ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಇಲಾಖೆಯ 2021ನೇ ಸಾಲಿನ ವರ್ಷಾಂತ್ಯದ ಅವಲೋಕನ


2021-22ರಲ್ಲಿ ವ್ಯಾಪಾರಕ್ಕಾಗಿ 400 ಬಿಲಿಯನ್ ಅಮೆರಿಕನ್ ಡಾಲರ್ ರಫ್ತು ಗುರಿ ನಿಗದಿ, ಕಳೆದ ತಿಂಗಳವರೆಗೆ ಶೇ.66ರಷ್ಟು ಪ್ರಗತಿ ಸಾಧನೆ

2021ರ ಏಪ್ರಿಲ್-ನವೆಂಬರ್ ನಡುವಿನ ಅವಧಿಯಲ್ಲಿ ರಫ್ತು ವಹಿವಾಟು 263 ಬಿಲಿಯನ್ ಡಾಲರ್ ತಲುಪಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.51ರಷ್ಟು ಹೆಚ್ಚಳ

ಭಾರತ-ಮಾರಿಷಸ್ ಫೆಬ್ರವರಿಯಲ್ಲಿ ಸಮಗ್ರ ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆ ಒಪ್ಪಂದಕ್ಕೆ ಸಹಿ, ಭಾರತ-ಯುಎಇ ನಡುವೆ ಸಿಇಪಿಎ ಮಾತುಕತೆ ಮುಕ್ತಾಯ, ಅಂತೆಯೇ ಭಾರತ- ಆಸ್ಟ್ರೇಲಿಯಾ ನಡುವೆ ಶೀಘ್ರ ಸಿಇಸಿಎ ಮಧ್ಯಂತರ ಒಪ್ಪಂದ ನಿರೀಕ್ಷೆ  

ದುಬೈನಲ್ಲಿ ನಡೆದ ವರ್ಲ್ಡ್ ಎಕ್ಸ್ ಪೋ 2020ಯಲ್ಲಿ ಭಾರತದ ಮಳಿಗೆ ದೊಡ್ಡ ಆಕರ್ಷಣೆ 

ಸರ್ಕಾರದ ಇ-ಮಾರುಕಟ್ಟೆ (ಜಿಇಎಂ) ತಾಣದಲ್ಲಿ ಸುಮಾರು 32 ಲಕ್ಷಕ್ಕೂ ಅಧಿಕ ವ್ಯಾಪಾರಿಗಳ ಉಪಸ್ಥಿತಿ

ಅನುಮೋದನೆಯ ಅಂತಿಮ ಘಟ್ಟದಲ್ಲಿ ರಾಷ್ಟ್ರೀಯ ಸಾಗಣೆ ನೀತಿ

Posted On: 30 DEC 2021 12:35PM by PIB Bengaluru

2021ನೇ ವರ್ಷದಲ್ಲಿ ವಾಣಿಜ್ಯ ಇಲಾಖೆಯ ಪ್ರಮುಖ  ಸಾಧನೆಗಳ ಮುಖ್ಯಾಂಶಗಳು ಕೆಳಗಿನಂತಿವೆ.

 1. 2021-22ರಲ್ಲಿ ರಫ್ತು ವಹಿವಾಟಿಗೆ 400 ಬಿಲಿಯನ್ ಅಮೆರಿಕನ್ ಡಾಲರ್ ಗುರಿ

ಎ. ಭಾರತದ ಮತ್ತು ವಿಶ್ವದ ಉಳಿದೆಡೆಗಿನ ಹಿಂದಿನ ಪ್ರವೃತ್ತಿ, ಸದ್ಯದ ಸನ್ನಿವೇಶ ಮತ್ತು ನೀತಿ ಆಯಾಮಗಳನ್ನು ಆಧರಿಸಿ 2021-22ನೇ ಹಣಕಾಸು ವರ್ಷಕ್ಕೆ ವಾಣಿಜ್ಯ ಇಲಾಖೆ 200 ದೇಶಗಳಿಗೆ 400 ಬಿಲಿಯನ್ ಅಮೆರಿಕನ್ ಡಾಲರ್  ಮತ್ತು 30 ತ್ವರಿತ ಅಂದಾಜು ವಸ್ತುಗಳನ್ನು ರಚನೆ ಮಾಡುವ ಗುರಿಯನ್ನು ನಿಗದಿಪಡಿಸಿತ್ತು. ಭಾರತೀಯ ವ್ಯಾಪಾರಿಗಳ ರಫ್ತು ಪ್ರಮಾಣ 2021ರ ನವೆಂಬರ್ ವರೆಗೆ 400 ಬಿಲಿಯನ್ ಅಮೆರಿಕನ್ ಡಾಲರ್ ಪೈಕಿ ಶೇ.65.89ರಷ್ಟು ತಲುಪಿದೆ.

ಬಿ.  ಗುರಿಗಳ ಸಾಧನೆಯ ಮಾಸಿಕ ಮೇಲ್ವಿಚಾರಣೆಗಾಗಿ, ಡಿಜಿಎಫ್ ಟಿಯ ಸಾಂಖ್ಯಿಕ ವಿಭಾಗದ ಅಡಿಯಲ್ಲಿ ರಫ್ತು ಮೇಲ್ವಿಚಾರಣಾ ವಿಭಾಗವನ್ನು ಸ್ಥಾಪಿಸಲಾಗಿದೆ. ದೇಶ/ಪ್ರದೇಶ/ ಮಿಷನ್/ಉತ್ಪನ್ನಗಳು/ ಪದಾರ್ಥಗಳ ಗುಂಪುಗಳು/ ರಫ್ತು ಉತ್ತೇಜನಾ ಮಂಡಳಿಗಳ ವಿಭಜಿತ ಗುರಿಗಳ ಮೇಲೆ ಮಂಡಳಿಯಿಂದ ಕಟ್ಟುನಿಟ್ಟಾದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲಾಗುವುದು.

ಸಿ. ಪ್ರಧಾನಮಂತ್ರಿ ಅವರು 2021ರ ಅಗಸ್ಟ್ 6ರಂದು 400 ಬಿಲಿಯನ್ ಅಮೆರಿಕನ್ ಡಾಲರ್ ರಫ್ತು ವಹಿವಾಟು ಗುರಿ ಸಾಧನೆಗಾಗಿ  ‘ಲೋಕಲ್ ಗೋಸ್ ಗ್ಲೋಬಲ್ – ಮೇಕ್ ಇನ್ ಇಂಡಿಯಾ ಫಾರ್ ದಿ  ವರ್ಲ್ಡ್’ ಕುರಿತು ಭಾರತ ರಾಯಭಾರಿಗಳು/ ಹೈ ಕಮೀಷನರ್ ಗಳು/ ವಾಣಿಜ್ಯ ಮಿಷನ್ ಗಳು, ಸಂಬಂಧಿಸಿದ ಸಚಿವಾಲಯಗಳು/ಇಲಾಖೆಗಳು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಇಪಿಸಿಎಸ್, ಪದಾರ್ಥಗಳು ಮಂಡಳಿಗಳು/ ಅಧಿಕಾರಿಗಳು/ ಇಲಾಖೆಗಳು/ ವ್ಯಾಪಾರಿ ಒಕ್ಕೂಟಗಳು ಇತ್ಯಾದಿಗಳನ್ನು ಉದ್ದೇಶಿಸಿ ಮಾತನಾಡಿದರು.

