ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ದೆಹಲಿಯಲ್ಲಿ ಇಂದು ಕೇಂದ್ರ ಬಜೆಟ್ 2022-23 ಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಶಾಸನಸಭೆ ಹೊಂದಿರುವ) ಹಣಕಾಸು ಸಚಿವರೊಂದಿಗೆ ಪೂರ್ವಭಾವಿ-ಬಜೆಟ್ ಸಮಾಲೋಚನೆಗಳನ್ನು ನಡೆಸಿದರು

Posted On: 30 DEC 2021 4:54PM by PIB Bengaluru

ಸಭೆಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಹಣಕಾಸು ಸಚಿವರು, ಸಚಿವರು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಶಾಸನಸಭೆಗಳನ್ನು ಹೊಂದಿರುವ) ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರ ಹಣಕಾಸು ಕಾರ್ಯದರ್ಶಿ ಅವರು, ಸಭೆಯಲ್ಲಿ  ಭಾಗವಹಿಸುವವರನ್ನು ಚರ್ಚೆಗೆ ಸ್ವಾಗತಿಸಿದರು ಮತ್ತು ನಿರ್ದಿಷ್ಟ ಸಮಾಲೋಚನಾ ಸಭೆಯ ಮಹತ್ವವನ್ನು ತಿಳಿಸಿದರು.

ಸಾಂಕ್ರಾಮಿಕ ರೋಗದ ಸಂಕಷ್ಟದ ತಿಂಗಳುಗಳಲ್ಲಿ ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಾಲದ ಮಿತಿಗಳನ್ನು ಹೆಚ್ಚಿಸುವ ಮೂಲಕ, ರಾಜ್ಯಗಳಿಗೆ ಬ್ಯಾಕ್ ಟು ಬ್ಯಾಕ್ ಸಾಲಗಳನ್ನು ಒದಗಿಸುವ ಮೂಲಕ ಮತ್ತು ಬಂಡವಾಳ ವೆಚ್ಚಕ್ಕಾಗಿ ವಿಶೇಷ ಸಹಾಯದ ಮೂಲಕ ಆರ್ಥಿಕವಾಗಿ ಬೆಂಬಲ ನೀಡಿದ ಕೇಂದ್ರ ಹಣಕಾಸು ಸಚಿವರಿಗೆ ಸಭೆಯಲ್ಲಿ ಭಾಗವಹಿಸಿದ್ದವರು ಧನ್ಯವಾದಗಳನ್ನು ಅರ್ಪಿಸಿದರು.

ಭಾಗವಹಿಸಿದ್ದವರು, ಬಜೆಟ್ ಭಾಷಣದಲ್ಲಿ ಸೇರಿಸಲು ಕೇಂದ್ರ ಹಣಕಾಸು ಸಚಿವರಿಗೆ ಹಲವಾರು ಸಲಹೆಗಳನ್ನು ನೀಡಿದರು. 2022-23 ಕೇಂದ್ರ ಬಜೆಟ್‌ಗೆ ತಮ್ಮ ಒಳಹರಿವು ಮತ್ತು ಸಲಹೆಗಳಿಗಾಗಿ ಭಾಗವಹಿಸಿದ್ದವರಿಗೆ ಹಣಕಾಸು ಸಚಿವರು ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಪ್ರತಿಯೊಂದು ಪ್ರಸ್ತಾವನೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

***


(Release ID: 1786350) Visitor Counter : 250