ಪ್ರಧಾನ ಮಂತ್ರಿಯವರ ಕಛೇರಿ

ದೀಪಾವಳಿ ಮಿಲನ್ ನಲ್ಲಿ ಪಿಎಂಓ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ

Posted On: 12 NOV 2021 8:32PM by PIB Bengaluru

ಲೋಕ ಕಲ್ಯಾಣ ಮಾರ್ಗದಲ್ಲಿನ ಪ್ರಧಾನಮಂತ್ರಿಮಂತ್ರಿಯವರ ನಿವಾಸದಲ್ಲಿಂದು ಆಯೋಜಿಸಿದ್ದ ‘ದೀಪಾವಳಿ ಮಿಲನ್’ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅವರು ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಿದರು.

ಪ್ರಧಾನಮಂತ್ರಿಯವರು ಸಾಂಕ್ರಾಮಿಕದ ವಿರುದ್ಧ ದೇಶದ ಹೋರಾಟ ಕುರಿತು ಚರ್ಚಿಸಿದರು. ಸಾಮಾನ್ಯ ಅಗೋಚರ ಶತ್ರುವಿನ ವಿರುದ್ಧ ಹೋರಾಡುವಲ್ಲಿ ದೇಶವು ಹೇಗೆ ಏಕತೆ ಮತ್ತು ಭ್ರಾತೃತ್ವವನ್ನು ಪ್ರದರ್ಶಿಸಿದೆ ಎಂಬುದನ್ನು ಒತ್ತಿ ಹೇಳಿದ ಅವರು, ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಸಮಾಜ ಮತ್ತು ಆಡಳಿತದಲ್ಲಿ ಬಂದಿರುವ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಮಾತನಾಡಿದರು. ಈ ಬದಲಾವಣೆಗಳು ಸಮಾಜವನ್ನು ಹೆಚ್ಚು ತಾಳಿಕೊಳ್ಳುವಂತೆ ಮಾಡಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಸಂಕಷ್ಟದ ಸಂದರ್ಭಗಳು ಆಗಾಗ್ಗೆ ಹೇಗೆ ಜನರ, ಪ್ರಕ್ರಿಯೆ ಮತ್ತು ಸಂಸ್ಥೆಗಳಲ್ಲಿನ ಅಂತರ್ಗತ ಶಕ್ತಿಯನ್ನು ಅರಿಯಲು ಕಾರಣವಾಗುತ್ತದೆ ಎಂಬುದನ್ನು ಒತ್ತಿ ಹೇಳಿದರು. ಈ ಸ್ಫೂರ್ತಿಯಿಂದ ಪ್ರೇರಣೆ ಪಡೆಯುವಂತೆ ಅವರು ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳಿಗೆ ತಿಳಿಸಿದರು.

2047 ಮತ್ತು ನಂತರದ ಅವಧಿಗಾಗಿ ದೇಶಕ್ಕೆ ಬದ್ರ ಬುನಾದಿ ಹಾಕಲು ಈ ದಶಕದ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ದೇಶ ಅತ್ಯುನ್ನತ ಔನ್ನತ್ಯ ಸಾಧಿಸಲು ನೆರವಾಗುವಂತೆ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿನ ನಾವೆಲ್ಲರೂ ನಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಒಗ್ಗೂಡಿ ಶ್ರಮಿಸಬೇಕು ಎಂದರು.

***



(Release ID: 1771666) Visitor Counter : 140