ಇಂಧನ ಸಚಿವಾಲಯ

ಶಕ್ತಿ ಸಕ್ಷಮ ಬ್ಯುರೊ (BEE) 31ನೇ ರಾಷ್ಟ್ರೀಯ ಶಕ್ತಿ ಉಳಿತಾಯ ಪ್ರಶಸ್ತಿಗಳನ್ನೂ ಹಾಗೂ ಮೊದಲ ಶಕ್ತಿ ಕ್ಷಮತೆ ಪ್ರಶಸ್ತಿಯನ್ನು ಘೋಷಿಸಿದೆ


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ರಾಷ್ಟ್ರೀಯ ಶಕ್ತಿ ಉಳಿಕೆ ದಿನದಂದು ವಿತರಿಸಲಾಗುವುದು

ಕಡಿಮೆ ಇಂಗಾಲ ಉಗುಳುವಿಕೆಯ ಕಾರ್ಯಕ್ಷೇತ್ರದಲ್ಲಿ ಹೆಜ್ಜೆ ಇರಿಸಿರುವ ನಾವೀನ್ಯ ತಂತ್ರಜ್ಞಾನವನ್ನು, ತಂತ್ರಜ್ಞರನ್ನು ಈ ಸಾಲಿನಲ್ಲಿ ಸನ್ಮಾನಿಸಲಾಗುವುದು

ವಿವಿಧ ಕ್ಷೇತ್ರಗಳಿಂದ  ದೇಶದಲ್ಲಿ  ವ್ಯಾಪಕವಾಗಿ 400 ಅರ್ಜಿಗಳ ಪಾಲ್ಗೊಳ್ಳುವಿಕೆ ಕಂಡು ಬಂದಿದೆ

Posted On: 04 DEC 2021 1:38PM by PIB Bengaluru

ಶಕ್ತಿ ಸಕ್ಷಮ ಬ್ಯುರೊ (BEE) ಶಕ್ತಿ ಸಚಿವಾಲಯದ ಅಡಿಯಲ್ಲಿ ಕೈಗಾರಿಕೆ ಘಟಕಗಳು ಹಾಗೂ ಸ್ಥಾಪಿತ ಉದ್ಯಮಗಳು ಕಡಿಮೆ ಇಂಗಾಲ ಉಗುಳುವಿಕೆಯ ಕ್ರಮಕೈಗೊಂಡಲ್ಲಿ ಹಾಗೂ ಕ್ರಮಕೈಗೊಳ್ಳುವಂತೆ ಉತ್ತೇಜಿಸಲು, ಗುರುತಿಸಲು ರಾಷ್ಟ್ರೀಯ ಶಕ್ತಿ ಉಳಿತಾಯ ಪ್ರಶಸ್ತಿ NECAಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಶಕ್ತಿ ಉಳಿತಾಯ ದಿನವನ್ನು ರಾಷ್ಟ್ರೀಯ ಮಟ್ಟದಲ್ಲ ಡಿ.14ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗುವುದು.   ಈ ವರ್ಷರಾಷ್ಟ್ರೀಯ ಶಕ್ತಿ ಸಕ್ಷಮ ನಾವೀನ್ಯ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿ, ಕ್ರಮಕೈಗೊಳ್ಳಲಾಗಿದೆ.  

ಈ ವರ್ಷ NECA ಮತ್ತು NEEIA ಈ ಎರಡೂ ಪ್ರಶಸ್ತಿಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿದೆ. ರಾಷ್ಟ್ರೀಯ ಶಕ್ತಿ ಉಳಿಕೆ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರೀ ಶಕ್ತಿ ಸಕ್ಷಮ ನಾವೀನ್ಯ ಪ್ರಶಸ್ತಿ ಪುರಸ್ಕೃತರನ್ನು ರಾಷ್ಟ್ರೀಯ ಶಕ್ತಿ ದಿನದ ಅಂಗವಾಗಿ ಡಿ.14ರಂದು ಉನ್ನತ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 