 1. ರಫ್ತು ಸಾಧನೆ

ವ್ಯಾಪಾರ ವಹಿವಾಟು

 1. ಪ್ರಸಕ್ತ ಹಣಕಾಸು ವರ್ಷದಲ್ಲಿ ಸತತ 8 ತಿಂಗಳಿಗೆ 30 ಬಿಲಿಯನ್ ಅಮೆರಿಕನ್ ಡಾಲರ್ ಗೂ ಅಧಿಕ ರಫ್ತಿನೊಂದಿಗೆ ಕಳೆದ 8 ತಿಂಗಳಲ್ಲಿ ಭಾರತ ರಫ್ತಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.
 2. ಏಪ್ರಿಲ್-ನವೆಂಬರ್ 2021ರ ನಡುವಿನ ಅವಧಿಯಲ್ಲಿ ರಫ್ತುಗಳ ಸಂಚಿತ ಮೌಲ್ಯವನ್ನು 263.57 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು 2020ರ ಏಪ್ರಿಲ್ –ನವೆಂಬರ್ ಅವಧಿಗೆ ಹೋಲಿಸಿದರೆ 174.16 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಅಂದರೆ ಶೇ.51.34ರಷ್ಟು ಧನಾತ್ಮಕ ಬೆಳವಣಿಗೆಯಾಗಿದೆ. 2019ರ ಏಪ್ರಿಲ್-ನವೆಂಬರ್ ಗೆ ಹೋಲಿಸಿದರೆ, 2021ರ ಏಪ್ರಿಲ್–ನವೆಂಬರ್ ಅವಧಿಯಲ್ಲಿ ರಫ್ತು ಶೇ.24.82ರಷ್ಟು ಸಕಾರಾತ್ಮಕ ಪ್ರಗತಿ ಸಾಧಿಸಿತ್ತು. 

ಸೇವೆಗಳು

ಎ. ಸಾಂಕ್ರಾಮಿಕ 2020ರಲ್ಲಿ ವಾಣಿಜ್ಯ ಸೇವೆಗಳಲ್ಲಿ ವಿಶ್ವ ವ್ಯಾಪಾರದ ಮೇಲೆ ಪರಿಣಾಮವನ್ನು ಬೀರಿವೆ, ಆದರೆ ತುಲಾನಾತ್ಮಕವಾಗಿ ಭಾರತದ ರಫ್ತು ಸೇವೆಗಳು ಸ್ಥಿತಿಸ್ಥಾಪಕತ್ವವನ್ನು ತೋರಿವೆ. ವಿಶ್ವ ವಾಣಿಜ್ಯ ಸೇವೆಗಳಲ್ಲಿ ಭಾರತದ ಪಾಲು 2019ರಲ್ಲಿ ಶೇ.3.5 ಇದ್ದದ್ದು  2020ರಲ್ಲಿ ಶೇ.4.1ಕ್ಕೆ ಏರಿಕೆಯಾಗಿದೆ. ಇದು ವಾಣಿಜ್ಯ ರಫ್ತು ದಾರರಲ್ಲಿ 2020ರಲ್ಲಿ ಭಾರತದ ಶ್ರೇಯಾಂಕವನ್ನು 8ರಿಂದ 7ಕ್ಕೆ ಸುಧಾರಿಸಿಕೊಳ್ಳಲು ಕಾರಣವಾಯಿತು.

 1. ಆಜಾದಿ ಕಾ ಅಮೃತ ಮಹೋತ್ಸವ (ಎಕೆಎಎಂ)

ಎ. ಆಜಾದಿ ಕಾ ಅಮೃತ ಮಹೋತ್ಸವ ಸ್ಮರಣಾರ್ಥವಾಗಿ, ವಾಣಿಜ್ಯ ಇಲಾಖೆ 2021ರ ಸೆಪ್ಟಂಬರ್ 20ರಿಂದ 26ವರೆಗೆ ‘ವಾಣಿಜ್ಯ ಸಪ್ತಾಹ’ವನ್ನು ಆಯೋಜಸಿದ್ದು, ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್  ಹೆಸರಿನಲ್ಲಿ ಜಾಗತಿಕ ಸ್ಪರ್ಧೆಯನ್ನು ಎದುರಿಸಬಹುದಾದ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಭಾರತವು ಅಂತಾರಾಷ್ಟ್ರೀಯ ವ್ಯಾಪಾರ ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪಾಲುದಾರರನ್ನು ಹೇಗೆ ಸಬಲಗೊಳಿಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಅದಕ್ಕಾಗಿ ವಾಣಿಜ್ಯ ಇಲಾಖೆಯು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ದೇಶಾದ್ಯಂತ ರಫ್ತು ಪ್ರಕ್ರಿಯೆಯಲ್ಲಿ ಎಲ್ಲ ಸಂಬಂಧಿತ ಮಧ್ಯಸ್ಥಗಾರರ ಸಹಯೋಗದೊಂದಿಗೆ ಒಂದು ವಾರದ ಚಟುವಟಿಕೆಗಳನ್ನು ಆರಂಭಿಸಲು ಕೆಲಸ ಮಾಡಿವೆ.

 1. ವಾರವೀಡಿ ನಡೆದ ಕಾರ್ಯಕ್ರಮದ ವೇಳೆ ಈ ಕೆಳಗಿನ ವಿಷಯಗಳ ಕುರಿತು ನಾನಾ ಚಟುವಟಿಕೆಗಳು ನಡೆದವು, ಅವುಗಳೆಂದರೆ (i) ಹೆಚ್ಚಿನ ಸ್ವಾವಲಂಬನೆಯ ಕಡೆಗೆ (ii) ಏರುತ್ತಿರುವ ಆರ್ಥಿಕ ಶಕ್ತಿಯನ್ನಾಗಿ ಭಾರತವನ್ನು ಪ್ರದರ್ಶಿಸುವುದು (iii) ಹಸಿರು ಮತ್ತು ಸ್ವಚ್ಛ ಎಸ್ ಇಜಡ್ ಗಳು (iv) ವಾಣಿಜ್ಯ ಉತ್ಸವಗಳು  (v) ತೋಟದಿಂದ ವಿದೇಶಿ ನೆಲ್ಲಕ್ಕೆ, ಜಾಗತಿಕ ಸ್ಪರ್ಧೆಯನ್ನು ತಡೆದುಕೊಳ್ಳಬಲ್ಲ  ಉತ್ಪನ್ನಗಳ ಗುಣಮಟ್ಟದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ಕೇಂದ್ರ ಕಲ್ಪನೆಯನ್ನು ಅಂತಾರಾಷ್ಟ್ರೀಯ ವ್ಯಾಪಾರ ವಲಯದಲ್ಲಿ ಅನುಸರಿಸುತ್ತಿದೆ, ಇದು ಜಗತ್ತಿಗಾಗಿ ಮೇಕ್ ಇನ್ ಇಂಡಿಯಾ ಗುರಿ ಸಾಧನೆಗೆ ಅನುಗುಣವಾಗಿ ಹೊಂದಿಕೊಂಡಿದೆ.

ಬಿ. ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ವ್ಯಾಪಾರ ಮತ್ತು ಆಚರಣೆಯ ಸಮ್ಮಿಲನ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ವ್ಯಾಪಾರದ ಪ್ರಾಥಮಿಕ ಪಾಲುದಾರರು ಅಂದರೆ ರಫ್ತುದಾರರು ಮಾತ್ರವಲ್ಲದೆ ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳು, ರಫ್ತು ಉತ್ತೇಜನ  ಮಂಡಳಿಗಳು, ಕೈಗಾರಿಕೆಗಳು, ವರ್ತಕರು, ಉತ್ಪಾದಕರು, ಪ್ಲಾಂಟೇಷನ್ ಕೆಲಸಗಾರರು, ಎಂಎಸ್ ಎಂಇಗಳು ಮತ್ತು ದೇಶಾದ್ಯಂತ ಇತರೆ ಪಾಲುದಾರರು ಸುಮಾರು 7 ಜಿಲ್ಲೆಗಳನ್ನು ಒಳಗೊಂಡಂತೆ ದೇಶಾದ್ಯಂತ ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ಐದು ವಿಷಯಗಳನ್ನು ಆಧರಿಸಿ ನಡೆದ ಎಲ್ಲ ಕಾರ್ಯಕ್ರಮಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಎಲ್ಲ ಪಾಲುದಾರರು ವಿಜೃಂಭಣೆಯಿಂದ ಭಾಗವಹಿಸಿದ್ದರಿಂದ ಅವು ಅತ್ಯಂತ ಯಶಸ್ಸು ಕಂಡವು.

