ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರಿಂದ ವಿವಿಧ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ

ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗ್ ಮತ್ತು ಶ್ರೀ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ಪ್ರಮುಖ ವಿಭಾಗಗಳ ನಾಲ್ಕು ಪಥಗಳ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

ಪಂಢರಪುರಕ್ಕೆ ಸಂಪರ್ಕವನ್ನು ಹೆಚ್ಚಿಸುವ ಬಹು ರಸ್ತೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನ ಮಂತ್ರಿ

"ಈ ಯಾತ್ರೆಯು ಪ್ರಪಂಚದ ಅತ್ಯಂತ ಹಳೆಯ ಸಾಮೂಹಿಕ ಯಾತ್ರೆಗಳಲ್ಲಿ ಒಂದಾಗಿದೆ ಮತ್ತು ಇದು ಜನರ ಆಂದೋಲನದಂತಾಗಿದೆ, ಇದು ಭಾರತದ ಶಾಶ್ವತ ಜ್ಞಾನದ ಸಂಕೇತವಾಗಿದೆ. ಅದು ನಮ್ಮ ನಂಬಿಕೆಯನ್ನು ಬಂಧಿಸುವುದಿಲ್ಲ, ಬದಲಿಗೆ ವಿಮೋಚನೆ ನೀಡುತ್ತದೆ"

“ಭಗವಾನ್ ವಿಠ್ಠಲ ಮಂದಿರವು ಎಲ್ಲರಿಗೂ ಸಮಾನವಾಗಿ ತೆರೆದಿರುತ್ತದೆ. ಸಬ್ಕಾ ಸಾಥ್-ಸಬ್ಕಾ ವಿಕಾಸ್-ಸಬ್ಕಾ ವಿಶ್ವಾಸ್ ಹಿಂದೆ ಇದೇ ಭಾವನೆ ಇದೆ.

ಕಾಲಕಾಲಕ್ಕೆ, ವಿವಿಧ ಪ್ರದೇಶಗಳಲ್ಲಿ, ಅಂತಹ ಮಹಾನ್ ವ್ಯಕ್ತಿಗಳು ಉದಯಿಸಿದ್ದಾರೆ ಮತ್ತು ದೇಶಕ್ಕೆ ಮಾರ್ಗದರ್ಶನ ಮಾಡಿದ್ದಾರೆ.
ಪಂಢರಿ ಕಿ ವಾರಿ' ಅವಕಾಶದ ಸಮಾನತೆಯನ್ನು ಸಂಕೇತಿಸುತ್ತದೆ. ವರ್ಕರಿ ಚಳವಳಿಯು ತಾರತಮ್ಯವನ್ನು ಅಶುಭವೆಂದು ಪರಿಗಣಿಸುತ್ತದೆ. ಇದು ಅದರ ಶ್ರೇಷ್ಠ ಧ್ಯೇಯವಾಗಿದೆ”

ಭಕ್ತರಿಂದ ಮೂರು ವಾಗ್ದಾನಗಳನ್ನು ಪಡೆದ ಪ್ರಧಾನಿ - ಗಿಡ ನೆಡುವುದು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪಂಢರಪುರವನ್ನು ಸ್ವಚ್ಛ ಯಾತ್ರಾ ಸ್ಥಳವನ್ನಾಗಿ ಮಾಡುವುದು


"'ಧರ್ತಿ ಪುತ್ರರು' ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ. ನಿಜವಾದ ‘ಅನ್ನದಾತ’ ಸಮಾಜವನ್ನು ಒಗ್ಗೂಡಿಸಿ ಸಮಾಜಕ್ಕಾಗಿ ಬದುಕುತ್ತಾನೆ. ರೈತ ಸಮಾಜದ ಪ್ರಗತಿಗೆ ಕಾರಣ ಮತ್ತು ಅದರ ಪ್ರತಿಬಿಂಬ "