ರಾಷ್ಟ್ರದಲ್ಲಿ ಇಂಧನ ಮತ್ತು ಶಕ್ತಿಯ ಸಮರ್ಪಕ ಬಳಕೆ ಹಾಗೂ ಇಂಗಾಲದ ಕಡಿಮೆ ಉಗುಳುವಿಕೆಯ ಕ್ರಮಕೈಗೊಂಡಿರುವ ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ, ಕೈಗಾರಿಕೆಗಳು, ಸ್ಥಾಪಿತ ಉದ್ದಿಮೆಗಳನ್ನು ಗುರುತಿಸಿ ನೀಡುವ ಕೆಲಸ ಮಾಡುತ್ತಿದೆ. ಶಕ್ತಿಯ ಸಮರ್ಥ ಬಳಕೆ ಹಾಗೂ ಕಡಿಮೆ ಬಳಕೆಯನ್ನು ಗಮನದಲ್ಲಿರಿಸಿಕೊಂಡು ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. NECA (2021) ಪ್ರಶಸ್ತಿಗಾಗಿ ಆನ್‌ಲೈನ್‌ನಲ್ಲಿ ಸಂಬಂಧಿಸಿದ ಕ್ಷೇತ್ರಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಸಾರಿಗೆ, ಕಟ್ಟಡ, ಕಟ್ಟಡ ನಿರ್ಮಾಣ, ನಿರ್ಮಾಣ ಸಂಸ್ಥೆಗಳು, ಅಪ್ಲೈನ್ಸ್‌ ಕೆಟಗರಿ ಮುಂತಾದ ಕ್ಷೇತ್ರಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ನಂತರ ಅವುಗಳನ್ನು ಇತರ 30 ವಿಭಾಗಗಳಾಗಿ ವಿಂಗಡಿಸಲಾಯಿತು. ಒಟ್ಟು 408 ಅರ್ಜಿಗಳು ಕೊನೆಯ ದಿನದವರೆಗೂ ಅವು ಪ್ರವೇಶ ಪಡೆದಿದ್ದವು. ಈ ಪ್ರಶಸ್ತಿ ಸಮಿತಿಗೆ ಶಕ್ತಿ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ರಾಷ್ಟ್ರೀಯ ಶಕ್ತಿ ಉಳಿಕೆಯ ಅವಾರ್ಡುಗಳನ್ನು ಡಿ.14ರಂದು 2021ರಂದು ನೀಡಲಾಗುತ್ತದೆ.  

ಈ ವರ್ಷ ರಾಷ್ಟ್ರೀಯ ಶಕ್ತಿ ಉಳಿತಾಯ ಪ್ರಶಸ್ತಿಯನ್ನು ಶಕ್ತಿ ಮತ್ತು ಇಂಧನ ಸಚಿವಾಲಯದ ಶಕ್ತಿ ಸಕ್ಷಮ ಪ್ರಶಸ್ತಿಯನ್ನು ಗುರುತಿಸಿ ನೀಡಲಾಗುತ್ತಿದೆ. ಶಕ್ತಿ ಸಕ್ಷಮ ಮತ್ತು ಸಮರ್ಥ ತಂತ್ರಜ್ಞಾನ ಅಳವಡಿಕೆಯ ಹೊಸತನಕ್ಕೆ ನೀಡಲಾಗುತ್ತಿದೆ. ನವೀನ ಕ್ಷೇತ್ರಗಳಲ್ಲಿ ಹೊಸ ಅಭಿವೃದ್ಧಿಯ ತಂತ್ರಗಳನ್ನು ಅಳವಡಿಸಲು ನಾವೀನ್ಯ ತಂತ್ರಗಳನ್ನು ಬಳಸುವ ಸಂಘ ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಡಿ.14ರಂದು ವಿತರಿಸಲಾಗುತ್ತಿದೆ.  

