ಇಂಧನ ಸಚಿವಾಲಯ
ಇಂಧನ ಸಚಿವಾಲಯದಡಿ ಬರುವ ಸಿಪಿಎಸ್ ಇಗಳಿಂದ ಡಿಸೆಂಬರ್ ಅಂತ್ಯದವರೆಗೆ 40395.34 ಕೋಟಿ ರೂ. ಬಂಡವಾಳ ವೆಚ್ಚ
2020-21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಕ್ಯಾಪೆಕ್ಸ್ ವೆಚ್ಚ ಪ್ರಮಾಣ ಶೇ.47ಕ್ಕೂ ಅಧಿಕ
2021-22 ನೇ ಹಣಕಾಸು ವರ್ಷದಲ್ಲಿ ಸಿಪಿಎಸ್ ಇಗಳಿಂದ ಸಾಮೂಹಿಕವಾಗಿ ಶೇ.80 ರಷ್ಟು ಕ್ಯಾಪೆಕ್ಸ್ ಗುರಿ ಸಾಧನೆ
Posted On:
06 JAN 2022 10:06AM by PIB Bengaluru
ಇಂಧನ ಸಚಿವಾಲಯದಡಿ ಬರುವ ಸಿಪಿಎಸ್ ಇಗಳು 2021-22 ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 40395.34 ಕೋಟಿ ಬಂಡವಾಳ ವೆಚ್ಚ (ಕ್ಯಾಪೆಕ್ಸ್ ) ವನ್ನು ಮಾಡಿವೆ. 2020-21ನೇ ಸಾಲಿಗೆ ಹೋಲಿಸಿದರೆ ಶೇ.47 ಕ್ಕೂ ಅಧಿಕ ವೆಚ್ಚವಾಗಿದೆ.
ಹಾಗಾಗಿ, ಹಿಂದಿನ ವರ್ಷಕ್ಕೆ ಹೋಲಿಸಿದರ ಸಚಿವಾಲಯದ ಕ್ಯಾಪೆಕ್ಸ್ ಸಾಧನೆ ಗಣನೀಯವಾಗಿದೆ.
2021-22 ನೇ ಸಾಲಿನಲ್ಲಿ 50,690.52ಕೋಟಿ ರೂ ಕ್ಯಾಪೆಕ್ಸ್ ಗುರಿ ಇತ್ತು, ಆ ಪೈಕಿ ಒಟ್ಟಾರೆ ಸಿಪಿಎಸ್ ಇಗಳು ಶೇ 80ಕ್ಕೂ ಅಧಿಕ ಕ್ಯಾಪೆಕ್ಸ್ ಗುರಿ ಸಾಧಿಸಿರುವುದು ಉಲ್ಲೇಖಾರ್ಹ.
ಇಂಧನ ವಲಯದಲ್ಲಿ ಅಗ್ರ ಸಾಧನೆ ಮಾಡಿದ ಸಂಸ್ಥೆಗಳಲ್ಲಿ ಪವರ್ ಗ್ರಿಡ್ ( ಶೇ 90.6), ಎಸ್ ಜೆವಿಎನ್ ( ಶೇ.90.19), ಎನ್ ಟಿಪಿಸಿ (ಶೇ.86.5) ಮತ್ತು ಟಿಎಚ್ ಡಿಸಿ (ಶೇ. 85.38) ಒಳಗೊಂಡಿದೆ.
ಇಂಧನ ಸಚಿವಾಲಯ ವಿದ್ಯುತ್ ವಲಯದ ಯೋಜನೆಗಳಿಗೆ ಬಂಡವಾಳ ವೆಚ್ಚಕ್ಕೆ ಭಾರಿ ಒತ್ತು ನೀಡಿದೆ. ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಅಡಚಣೆ ಉಂಟಾಗದೆ ನಿರಂತರ ಮೇಲ್ವಿಚಾರಣೆ ಮತ್ತು ಪರಿಶೀಲನಾ ಕಾರ್ಯ ನಡೆಸುತ್ತಿದೆ.
***
(Release ID: 1788008)
Visitor Counter : 218