ಕಲ್ಲಿದ್ದಲು ಸಚಿವಾಲಯ
azadi ka amrit mahotsav

ತ್ಯಾಜ್ಯ ಹೊರಸೂಸುವಿಕೆ ಮತ್ತಷ್ಟು ತಗ್ಗಿಸಲು ಕೋಲ್ ಇಂಡಿಯಾದ ಪ್ರಯತ್ನ – ಡಂಪರ್ ಗಳಲ್ಲಿ ಡೀಸೆಲ್ ಬದಲಿಗೆ ಎಲ್.ಎನ್.ಜಿ. ಬಳಸಲು ಪ್ರಾಯೋಗಿಕ ಯೋಜನೆ


ಈ ಕ್ರಮದಿಂದ ಡೀಸೆಲ್ ಬಳಕೆಯಲ್ಲಿ ಶೇ.40ರಷ್ಟು ಇಳಿಕೆ ಸಾಧ್ಯತೆ;ಇಂಧನ ಮೇಲೆ ವಾರ್ಷಿಕ 500 ಕೋಟಿ ರೂ. ಉಳಿತಾಯ ನಿರೀಕ್ಷೆ

Posted On: 02 NOV 2021 1:27PM by PIB Bengaluru

ಇಂಗಾಲದ ಹೆಜ್ಜೆಗುರುತುಗಳನ್ನು ಮತ್ತಷ್ಟು ತಗ್ಗಿಸುವ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್), ತನ್ನ ಡಂಪರ್ ಗಳಲ್ಲಿ -ಗಣಿಗಳಲ್ಲಿ ಕಲ್ಲಿದ್ದಲು ಸಾಗಣೆಗಾಗಿ ತೊಡಗಿರುವ ದೊಡ್ಡ ಟ್ರಕ್‌ ಗಳಲ್ಲಿ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌.ಎನ್‌.ಜಿ) ಕಿಟ್‌ ಗಳನ್ನು ಮರುಹೊಂದಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವಿಶ್ವದ ಅತಿದೊಡ್ಡ ಕಲ್ಲಿದ್ದಲು ಗಣಿ ಸಂಸ್ಥೆಯಾದ ಸಿಐಎಲ್ ವಾರ್ಷಿಕವಾಗಿ ರೂ.3500 ಕೋಟಿ ವೆಚ್ಚದ 4 ಲಕ್ಷ ಕಿಲೋ ಲೀಟರ್‌ ಗಿಂತಲೂ ಹೆಚ್ಚು ಡೀಸೆಲ್ ಅನ್ನು ಬಳಸುತ್ತದೆ.

ಕಂಪನಿಯು, ಗೇಲ್ (ಇಂಡಿಯಾ) ಲಿಮಿಟೆಡ್ ಮತ್ತು ಬಿಇಎಂಎಲ್ ಲಿಮಿಟೆಡ್ ಸಹಯೋಗದಲ್ಲಿ ತನ್ನ ಅಂಗಸಂಸ್ಥೆಯಾದ ಮಹಾನದಿ ಕೋಲ್‌ ಫೀಲ್ಡ್ಸ್ ಲಿಮಿಟೆಡ್ (ಎಂ.ಸಿ.ಎಲ್.) ನಲ್ಲಿ ಕಾರ್ಯನಿರ್ವಹಿಸುತ್ತಿರುವ  ಎರಡು 100 ಟನ್ ಡಂಪರ್‌ ಗಳಲ್ಲಿ ಎಲ್.ಎನ್.ಜಿ. ಕಿಟ್‌ ಗಳನ್ನು ಮರುಹೊಂದಿಸಲು ಗೇಲ್ ಮತ್ತು ಬಿಇಎಂಎಲ್ ನೊಂದಿಗಿನ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಎಲ್.ಎನ್.ಜಿ. ಕಿಟ್ ಯಶಸ್ವಿಯಾಗಿ ಮರುಹೊಂದಿಸಿ, ಪರೀಕ್ಷಿಸಿದ ತರುವಾಯ ಡಂಪರ್‌ ಗಳು ದ್ವಿಇಂಧನ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ಅವುಗಳ ಕಾರ್ಯಾಚರಣೆಗಳು ಎಲ್.ಎನ್.ಜಿ. ಬಳಕೆಯೊಂದಿಗೆ ಸ್ವಚ್ಛವಾಗಿರುತ್ತದೆ ಮತ್ತು ಗಮನಾರ್ಹವಾಗಿ ಅಗ್ಗವಾಗಿರುತ್ತವೆ.