Posted On: 08 NOV 2021 4:43PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ರಾಜ್ಯಪಾಲರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ಇಂದು ಇಲ್ಲಿ ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗ ಮತ್ತು ಶ್ರೀ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ಶಿಲಾನ್ಯಾಸವನ್ನು ಮಾಡಲಾಗಿದೆ. ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗದ ನಿರ್ಮಾಣವನ್ನು ಐದು ಹಂತಗಳಲ್ಲಿ ಮತ್ತು ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ನಿರ್ಮಾಣವನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಈ ಯೋಜನೆಗಳು ಈ ಪ್ರದೇಶದೊಂದಿಗೆ ಉತ್ತಮ ಸಂಪರ್ಕಕ್ಕೆ ಕಾರಣವಾಗುತ್ತವೆ ಎಂದ ಪ್ರಧಾನಿಯವರು ಯೋಜನೆಗಳಿಗೆ ಭಕ್ತರು, ಸಂತರು ಮತ್ತು ಭಗವಾನ್ ವಿಠ್ಠಲರ ಆಶೀರ್ವಾದ ಬೇಡಿದರು. ಭಗವಾನ್ ವಿಠ್ಠಲರ ಮೇಲಿನ ನಂಬಿಕೆಯು ಇತಿಹಾಸದುದ್ದಕ್ಕೂ ಅಚಲವಾಗಿ ಉಳಿದಿದೆ ಎಂದು ಅವರು ಹೇಳಿದರು. "ಇಂದಿಗೂ, ಈ ಯಾತ್ರೆಯು ಪ್ರಪಂಚದ ಅತ್ಯಂತ ಹಳೆಯ ಸಾಮೂಹಿಕ ಯಾತ್ರೆಗಳಲ್ಲಿ ಒಂದಾಗಿದೆ ಮತ್ತು ಇದು ಜನರ ಚಳುವಳಿ ನಾವು ಒಂದೇ ಗುರಿಯನ್ನು ಹೊಂದಿದ್ದೇವೆ ಎಂಬುದನ್ನು ಕಲಿಸುತ್ತದೆ. ಕೊನೆಯಲ್ಲಿ ಎಲ್ಲಾ ಪಂಥಗಳು 'ಭಗವತ್ ಪಂಥ್’ ವೇ ಆಗಿದೆ. ಇದು ಭಾರತದ ಶಾಶ್ವತ ಜ್ಞಾನದ ಸಂಕೇತವಾಗಿದೆ, ಅದು ನಮ್ಮ ನಂಬಿಕೆಯನ್ನು ಬಂಧಿಸುವುದಿಲ್ಲ, ಬದಲಿಗೆ ವಿಮೋಚನೆ ನೀಡುತ್ತದೆ" ಎಂದು ಪ್ರಧಾನಿ ಹೇಳಿದರು.

ಭಗವಾನ್ ವಿಠ್ಠಲನ ಮಂದಿರ ಎಲ್ಲರಿಗೂ ಸಮಾನವಾಗಿ ತೆರೆದಿರುತ್ತದೆ. ನಮ್ಮ ಸಬ್ಕಾ ಸಾಥ್-ಸಬ್ಕಾ ವಿಕಾಸ್-ಸಬ್ಕಾ ವಿಶ್ವಾಸ್ ಹಿಂದೆ ಅದೇ ಭಾವನೆ ಇದೆ. ಈ ಚೈತನ್ಯವು ದೇಶದ ಅಭಿವೃದ್ಧಿಗೆ ನಮ್ಮನ್ನು ಪ್ರೇರೇಪಿಸುತ್ತದೆ, ಎಲ್ಲರನ್ನೂ ಜೊತೆಗೆ ಕರೆದೊಯ್ಯುತ್ತದೆ, ಎಲ್ಲರ ಅಭಿವೃದ್ಧಿಗೆ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಭಾರತದ ಆಧ್ಯಾತ್ಮಿಕ ಶ್ರೀಮಂತಿಕೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಪಂಢರಪುರಕ್ಕೆ ಸಲ್ಲಿಸುವ ಸೇವೆಯು ತಮಗೆ ಶ್ರೀ ನಾರಾಯಣ ಹರಿ ಸೇವೆಯಾಗಿದೆ ಎಂದು ಹೇಳಿದರು. ಭಕ್ತರಿಗಾಗಿ ಇಂದಿಗೂ ಭಗವಂತ ನೆಲೆಸಿರುವ ಭೂಮಿ ಇದಾಗಿದೆ. ಜಗತ್ತು ಸೃಷ್ಟಿಯಾಗದಿದ್ದ ಕಾಲದಿಂದಲೂ ಪಂಢರಪುರವಿದೆ ಎಂದು ಸಂತ ನಾಮದೇವ್ ಜಿ ಮಹಾರಾಜರು ಹೇಳಿದ ನಾಡು ಇದಾಗಿದೆ ಎಂದರು.

