ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫ್ರೆಂಚ್ ರಕ್ಷಣಾ ಸಚಿವರನ್ನು ಬರಮಾಡಿಕೊಂಡ ಪ್ರಧಾನಿ

प्रविष्टि तिथि: 17 DEC 2021 8:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರೆಂಚ್ ರಕ್ಷಣಾ ಸಚಿವೆ ಶ್ರೀಮತಿ ಫ್ಲಾರೆನ್ಸ್ ಪಾರ್ಲಿ ಅವರನ್ನು ಭೇಟಿ ಮಾಡಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, "ಇಂದು ಫ್ರೆಂಚ್ ರಕ್ಷಣಾ ಸಚಿವೆ ಶ್ರೀಮತಿ ಫ್ಲಾರೆನ್ಸ್ ಪಾರ್ಲಿ @florence_parly ಅವರನ್ನು ಬರಮಾಡಿಕೊಳ್ಳಲಾಯಿತು. ದ್ವಿಪಕ್ಷೀಯ ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತೆ, ಇಂಡೋ-ಪೆಸಿಫಿಕ್ ವಿಚಾರಗಳು ಮತ್ತು ಮುಂಬರುವ ಇಯು ಕೌನ್ಸಿಲ್ಗೆ ಫ್ರಾನ್ಸ್ನ ಅಧ್ಯಕ್ಷಸ್ಥಾನದ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು.

ಫ್ರಾನ್ಸ್‌ನೊಂದಿಗೆ ಭಾರತದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆಯನ್ನು ನಾನು ಈ ವೇಳೆ ಪುನರುಚ್ಚರಿಸಿದೆ," ಎಂದಿದ್ದಾರೆ.

***


(रिलीज़ आईडी: 1783019) आगंतुक पटल : 196
इस विज्ञप्ति को इन भाषाओं में पढ़ें: English , Gujarati , Urdu , Marathi , हिन्दी , Manipuri , Bengali , Assamese , Punjabi , Odia , Tamil , Telugu , Malayalam