 1. ವ್ಯಾಪಾರಕ್ಕೆ ಸುಗಮ ವಾತಾವರಣ

ಎ. ಸಾಂಕ್ರಾಮಿಕದ ಅವಧಿಯಲ್ಲಿ ನೀತಿ ಸ್ಥಿರತೆಯನ್ನು ಒದಗಿಸುವ ಸಲುವಾಗಿ ವಿದೇಶಿ ವ್ಯಾಪಾರ ನೀತಿ(ಎಫ್ ಟಿಪಿ) 2015-20 ಅನ್ನು 2021-22ವರೆಗೆ ಅಂದರೆ 2022ರ ಮಾರ್ಚ್ 31 ರವರೆಗೆ ವಿಸ್ತರಣೆ ಮಾಡಲಾಯಿತು. 

ಬಿ. ಅಡ್ವಾನ್ಸ್ ಅಥರೈಸೇಷನ್ (ಎಎ)/ ಇಪಿಸಿಜಿ ಅಡಿಯಲ್ಲಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಹಾಗೂ ಪರಿಹಾರ ಸೆಸ್ ನಿಂದ ವಿನಾಯ್ತಿಯನ್ನು 2022ರ ಮಾರ್ಚ್ 31ರವರೆಗೆ ವಿಸ್ತರಿಸಲಾಯಿತು.

ಸಿ.  ರಫ್ತು ಉತ್ತೇಜನ ಯೋಜನೆಗಳಲ್ಲಿ ಸಮುದಾಯ ಪಾಲುದಾರರೊಂದಿಗೆ ಎಪಿಐ ಆಧಾರಿತ ಸಂದೇಶ ವಿನಿಮಯದೊಂದಿಗೆ ಡಿಜಿಎಫ್ ಟಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ನವೀಕರಿಸಲಾಗಿದೆ.

ಡಿ. ಮೂಲ ಪ್ರಾಶಸ್ತ್ಯರಹಿತ ಪ್ರಮಾಣಪತ್ರಗಳನ್ನು ನೀಡಲು ಸಾಮಾನ್ಯ eCoO ಪೋರ್ಟಲ್ ಅನ್ನು ವಿಸ್ತರಿಸಲಾಗಿದೆ.

ಎಫ್. ವಿದೇಶಿ ವ್ಯಾಪಾರ ನೀತಿ ತಾಜಾ ಮಾಹಿತಿಗಳು, ಆಮದು/ರಫ್ತು ನೀತಿ, ಆಮದು/ರಫ್ತು ಅಂಕಿ ಅಂಶಗಳು, ಅರ್ಜಿಗಳ ಸ್ಥಿತಿಗತಿ, ದಿನದ 24 ಗಂಟೆಗಳೂ ವರ್ಚುವಲ್ ನೆರವಿನ ಮಾಹಿತಿಯನ್ನು ಗೌರವಾನ್ವಿತ ಸಿಐಎಂ ಅವರು 12.04.2021ರಂದು ಡಿಜಿಎಫ್ ಟಿ ವ್ಯಾಪಾರ ಸಹಾಯಕ ಆ್ಯಪ್ ಮೂಲಕ ಲಭ್ಯವಾಗುವಂತೆ ಬಿಡುಗಡೆ ಮಾಡಿದ್ದಾರೆ.

ಜಿ. ನಿರ್ದಿಷ್ಟಪಡಿಸಿದ ಮುಂಗಡ ಮತ್ತು ಇಪಿಸಿಜಿ ಅಧಿಕಾರಿಗಳ ರಫ್ತು ಬಾಧ್ಯತೆಯ ಅವಧಿಯನ್ನು 31 ಡಿಸೆಂಬರ್ 2021ರವರೆಗೆ ವಿಸ್ತರಣೆ ಮಾಡಲಾಗಿದೆ.

 1. ಆರ್ ಒ ಡಿಟಿಇಪಿ ಯೋಜನೆ ಅನುಷ್ಠಾನ

ಎ. ರಫ್ತುಗಳ ಕುರಿತಾದ ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಸುಂಕಗಳು ಮತ್ತು ತೆರಿಗೆಗಳ ಉಪಶಮನದ ಯೋಜನೆ (ಆರ್ ಒಡಿಟಿಇಪಿ)ಯನ್ನು 2021ರ ಜನವರಿ 1ರಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಯೋಜನೆಯು ತೆರಿಗೆಗಳು/ಸುಂಕಗಳು/ಸುಂಕಗಳ ಮರುಪಾವತಿಗಾಗಿ ಕಾರ್ಯವಿಧಾನವನ್ನು ರಚಿಸುತ್ತದೆ, ಸದ್ಯ ಯಾವುದೇ ಕಾರ್ಯವಿಧಾನದಡಿ ಅವುಗಳನ್ನು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಮರುಪಾವತಿ ಮಾಡಲಾಗುತ್ತಿಲ್ಲ, ಆದರೆ ರಫ್ತು ಮಾಡಿದ ಉತ್ಪನ್ನಗಳ ಉತ್ಪಾದನಾ ಮತ್ತು ವಿತರಣಾ ಪ್ರಕ್ರಿಯೆಯಲ್ಲಿ ಅವುಗಳನ್ನು ಭರಿಸಲಾಗುತ್ತಿದೆ. ಅಂತಹ ತೆರಿಗೆಗಳ ಬಹು ಮುಖ್ಯ ಅಂಶಗಳೆಂದರೆ ವಿದ್ಯುತ್ ಸುಂಕ ಮತ್ತು ಸಾರಿಗೆ/ ವಿತರಣೆಯಲ್ಲಿ ಬಳಸುವ ಇಂಧನಗಳ ಮೇಲಿನ ವ್ಯಾಟ್.

ಬಿ. ಆರ್ ಒಡಿಟಿಇಪಿ (RoDTEP) ಯೋಜನೆಯು ಸುಮಾರು 8555 HS ಮಾರ್ಗಗಳನ್ನು ಒಳಗೊಂಡಿವೆ, ಉಪಶಮನ ದರಗಳು ಶೇ.0.01ರಿಂದ ಶೇ4.3 ರವರೆಗೆ ಇರುತ್ತವೆ.

ಸಿ. ಆರ್ ಒಡಿಟಿಇಪಿ ಯೋಜನೆಯು ಆರಂಭದಿಂದ ಅಂತ್ಯದವರೆಗೆ ಡಿಜಿಟಲೀಕರಣದೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು RoDTEP ಅನುಕೂಲಗಳನ್ನು ಪಡೆಯಲು ಪ್ರತ್ಯೇಕ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕಿದೆ. ಹಣಕಾಸು ಸಚಿವಾಲಯದ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸಿಬಿಐಸಿಯ ICEGATE ಆನ್ ಲೈನ್ ಮಾದರಿಯನ್ನು ಕಾರ್ಯಾಚರಣೆಗೊಳಿಸಲಾಗಿದೆ ಮತ್ತು ಯೋಜನೆಯಡಿ ರಫ್ತುದಾರರು ಇ-ಸ್ಕ್ರಿಪ್ಸ್ ಅನ್ನು ಪಡೆದುಕೊಳ್ಳಲಾರಂಭಿಸಿದ್ದಾರೆ.

 1. 2019-20ನೇ ಹಣಕಾಸು ವರ್ಷಕ್ಕಾಗಿ ಎಸ್ ಇಐಎಸ್ ಯೋಜನೆ ಅಧಿಸೂಚನೆ

ಎ. 2019-20ನೇ ಹಣಕಾಸು ವರ್ಷದಲ್ಲಿ ಸಲ್ಲಿಸಿದ ಸೇವೆಗಳಿಗೆ, ದಿನಾಂಕ 23.09.2021ರಂದು ಸಂಖ್ಯೆ 29ರ ಭಾರತದಿಂದ ಸೇವಾ ರಫ್ತುಗಳ ಯೋಜನೆ(ಎಸ್ ಇಐಎಸ್) ಕುರಿತು ಅಧಿಸೂಚನೆ ಹೊರಡಿಸಲಾಯಿತು ಮತ್ತು ಅದರಲ್ಲಿ ಅರ್ಹ ಸೇವಾ ವಿಭಾಗಗಳು ಮತ್ತು ದರಪಟ್ಟಿಯನ್ನು ಒಳಗೊಂಡಿದೆ.