ಕಾಲಕಾಲಕ್ಕೆ, ವಿವಿಧ ಪ್ರದೇಶಗಳಲ್ಲಿ, ಅಂತಹ ಮಹಾನ್ ವ್ಯಕ್ತಿಗಳು ಉದಯಿಸುತ್ತಲೇ ಇರುತ್ತಾರೆ ಮತ್ತು ಅವರು ದೇಶಕ್ಕೆ ಮಾರ್ಗದರ್ಶನ ಮಾಡುತ್ತಿರುವುದು ಭಾರತದ ವಿಶೇಷತೆಯಾಗಿದೆ ಎಂದು ಪ್ರಧಾನಿ ಹೇಳಿದರು. ದಕ್ಷಿಣದಲ್ಲಿ ಮಧ್ವಾಚಾರ್ಯರು, ನಿಂಬಾರ್ಕಾಚಾರ್ಯರು, ವಲ್ಲಭಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಪಶ್ಚಿಮದಲ್ಲಿ ನರಸಿ ಮೆಹ್ತಾ, ಮೀರಾಬಾಯಿ, ಧೀರೋ ಭಗತ್, ಭೋಜ ಭಗತ್, ಪ್ರೀತಮ್ ಜನಿಸಿದರು. ಉತ್ತರದಲ್ಲಿ ರಮಾನಂದ, ಕಬೀರದಾಸ್, ಗೋಸ್ವಾಮಿ ತುಳಸಿದಾಸ್, ಸೂರದಾಸ್, ಗುರುನಾನಕ್ ದೇವ್, ಸಂತ ರೈದಾಸ್ ಇದ್ದರು. ಪೂರ್ವದಲ್ಲಿ, ಚೈತನ್ಯ ಮಹಾಪ್ರಭು ಮತ್ತು ಶಂಕರ್ ದೇವ್ ಅವರಂತಹ ಸಂತರ ಚಿಂತನೆಗಳು ದೇಶವನ್ನು ಶ್ರೀಮಂತಗೊಳಿಸಿದವು ಎಂದು ಅವರು ಹೇಳಿದರು.

ವರ್ಕರಿ ಆಂದೋಲನದ ಸಾಮಾಜಿಕ ಮಹತ್ವದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಪುರುಷರಷ್ಟೇ ಉತ್ಸಾಹದಿಂದ ಮಹಿಳೆಯರು ಯಾತ್ರೆಯಲ್ಲಿ ಭಾಗವಹಿಸುವುದು ಈ ಸಂಪ್ರದಾಯದ ಪ್ರಮುಖ ಲಕ್ಷಣವಾಗಿದೆ ಎಂದರು. ಇದು ದೇಶದ ಮಹಿಳಾ ಶಕ್ತಿಯ ಪ್ರತಿಬಿಂಬವಾಗಿದೆ. 'ಪಂಢರಿ ಕಿ ವಾರಿ' ಅವಕಾಶದ ಸಮಾನತೆಯನ್ನು ಸಂಕೇತಿಸುತ್ತದೆ. ವರ್ಕರಿ ಚಳವಳಿಯು ತಾರತಮ್ಯವನ್ನು ಅಶುಭವೆಂದು ಪರಿಗಣಿಸುತ್ತದೆ ಮತ್ತು ಇದರ ದೊಡ್ಡ ಧ್ಯೇಯವಾಗಿದೆ ಎಂದು ಪ್ರಧಾನಿ ಹೇಳಿದರು.

ವರ್ಕರಿ ಸಹೋದರರು ಮತ್ತು ಸಹೋದರಿಯರಿಂದ ಮೂರು ವಾಗ್ದಾನಗಳನ್ನು ಪ್ರಧಾನಿ ಬಯಸಿದರು. ಅವರಿಗೆ ತಮ್ಮ ಮೇಲಿರುವ ಅವಿನಾಭಾವ ಪ್ರೀತಿಯ ಬಗ್ಗೆ ಮಾತನಾಡಿದರು. ಭಕ್ತರು ಪಾಲ್ಖಿ ಮಾರ್ಗಗಳಲ್ಲಿ ಗಿಡಗಳನ್ನು ನೆಡುವಂತೆ ಮನವಿ ಮಾಡಿದರು. ಅಲ್ಲದೆ ಈ ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಹಾಗೂ ಈ ಮಾರ್ಗಗಳಲ್ಲಿ ಹೆಚ್ಚಿನ ಮಡಕೆಗಳನ್ನು ಒದಗಿಸುವಂತೆ ಮನವಿ ಮಾಡಿದರು. ಭವಿಷ್ಯದಲ್ಲಿ ಭಾರತದ ಸ್ವಚ್ಛ ಯಾತ್ರಾ ಸ್ಥಳಗಳಲ್ಲಿ ಪಂಢರಪುರವನ್ನು ನೋಡಲು ತಾವು ಬಯಸುವುದಾಗಿ ಹೇಳಿದರು. ಸಾರ್ವಜನಿಕರ ಸಹಭಾಗಿತ್ವದ ಮೂಲಕ ಈ ಕಾರ್ಯ ನಡೆಯಲಿದೆ ಎಂದ ಅವರು, ಸ್ಥಳೀಯರು ತಮ್ಮ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನದ ನೇತೃತ್ವ ವಹಿಸಿದಾಗ ಮಾತ್ರ ಈ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದರು.

