ಗಣಿ ಸಚಿವಾಲಯ
azadi ka amrit mahotsav

ನಿರ್ಣಾಯಕ ಮತ್ತು ವ್ಯೂಹಾತ್ಮಕ ಖನಿಜ ಅಗತ್ಯಗಳಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನಗಳು


ಆಸ್ಟ್ರೇಲಿಯಾ, ಅರ್ಜೆಂಟೀನಾ, ಬೊಲಿವಿಯಾ ಮತ್ತು ಚಿಲಿ ಮೂಲ ರಾಷ್ಟ್ರಗಳಾಗುವ ಸಾಧ್ಯತೆ

Posted On: 03 JAN 2022 3:13PM by PIB Bengaluru

ರಾಷ್ಟ್ರದ ಖನಿಜ ಭದ್ರತೆಯನ್ನು ಖಾತರಿಪಡಿಸಲು ಹಾಗೂ ನಿರ್ಣಾಯಕ ಮತ್ತು ವ್ಯೂಹಾತ್ಮಕ ಖನಿಜಗಳ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು, ಗಣಿ ಸಚಿವಾಲಯವು ʻರಾಷ್ಟ್ರೀಯ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ʼ (ಎನ್ಎಎಲ್ಸಿಒ), ʻಹಿಂದೂಸ್ತಾನ್ ಕಾಪರ್ ಲಿಮಿಟೆಡ್ʼ (ಎಚ್‌ಸಿಎಲ್) ಮತ್ತು ʻಖನಿಜ ಪರಿಶೋಧನಾ ನಿಗಮ ಲಿಮಿಟೆಡ್ʼ(ಎಂಇಸಿಎಲ್) ಸಹಯೋಗದೊಂದಿಗೆ ʻಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್ʼ (ಕೆಎಬಿಐಲ್) ಎಂಬ ಜಂಟಿ ಉದ್ಯಮ ಕಂಪನಿಯನ್ನು ಸ್ಥಾಪಿಸಿದೆ. ಲಿಥಿಯಂ, ಕೋಬಾಲ್ಟ್ ಮುಂತಾದ ನಿರ್ಣಾಯಕ ಮತ್ತು ವ್ಯೂಹಾತ್ಮಕ ಸ್ವರೂಪದ ಸಾಗರೋತ್ತರ ಖನಿಜ ಸ್ವತ್ತುಗಳನ್ನು ಗುರುತಿಸಲು ಮತ್ತು ಸ್ವಾಧೀನಪಡಿಸಿಕೊಳ್ಳುವ ಗುರಿಯನ್ನು ʻಕೆಎಬಿಐಎಲ್‌ʼಗೆ ನೀಡಲಾಗಿದೆ. ʻಆತ್ಮನಿರ್ಭರ್ ಭಾರತ್ʼ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡುವ ಗುರಿಯನ್ನು ಉಪಕ್ರಮದ ಮೂಲಕ ಹೊಂದಲಾಗಿದೆ. ಇದು ವಿದ್ಯುತ್‌ ವಾಹನ ಸಂಚಾರ (-ಮೊಬಿಲಿಟಿ), ನವೀಕರಿಸಬಹುದಾದ ಇಂಧನ, ಔಷಧ, ಏರೋಸ್ಪೇಸ್, ವಾಯುಯಾನ ಮುಂತಾದ ನಿರ್ಣಾಯಕ ವಲಯಗಳ ಅಗತ್ಯಗಳನ್ನು ಪೂರೈಸಲಿದೆ.

ನಿಯೋಜಿತ ಅಧ್ಯಯನ ಮತ್ತು ಆಯ್ಕೆ ಮಾನದಂಡಗಳ ಆಧಾರದ ಮೇಲೆ, ವಿದೇಶಗಳಲ್ಲಿ ಖನಿಜ ಆಸ್ತಿ ಸ್ವಾಧೀನದ ಸಾಧ್ಯತೆಗಳನ್ನು ಅನ್ವೇಷಿಸಲು ಆಯ್ದ ಮೂಲ ದೇಶಗಳನ್ನು ಅಂತಿಮಗೊಳಿಸಲಾಗಿದೆ. ಇಲ್ಲಿಯವರೆಗೆ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬೊಲಿವಿಯಾ ಮತ್ತು ಚಿಲಿಯಂತಹ ಮೂಲ ರಾಷ್ಟ್ರಗಳೊಂದಿಗೆ ʻಕೆಎಬಿಐಎಲ್‌ʼ ವ್ಯವಹರಿಸುತ್ತಿದೆ. ದೇಶಗಳು ನಿರ್ಣಾಯಕ ಮತ್ತು ವ್ಯೂಹಾತ್ಮಕ ಖನಿಜಗಳನ್ನು ಒಳಗೊಂಡಿವೆ. ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ರಾಜತಾಂತ್ರಿಕ ಕಚೇರಿಗಳು ಇದರ ಪ್ರಾಥಮಿಕ ಸಮನ್ವಯ ಮಾಡುತ್ತಿದ್ದು, ನಿರೀಕ್ಷಿತ ಖನಿಜ ಪ್ರದೇಶಗಳಿಗೆ ಸಂಬಂಧಿಸಿದಂತೆ ಕಾರ್ಯಶ್ರದ್ಧೆ ಮತ್ತು ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ.

***


(Release ID: 1787151) Visitor Counter : 219