ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ  ಉತ್ತಮ ಆಡಳಿತ ದಿನದಂದು, 2021 ಡಿಸೆಂಬರ್ 25 ರಂದು ಉತ್ತಮ ಆಡಳಿತ ಸೂಚ್ಯಂಕ 2021 ಕ್ಕೆ ಚಾಲನೆ ನೀಡಿದರು


20 ರಾಜ್ಯಗಳು 2021 ರಲ್ಲಿ ತಮ್ಮ ಸಂಯೋಜಿತ ಜಿಜಿಐ ಅಂಕಗಳಲ್ಲಿ ಸುಧಾರಣೆ ಕಂಡಿವೆ

58 ಸೂಚಕ ಸೂಚ್ಯಂಕದಲ್ಲಿ ಗುಜರಾತ್ ಸಂಯೋಜಿತ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೆ, ನಂತರ ಮಹಾರಾಷ್ಟ್ರ ಮತ್ತು ಗೋವಾ ಇವೆ

2019 ರಿಂದ 2021ರ ಅವಧಿಯಲ್ಲಿ ಉತ್ತರ ಪ್ರದೇಶವು ಜಿಜಿಐ ಸೂಚಕಗಳಲ್ಲಿ ಶೇಕಡ 8.9 ಸುಧಾರಣೆಯನ್ನು ದಾಖಲಿಸಿದೆ

ಜಮ್ಮು ಮತ್ತು ಕಾಶ್ಮೀರ 2019 ರಿಂದ 2021ರ ಅವಧಿಯಲ್ಲಿ ಜಿಜಿಐ ಸೂಚಕಗಳಲ್ಲಿ ಶೇಕಡಾ 3.7 ರಷ್ಟು ಸುಧಾರಣೆಯನ್ನು ದಾಖಲಿಸಿದೆ

ಕೇಂದ್ರಾಡಳಿತ ಪ್ರದೇಶಗಳ ವಿಭಾಗದ ಸಂಯೋಜಿತ ಶ್ರೇಯಾಂಕದಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ

Posted On: 25 DEC 2021 5:21PM by PIB Bengaluru

ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಉತ್ತಮ ಆಡಳಿತ ದಿನದಂದು ಡಿ..ಆರ್.ಪಿ.ಜಿ ಸಿದ್ಧಪಡಿಸಿದ ಉತ್ತಮ ಆಡಳಿತ ಸೂಚ್ಯಂಕ 2021 ಅನ್ನು ಇಂದು ಬಿಡುಗಡೆ ಮಾಡಿದರು.

ಉತ್ತಮ ಆಡಳಿತ ದಿನದ ಅಂಗವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ಕಳೆದ ಏಳು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ನೀಡಿದ ಉತ್ತಮ ಆಡಳಿತಕ್ಕಾಗಿ ಜನರು ಬಹಳ ಹಿಂದಿನಿಂದಲೂ ಕಾಯುತ್ತಿದ್ದಾರೆ ಎಂದು ಹೇಳಿದರು. ಮೋದಿ ಸರ್ಕಾರ ಕೈಗೊಂಡ ಅಭಿವೃದ್ಧಿಯ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸಿದ್ದರಿಂದ, 2014 ರಿಂದ ಪ್ರಜಾಪ್ರಭುತ್ವದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಉತ್ತಮ ಆಡಳಿತದ ಉದಾಹರಣೆ ನೀಡಿದ ಶ್ರೀ ಶಾ, ಕಳೆದ ಏಳು ವರ್ಷಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಆರೋಪವೂ ಬಂದಿಲ್ಲ, ಏಕೆಂದರೆ ಇದು ಸ್ವಚ್ಛ ಮತ್ತು ಪಾರದರ್ಶಕ ಆಡಳಿತವಾಗಿದೆ ಎಂದು ಹೇಳಿದರು.