ಸಿಐಎಲ್ ಹೊರಾವರಣದ ಕಲ್ಲಿದ್ದಲು ಗಣಿಗಳಲ್ಲಿ ಕಾರ್ಯನಿರ್ವಹಿಸುವ 2500ಕ್ಕೂ ಹೆಚ್ಚು ಡಂಪರ್‌ ಗಳನ್ನು ಹೊಂದಿದೆ ಮತ್ತು ಸಿಐಎಲ್ ಬಳಸುವ ಒಟ್ಟು ಡೀಸೆಲ್‌ ಸುಮಾರು ಶೇ.65 ರಿಂದ 75 ರಷ್ಟನ್ನು ಬಳಸುತ್ತದೆ. ಎಲ್‌.ಎನ್‌.ಜಿ. ಡೀಸೆಲ್ ಬಳಕೆಯನ್ನು ಶೇಕಡಾ 30 ರಿಂದ 40 ರಷ್ಟು ಬದಲಿಸುವ ಸಾಧ್ಯತೆಯಿದೆ ಮತ್ತು ಇಂಧನ ವೆಚ್ಚವನ್ನು ಶೇಕಡಾ 15 ರಷ್ಟು ಕಡಿಮೆ ಮಾಡುತ್ತದೆ ಮತ್ತು ಡಂಪರ್‌ ಗಳು ಸೇರಿದಂತೆ ಎಲ್ಲಾ ಭಾರವಾದ ಮಣ್ಣು ಸಾಗಿಸುವ ಯಂತ್ರಗಳನ್ನು ಎಲ್‌.ಎನ್‌.ಜಿ. ಕಿಟ್‌ ಗಳೊಂದಿಗೆ ಮರುಹೊಂದಿಸಿದರೆ ವಾರ್ಷಿಕ ರೂ. 500 ಕೋಟಿ ಉಳಿತಾಯಕ್ಕೆ ದಾರಿ ಮಾಡಿಕೊಡುತ್ತದೆ.

ಪ್ರಾಯೋಗಿಕ ಯೋಜನೆ ಮತ್ತು ಡಂಪರ್‌ ಗಳ ಕಾರ್ಯಕ್ಷಮತೆಯ ತಾಂತ್ರಿಕ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಯೋಜನೆಯ ವೆಚ್ಚದ ಲೆಕ್ಕಾಚಾರವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಪ್ರಾಯೋಗಿಕ ಯೋಜನೆಯು ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಫಲಿತಾಂಶದ ಆಧಾರದ ಮೇಲೆ, ಸಿಐಎಲ್ ತನ್ನ ಎಚ್..ಎಂ.ಎಂ.ಗಳಲ್ಲಿ, ವಿಶೇಷವಾಗಿ ಡಂಪರ್‌ ಗಳಲ್ಲಿ ಎಲ್.ಎನ್.ಜಿ. ಬೃಹತ್ ಬಳಕೆಯ ಬಗ್ಗೆ ನಿರ್ಧರಿಸುತ್ತದೆ. ಯೋಜನೆಯು ಯಶಸ್ವಿಯಾದರೆ ಕೇವಲ ಎಲ್.ಎನ್.ಜಿ. ಎಂಜಿನ್‌ ಗಳೊಂದಿಗೆ ಎಚ್..ಎಂ.ಎಂ.ಗಳನ್ನು ಖರೀದಿಸಲು ಸಿ..ಎಲ್. ಯೋಜಿಸುತ್ತಿದೆ ಮತ್ತು ಇದು ತನ್ನ ಇಂಗಾಲದ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿಮೆ ಮಾಡಲು ಮತ್ತು ಸುಸ್ಥಿರ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಜಾಗತಿಕವಾಗಿ ಅಮೆರಿಕ, ಕೆನಡಾ, ಮೆಕ್ಸಿಕೋ, ರಷ್ಯಾ ಮತ್ತು ಘಾನಾದಲ್ಲಿ ಎನ್.ಎನ್.ಜಿ. ಹೈಬ್ರೀಡ್ ಕಾರ್ಯಾಚರಣೆಯನ್ನು ಹೆಚ್ಚಿನ ಸಾಮರ್ಥ್ಯದ ಗಣಿಗಳ ಡಂಪ್ ಟ್ರಕ್ ಗಳಲ್ಲಿ ಮಾಡಲಾಗುತ್ತಿದೆ.

***


(Release ID: 1768950) Visitor Counter : 235