 1. ಭಾರತ ಮತ್ತು ಮಾರಿಷಸ್ ನಿಂದ ಸಮಗ್ರ ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆ(ಸಿಇಸಿಪಿಎ) ಒಪ್ಪಂದಕ್ಕೆ ಸಹಿ

ಎ. ಭಾರತ ಮತ್ತು ಮಾರಿಷಸ್ ಸಮಗ್ರ ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆ ಒಪ್ಪಂದ (CECPA) ಒಪ್ಪಂದಕ್ಕೆ 2021ರ ಫೆಬ್ರವರಿ 22ರಂದು ಸಹಿ ಹಾಕಿದವು, ಅದು 2021ರ ಏಪ್ರಿಲ್ 1 ರಿಂದ ಜಾರಿಗೆ ಬಂದಿತು.

ಬಿ. CECPA ಭಾರತವು ಆಫ್ರಿಕಾದ ದೇಶದೊಂದಿಗೆ ಮಾಡಿದ ಮೊದಲ ವ್ಯಾಪಾರ ಒಪ್ಪಂದವಾಗಿದೆ. ಇದು ಸೀಮಿತ ಒಪ್ಪಂದವಾಗಿದ್ದು, ಇದು ಸರಕುಗಳ ವ್ಯಾಪಾರ, ಮೂಲ ನಿಯಮಗಳು, ಸೇವೆಗಳಲ್ಲಿನ ವ್ಯಾಪಾರ, ವ್ಯಾಪಾರದಲ್ಲಿ ತಾಂತ್ರಿಕ ಅಡೆತಡೆಗಳು (ಟಿಬಿಟಿ), ನೈರ್ಮಲ್ಯ ಮತ್ತು ಫೈಟೋಸ್ಯಾನಿಟರಿ (ಎಸ್ ಪಿಎಸ್ ) ಕ್ರಮಗಳು, ವ್ಯಾಜ್ಯಗಳ ಇತ್ಯರ್ಥ, ವ್ಯಕ್ತಿಗಳ ಚಲನವಲನ, ದೂರಸಂಪರ್ಕ ಮತ್ತು ಹಣಕಾಸು ಸೇವೆಗಳು, ಸೀಮಾ ಸುಂಕ ನಿಯಮಗಳು ಮತ್ತು  ಇತರೆ ವಲಯಗಳಲ್ಲಿ ಸಹಕಾರ ಒಳಗೊಂಡಿದೆ.

ಬಿ. ಭಾರತ-ಮಾರಿಷಸ್ ಸಿಇಸಿಪಿಎ ಎರಡೂ ದೇಶಗಳ ನಡುವೆ ವ್ಯಾಪಾರ  ಉತ್ತೇಜನ ಮತ್ತು ಸುಧಾರಣೆಗೆ ಸಾಂಸ್ಥಿಕ ಕಾರ್ಯವಿಧಾನವನ್ನು ಒದಗಿಸಲಿದೆ. ಭಾರತ ಮತ್ತು ಮಾರಿಷಸ್ ನಡುವಿನ ಸಿಇಸಿಪಿಎ ಭಾರತದ 310 ರಫ್ತು ಉತ್ಪನ್ನಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಸೇವಾ ವ್ಯಾಪಾರದಲ್ಲಿ, 11 ವಿಸ್ತೃತ ಸೇವಾ ವಲಯಗಳಲ್ಲಿ 115 ಉಪ ವಲಯಗಳ ಪ್ರವೇಶಕ್ಕೆ ಅವಕಾಶವಿದೆ.

 1. ಭಾರತ-ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಸಹಭಾಗಿತ್ವ ಒಪ್ಪಂದ (ಸಿಇಪಿಎ) ಸಮಾಲೋಚನೆ

ಎ. ಯುಎಇ ನಿಯೋಗದ ಭೇಟಿ ಸಂದರ್ಭದಲ್ಲಿ 2021ರ ಸೆಪ್ಟಂಬರ್  22ರಂದು ಭಾರತ-ಯುಎಇ ಸಿಇಪಿಎ ಸಮಾಲೋಚನೆಗಳು ಆರಂಭವಾದವು. ಈವರೆಗೆ ಎರಡು ಸುತ್ತಿನ ಸಮಾಲೋಚನೆಗಳು ನಡೆದಿವೆ ಮತ್ತು ಎರಡೂ ರಾಷ್ಟ್ರಗಳು 2021ರ ಡಿಸೆಂಬರ್ ಒಳಗೆ ಸಮಾಲೋಚನೆಗಳನ್ನು ಪೂರ್ಣಗೊಳಿಸುವ ಮತ್ತು 2022ರ ಮಾರ್ಚ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಗುರಿ ಹೊಂದಿವೆ.

ಬಿ.  ಸಮಾಲೋಚನೆಯ ವೇಳೆ ಎರಡೂ ದೇಶಗಳು ಭಾರತ-ಯುಎಇ ಸಿಇಪಿಎ ಮತ್ತು ಆರ್ಥಿಕ ಹೂಡಿಕೆ ಅವಕಾಶಗಳನ್ನು ವಿಸ್ತರಿಸುವ, ಆದರೆ ಸಹಕಾರ ಮತ್ತು ಸಹಭಾಗಿತ್ವದ ಹೊಸ ಹಂತವನ್ನು ಆರಂಭಿಸುವ  ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದವು. ಈ ಹೊಸ ಕಾರ್ಯತಾಂತ್ರಿಕ ಆರ್ಥಿಕ ಒಪ್ಪಂದಕ್ಕೆ ಸಹಿ ಹಾಕಿದ ಐದು ವರ್ಷಗಳಲ್ಲಿ ಸರಕುಗಳ ದ್ವೀಪಕ್ಷೀಯ ವ್ಯಾಪಾರ 100 ಬಿಲಿಯನ್ ಅಮೆರಿಕನ್ ಡಾಲರ್ ತಲುಪುವ ಮತ್ತು ಸೇವೆಗಳ ವ್ಯಾಪಾರ 15 ಬಿಲಿಯನ್ ಅಮೆರಿಕನ್ ಡಾಲರ್ ಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

 1. ಭಾರತ- ಆಸ್ಟ್ರೇಲಿಯಾ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ) ಸಮಾಲೋಚನೆಗಳು

ಎ. ಭಾರತ- ಆಸ್ಟ್ರೇಲಿಯಾ ನಡುವಿನ ಸಿಇಸಿಎ ಸಮಾಲೋಚನೆಗಳು ಆರಂಭಿಕ ಹಂತದಲ್ಲಿವೆ. ಮಧ್ಯಂತರ ಒಪ್ಪಂದಕ್ಕೆ ಎರಡೂ ದೇಶಗಳು ಸದ್ಯದಲ್ಲೇ ಸಮಾಲೋಚನೆಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ. 2022ರ ಅಂತ್ಯದೊಳಗೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಸರಕು ಮತ್ತು ಸೇವೆಗಳ ವ್ಯಾಪಾರ, ಹೂಡಿಕೆ, ನಿಯಮಗಳ ಮೂಲ, ಕಸ್ಟಮ್ಸ್ ನೆರವು, ಕಾನೂನು ಮತ್ತು ಸಾಂಸ್ಥಿಕ ವಿಷಯಗಳು ಸೇರಿ ಇತ್ಯಾದಿಗಳು ಪ್ರಮುಖ ಸಮಾಲೋಚನಾ ವಿಷಯಗಳಾಗಿವೆ.

 1. 2021ರ ಆಗಸ್ಟ್ 16ರಿಂದ 18ವರೆಗೆ ಬ್ರಿಕ್ಸ್ ವ್ಯಾಪಾರ ಮೇಳ 2021 (ವರ್ಚುವಲ್ )

ಎ. ವಾಣಿಜ್ಯ ಇಲಾಖೆಯ ಉಪಕ್ರಮವಾದ ಬ್ರಿಕ್ಸ್ ವ್ಯಾಪಾರ ಮೇಳ 2021ರ ಆಗಸ್ಟ್ 16ರಿಂದ 18ವರೆಗೆ ಭಾರತದ ಅಧ್ಯಕ್ಷತೆಯಲ್ಲಿ ವರ್ಚುವಲ್ ರೂಪದಲ್ಲಿ ಒಂದು ಪ್ರಮುಖ ಕಾರ್ಯಕ್ರಮವಾಗಿ ನಡೆಯಿತು.