https://static.pib.gov.in/WriteReadData/userfiles/image/image0011BB2.jpg

ಸಂದರ್ಭದಲ್ಲಿ, ಸಿಬ್ಬಂದಿ, ಪಿಜಿ ಮತ್ತು ಪಿಂಚಣಿ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ನಾಗರಿಕ ಕೇಂದ್ರಿತ ಆಡಳಿತವು ಮೋದಿ ಸರ್ಕಾರದ ಆಡಳಿತ ಮಾದರಿಯ ಹೃದಯದಲ್ಲಿದೆ ಎಂದು ಹೇಳಿದರು. ಉತ್ತಮ ಆಡಳಿತ ಸೂಚ್ಯಂಕವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಡಳಿತದ ಸ್ಥಿತಿಯನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಉತ್ತಮ ಆಡಳಿತ ಸೂಚ್ಯಂಕ, ಜಿಜಿಐ 2021 ಚೌಕಟ್ಟು ಹತ್ತು ವಲಯಗಳು ಮತ್ತು 58 ಸೂಚಕಗಳನ್ನು ಒಳಗೊಂಡಿದೆ. ಜಿಜಿಐ 2020-21 ವಲಯಗಳು 1) ಕೃಷಿ ಮತ್ತು ಸಂಬಂಧಿತ ವಲಯಗಳು, 2) ವಾಣಿಜ್ಯ ಮತ್ತು ಕೈಗಾರಿಕೆಗಳು, 3) ಮಾನವ ಸಂಪನ್ಮೂಲ ಅಭಿವೃದ್ಧಿ, 4) ಸಾರ್ವಜನಿಕ ಆರೋಗ್ಯ, 5.) ಸಾರ್ವಜನಿಕ ಮೂಲಸೌಕರ್ಯ ಮತ್ತು ಸೌಲಭ್ಯಗಳು, 6) ಆರ್ಥಿಕ ಆಡಳಿತ, 7) ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ, 8) ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತೆ, 9) ಪರಿಸರ, ಮತ್ತು 10) ನಾಗರಿಕ ಕೇಂದ್ರಿತ ಆಡಳಿತಗಳಾಗಿವೆ. ಜಿಜಿಐ 2020-21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಾಲ್ಕು ವಿಭಾಗಗಳಾಗಿ ವರ್ಗೀಕರಿಸುತ್ತದೆ, ಅಂದರೆ, () ಇತರ ರಾಜ್ಯಗಳು - ಗುಂಪು ; (2) ಇತರ ರಾಜ್ಯಗಳು - ಗುಂಪು ಬಿ; (3) ಈಶಾನ್ಯ ಮತ್ತು ಗಿರಿ ರಾಜ್ಯಗಳು; ಮತ್ತು (4) ಕೇಂದ್ರಾಡಳಿತ ಪ್ರದೇಶಗಳು.

ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ 10 ವಲಯಗಳನ್ನು ಒಳಗೊಂಡ ಸಂಯೋಜಿತ ಶ್ರೇಣಿಯ ಅಂಕದಲ್ಲಿ ಅಗ್ರಸ್ಥಾನದಲ್ಲಿವೆ. ಜಿಜಿಐ 2021 ಗುಜರಾತ್ ಶೇಕಡಾ 12.3 ರಷ್ಟು ಹೆಚ್ಚಳವನ್ನು ದಾಖಲಿಸಿದೆ ಮತ್ತು ಗೋವಾ ಜಿಜಿಐ 2019 ಸೂಚಕಗಳಿಗಿಂತ ಶೇಕಡಾ 24.7 ರಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಹೇಳುತ್ತದೆ. ಆರ್ಥಿಕ ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಮೂಲಸೌಕರ್ಯ ಮತ್ತು ಉಪಯುಕ್ತತೆಗಳು, ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ, ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತೆ ಸೇರಿದಂತೆ 10 ವಲಯಗಳಲ್ಲಿ ಗುಜರಾತ್ 5 ಕ್ಷೇತ್ರಗಳಲ್ಲಿ ಬಲವಾಗಿ ಕಾರ್ಯನಿರ್ವಹಿಸಿದೆ. ಕೃಷಿ ಮತ್ತು ಸಂಬಂಧಿತ ವಲಯ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸೌಲಭ್ಯಗಳು, ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿಯಲ್ಲಿ ಮಹಾರಾಷ್ಟ್ರವು ಬಲವಾಗಿ ಕಾರ್ಯನಿರ್ವಹಿಸಿದೆ. ಗೋವಾ ಕೃಷಿ ಮತ್ತು ಸಂಬಂಧಿತ ವಲಯ, ವಾಣಿಜ್ಯ ಮತ್ತು ಕೈಗಾರಿಕೆ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸೌಲಭ್ಯಗಳು, ಆರ್ಥಿಕ ಆಡಳಿತ, ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ ಮತ್ತು ಪರಿಸರದಲ್ಲಿ ಬಲವಾದ ಪ್ರದರ್ಶನ ನೀಡಿದೆ.

ಜಿಜಿಐ 2019 ಕಾರ್ಯಕ್ಷಮತೆಗಿಂತ ಉತ್ತರ ಪ್ರದೇಶವು ಶೇ.8.9ರಷ್ಟು ಹೆಚ್ಚಳದ ಬೆಳವಣಿಗೆಯನ್ನು ತೋರಿಸಿದೆ ಎಂದು ಜಿಜಿಐ 2021 ಹೇಳುತ್ತದೆ. ವಲಯಗಳಲ್ಲಿ, ಉತ್ತರ ಪ್ರದೇಶ ವಾಣಿಜ್ಯ ಮತ್ತು ಉದ್ಯಮ ವಲಯದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ ಮತ್ತು ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತೆಯಲ್ಲಿ ಹೆಚ್ಚಳವನ್ನು ತೋರಿಸಿದೆ. ಉತ್ತರ ಪ್ರದೇಶವು ಸಾರ್ವಜನಿಕ ಕುಂದುಕೊರತೆ ಪರಿಹಾರ ಸೇರಿದಂತೆ ನಾಗರಿಕ ಕೇಂದ್ರಿತ ಆಡಳಿತದಲ್ಲಿಯೂ ಕಾರ್ಯನಿರ್ವಹಿಸಿದೆ.

ಜಿಜಿಐ 2019 ಕಾರ್ಯಕ್ಷಮತೆಗಿಂತ ಜಾರ್ಖಂಡ್ ಶೇ.12.6 ಹೆಚ್ಚಳದ ಬೆಳವಣಿಗೆಯನ್ನು ತೋರಿಸಿದೆ ಎಂದು ಜಿಜಿಐ 2021 ಹೇಳಿದೆ. ಜಾರ್ಖಂಡ್ 10 ವಲಯಗಳ 7 ವಲಯಗಳಲ್ಲಿ ಪ್ರಬಲ ಪ್ರದರ್ಶನ ನೀಡಿದೆ. ಜಿಜಿಐ 2019 ಸಾಧನೆಗಿಂತ ರಾಜಸ್ಥಾನವು ಶೇಕಡಾ 1.7 ರಷ್ಟು ಹೆಚ್ಚಳವನ್ನು ತೋರಿಸಿದೆ. ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತೆ, ಪರಿಸರ ಮತ್ತು ನಾಗರಿಕ ಕೇಂದ್ರಿತ ಆಡಳಿತದಲ್ಲಿ ರಾಜಸ್ಥಾನವು ಇತರ ರಾಜ್ಯಗಳು (ಗ್ರೂಪ್ ಬಿ) ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ.

ಈಶಾನ್ಯ ಮತ್ತು ಗಿರಿ ರಾಜ್ಯಗಳ ವಿಭಾಗದಲ್ಲಿ, ಮಿಜೋರಾಂ ಮತ್ತು ಜಮ್ಮು ಮತ್ತು ಕಾಶ್ಮೀರಗಳು ಜಿಜಿಐ 2019 ಕ್ಕಿಂತ ಕ್ರಮವಾಗಿ ಶೇ. 10.4 ಮತ್ತು ಶೇ. 3.7 ರಷ್ಟು ಹೆಚ್ಚಳವನ್ನು ದಾಖಲಿಸಿವೆ ಎಂದು ಜಿಜಿಐ 2021 ಹೇಳುತ್ತದೆ. ಮಿಜೋರಾಂ ವಾಣಿಜ್ಯ ಮತ್ತು ಕೈಗಾರಿಕೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಆಡಳಿತದಲ್ಲಿ ಬಲಿಷ್ಠ ಪ್ರದರ್ಶನ ನೀಡಿದೆ. ಜಮ್ಮು ಮತ್ತು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ಬಲವಾದ ಪ್ರದರ್ಶನ ನೀಡಿದೆ ಮತ್ತು ಕೃಷಿ ಮತ್ತು ಮಿತ್ರವಲಯ, ಸಾರ್ವಜನಿಕ ಮೂಲಸೌಕರ್ಯ ಮತ್ತು ಉಪಯುಕ್ತತೆಗಳು ಮತ್ತು ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತಾ ವಲಯಗಳಲ್ಲಿ ತನ್ನ ಅಂಕಗಳನ್ನು ಸುಧಾರಿಸಿದೆ.

