಾಗಾಗಿ 2047ರವರೆಗೆ 25 ವರ್ಷಗಳ ನಮ್ಮ ಕಾರ್ಯಸೂಚಿಯನ್ನು ರೂಪಿಸಲು ಮತ್ತು ಅದನ್ನು ಪಟ್ಟಿ ಮಾಡಲು ಇದು ಉತ್ತಮ ಅವಕಾಶವಾಗಿದೆ. ನಾವು ಭಾರತವನ್ನು ವಿಶ್ವ ಶಕ್ತಿ ಮತ್ತು ಸೂಪರ್ ಪವರ್ ಮತ್ತು ಶ್ರೇಷ್ಠ ರಾಷ್ಟವನ್ನಾಗಿ ಮಾಡಲು ಹೇಗೆ ಕೊಡುಗೆ ನೀಡುತ್ತೇವೆಂಬುದು ಮುಖ್ಯವಾಗುತ್ತದೆ” ಎಂದು ಪಿಯೂಷ್ ಗೋಯಲ್ ಹೇಳಿದರು.
ನಮ್ಮಿಂದ ಕೆಲವು ದೇಶಗಳನ್ನು ಪ್ರತ್ಯೇಕಿಸುವ ವಿಶಿಷ್ಟ ಲಕ್ಷಣವೆಂದರೆ ಗುಣಮಟ್ಟವನ್ನು ವ್ಯಾಖ್ಯಾನಿಸುವ ಅಂಶವಾಗಿದೆ ಎಂದು ಶ್ರೀ ಗೋಯಲ್ ಹೇಳಿದರು “ನಾವು 135 ಕೋಟಿ ಭಾರತೀಯರು ಗುಣಮಟ್ಟವನ್ನು ಕೇಳಲು ಆರಂಭಿಸಿದರೆ ಮತ್ತು ಆರ್ಥಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರೂ ಗುಣಮಟ್ಟ ನೀಡಿದರೆ, ನಂತರ ಗುಣಮಟ್ಟವೇ ಎಲ್ಲವನ್ನೂ ಮಾತನಾಡುತ್ತದೆ”ಎಂದರು.
ಕೇಂದ್ರ ಸರ್ಕಾರವು ಒಂದು ರಾಷ್ಟ್ರ-ಒಂದು ಮಾನದಂಡದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು. ಮತ್ತು ಕೌಶಲ್ಯದಿಂದ ಕೆಲಸ ಮಾಡುವ ಮೂಲಕ ನಾವು ಮಾನದಂಡವನ್ನು ನಿಗದಿಗೊಳಿಸುವುದು ಅತಿ ಮುಖ್ಯವಾಗಿದೆ, ಅದು ನಮಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಯೋಜನೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪ್ರಮಾಣೀಕರಣ ಮತ್ತು ಅನುಸರಣೆ ಮೌಲ್ಯಮಾಪನವು ಗ್ರಾಹಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಹ ಒದಗಿಸುತ್ತದೆ ಮತ್ತು ಅದರಿಂದ ಮುಂಬರುವ ವರ್ಷಗಳಲ್ಲಿ ನಮ್ಮ ಕೆಲವು ಪ್ರಾಮುಖ್ಯತೆ ಪಡೆಯಲಿದೆ ಮತ್ತು ಹೆಚ್ಚು ಪ್ರಸ್ತುವಾಗುತ್ತದೆ ಎಂದರು.