ಬಿ. ಬ್ರಿಕ್ಸ್ ವ್ಯಾಪಾರ ಮೇಳ 2021 ಸುಮಾರು 5000 ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು ಮತ್ತು ಕಾರ್ಯಕ್ರಮದಲ್ಲಿ ಸುಮಾರು 250 ಪೂರ್ವ ನಿಗದಿತ ಬಿ2ಬಿ ಸಭೆಗಳು ನಡೆದವು. ವ್ಯಾಪಾರ ಮೇಳದಲ್ಲಿ ವ್ಯಾಪಾರದ ಪ್ರತಿನಿಧಿಗಳು ಸುಮಾರು 8000 ವರ್ಚುವಲ್ ಬೂತ್ ಭೇಟಿಗಳನ್ನು ಕಂಡಿತ್ತು ಹಾಗೂ ಸುಮಾರು 2000 ವ್ಯಾಪಾರದ ಸಮಾಲೋಚನೆಗಳು ನಡೆದವು.

 1. ದುಬೈನಲ್ಲಿ ನಡೆದ ವರ್ಲ್ಡ್ ಎಕ್ಸ್ ಪೋ 2020ಯಲ್ಲಿ ಭಾರತದ ಮಳಿಗೆ

ಎ. ದುಬೈನಲ್ಲಿ 2021ರ ಅಕ್ಟೋಬರ್ 1ರಿಂದ 2022ರ ಮಾರ್ಚ್ 31ರವರೆಗೆ ವರ್ಲ್ಡ್ ಎಕ್ಸ್ ಪೋ 2020 ನಡೆಯುತ್ತಿದೆ. ಇದು MEASA (ಮಧ್ಯಪೂರ್ವ, ಆಫ್ರಿಕಾ ಮತ್ತು ದಕ್ಷಿಣ ಆಫ್ರಿಕಾ) ಪ್ರದೇಶದಲ್ಲಿ ನಡೆದ ಮೊದಲ ಎಕ್ಸ್ ಪೋ ಆಗಿದೆ. 01.10.2021ರಂದು ಸಿಐಎಂ ದುಬೈನ  ವರ್ಲ್ಡ್ ಎಕ್ಸ್ ಪೋ ನಲ್ಲಿ ಭಾರತದ ಮಳಿಗೆಯನ್ನು ಉದ್ಘಾಟಿಸಿದರು.

ಬಿ. ವರ್ಲ್ಡ್ ಎಕ್ಸ್ ಪೋ 2020ಯ ಮುಖ್ಯ ವಿಷಯವೆಂದರೆ “ಮನಸ್ಸುಗಳನ್ನು ಸಂಪರ್ಕಿಸುವುದು ಮತ್ತು ಭವಿಷ್ಯವನ್ನು ನಿರ್ಮಿಸುವುದು’’. ಈ ಮುಖ್ಯ ಅಂಶವನ್ನು ಮತ್ತೆ ಮೂರು ಉಪ ವಿಷಯಗಳನ್ನಾಗಿ ಎಕ್ಸ್ ಪೋದಲ್ಲಿ ವಿಭಜಿಸಲಾಗಿತ್ತು, ಅವುಗಳೆಂದರೆ ಅವಕಾಶಗಳು, ಸಾರಿಗೆ ಮತ್ತು ಸುಸ್ಥಿರತೆ. ದುಬೈ ವರ್ಲ್ಡ್ ಎಕ್ಸ್ ಪೋ 190ಕ್ಕೂ ಅಧಿಕ ರಾಷ್ಟ್ರಗಳು ಮತ್ತು 25 ಮಿಲಿಯನ್ ಗೂ ಅಧಿಕ ನಿರೀಕ್ಷಿತ ಸಂದರ್ಶಕರ ಭಾಗವಹಿಸುವಿಕೆಯೊಂದಿಗೆ ಕೋವಿಡ್-19 ಸಾಂಕ್ರಾಮಿಕ ನಂತರದ ಜಾಗತಿಕ ಆರ್ಥಿಕತೆಯ ಪುನರುಜ್ಜೀವನವನ್ನು ಘೋಷಿಸುವ ಸಾಧ್ಯತೆ ಇದೆ.

ಸಿ. ದುಬೈ ಎಕ್ಸ್ ಪೋದಲ್ಲಿನ ಭಾರತೀಯ ಮಳಿಗೆ ಆರಂಭವಾದ ಕೇವಲ 83 ದಿನಗಳಲ್ಲಿ 6 ಲಕ್ಷಕ್ಕೂ ಅಧಿಕ ಸಂದರ್ಶಕರನ್ನು ಆಕರ್ಷಿಸುವ ಮೂಲಕ ಮತ್ತೊಂದು ಹೆಗ್ಗರುತನ್ನು ದಾಖಲಿಸಿದೆ.

 1. ಸರ್ಕಾರಿ ಇ-ಮಾರುಕಟ್ಟೆ ತಾಣ (GeM): ಮುಕ್ತ ಮತ್ತು ಪಾರದರ್ಶಕ ಪ್ರಕ್ರಿಯೆ

ಎ. ಸರ್ಕಾರಿ ಇ-ಮಾರುಕಟ್ಟೆ ತಾಣದಲ್ಲಿ ಒಟ್ಟು 31.8 ಲಕ್ಷ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ, ಆ ಪೈಕಿ 7.39 ಲಕ್ಷ ಎಂಎಸ್ ಎಂಇ ಗಳಿದ್ದು, ಅವುಗಳು ಒಟ್ಟಾರೆ ವ್ಯಾಪಾರಿಗಳಲ್ಲಿ ಶೇ.23ರಷ್ಟಿದ್ದಾರೆ ಮತ್ತು ಒಟ್ಟಾರೆ ಜಿಇಎಂ ಮೌಲ್ಯದ ವ್ಯಾಪಾರದ ಮೌಲ್ಯದ ಶೇ.57ರಷ್ಟು ಸಂಚಿತ ಪಾಲಿದೆ.

ಬಿ. ಜಿಇಎಂ ಖರೀದಿದಾರರಿಗೆ ಕಾಯುವ ಸಮಯ ಮತ್ತು ಬೆಲೆಯನ್ನು ಗಣನೀಯವಾಗಿ ತಗ್ಗಿಸಿದೆ ಮತ್ತು ಮಾರಾಟಗಾರರಿಗೆ ಸಕಾಲದಲ್ಲಿ ಪಾವತಿ ಖಾತ್ರಿಪಡಿಸಿದೆ. ಇದು ಜಿಎಫ್ ಆರ್ ನಲ್ಲಿ ಸೂಚಿಸಿದಂತೆ ವಿವಿಧ ವಿಧಾನಗಳ ಸಂಗ್ರಹಣೆಯನ್ನು ಸಕ್ರಿಯಗೊಳಿಸಿದೆ ಮತ್ತು ಖರೀದಿ ಮಾಡುವಾಗ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಖರೀದಿದಾರರಿಗೆ ಅನುಕೂಲವಾಗುವಂತೆ ವಿವಿಧ ವಿಶ್ಲೇಷಣಾತ್ಮಕ ಸಾಧನಗಳನ್ನು ಲಭ್ಯಗೊಳಿಸಿದೆ.

