ಭೂವಿಜ್ಞಾನ ಸಚಿವಾಲಯ

"ಸಾಗರ ಸೇವೆಗಳು, ಮಾಡೆಲಿಂಗ್, ಅಪ್ಲಿಕೇಶನ್, ಸಂಪನ್ಮೂಲಗಳು ಮತ್ತು ತಂತ್ರಜ್ಞಾನ (ಒ-ಸ್ಮಾರ್ಟ್)" ಸಮೂಹ ಯೋಜನೆಯ ಮುಂದುವರಿಕೆಗೆ ಸಂಪುಟ ಅನುಮೋದನೆ


ಯೋಜನೆಗೆ 2177 ಕೋಟಿ ರೂ. ವೆಚ್ಚ ತಗುಲಲಿದೆ

Posted On: 24 NOV 2021 3:39PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಭೂ ವಿಜ್ಞಾನ ಸಚಿವಾಲಯದ "ಸಾಗರ ಸೇವೆಗಳು, ಮಾಡೆಲಿಂಗ್, ಅಪ್ಲಿಕೇಶನ್, ಸಂಪನ್ಮೂಲಗಳು ಮತ್ತು ತಂತ್ರಜ್ಞಾನ (ಒ-ಸ್ಮಾರ್ಟ್)" ಸಮೂಹ ಯೋಜನೆಯ ಮುಂದುವರಿಕೆಗೆ ಅನುಮೋದನೆಯನ್ನು ನೀಡಿದೆ. 2021-26 ರ ಅವಧಿಯಲ್ಲಿ ಒಟ್ಟಾರೆ 2177 ಕೋಟಿ ವೆಚ್ಚದಲ್ಲಿ ಈ ಯೋಜನೆಯು ಅನುಷ್ಠಾನಗೊಳ್ಳಲಿದೆ.

ಈ ಯೋಜನೆಯು ಸಾಗರ ತಂತ್ರಜ್ಞಾನ, ಸಾಗರ ಮಾಡೆಲಿಂಗ್ ಮತ್ತು ಸಲಹಾ ಸೇವೆಗಳು (ಒಎಂಎಎಸ್), ಸಾಗರ ವೀಕ್ಷಣಾ ಜಾಲ (ಒಒಎನ್), ಸಾಗರ ನಿರ್ಜೀವ ಸಂಪನ್ಮೂಲಗಳು, ಸಾಗರ ಜೀವಂತ ಸಂಪನ್ಮೂಲಗಳು ಮತ್ತು ಪರಿಸರ ವಿಜ್ಞಾನ (ಎಂ ಎಲ್ ಆರ್ ಇ), ಕರಾವಳಿ ಸಂಶೋಧನೆ ಮತ್ತು ಕಾರ್ಯಾಚರಣೆ ಮತ್ತು ಸಂಶೋಧಣಾ ಹಡಗುಗಳ ನಿರ್ವಹಣೆ ಎಂಬ ಏಳು ಉಪ ಯೋಜನೆಗಳನ್ನು ಒಳಗೊಂಡಿದೆ. ಈ ಉಪ-ಯೋಜನೆಗಳನ್ನು ಸಚಿವಾಲಯದ ಸ್ವಾಯತ್ತ ಸಂಸ್ಥೆಗಳು ಅಂದರೆ. ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್ ಐ ಒ ಟಿ ), ಚೆನ್ನೈ; ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (ಐ ಎನ್ ಸಿ ಒ ಐ ಎಸ್ ), ಹೈದರಾಬಾದ್; ರಾಷ್ಟ್ರೀಯ ಧ್ರುವಪ್ರದೇಶ ಮತ್ತು ಸಾಗರ ಸಂಶೋಧನಾ ಸಂಸ್ಥೆ (ಎನ್ ಸಿ ಪಿ ಒ ಆರ್ ), ಗೋವಾ, ಸಮುದ್ರ ಜೀವಿ ಸಂಪನ್ಲೂಲಗಳು ಮತ್ತು ಪರಿಸರ ಸಂಸ್ಥೆ (ಸಿ ಎಂ ಎಲ್ ಆರ್ ಇ), ಕೊಚ್ಚಿ ಮತ್ತು ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರ (ಎನ್ ಸಿ ಸಿ ಆರ್), ಚೆನ್ನೈ ಹಾಗೂ ಇತರ ರಾಷ್ಟ್ರೀಯ ಸಂಸ್ಥೆಗಳು ಅನುಷ್ಠಾನಗೊಳಿಸುತ್ತಿವೆ. ಸಚಿವಾಲಯದ ಸಮುದ್ರಶಾಸ್ತ್ರೀಯ ಮತ್ತು ಕರಾವಳಿ ಸಂಶೋಧನಾ ಹಡಗುಗಳಿ ಯೋಜನೆಗೆ ಅಗತ್ಯವಾದ ಸಂಶೋಧನಾ ಬೆಂಬಲವನ್ನು ಒದಗಿಸುತ್ತವೆ.