ಈ ವರ್ಷ ರಾಷ್ಟ್ರೀಯ ಶಕ್ತಿ ಉಳಿತಾಯ ಪ್ರಶಸ್ತಿ  (NECA), ಶಕ್ತಿ ಸಚಿವಾಲಯವು ರಾಷ್ಟ್ರೀಯ ಶಕ್ತಿ ಸಕ್ಷಮ ನಾವೀನ್ಯ ತಂತ್ರಜ್ಞಾನಕ್ಕಾಗಿಯೂ ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು (NEEIA).  ಇದು ರಾಷ್ಟ್ರೀಯ ಸಕ್ಷಮ ತಂತ್ರಜ್ಞಾನದ ಬಳಕೆಯಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ, ಹೊಸತನವನ್ನು ಅಳವಡಿಸುವುದು ಪ್ರೋತ್ಸಾಹಿಸಲು, ಉತ್ತೇಜಿಸಲು ಈ ಹೊಸ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.  ಕೆಟಗರಿ ಎ ಕೈಗಾರಿಕೆ, ಸಾರಿಗೆ ಹಾಗೂ ಕಟ್ಟಡ ವಿಭಾಗದಿಂದ  ಮತ್ತು ಕೆಟಗರಿ ಬಿ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ 149 ಅರ್ಜಿದಾರರು ಪಾಲ್ಗೊಂಡಿದ್ದರು.   NEEIA 2021 ಸಾಲಿಗೆ ಈ ಪ್ರಮಾಣದ ಅರ್ಜಿಗಳು ಪಾಲ್ಗೊಂಡಿದ್ದು ಉತ್ಸಾಹಕಾರಿಯಾಗಿದೆ. ಶಕ್ತಿ ಸಕ್ಷಮ ನಾವೀನ್ಯ ಪ್ರಶಸ್ತಿಗಾಗಿ ಹೊಸತನಗಳ ಸಂಶೋಧನೆ, ಅಳವಡಿಕೆ ತಂತ್ರಜ್ಞಾನ ಬಳಕೆ ಮುಂತಾದ ಹೊಸತನ ಉಪಾಯಗಳಿಗೆ, ಯೋಜನೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೂಡಿದೆ. ನವೀನ ಶಕ್ತಿಯ ಮೂಲಗಳು, ನವೀಕರಿಸುವ ಇಂಧನಗಳ ಬಳಕೆಯನ್ನು ತಮ್ಮ ಘಟಕಗಳಲ್ಲಿ, ಬಳಸುವ ಅದರ ಮೂಲಕ ಇಂಧನ ಉಗುಳುವಿಕೆಯನ್ನು ಕಡಿಮೆ ಮಾಡುವ ಸಂಸ್ಥೆಗಳನ್ನು ಗುರುತಿಸಲಾಗುವುದು.  ಇಂಥ ಹೊಸತನಗಳು ಸಾಕಷ್ಟು ಮುನ್ನಲೆಗೆ ಬರಲಿ ಎಂಬ ಕಾರಣಕ್ಕಾಗಿಯೇ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅಧ್ಯಯನಕ್ಕೆ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ. ಈ ಸಣ್ಣ ಅವಧಿಯಲ್ಲಿ, ಸೀಮಿತ ಸಮಯದಲ್ಲಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿಯನ್ನೂ ಗಮನದಲ್ಲಿರಿಸಿಕೊಂಡು ಹೊಸತನ ಯೋಜನೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.  

ಶಕ್ತಿಯ ಸಶಕ್ತ ಬಳಕೆಯನ್ನು ಉತ್ತೇಜಿಸಲು, ನವೀಕೃತ ಶಕ್ತಿಯ ಮೂಲಗಳನ್ನು ಮೂಲ ಆಧಾರ ಸ್ತಂಭಗಳಾಗಿ ಪರಿಗಣಿಸುವ, ಇಂಗಾಲದ ಉಗುಳುವಿಕೆಯನ್ನು ಕಡಿಮೆಗೊಳಿಸುವ ಘಟಕಗಳನ್ನು ಗುರುತಿಸಿ ನೀಡಲಾಗುವುದು. ಇಂಥ ಸಂಸ್ಥೆಗಳನ್ನು ಗುರುತಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ. ಬಂದ ಅರ್ಜಿದಾರರಲ್ಲಿ ಇಂಥ ಪ್ರಯತ್ನಗಳಾಗಿರುವುದು ಮತ್ತು ಇಂಥ ಪ್ರಯತ್ನಗಳು ಇನ್ನಷ್ಟು ಗಾಢವಾಗಿ ತಮ್ಮ ಛಾಪನ್ನು ಉಳಿಸುವಂತಾಗುವುದು, ಉಳಿದ ಘಟಕಗಳಿಗೂ ಸ್ಫೂರ್ತಿದಾಯಕವಾಗಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ರಾಷ್ಟ್ರೀಯ ನಿರ್ಧಾರಿತ ವಿತರಕರು ಜಾಗತಿಕ ತಾಪಮಾನವು ನಿರ್ಧರಿಸಿದ ಮಾನದಂಡವನ್ನು ತಲುಪುವಲ್ಲಿ, ಸಾಧಿಸುವಲ್ಲಿ ಸಹಾಯವಾಗುತ್ತದೆ.

***



(Release ID: 1778062) Visitor Counter : 211