“ಇಂದು ಅನೇಕ ಉತ್ಪಾದನಾ ಘಟಕಗಳು ಒಟ್ಟು ಗುಣಮಟ್ಟ ನಿಯಂತ್ರಣ ಅಥವಾ ಆರು ಸಿಗ್ಮಾ ಮಟ್ಟದ ಗುಣಮಟ್ಟವನ್ನು ನೋಡುತ್ತವೆ, ಅಲ್ಲಿ ಅವರು ದೋಷಗಳು ಅಥವಾ ನೂನ್ಯತೆಗಳನ್ನು ಲೆಕ್ಕ ಹಾಕುತ್ತಾರೆ ಮತ್ತು ಅವುಗಳನ್ನು ಸರಿಪಡಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾರೆ ಮತ್ತು ಇದು ಪ್ರಗತಿಪರ, ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಹೆಗ್ಗರುತಾಗಿದೆ “ಎಂದು ಅವರು ಹೇಳಿದರು.
ಬಿಐಎಸ್ ಗ್ರಾಹಕರಿಗೆ ಗುಣಮಟ್ಟದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಸಂಪೂರ್ಣ ಗುಣಮಟ್ಟ ನಿಯಂತ್ರಣ ಎಂದರೆ, ಗುಣಮಟ್ಟದಲ್ಲಿ ನಂಬಿಕೆ ಮತ್ತು ಗುಣಮಟ್ಟದಲ್ಲಿ ವಿಶ್ವಾಸ ಎಂದರು.
ಹಾಲ್ ಮಾರ್ಕಿಂಗ್ ಮತ್ತು ಮೊಹರು ಕಾರ್ಯದ ಯಶಸ್ಸಿಗಾಗಿ ಶ್ರೀ ಗೋಯಲ್ ಅವರು ಬಿಐಎಸ್ ಅನ್ನು ಅಭಿನಂದಿಸಿದರು. “ನಾವು ಈ ವರ್ಷ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ ಮತ್ತು ನಾವು ಮುಂದಿನ 25 ವರ್ಷಗಳ ಅಮೃತಕಾಲಕ್ಕೆ ಯೋಜನೆ ರೂಪಿಸಬೇಕಿದೆ. ಬ್ರಾಂಡ್ ಇಂಡಿಯಾ ರೂಪಿಸುವಲ್ಲಿ ಬಿಐಎಸ್ ಅತ್ಯಂತ ಪ್ರಮುಖ ಮತ್ತು ಅಷ್ಟೇ ಸಮಾನ ಪಾತ್ರ ವಹಿಸುತ್ತದೆ. ಇದರಿಂದಾಗಿ ನಾವು ಸರಕುಗಳ ಗುಣಮಟ್ಟದ ಪೂರೈಕೆದಾರರಾಗಿ ಪ್ರಪಂಚದಾದ್ಯಂತ ಗುರುತಿಸಿಕೊಳ್ಳುತ್ತೇವೆ ಮತ್ತು ಸೇವೆಗಳು ರಾಷ್ಟ್ರದ ಮನೋಭಾವವನ್ನು ಬದಲಿಸುತ್ತವೆ “ಎಂದು ಅವರು ಹೇಳಿದರು.
“ನಮ್ಮ ಪ್ರತಿಯೊಂದು ಕ್ರಿಯೆಯೂ ಬೇಡಿಕೆಯನ್ನು ಕೇಳುವಂತಾಗಬೇಕು ಎಂಬುದು ನಮ್ಮ ಮಂತ್ರವಾಗಿರಬೇಕು”ಎಂದು ತಿಳಿಸಿದರು.
ಬಿಐಎಸ್ ಬೆಳವಣಿಗೆಗೆ ಶ್ರೀ ಗೋಯಲ್ ಅವರು 5 ಮಂತ್ರಗಳನ್ನು ಸೂಚಿಸಿದರು.