ಭಾರತದಲ್ಲಿ ಸಾಗರಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯನ್ನು 1981 ರಲ್ಲಿ ಸ್ಥಾಪಿಸಲಾದ ಸಾಗರಾಭಿವೃದ್ಧಿ ಇಲಾಖೆ (ಡಿಒಡಿ) ಪ್ರಾರಂಭಿಸಿತು. ಇದು ನಂತರ ಭೂ ವಿಜ್ಞಾನ ಸಚಿವಾಲಯದಲ್ಲಿ (ಎಂಒಇಎಸ್) ವಿಲೀನಗೊಂಡಿತು. ತಂತ್ರಜ್ಞಾನ ಅಭಿವೃದ್ಧಿಗಳು, ಮುನ್ಸೂಚನೆ ಸೇವೆಗಳು, ಕ್ಷೇತ್ರ ಸ್ಥಾಪನೆಗಳು, ಅನ್ವೇಷಣೆಗಳು, ಸಮೀಕ್ಷೆಗಳಲ್ಲಿ ತಂತ್ರಜ್ಞಾನ ಪ್ರದರ್ಶನಗಳ ಮೂಲಕ ಸಾಗರಶಾಸ್ತ್ರದ ಸಂಶೋಧನೆಯಲ್ಲಿ ಎಂಒಇಎಸ್ ಮಹತ್ವದ ಕಾರ್ಯಗಳನ್ನು ಸಾಧಿಸಿದೆ. ನಮ್ಮ ಸಾಗರಗಳ ನಿರಂತರ ವೀಕ್ಷಣೆ, ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ನಮ್ಮ ಸಾಗರ ಸಂಪನ್ಮೂಲಗಳ (ಜೀವಂತ ಮತ್ತು ನಿರ್ಜೀವ ಎರಡೂ) ಸುಸ್ಥಿರ ಬಳಕೆಗಾಗಿ ಪರಿಶೋಧನಾ ಸಮೀಕ್ಷೆಗಳ ಆಧಾರದ ಮೇಲೆ ಮುನ್ಸೂಚನೆ ಮತ್ತು ಸೇವೆಗಳನ್ನು ಒದಗಿಸುವುದು ಮತ್ತು ಸಾಗರ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶಗಳೊಂದಿಗೆ ಸಾಗರಶಾಸ್ತ್ರೀಯ ಸಂಶೋಧನಾ ಚಟುವಟಿಕೆಗಳನ್ನು ಒಳಗೊಂಡ ಒ-ಸ್ಮಾರ್ಟ್ (O-SMART) ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಯೋಜನೆಯ ಚಟುವಟಿಕೆಗಳ ಮೂಲಕ ಹಲವಾರು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲಾಗಿದೆ, ಪಾಲಿ ಮೆಟಾಲಿಕ್ ನೊಡುಲ್ (ಪಿಎಂಎನ್) ಮತ್ತು ಹೈಡ್ರೋಥರ್ಮಲ್ ಸಲ್ಫೈಡ್ಗಳ ಆಳ ಸಮುದ್ರದ ಗಣಿಗಾರಿಕೆಯ ಕುರಿತು ಹಿಂದೂ ಮಹಾಸಾಗರದ ಹಂಚಿಕೆಯಾದ ಪ್ರದೇಶದಲ್ಲಿ ವ್ಯಾಪಕವಾದ ಸಂಶೋಧನೆಯನ್ನು ನಡೆಸಲು ಅಂತರರಾಷ್ಟ್ರೀಯ ಸಮುದ್ರ ತಳದ ಪ್ರಾಧಿಕಾರ (ಐಎಸ್ಎ) ದೊಂದಿಗೆ ಭಾರತವು ಪ್ರವರ್ತಕ ಹೂಡಿಕೆದಾರನಾಗಿ ಗುರುತಿಸಲ್ಪಟ್ಟಿದೆ. ಲಕ್ಷದ್ವೀಪ ದ್ವೀಪಗಳಲ್ಲಿ ಇಂತಹ ಕಡಿಮೆ ತಾಪಮಾನದ ಥರ್ಮಲ್ ನಿರ್ಲವಣೀಕರಣ ಅಳವಡಿಕೆಯ ಸೌಲಭ್ಯವನ್ನು ಬಳಸಿಕೊಂಡು ನಿರ್ಲವಣೀಕರಣದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದೂ ಸಹ ಗಮನಾರ್ಹ ಸಾಧನೆಯಾಗಿದೆ. ಇದಲ್ಲದೆ, ಭಾರತದ ಸಾಗರ ಸಂಬಂಧಿತ ಚಟುವಟಿಕೆಗಳನ್ನು ಈಗ ಆರ್ಕ್ಟಿಕ್ನಿಂದ ಅಂಟಾರ್ಕ್ಟಿಕ್ ಪ್ರದೇಶಕ್ಕೆ ವಿಸ್ತರಿಸಲಾಗಿದೆ, ಇದು ದೊಡ್ಡ ಸಾಗರ ಪ್ರದೇಶವನ್ನು ವ್ಯಾಪಿಸಿದೆ. ಇವುಗಳನ್ನು ಮೂಲ ಸ್ಥಳದಿಂದ ಮತ್ತು ಉಪಗ್ರಹ ಆಧಾರಿತ ವೀಕ್ಷಣೆಯ ಮೂಲಕ ಮೇಲ್ವಿಚಾರಣೆ ಮಾಡಲಾಗಿದೆ. ಅಂತರ ಸರ್ಕಾರದ ಮಟ್ಟದಲ್ಲಿ ಜಾಗತಿಕ ಸಾಗರ ವೀಕ್ಷಣಾ ವ್ಯವಸ್ಥೆಯ ಹಿಂದೂ ಮಹಾಸಾಗರದ ಘಟಕವನ್ನು ಅನುಷ್ಠಾನಗೊಳಿಸುವಲ್ಲಿ ಭಾರತವು ನಾಯಕತ್ವದ ಪಾತ್ರವನ್ನು ವಹಿಸಿದೆ.