ಸಿ.  ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ ದೇಶಾದ್ಯಂತ ಏಕರೂಪದ ಖರೀದಿ ವ್ಯವಸ್ಥೆಯನ್ನು ಜಿಇಎಂ ಸೃಷ್ಟಿಸಿದೆ. ಆ ಮೂಲಕ ಒಂದೇ ಬಳಕೆದಾರರ ಅನುಭವವನ್ನು ಒದಗಿಸಲು ರಕ್ಷಣಾ ಸಾರ್ವಜನಿಕ ಖರೀದಿ ಪೋರ್ಟಲ್, ಕೇಂದ್ರೀಯ ಸಾರ್ವಜನಿಕ ಖರೀದಿ ಪೋರ್ಟಲ್ ಮತ್ತು ಅದರ ಉಪ ಪೋರ್ಟಲ್ ಗಳ ಕಾರ್ಯಚಟುವಟಿಕೆಗಳನ್ನು ಜಿಇಎಂ ಪೋರ್ಟಲ್ ನಡಿ ತರಲಾಗಿದೆ. ಏಕೀಕೃತ ಖರೀದಿ ವ್ಯವಸ್ಥೆಯು ಜಿಇಎಂ ಪೋರ್ಟಲ್ ಗಳನ್ನು ಪ್ರಕಟಿಸುವುದರ ಮೇಲೆ ಚುದುರಿದ ಮಾರಾಟಗಾರರ ನೆಲೆಯನ್ನು ಕ್ರೂಢೀಕರಿಸುತ್ತದೆ, ಇದು ಆರ್ಥಿಕತೆಯ ಮೇಲಿನ ಅನುಕೂಲಗಳು, ಉತ್ತಮ ಬೆಲೆ ಅನ್ವೇಷಣೆ ಮತ್ತು ಖರೀದಿಯಲ್ಲಿ ಉತ್ತಮ ಅಭ್ಯಾಸಗಳ ಪ್ರಸರಣಕ್ಕೆ ಕಾರಣವಾಗುತ್ತದೆ.

ಡಿ. ಸೇರ್ಪಡೆಯನ್ನು ಉತ್ತೇಜಿಸುವ ಸಲುವಾಗಿ ಎಂಎಸ್ ಎಂಇಗಳು, ಸ್ವ ಸಹಾಯ ಗುಂಪುಗಳು (ಎಸ್ ಎಚ್ ಜಿಗಳು), ಬುಡಕಟ್ಟು ಕುಶಲಕರ್ಮಿಗಳು, ಕಲಾಕಾರರು, ನವೋದ್ಯಮಗಳು ಎಂಎಸ್ ಎಂಇ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜೊತೆ ಸಮಾಲೋಚನೆಯೊಂದಿಗೆ ಜಿಇಎಂ ಸ್ಟಾರ್ಟಪ್ ರನ್ ವೇ, ಸಾರಸ್ ಕಲೆಕ್ಷನ್, ಟ್ರೈಬ್ಸ್ ಇಂಡಿಯಾ, ಇ-ಸ್ಟೋರ್ಸ್ , ಕರಕುಶಲಕರ್ಮಿಗಳು ಮತ್ತು ನೇಕಾರರನ್ನು ವೇದಿಕೆಗೆ ಸೇರಿಸಿಕೊಂಡು ಬಿದಿರು ಮತ್ತು ವುಮೇನಿಯಾ ಇತ್ಯಾದಿ ಉಪಕ್ರಮಗಳನ್ನು ಕೈಗೊಂಡಿದೆ.

 1. ಪ್ರಗತಿ ಮೈದಾನ ಮರು ಅಭಿವೃದ್ಧಿ

ಐಇಸಿಸಿ ಯೋಜನೆ

ಎ. ಐತಿಹಾಸಿಕ ಪ್ರಗತಿ ಮೈದಾನದ ಮೇಳದ ಜಾಗವನ್ನು  ಎರಡು ಹಂತದಲ್ಲಿ (2ನೇ ಹಂತ ಕೆಲವು ವರ್ಷಗಳ ನಂತರ ಕೈಗೆತ್ತಿಕೊಳ್ಳಲಾಗುವುದು) ವಿಶ್ವದರ್ಜೆಯ ಅಂತಾರಾಷ್ಟ್ರೀಯ ಹಾಗೂ ಸಮಾವೇಶ ಕೇಂದ್ರ (ಐಇಸಿಸಿ) ಆಗಿ ಮರು ಅಭಿವೃದ್ಧಿಗೊಳಿಸಲಾಗುವುದು. ಐಇಸಿಸಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಎಲ್ಲ ವಿಭಾಗಗಳ ಕಾಮಗಾರಿ 2022ರ ಜೂನ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಗೌರವಾನ್ವಿತ ಪ್ರಧಾನಮಂತ್ರಿ ಅವರು 13.10.2021ರಂದು ಪಿಎಂ ಗತಿ ಶಕ್ತಿ ಯೋಜನೆಗೆ ಚಾಲನೆ ನೀಡುವ ವೇಳೆ ಐಇಸಿಸಿ ಯೋಜನೆಯ ಭಾಗವಾಗಿ ಹೊಸ ವಸ್ತುಪ್ರದರ್ಶನ ಸಂಕೀರ್ಣ (2,3,4 & 5ನೇ ಸಂಭಾಗಣ)ವನ್ನು ಉದ್ಘಾಟಿಸಿದರು.

 1. ರಾಷ್ಟ್ರೀಯ ಸಾಗಣೆ ನೀತಿ

ಎ. ಬೇಡಿಕೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ಎಲ್ಲಾ ಕೇಂದ್ರ ಸಚಿವಾಲಯಗಳ ಜತೆ ವ್ಯಾಪಕ ಸಮಾಲೋಚನೆ ನಂತರ ರಾಷ್ಟ್ರೀಯ ಸಾಗಣೆ ನೀತಿಯನ್ನು ರೂಪಿಸಲಾಗಿದೆ. ಇದರಡಿ ವಲಯಾಧಾರಿತ ಸಮಗ್ರ ದೃಷ್ಟಿಕೋನವನ್ನು ಹೊಂದಲಾಗಿದೆ. ಇದರ ಪ್ರಮುಖ ಧ್ಯೇಯ ಜಾಗತಿಕ ಪೂರೈಕೆ ಸರಣಿಯನ್ನು ಜೋಡಿಸುವುದು ಮತ್ತು ಸಾರಿಗೆ ದಕ್ಷತೆಯನ್ನು ಜಾಗತಿಕ ಮಾನದಂಡಕ್ಕೆ ಸುಧಾರಿಸುವಂತೆ ಮಾಡುವುದಾಗಿದೆ.

ಬಿ. ನೀತಿಯಲ್ಲಿ ನಿರ್ದಿಷ್ಟ ವಸ್ತುಗಳನ್ನಾಧರಿಸಿ 75 ಅಂಶಗಳ ರಾಷ್ಟ್ರೀಯ ಸಾರಿಗೆ ಸುಧಾರಣಾ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಸಿ. ಪರಿಷ್ಕೃತ ನೀತಿ ಅಂತಿಮ ಅನುಮೋದನೆ ಹಂತದಲ್ಲಿದೆ. ನೀತಿ ಮುಂದಿನ 5 ವರ್ಷಗಳಲ್ಲಿ ಸಾಗಣೆ ವೆಚ್ಚವನ್ನು ಶೇ.5ರಷ್ಟು ಕಡಿತಗೊಳಿಸುವುದು, ಜಾಗತಿಕ ಸಾಗಾಣೆ ಸಂಬಂಧಿ ಸಾಧನಾ ಸೂಚ್ಯಂಕದಲ್ಲಿ ಅಗ್ರ 25 ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆಯುವುದು ಮತ್ತು ಪರಿಸರಾತ್ಮಕವಾಗಿ ಸುಸ್ಥಿರ ಎಲ್ಲರನ್ನೊಳಗೊಂಡ ಮತ್ತು ಭವಿಷ್ಯಕ್ಕೆ ಸಿದ್ಧವಾದ ಸಾರಿಗೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ

 1. ಪಿಎಂ ಗತಿ ಶಕ್ತಿ ಎಂಎನ್ ಪಿ

ಎ. 2021ರ ಅಕ್ಟೋಬರ್ ನಲ್ಲಿ ಜಿಐಎಸ್ ವೇದಿಕೆಯಡಿ ಆರ್ಥಿಕ ವಲಯಗಳು ಮತ್ತು ಬಹುಮಾದರಿ ಸಂಪರ್ಕ ಮೂಲಸೌಕರ್ಯವನ್ನು ಪ್ರತಿಬಿಂಬಿಸುವ ಸಮಗ್ರ ಯೋಜನೆಯನ್ನೊಳಗೊಂಡ ಆರ್ಥಿಕ ವಲಯಗಳಿಗೆ ಬಹುಮಾದರಿ ಮೂಲಸೌಕರ್ಯ ಸಂಪರ್ಕಕ್ಕಾಗಿ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಕ್ರಿಯಾಯೋಜನೆಯನ್ನು ಆರಂಭಿಸಲಾಯಿತು. ಇದರಡಿ ನಾನಾ ಸಚಿವಾಲಯಗಳು/ಇಲಾಖೆಗಳ ಮಧ್ಯ ಪ್ರವೇಶಗಳನ್ನು ರಾಷ್ಟ್ರೀಯ ಆಯಾಮದಲ್ಲಿ ಸಮಗ್ರವಾಗಿ ಕೈಗೊಳ್ಳಲಾಗುವುದು ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ನಕ್ಷೆ ಒಳಗೊಂಡ  ಯೋಜನೆಗಳ ಮೇಲ್ವಿಚಾರಣೆ ಕೈಗೊಳ್ಳಲಾಗುವುದು.