- ನಾವು ಅಡ್ಡಿಪಡಿಸುವವರಾಗದೆ, ಸಹಾಯ ನೀಡುವವರಾಗಿ ಕೆಲಸ ಮಾಡಬೇಕು
- ಬಿಐಎಸ್ ಅನ್ನು ಜಾಗತಿಕ ಸಂಸ್ಥೆಯನ್ನಾಗಿ ಅಭಿವೃದ್ಧಿಪಡಿಸಬೇಕು. ಜಾಗತಿಕ ಅನುಭವಗಳಿಂದ ಕಲಿಯಬೇಕು ಮತ್ತು ಜಾಗತಿಕ ಮಾನದಂಡಗಳನ್ನು ಸಂಯೋಜಿಸಿಕೊಳ್ಳಬೇಕು. ನಾವು ಜಗತ್ತಿಗೆ ಶ್ರೇಷ್ಠ ಎಂಬುದನ್ನು ತೋರಿಸಬೇಕು. ಅದಕ್ಕಾಗಿ ನಾವು ಕೂಡ ಪ್ರವರ್ತಕರಾಗಬೇಕು
- ದೇಶದ ಪ್ರಯೋಗಾಲಯಗಳ ಪ್ರಮಾಣೀಕರಣ ಅಗತ್ಯತೆಗಳನ್ನು ಮತ್ತು ಭಾರತದಾದ್ಯಂತ ಉತ್ತಮ ಗುಣಮಟ್ಟದ ಆಧುನಿಕ ಪ್ರಯೋಗಾಲಯಗಳನ್ನು ಸ್ಥಾಪಿಸುವಲ್ಲಿ ಇರುವ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು
- ಗುಣಮಟ್ಟ ಅಥವಾ ಪ್ರಮಾಣೀಕೃತ ಕ್ರಾಂತಿಗಿಂತ ಕಡಿಮಯೇನಿಲ್ಲ. ಆ ನಿಟ್ಟಿನಲ್ಲಿ ಒಂದು ರಾಷ್ಟ್ರ- ಒಂದು ಮಾನದಂಡ ಇಡೀ ವ್ಯವಸ್ಥೆಯನ್ನು ಬದಲಿಸಲಿದೆ
- ಗುಣಮಟ್ಟ ದುಬಾರಿಯಲ್ಲ ಆದರೆ ವೆಚ್ಚದಾಯಕ” ಎಂದು ಅವರು ಹೇಳಿದರು
ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀ ರೋಹಿತ್ ಕುಮಾರ್ ಮತ್ತು ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಮತ್ತು ಸಚಿವಾಲಯ ಹಾಗೂ ಬಿಐಎಸ್ ನ ಅಧಿಕಾರಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಶೇಷ ಸಂದರ್ಭದಲ್ಲಿ ಬ್ಯೂರೋದ ಮಹಾನಿರ್ದೇಶಕರಾದ ಶ್ರೀ ಪ್ರಮೋದ್ ಕುಮಾರ್ ತಿವಾರಿ ಅವರು ಬಿಐಎಸ್ ನ ಎಲ್ಲ ಪಾಲುದಾರರಿಗೆ ತಮ್ಮ ಕೃತಜ್ಞತೆ ಹಾಗೂ ಶುಭಾಶಯಗಳನ್ನು ಸಲ್ಲಿಸಿದರು. ಅವರು “ಬಿಐಎಸ್ ನ ಎಲ್ಲ ಪಾಲುದಾರರು ಮತ್ತು ಸಿಬ್ಬಂದಿಗಳ ಶ್ರೇಷ್ಠ ಕಾರ್ಯ ಮತ್ತು ನಿರಂತರ ಪ್ರಯತ್ನಗಳ ಕಾರಣದಿಂದಾಗಿ ಸಂಸ್ಥೆ ಇಂದು ಗೌರವಯುತ ಸ್ಥಾನವನ್ನು ಸಾಧಿಸಿದೆ. ಭಾರತದ ಪ್ರಗತಿಯಲ್ಲಿ ಹೆಚ್ಚಿನ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಭವಿಷ್ಯದಲ್ಲಿ ಮತ್ತಷ್ಟು ಕೊಡುಗೆ ನೀಡಲು ನಾವು ಬದ್ಧವಾಗಿದ್ದೇವೆ”ಎಂದು ಹೇಳಿದರು.