ಕಟ್ಟಿಹಾಕಿದ ಮತ್ತು ತೇಲುವ ಪ್ರಕಾರಗಳನ್ನು ಒಳಗೊಂಡಂತೆ ವಿಶಾಲ ವ್ಯಾಪ್ತಿಯ ವೀಕ್ಷಣಾ ಜಾಲಗಳ ಮೂಲಕ ಸಾಗರಶಾಸ್ತ್ರದ ಕಾರ್ಯಾಚರಣೆಯನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾಗಿದೆ ಮತ್ತು ನಿರ್ವಹಿಸಲಾಗಿದೆ. ಈ ವೀಕ್ಷಣಾ ಜಾಲವು ಸಂಭಾವ್ಯ ಮೀನುಗಾರಿಕೆ ಪ್ರದೇಶಕ್ಕೆ ಸಾಗರ ಮುನ್ಸೂಚನೆ ಸೇವೆಗಳನ್ನು ನೀಡುತ್ತದೆ ಮತ್ತು ಚಂಡಮಾರುತ ಮತ್ತು ಸುನಾಮಿಗೆ ಸಂಬಂಧಿಸಿದ ಅಪಾಯಗಳ ಎಚ್ಚರಿಕೆಯನ್ನು ರಾಷ್ಟ್ರಗಳ ಮಟ್ಟದಲ್ಲಿ ಮತ್ತು ನೆರೆಯ ರಾಷ್ಟ್ರಗಳ ಪಾಲುದಾರರಿಗೆ ನೀಡುತ್ತದೆ. ಸುನಾಮಿ, ಚಂಡಮಾರುತದಂತಹ ಸಾಗರ ವಿಪತ್ತುಗಳ ಬಗ್ಗೆ ಭಾರತ ಮತ್ತು ಹಿಂದೂ ಮಹಾಸಾಗರದ ದೇಶಗಳಿಗೆ ಸೇವೆಗಳನ್ನು ಒದಗಿಸಲು ಅತ್ಯಾಧುನಿಕ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಹೈದರಾಬಾದ್ನ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದಲ್ಲಿ  ಸ್ಥಾಪಿಸಲಾಗಿದೆ. ಇದನ್ನು ಯುನೆಸ್ಕೋ ಮಾನ್ಯ ಮಾಡಿದೆ. ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝಡ್) ಮತ್ತು ಭಾರತದ ಭೂಖಂಡದಲ್ಲಿ ವ್ಯಾಪಕವಾದ ಸಮೀಕ್ಷೆಯನ್ನು ರಾಷ್ಟ್ರೀಯ ಪ್ರಯೋಜನಗಳಿಗಾಗಿ ಸಾಗರ ಸಂಪನ್ಮೂಲಗಳು, ಸಾಗರ ಸಂಬಂಧಿತ ಸಲಹಾ ಸೇವೆಗಳು, ನ್ಯಾವಿಗೇಷನ್ ಇತ್ಯಾದಿಗಳನ್ನು ಗುರುತಿಸಲು ನಡೆಸಲಾಗುತ್ತದೆ. ಇಇಝಡ್ ಮತ್ತು ಭಾರತದ ಆಳ ಸಮುದ್ರದಲ್ಲಿನ ಜೀವಂತ ಸಂಪನ್ಮೂಲಗಳ ಮೌಲ್ಯಮಾಪನ ಸೇರಿದಂತೆ ಸಾಗರ ಜೀವವೈವಿಧ್ಯದ ಸಂರಕ್ಷಣೆ ಮತ್ತು ರಕ್ಷಣೆಗಾಗಿ ಜೀವ ಸಂಪನ್ಮೂಲಗಳ ಮ್ಯಾಪಿಂಗ್ ಅನ್ನು ಸಮುದ್ರ ಪರಿಸರ ವ್ಯವಸ್ಥೆಗಾಗಿ ಕೈಗೊಳ್ಳಲಾಗಿದೆ. ಕರಾವಳಿಲ್ಲಿನ ಬದಲಾವಣೆಗಳು ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳು ಸೇರಿದಂತೆ ಭಾರತದ ಕರಾವಳಿ ಪ್ರದೇಶದ ಆರೋಗ್ಯವನ್ನು ಸಚಿವಾಲಯವು ಮೇಲ್ವಿಚಾರಣೆ ಮಾಡುತ್ತಿದೆ.