ಬಿ. ಕಾರ್ಯದರ್ಶಿಗಳ ಉನ್ನತಾಧಿಕಾರ ಸಮಿತಿ ಮತ್ತು ಜಾಲ ಯೋಜನೆ ಸಮಿತಿಗಳನ್ನು ರಚಿಸಲಾಗಿದೆ ಮತ್ತು ಅವುಗಳ ಮೊದಲ ಸಭೆ ನಡೆದಿದೆ. ತಾಂತ್ರಿಕ ನೆರವಿನ ಘಟಕ ರಚಿಸುವ ಕಾರ್ಯ ಪ್ರಗತಿಯಲ್ಲಿದೆ. BISAG-Nನಿಂದ ತರಬೇತಿ ಕಾರ್ಯಾಗಾರಗಳು ಪೂರ್ಣಗೊಂಡಿವೆ. ನವೆಂಬರ್ 2021ರಿಂದ ಜನವರಿ 2022ರ ವರೆಗೆ ಸದ್ಯ ರಾಷ್ಟ್ರೀಯ ಕ್ರಿಯಾ ಯೋಜನೆಗಾಗಿ ಪಿಎಂ-ಗತಿಶಕ್ತಿ ಯೋಜನೆಯಲ್ಲಿ ಭಾಗಿಯಾಗಿರುವ ರಾಜ್ಯಗಳ ವಲಯಮಟ್ಟದ ಸಭೆಗಳು ಪ್ರಗತಿಯಲ್ಲಿವೆ.

ಸಿ. BISAG-N ಅಭಿವೃದ್ಧಿಪಡಿಸಿರುವ ಜಿಐಎಸ್ ಆಧಾರಿತ ರಾಷ್ಟ್ರೀಯ ಕ್ರಿಯಾ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಮತ್ತು ಅದು 2022ರ ಏಪ್ರಿಲ್ ನಲ್ಲಿ ಜಾರಿಯಾಗಲಿದೆ.

ಡಿ. ರಾಷ್ಟ್ರಗಳ ಸಾರಿಗೆ ಸಾಗಣೆ ಸಾಧನೆಗಳನ್ನು ಅಂದಾಜಿಸಲು ವಿಶ್ವ ಬ್ಯಾಂಕ್ ಪ್ರತಿ ಎರಡು ವರ್ಷಕ್ಕೊಮ್ಮೆ ಬಿಡುಗಡೆ ಮಾಡುವ ಸಾಗಾಣೆ ಸಾಧನೆ ಸೂಚ್ಯಂಕ(ಎಲ್ ಪಿಐ) ಅತ್ಯಂತ ಹೆಚ್ಚು ಉಲ್ಲೇಖಾರ್ಹ ವರದಿಯಾಗಿದೆ. ಆ ಸೂಚ್ಯಂಕದಲ್ಲಿ ಭಾರತ 2018ರಲ್ಲಿ 160 ರಾಷ್ಟ್ರಗಳಲ್ಲಿ 44ನೇ ಶ್ರೇಯಾಂಕಗಳಿಸಿತ್ತು. 2014ರಲ್ಲಿ 54ನೇ ಶ್ರೇಯಾಂಕದಲ್ಲಿತ್ತು. (ಇತ್ತೀಚಿನ ವರದಿಯೆಂದರೆ 2018ರ ಅಧ್ಯಯನ ವರದಿ)  

 1. ರಫ್ತು ಯೋಜನೆಗಾಗಿ ವ್ಯಾಪಾರ ಮೂಲಸೌಕರ್ಯ (ಟಿಐಇಎಸ್ )

ಎ. ವಾಣಿಜ್ಯ ಇಲಾಖೆ 2017-18ನೇ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ರಫ್ತು ಯೋಜನೆಗಾಗಿ ವ್ಯಾಪಾರ ಮೂಲಸೌಕರ್ಯ (ಟಿಐಇಎಸ್ ) ಅನುಷ್ಠಾನಗೊಳಿಸುತ್ತಿದೆ. ಇದರ ಧ್ಯೇಯ ರಫ್ತು ವಹಿವಾಟಿನಲ್ಲಿ ಸ್ಪರ್ಧಾತ್ಮಕತೆ ವೃದ್ಧಿಸುವುದು, ಆ ಮೂಲಕ ರಫ್ತು ಸಂಯೋಜಿತ ಮೂಲಸೌಕರ್ಯ ಅಭಿವೃದ್ಧಿಗೆ ಬೆಂಬಲಿಸಿ ಅದನ್ನು ಹಲವು ರಫ್ತುದಾರರು ಉಪಯೋಗಿಸುವಂತೆ ಮಾಡುವುದು. ಈ ಯೋಜನೆಯನ್ನು ಮತ್ತೆ 5 ವರ್ಷಗಳ ಕಾಲ ಅಂದರೆ 2021-22ರಿಂದ 2025-26ರ ವರೆಗೆ ಒಟ್ಟು 360 ಕೋಟಿ ರೂಪಾಯಿಗಳ ಬಜೆಟ್ ಮೊತ್ತದೊಂದಿಗೆ ವಿಸ್ತರಣೆ ಮಾಡಲಾಗಿದೆ. 2021-22ನೇ ಹಣಕಾಸು ವರ್ಷದಲ್ಲಿ ಯೋಜನೆಗೆ 75 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ. 2021-22ನೇ ಹಣಕಾಸು ವರ್ಷದಲ್ಲಿ ಡಿಸೆಂಬರ್ 8ರ ವರೆಗೆ ಸುಮಾರು 113 ಕೋಟಿ ಮೊತ್ತದ ಒಟ್ಟು ಟಿಐಇಎಸ್ ನಿಧಿಯ ಹೊಸ ಯೋಜನೆಗಳಿಗೆ ಉನ್ನತಾಧಿಕಾರ ಸಮಿತಿ ಅನುಮೋದನೆ ನೀಡಿದೆ.

 1. ಕೃಷಿ ರಫ್ತು ನೀತಿ (ಎಇಪಿ)

ಎ. ಕಾಲಮಿತಿಯಲ್ಲಿ ರಾಜ್ಯ ಕೃಷಿ ರಫ್ತು ಕ್ರಿಯಾ ಯೋಜನೆಗಳನ್ನು ಅಂತಿಮಗೊಳಿಸಲು ಸಹಕಾರ ಕೋರಿ ಸಂಬಂಧಿಸಿದ ರಾಜ್ಯ ಸರ್ಕಾರಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು, 5 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಅದರೆ ಮಿಜೋರಾಂ, ಮೇಘಾಲಯ, ತ್ರಿಪುರಾ, ಅರುಣಾಚಲಪ್ರದೇಶ, ಹಿಮಾಚಲಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪ ಕೇಂದ್ರಾಡಳಿತ ಪ್ರದೇಶಗಳು ರಾಜ್ಯಗಳ ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಅಂತಿಮಗೊಳಿಸಿವೆ. ಉಳಿದ ರಾಜ್ಯಗಳ ಕ್ರಿಯಾ ಯೋಜನೆಗಳು ಅಂತಿಮಗೊಳ್ಳುವ ನಾನಾ ಹಂತದಲ್ಲಿವೆ.