ಜಿಜಿಐ 2021 ಹೇಳುವಂತೆ, ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ, ಜಿಜಿಐ 2019 ಸೂಚಕಗಳಿಗಿಂತ 14 ಪ್ರತಿಶತ ಹೆಚ್ಚಳವನ್ನು ದಾಖಲಿಸುವ ಸಂಯೋಜಿತ ಶ್ರೇಣಿಯಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ. ಕೃಷಿ ಮತ್ತು ಸಂಬಂಧಿತ ವಲಯಗಳು, ವಾಣಿಜ್ಯ ಮತ್ತು ಕೈಗಾರಿಕೆ, ಸಾರ್ವಜನಿಕ ಮೂಲಸೌಕರ್ಯ ಮತ್ತು ಉಪಯುಕ್ತತೆಗಳು ಮತ್ತು ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿಯಲ್ಲಿ ದೆಹಲಿ ಸದೃಢವಾಗಿ ಕಾರ್ಯನಿರ್ವಹಿಸಿದೆ.

ಜಿಜಿಐ 2019 ಸೂಚ್ಯಂಕ ಅಂಕಗಳಿಗಿಂತ 20 ರಾಜ್ಯಗಳು ತಮ್ಮ ಸಂಯೋಜಿತ ಜಿಜಿಐ ಅಂಕಗಳನ್ನು ಸುಧಾರಿಸಿವೆ ಎಂದು ಜಿಜಿಐ 2021 ಹೇಳಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಧಿಸಿದ ವಲಯವಾರು ಅಂಕಗಳು ಒಂದಲ್ಲ ಒಂದು ವಲಯದಲ್ಲಿ ಬಲಿಷ್ಠ ಕಾರ್ಯಕ್ಷಮತೆಯನ್ನು ಸೂಚಿಸುತ್ತವೆ. ಅಂಕಗಳ ವಿಶ್ಲೇಷಣೆಯು ರಾಜ್ಯಗಳ ಸಂಯೋಜಿತ ಆಡಳಿತದ ಅಂಕಗಳಲ್ಲಿ ಬಹಳ ಅಲ್ಪ ವ್ಯತ್ಯಾಸವಿದೆ ಎಂದು ಸೂಚಿಸುತ್ತದೆ. ಇದು ಭಾರತದ ರಾಜ್ಯಗಳಲ್ಲಿ ಒಟ್ಟಾರೆ ಆಡಳಿತವು ಸಕಾರಾತ್ಮಕ ನಿಟ್ಟಿನಲ್ಲಿ ಸಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

ವಲಯಗಳಲ್ಲಿ ಮತ್ತು ಸಂಯೋಜಿತ ಶ್ರೇಣಿಗಳಲ್ಲಿ ಉನ್ನತ ಶ್ರೇಣಿಯ ರಾಜ್ಯಗಳು ಕೆಳಗಿನಂತಿವೆ:

ವಲಯಗಳು

ಗುಂಪು

ಗುಂಪು ಬಿ

ಈಶಾನ್ಯ ಮತ್ತು ಗಿರಿ ರಾಜ್ಯಗಳು

ಕೇಂದ್ರಾಡಳಿತ ಪ್ರದೇಶಗಳು

ಕೃಷಿ ಮತ್ತು ಪೂರಕ ವಲಯ

ಆಂಧ್ರಪ್ರದೇಶ

ಮಧ್ಯಪ್ರದೇಶ

ಮಿಜೋರಾಂ

ಡಿ ಮತ್ತು ಹವೇಲಿ

ವಾಣಿಜ್ಯ ಮತ್ತು ಕೈಗಾರಿಕೆ

ತೆಲಂಗಾಣ

ಉತ್ತರ ಪ್ರದೇಶ

ಜೆ ಮತ್ತು ಕೆ

ಡಮನ್ ಅಂಡ್ ಡಿಯು

ಮಾನವ ಸಂಪನ್ಮೂಲ ಅಭಿವೃದ್ಧಿ

ಪಂಜಾಬ್

ಒಡಿಶಾ

ಹಿಮಾಚಲ ಪ್ರದೇಶ

ಚಂಡೀಗಢ

ಸಾರ್ವಜನಿಕ ಆರೋಗ್ಯ

ಕೇರಳ

ಪಶ್ಚಿಮ ಬಂಗಾಳ

ಮಿಜೋರಾಂ

ಮತ್ತು ಎನ್ ದ್ವೀಪ 

ಸಾರ್ವಜನಿಕ ಮೂಲಸೌಕರ್ಯ ಮತ್ತು ಸೌಲಭ್ಯ

ಗೋವಾ

ಬಿಹಾರ

ಹಿಮಾಚಲ ಪ್ರದೇಶ

ಮತ್ತು ಎನ್ ದ್ವೀಪ 

ಆರ್ಥಿಕ ಆಡಳಿತ

ಗುಜರಾತ್

ಒಡಿಶಾ

ತ್ರಿಪುರಾ

ದೆಹಲಿ

ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ

ತೆಲಂಗಾಣ

ಛತ್ತೀಸಗಢ

ಸಿಕ್ಕಿಂ

ಡಿ ಮತ್ತು ಗನರ್ ಹವೇಲಿ

ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತೆ

ತಮಿಳುನಾಡು

ರಾಜಾಸ್ಥಾನ

ನಾಗಾಲ್ಯಾಂಡ್

ಚಂಡೀಗಢ

ಪರಿಸರ

ಕೇರಳ

ರಾಜಾಸ್ಥಾನ

ಮಣಿಪುರ

ಡಮನ್ ಮತ್ತು ಡಿಯು

ನಾಗರಿಕ ಕೇಂದ್ರಿತ ಆಡಳಿತ

ಹರಿಯಾಣ

ರಾಜಾಸ್ಥಾನ

ಉತ್ತರಾಖಂಡ

ದೆಹಲಿ

ಸಂಯೋಜಿತ

ಗುಜರಾತ್

ಮಧ್ಯಪ್ರದೇಶ

ಹಿಮಾಚಲ ಪ್ರದೇಶ

ದೆಹಲಿ

 

ಅಸ್ತಿತ್ವದಲ್ಲಿರುವ ಪರಿಮಾಣಾತ್ಮಕ ಸೂಚಕಗಳ ಜೊತೆಗೆ, ಹೆಚ್ಚುವರಿ ಪ್ರಕ್ರಿಯೆ ಮತ್ತು ಇನ್ಪುಟ್ ಆಧಾರಿತ ಸೂಚಕಗಳನ್ನು ಜಿಜಿಐ 2020-21 ಚೌಕಟ್ಟಿನ ಭಾಗವಾಗಿ ಮಾಡಲಾಗಿದೆ. ಹೆಚ್ಚುವರಿ ಆಯಾಮಗಳನ್ನು ಸೇರಿಸುವ ಗುರಿಯು ಜಿಜಿಐ ಆಡಳಿತವನ್ನು ಅಳೆಯುವ ಸಮಗ್ರ ಸಾಧನವನ್ನಾಗಿ ಮಾಡುವುದು. ಜಿಜಿಐ 2020-21 ವರದಿಯಲ್ಲಿ ಗುಣಾತ್ಮಕ ಅಂಶಗಳ ಸೇರ್ಪಡೆ, ಹೊಸ ಸೂಚಕಗಳನ್ನು ಸೇರಿಸುವ ವಿಧಾನ ಮತ್ತು ಸೂಚ್ಯಂಕ ಗಣನೆಗೆ ಅಗತ್ಯವಾದ ದತ್ತಾಂಶವನ್ನು ಲಭ್ಯವಾಗುವಂತೆ ಮಾಡುವ ಮಾರ್ಗಸೂಚಿಯನ್ನು ಸೇರಿಸಲಾಗಿದೆ.

ಉತ್ತಮ ಆಡಳಿತ ಸೂಚ್ಯಂಕ 2021 ವರದಿಯನ್ನು www.darpg.gov.in ನಲ್ಲಿ ನೋಡಬಹುದು.

<><><>

SNC/RR



(Release ID: 1785307) Visitor Counter : 288