ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಗೋವಾದ 52ನೆಯ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಹದಿನೈದು ಚಲನಚಿತ್ರಗಳನ್ನು ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಗೆ ಆಯ್ಕೆಯಾಗಿವೆ
ಗೋದಾವರಿ, ಮಿ ವಸಂತ್‌ರಾವ್, ಸೇಮ್‌ಖೋರ್ ಇವು ಅಂತರರಾಷ್ಟ್ರೀಯ ವಿಭಾಗದಲ್ಲಿ ಭಾರತೀಯ ಸಿನಿಮಾವನ್ನು ಪ್ರತಿನಿಧಿಸಲಿವೆ
Posted On:
11 NOV 2021 3:32PM by PIB Bengaluru
52ನೆಯ ಅಂತರರಾಷ್ಟ್ರೀಯ ಸಿನಿಮಾ ಉತ್ಸವ ಭಾರತಕ್ಕೆ ಈ ಸಲ ಅಂತರರಾಷ್ಟ್ರೀಯ ಸಿನಿಮಾಗಳ ಸ್ಪರ್ಧೆಗೆ ಹದಿನೈದು ಸಿನಿಮಾಗಳು ಅಂತಿಮ ಸಾಲಿನಲ್ಲಿ ಪ್ರವೇಶ ಪಡೆದಿವೆ. ಉತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲ್ಪಡುವ ಈ ಚಿತ್ರಗಳನ್ನು ಅಂತರರಾಷ್ಟ್ರೀಯ ವಿಭಾಗಕ್ಕೆ ಪರಿಗಣಿಸಲಾಗುತ್ತದೆ. ಈ ವಿಭಾಗದಲ್ಲಿ ವಿಶ್ವದ ಎಲ್ಲ ಭಾಗದಿಂದಲೂ ಅತ್ಯುತ್ತಮ ಕಾಲ್ಪನಿಕ ಚಿತ್ರಗಳ ಸಾಲು ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಚಿತ್ರಗಳು ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದ್ದು, ಅತ್ಯುತ್ತಮ ಚಿತ್ರಗಳ ಗುಂಪಿಗೆ ಸೇರಿದ್ದು, ಸುವರ್ಣ ಮಯೂರ ಮತ್ತಿತರ ಪ್ರಶಸ್ತಿಗಳಿಗೆ ಸ್ಪರ್ಧೆ ಒಡ್ಡಲಿವೆ.
ಈ ವಿಭಾಗದಲ್ಲಿರುವ ಸಿನಮಾಗಳ ಪಟ್ಟಿ ಇಂತಿದೆ.
ಚಿತ್ರ, ನಿರ್ದೇಶಕ, ಭಾಷೆ/ ದೇಶ
1. ಎನಿ ಡೇ ನೌ; ನಿರ್ದೇಶನ: ಹ್ಯಾಮಿ ರಾಮೆಝನ್; ಫಿನ್‌ಲ್ಯಾಂಡ್
2 ಚಾರ್ಲೆಟ್; ನಿರ್ದೇಶನ; ಪರುಗ್ವೆ...
3. ಗೋದಾವರಿ; ನಿ: ನಿಖಿಲ್ ಮಹಾಜನ್; ಮರಾಠಿ, ಭಾರತ
4. ಇಂಟ್ರೆಗೇಡ್; ನಿ: ರಾದು ಮೌಂಟೀನ್; ರೋಮಾನಿಯಾ
5. ಲ್ಯಾಂಡ್ ಆಫ್ ಡ್ರೀಮ್ಸ್; ನಿ: ಶಿರೀನ್ ನಿಶಾತ್, ಶೋಜಾ ಅಜಾರಿ; ನ್ಯು ಮೆಕ್ಸಿಕೊ, ಅಮೆರಿಕಾ
6. ಲೀಡರ್; ನಿ: ಕಟಿಯಾ ಪ್ರಿವೆಜೆಂಕವ್; ಪೋಲೆಂಡ್
7. ಮಿ ವಸಂತರಾವ್; ನಿ: ನಿಪುಮ್ ಅವಿನಾಶ್ ಧರ್ಮಾಧಿಕಾರಿ; ಮರಾಠಿ, ಭಾರತ
8. ಮಾಸ್ಕೊ ಡಸ್ ನಾಟ್ ಹ್ಯಾಪ್ಪನ್: ನಿ: ದಿಮಿತ್ರಿ ಫೆದ್ರೊ; ರಷ್ಯಾ
9. ನೋ ಗ್ರೌಂಡ್ ಬೆನೆತ್ ದ ಫೀಟ್; ನಿ: ಮೊಹ್ಮದ್ ರಾಬ್ಬಿ ಮೃಧಾ; ಬಾಂಗ್ಲಾದೇಶ್