ಭಾರತದದಲ್ಲಿ ಬ್ರಿಟಿಷ್ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ದೇಶವು ಕೈಗಾರಿಕಾ ಮೂಲಸೌಕರ್ಯವನ್ನು ನಿರ್ಮಿಸುವ ಬೃಹತ್ ಕಾರ್ಯವನ್ನು ಎದುರಿಸುತ್ತಿದ್ದಾಗ, ಎಂಜಿನಿಯರ್ ಗಳ ಸಂಸ್ಥೆ (ಭಾರತ) ಒಂದು ರಾಷ್ಟ್ರೀಯ ಮಾನದಂಡಗಳನ್ನು ರೂಪಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸಂಸ್ಥೆಯ ಸಂವಿಧಾನದ ಮೊದಲ ಕರಡನ್ನು ಸಿದ್ಧಪಡಿಸಿತು. ಇದು ಕೈಗಾರಿಕೆಗಳು ಮತ್ತು ಪೂರೈಕೆಗಳ ಇಲಾಖೆಗೆ 1946ರ ಸೆಪ್ಟಂಬರ್ 3ರಂದು ಒಂದು ಜ್ಞಾಪನಾ ಪತ್ರವನ್ನು ನೀಡಿ, ಅಧಿಕೃತವಾಗಿ ‘ಇಂಡಿಯನ್ ಸ್ಟಾಂಡರ್ಡ್ಸ್ ಇನ್ಸಿಟ್ಯೂಷನ್ (ಐಎಸ್ ಐ) ಸ್ಥಾಪಿಸುವುದಾಗಿ ಪ್ರಕಟಿಸಿತು. ಐಎಸ್ ಐ 1947ರ ಜನವರಿ 6ರಂದು ಕಾರ್ಯಾರಂಭ ಮಾಡಿತು ಮತ್ತು ಅದರ ಮೊದಲ ನಿರ್ದೇಶಕರಾಗಿ ಡಾ.ಲಾಲ್ ಸಿ. ವರ್ಮನ್ ಅಧಿಕಾರ ವಹಿಸಿಕೊಂಡರು.
1986ರ ನವೆಂಬರ್ 26ರಂದು ಸಂಸತ್ತಿನಲ್ಲಿ ಕಾಯಿದೆಯ ಮೂಲಕ ಭಾರತೀಯ ಮಾನದಂಡ ಬ್ಯೂರೋ(ಬಿಐಎಸ್) 1987ರ ಏಪ್ರಿಲ್ 1ರಿಂದ ಸ್ಥಾಪನೆಯಾಯಿತು. ಅದಕ್ಕೆ ಹೆಚ್ಚಿನ ವ್ಯಾಪ್ತಿ ಮತ್ತು ಅಧಿಕಾರ ನೀಡಲಾಯಿತು, ಹಿಂದಿನ ಐಎಸ್ ಐನ ಕಾರ್ಯಗಳು, ಹೊಣೆಗಾರಿಕೆಗಳು, ಆಸ್ತಿಗಳು ಮತ್ತು ಸಿಬ್ಬಂದಿಯನ್ನು ಇದಕ್ಕೆ ಹಸ್ತಾಂತರಿಸಲಾಯಿತು. ಈ ಬದಲಾವಣೆಯೊಂದಿಗೆ, ಸರ್ಕಾರ ಗುಣಮಟ್ಟದ ಸಂಸ್ಕೃತಿ ಮತ್ತು ಪ್ರಜ್ಞೆಗೆ ಪೂರಕ ವಾತಾವರಣ ನಿರ್ಮಾಣ Sಮಾಡುವ ಜೊತೆಗೆ ಮಾನದಂಡಗಳನ್ನು ರೂಪಿಸುವುದು ಮತ್ತು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಕಾರ್ಯವನ್ನು ಕೈಗೊಂಡಿದೆ.
***
(Release ID: 1788339)
Visitor Counter : 254