ಬಿ.     ರೈತ ಸಹಕಾರಿಗಳಿಗೆ ರಫ್ತು ಸಂಯೋಜನೆಯನ್ನು ಬಲವರ್ಧನೆಗೊಳಿಸಲು ಅಪೆಡಾ,    ನಾಫೆಡ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸಿ.     ಅಮೆಜಾನ್ ವೆಬ್ ಸರ್ವೀಸಸ್(ಎಡಬ್ಲ್ಯೂಎಸ್) ತಂಡದೊಂದಿಗೆ ಸರಣಿ ಸಮಾಲೋಚನೆಗಳನ್ನು ನಡೆಸಿ, ಜಿಐ ಮಾವಿನ ಹಣ್ಣುಗಳು(ಆಲ್ಫಾನ್ಸೊ) ಮತ್ತು ಅಪೆಡಾ ಪ್ಯಾಕ್ ಹೌಸ್ ಗಳಿಗೆ ಡಿಜಿಟಲ್ ಮುದ್ರೆ ನೀಡುವ ಕುರಿತು ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ, ಎರಡು ಪ್ರಾಯೋಗಿಕ ಯೋಜನೆಗಳ ಪ್ರಸ್ತಾವಗಳನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ.

ಡಿ. ದ್ರಾಕ್ಷಿ ಜಾಲದಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ :  ಅಪೆಡಾ ತನ್ನ ಗ್ರೇಪ್ ನೆಟ್ ಟ್ರೇಸಬಿಲಿಟಿ ವ್ಯವಸ್ಥೆ ಅಡಿ ಬ್ಲಾಕ್ ಚೈನ್ ಪರಿಹಾರಗಳನ್ನು ಅನುಷ್ಠಾನಗೊಳಿಸುತ್ತಿದೆ. ದ್ರಾಕ್ಷಿ ಬೆಳೆಯ ಆರಂಭಿಕ ಹಂತದಿಂದ ವಿತರಣೆ ಹಂತದವರೆಗೆ ಇಡೀ ಪ್ರಕ್ರಿಯೆಯ ಮೇಲೆ ನಾನಾ ಹಂತಗಳಲ್ಲಿ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲು ಬ್ಲಾಕ್ ಚೈನ್ ತಂತ್ರಜ್ಞಾನ ಸಹಕಾರಿಯಾಗಿದೆ.

 1. ಒಡಿಶಾದಲ್ಲಿ ಕಾಫಿ ಅಭಿವೃದ್ಧಿ ಕಾರ್ಯಕ್ರಮ

ಎ. ಕಾಫಿ ಬೋರ್ಡ್, ಒಡಿಶಾ ಸರ್ಕಾರದ ಜತೆ ಸೇರಿ, ಕೊರಾಪತ್ ಜಿಲ್ಲೆಯಲ್ಲಿನ ಬುಡಕಟ್ಟು ಜನರಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಯುವುದನ್ನು ಉತ್ತೇಜಿಸಲು ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. 4 ವರ್ಷದ ಈ ಕಾರ್ಯಕ್ರಮ ಒಡಿಶಾ ಸರ್ಕಾರದಿಂದ ಆರ್ಥಿಕ ನೆರವು ಮತ್ತು ಕಾಫಿ ಬೋರ್ಡ್ ನಿಂದ ತಾಂತ್ರಿಕ ನೆರವು ನೀಡುವ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಇದಕ್ಕೆ 16.46 ಕೋಟಿ ಬಜೆಟ್ ನಿಗದಿಪಡಿಸಲಾಗಿದೆ. ಸುಮಾರು 2000 ಹೆಕ್ಟೇರ್ ಪ್ರದೇಶ(ಹಾಲಿ ಮತ್ತು ಹೊಸದಾಗಿ) ಪ್ರದೇಶದಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಯಲು 4100 ಬುಡಕಟ್ಟು ಬೆಳೆಗಾರರನ್ನು ಬೆಂಬಲಿಸುವುದು ಇದರ ಗುರಿಯಾಗಿದೆ.

 1. ರಬ್ಬರ್ ಸಮೀಕ್ಷೆ

ಎ. ಕೇರಳದ ಡಿಜಿಟಲ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಡಿಜಿಟಲೀಕೃತ ಮೊಬೈಲ್ ಅಪ್ಲಿಕೇಶನ್(‘RUBAC’) ಬಳಸಿ, ರಬ್ಬರ್ ಮಂಡಳಿ ರಾಷ್ಟ್ರವ್ಯಾಪಿ ರಬ್ಬರ್ ಕುರಿತು ಸಮೀಕ್ಷೆ ನಡೆಸುತ್ತಿದೆ. ಇದರ ಉದ್ದೇಶ ರಬ್ಬರ್ ಬೆಳೆಯುವ ಒಟ್ಟು ಪ್ರದೇಶವನ್ನು ಖಾತ್ರಿಪಡಿಸಿಕೊಳ್ಳುವುದು, ಹೊಸ ರಬ್ಬರ್ ಬೆಳೆಯುವ ಪ್ರದೇಶ, ಮತ್ತೆ ರಬ್ಬರ್ ನೆಟ್ಟಿರುವ ಪ್ರದೇಶ, ರಬ್ಬರ್ ಮರಗಳು ಎಷ್ಟು ವರ್ಷದವು ಎಂಬ ವಿವರಗಳು, ಇತ್ತೀಚಿನ ವರ್ಷಗಳಲ್ಲಿ ರಬ್ಬರ್ ಬೆಳೆ ತೆಗೆದು ಹಾಕಿರುವ ಪ್ರದೇಶ, ಹೊಸ ಕ್ಲೋನ್ ಗಳ ಅಳವಡಿಕೆ ಮಟ್ಟ, ರಬ್ಬರ್ ತೆಗೆಯುವವರ ವಿವರಗಳು ಇತ್ಯಾದಿಗಳನ್ನು ದಾಖಲಿಸುತ್ತಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಕ್ಷೇತ್ರ ಪರಿಶೀಲನೆ ಕಾರ್ಯ ಆರಂಭವಾಗಿದೆ.  

 1. ಎಟಿಎಂಎ ಜತೆ ಈಶಾನ್ಯ ಪ್ರದೇಶದಲ್ಲಿ ರಬ್ಬರ್ ತೋಟಗಳ ಅಭಿವೃದ್ಧಿಗೆ ಸಮಗ್ರ ಯೋಜನೆ

ಎ.  ಗೌರವಾನ್ವಿತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ಮಾರ್ಗದರ್ಶನ ಮತ್ತು ಉಪಕ್ರಮದಡಿ  ಪ್ರಮುಖ ಟಯರ್ ಕಂಪನಿಗಳನ್ನು ಪ್ರತಿನಿಧಿಸುವ ಆಟೊಮೋಟಿವ್ ಟಯರ್ ಉತ್ಪಾದಕರ ಒಕ್ಕೂಟ(ಎಟಿಎಂಎ)ದೊಂದಿಗೆ ಒಡಂಬಡಿಕೆಗೆ ಅನುಮೋದನೆ ಮತ್ತು ಸಹಿ ಹಾಕಲಾಗಿದ್ದು, ಅದರಡಿ 1,100 ಕೋಟಿ ರೂ.ಗಳ ನೆರವಿನೊಂದಿಗೆ ಈಶಾನ್ಯ ರಾಜ್ಯಗಳಲ್ಲಿ ಹೊಸ ರಬ್ಬರ್ ತೋಟಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಸ್ಕರಿತ ರಬ್ಬರ್ ನ ಗುಣಮಟ್ಟ ಸುಧಾರಣೆಗೆ ಶ್ರಮಿಸುವುದಾಗಿದೆ.

ಬಿ. ಈ ಯೋಜನೆಯ ಉದ್ದೇಶ 5 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ 2,00,000 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ತೋಟಗಳನ್ನು ಅಭಿವೃದ್ಧಿಪಡಿಸುವುದಾಗಿದೆ. ರಬ್ಬರ್ ನೆಡುವ ಕಾರ್ಯ ಜುಲೈ 2021ರಲ್ಲಿ ಆರಂಭವಾಗಿದ್ದು, 2021ರಲ್ಲಿ ಸುಮಾರು 5000 ಹೆಕ್ಟೇರ್ ಪ್ರದೇಶದಲ್ಲಿ ನೆಡುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.   

***(Release ID: 1786478) Visitor Counter : 845