ಒ-ಸ್ಮಾರ್ಟ್ ಬಹುಶಿಸ್ತೀಯ ನಿರಂತರ ಯೋಜನೆಯಾಗಿದ್ದು, ವ್ಯಾಪಕವಾದ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಚಟುವಟಿಕೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಗರಶಾಸ್ತ್ರ ಕ್ಷೇತ್ರದಲ್ಲಿ ರಾಷ್ಟ್ರದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಪ್ರಸ್ತುತ ದಶಕವನ್ನು ವಿಶ್ವಸಂಸ್ಥೆಯು ಸುಸ್ಥಿರ ಅಭಿವೃದ್ಧಿಗಾಗಿ ಸಾಗರ ವಿಜ್ಞಾನದ ದಶಕ ಎಂದು ಘೋಷಿಸಿದೆ ಮತ್ತು ಯೋಜನೆಯ ಮುಂದುವರಿಕೆಯು ಜಾಗತಿಕ ಸಾಗರಶಾಸ್ತ್ರದ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನಮ್ಮ ನಿಲುವನ್ನು ಬಲಪಡಿಸುತ್ತದೆ. ಯೋಜನೆಯ ಮುಂದುವರಿಕೆಯು ಸುಸ್ಥಿರವಾದ ರೀತಿಯಲ್ಲಿ ವಿಶಾಲವಾದ ಸಾಗರ ಸಂಪನ್ಮೂಲಗಳ ಪರಿಣಾಮಕಾರಿ ಮತ್ತು ಸಮರ್ಥ ಬಳಕೆಗಾಗಿ ನೀಲಿ ಆರ್ಥಿಕತೆಯ ರಾಷ್ಟ್ರೀಯ ನೀತಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಸಾಗರಗಳು, ಸಮುದ್ರಗಳು ಮತ್ತು ಸಮುದ್ರ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಸುಸ್ಥಿರವಾಗಿ ಬಳಸಲು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ-14 ಅನ್ನು ಸಾಧಿಸುವ ಪ್ರಯತ್ನಗಳನ್ನು ಕರಾವಳಿ ಸಂಶೋಧನೆ ಮತ್ತು ಸಮುದ್ರ ಜೀವವೈವಿಧ್ಯ ಚಟುವಟಿಕೆಗಳು ಒಳಗೊಂಡಿವೆ. ರಾಷ್ಟ್ರೀಯ ಜಿಡಿಪಿಗೆ ಮಹತ್ವದ ಕೊಡುಗೆಯನ್ನು ನೀಡಲಾಗುತ್ತಿದೆ ಮತ್ತು ಸಾಗರ ಸಲಹಾ ಸೇವೆಗಳು ಮತ್ತು ತಂತ್ರಜ್ಞಾನಗಳು  ಸಮುದಾಯಗಳಿಗೆ  ಮತ್ತು ಸಮುದ್ರ ಪರಿಸರದಲ್ಲಿ ವಿಶೇಷವಾಗಿ ಭಾರತದ ಕರಾವಳಿ ರಾಜ್ಯಗಳಲ್ಲಿ ಕೆಲಸ ಮಾಡುವ ಹಲವಾರು ವಲಯಗಳಿಗೆ ಲಾಭದಾಯಕವಾಗಿವೆ.

ಈ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ (2021-26) ಸಾಗರ ಕ್ಷೇತ್ರಕ್ಕೆ ಅನ್ವಯವಾಗುವ ವಿವಿಧ ಕರಾವಳಿ ಪಾಲುದಾರರಿಗೆ ಮುನ್ಸೂಚನೆ ಮತ್ತು ಎಚ್ಚರಿಕೆಯ ಸೇವೆಗಳು, ಸಮುದ್ರ ಜೀವಿಗಳ ಸಂರಕ್ಷಣಾ ಕಾರ್ಯತಂತ್ರದಲ್ಲಿ ಜೀವವೈವಿಧ್ಯತೆ ಮತ್ತು ಕರಾವಳಿ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವನ್ನು ತಲುಪಿಸಲು ಈಗಾಗಲೇ ನಡೆಯುತ್ತಿರುವ ಚಟುವಟಿಕೆಗಳನ್ನು ಬಲಪಡಿಸುವ ಮೂಲಕ ಮತ್ತಷ್ಟು ಸಮಗ್ರ ವ್ಯಾಪ್ತಿಯನ್ನು ಒದಗಿಸುತ್ತದೆ,

***



(Release ID: 1774668) Visitor Counter : 264