10. ಒನ್ಸ್ ವಿ ವೇರ್ ಗುಡ್ ಫಾರ್ ಯು; ನಿ: ಬ್ರಾಂಕೊ ಸೆಮಿತ್; ಕ್ರೋಷಿಯಾ, ಬೋಸ್ನಿಯಾ, ಹಾರ್ಜೆಗೊವಿನಾ
11. ರಿಂಗ್ ವಾಂಡರಿಂಗ್; ನಿ: ಮಸಾಕಾಝು ಕನೆಕೊ; ಜಪಾನ್
12. ಸೇವಿಂಗ್ ಒನ್ ಹು ವಾಸ್ ಡೆಡ್; ನಿ:ವಕ್ಲಾವ್ ಕದ್ರಂಕಾ; ಸಿಜೆಕ್ ರಿಪಬ್ಲಿಕ್
13. ಸೆಮ್ಖೋರ್; ನಿಳ ಆಮೀ ಬುರಾ; ಡಿಮಸಾ, ಭಾರತ
14. ದ ಡಾರ್ಮ್; ನಿ: ರೋಮನ್ ವಾಸಿನೋವ್; ರಷಿಯಾ
15. ದ ಫಸ್ಟ್ ಫಾಲನ್; ನಿ: ರೋಡ್ರಿಗೊ ಡಿ ಒಲಿವೆರಾ; ಬ್ರಾಝಿಲ್
ಈ ಚಿತ್ರಗಳು ವಿವಿಧ ಪ್ರಶಸ್ತಿಗಳಿಗಾಗಿ ಅಂತರರಾಷ್ಟ್ರೀಯ ವಿಭಾಗದಲ್ಲಿ ಸ್ಪರ್ಧಿಸಲಿವೆ
1. ಉತ್ತಮ ಚಲನಚಿತ್ರ ಸುವರ್ಣ ಮಯೂರ: ಈ ಪ್ರಶಸ್ತಿಯು ₹40,00,000/ ನಗದು ಬಹುಮಾನವನ್ನು ಒಳಗೊಂಡಿದೆ. ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಸಮನಾಗಿ ಹಂಚಲಾಗುತ್ತದೆ. ನಿರ್ದೇಶಕರಿಗೆ ಸುವರ್ಣ ಮಯೂರ ನೀಡಲಾಗತ್ತದೆ. ಜೊತೆಗೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ನಿರ್ಮಾಪಕರಿಗೆ ನಗದು ಪ್ರಶಸ್ತಿಯೊಂದಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
2. ಉತ್ತಮ ನಿರ್ದೇಶಕ: ರಜತ ಮಯೂರ, ಪ್ರಮಾಣ ಪತ್ರ ಹಾಗೂ ₹15,00,000 ನಗದು ಬಹುಮಾನ
ಉತ್ತಮ ನಟ: ರಜತಮಯೂರ ಪ್ರಮಾಣಪತ್ರ ಹಾಗೂ ₹ 10,00,000 ನಗದು ಬಹುಮಾನ.
ಉತ್ತಮ ನಟಿ: ರಜತಮಯೂರ ಪ್ರಮಾಣಪತ್ರ ಹಾಗೂ ₹ 10,00,000 ನಗದು ಬಹುಮಾನ.
ತೀರ್ಪುಗಾರರ ಆಯ್ಕೆ ವಿಶೇಷ ಬಹುಮಾನ: ರಜತಮಯೂರ ಪ್ರಮಾಣಪತ್ರ ಹಾಗೂ ₹ 15,00,000 ನಗದು ಬಹುಮಾನ. (ಒಂದು ಸಿನಿಮಾದ ಯಾವುದೇ ಅಂಶಗಳು ತೀರ್ಪುಗಾರರಿಗೆ ಇಷ್ಟವಾದಲ್ಲಿ ಅದು ಮೆಚ್ಚುಗೆಯ ಬಹುಮಾನಕ್ಕೆ ಭಾಜನವಾಗುತ್ತದೆ. ಸಿನಿಮಾದ ಯಾವುದೇ ಕ್ಷೇತ್ರವಾಗಿರಲಿ, ನಟ, ನಟಿ, ಸ್ಕ್ರೀನ್‌ಪ್ಲೇ ಹೀಗೆ ಯಾವುದೇ ಅಂಶವಾದರೂ ಸರಿ) ವೈಯಕ್ತಿಕ ಸಾಧನೆಗೆ ಮೆಚ್ಚುಗೆ ವ್ಯಕ್ತವಾದರೆ ವ್ಯಕ್ತಿಗೆ ಪ್ರಶಸ್ತಿ ನೀಡಲಾಗುವುದು. ಸಿನಿಮಾ ಇಷ್ಟವಾದಲ್ಲಿ ಸಿನಿಮಾದ ನಿರ್ದೇಶಕರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
***
(Release ID: 1770990)
Visitor Counter : 254