ಹೆಚ್ಚಿನ ವರ್ಕರಿಗಳು ರೈತ ಸಮುದಾಯದಿಂದ ಬಂದವರು ಎಂದು ಹೇಳಿದ ಪ್ರಧಾನಿ, ಈ ಮಣ್ಣಿನ ಮಕ್ಕಳು-‘ಧರ್ತಿ ಪುತ್ರರು’ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ ಎಂದು ಹೇಳಿದರು. "ನಿಜವಾದ" ಅನ್ನದಾತ ಸಮಾಜವನ್ನು ಒಂದುಗೂಡಿಸುತ್ತಾನೆ ಮತ್ತು ಸಮಾಜವನ್ನು ಜೀವಂತವಾಗಿಸುತ್ತಾನೆ ಮತ್ತು ಸಮಾಜಕ್ಕಾಗಿ ಬದುಕುತ್ತಾನೆ. ರೈತರು ಸಮಾಜದ ಪ್ರಗತಿಗೆ ಕಾರಣ ಮತ್ತು ಅದರ ಪ್ರತಿಬಿಂಬ” ಎಂದು ಪ್ರಧಾನಿ ಹೇಳಿದರು.

ದಿವೇಘಾಟ್‌ನಿಂದ ಮೊಹೋಲ್‌ವರೆಗಿನ ಸಂತ ಜ್ಞಾನೇಶ್ವರ್ ಮಹಾರಾಜ್ ಪಾಲ್ಖಿ ಮಾರ್ಗದ ಸುಮಾರು 221 ಕಿ.ಮೀ ಮತ್ತು ಪಟಾಸ್‌ನಿಂದ ತೊಂಡಲೆ – ಬೊಂಡಲೆವರೆಗೆ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ಸುಮಾರು 130 ಕಿ.ಮೀ ನ ಎರಡೂ ಬದಿಗಳಲ್ಲಿ 'ಪಾಲ್ಖಿ' ಗಾಗಿ ಮೀಸಲಾದ ನಡಿಗೆ ಪಥ (ವಾಕ್‌ವೇ) ಗಳೊಂದಿಗೆ ನಾಲ್ಕು ಪಥಗಳ ರಸ್ತೆಯನ್ನು ಕ್ರಮವಾಗಿ ರೂ. 6690 ಕೋಟಿ ಮತ್ತು ಸುಮಾರು 4400 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು.

ಈ ಸಂದರ್ಭದಲ್ಲಿ, ಪಂಢರಪುರಕ್ಕೆ ಸಂಪರ್ಕವನ್ನು ಹೆಚ್ಚಿಸಲು ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ 1180 ಕೋಟಿ ರೂ.ಗೂ ಹೆಚ್ಚು ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ 223 ಕಿ.ಮೀ.ಗೂ ಹೆಚ್ಚು ಪೂರ್ಣಗೊಂಡ ಮತ್ತು ನವೀಕರಿಸಿದ ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳಲ್ಲಿ ಮ್ಹಾಸ್ವಾಡ್- ಪಿಲಿವ್ - ಪಂಢರಪುರ (ಎನ್ ಹೆಚ್ 548E), ಕುರ್ದುವಾಡಿ - ಪಂಢರಪುರ (ಎನ್ ಹೆಚ್ 965C), ಪಂಢರಪುರ - ಸಂಗೋಲಾ (ಎನ್ ಹೆಚ್ 965C), ಎನ್ ಹೆಚ್ 561A ರ ತೆಂಭೂರ್ನಿ-ಪಂಢರಪುರ ವಿಭಾಗ ಮತ್ತು ಎನ್ ಹೆಚ್ 56 ರ ಪಂಢರಪುರ - ಮಂಗಳವೇಢಾ - ಉಮ್ಮಡಿ ವಿಭಾಗಗಳು ಸೇರಿವೆ.

***(Release ID: 1770108) Visitor Counter : 134