ರೈಲ್ವೇ ಸಚಿವಾಲಯ
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ರೈಲ್ವೆ ಸಚಿವಾಲಯದ ಆವರಣದಾದ್ಯಂತ ಸಂಯೋಜಿತ ಏಕ ಗವಾಕ್ಷಿ ವ್ಯವಸ್ಥೆಯಡಿ ಸಮಗ್ರ ಚಿತ್ರೀಕರಣದ ಕಾರ್ಯವಿಧಾನ ರಚನೆ
ರೈಲ್ವೆಯಲ್ಲಿ ಚಿತ್ರ ನಿರ್ಮಾಣ ಮಾಡಲು ಅನುಮತಿಗಾಗಿ ಇದೀಗ ಎಫ್.ಎಫ್.ಒ ಪೋರ್ಟಲ್ www.ffo.gov.in ಗೆ ರೈಲ್ವೆ ಸಚಿವಾಲಯಕ್ಕೆ ಅರ್ಜಿ ಸಲ್ಲಿಕೆ
Posted On:
01 NOV 2021 1:38PM by PIB Bengaluru
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್.ಎಫ್.ಒ) ಹಾಗೂ ರೈಲ್ವೆ ಸಚಿವಾಲಯದಿಂದ ರೈಲ್ವೆ ವ್ಯವಸ್ಥೆಯಡಿ ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ಅನುಮತಿ ಪಡೆಯಲು ಸುಗಮ ಮತ್ತು ಸಮಗ್ರ ವ್ಯವಸ್ಥೆ ರೂಪಿಸಲಾಗಿದೆ. ಭಾರತದಲ್ಲಿ ಸದಾ ಕಾಲ ಸಿನೆಮಾ ಕೇಂದ್ರಿತ ಅನುಭವಕ್ಕೆ ರೈಲ್ವೆ ಸಜ್ಜಾಗಿದೆ. ಹಲವು ಚಲನಚಿತ್ರಗಳನ್ನು ಭಾರತೀಯ ರೈಲ್ವೆ ವ್ಯವಸ್ಥೆಯಡಿ ಸೆರೆಹಿಡಿಯಲಾಗಿದೆ.
ಭಾರತದಲ್ಲಿ ಚಿತ್ರೀಕರಣವನ್ನು ಸುಲಭಗೊಳಿಸಲು ಮತ್ತು ಪ್ರಪಂಚದಾದ್ಯಂತ ಚಲನಚಿತ್ರ ನಿರ್ಮಾಪಕರಿಗೆ ದೇಶವನ್ನು ಆದ್ಯತೆಯ ತಾಣವಾಗಿ ಪ್ರಚಾರ ಮಾಡುವ ದೃಷ್ಟಿಯಿಂದ ಎಫ್.ಎಫ್.ಒ ಸ್ಥಾಪಿಸಲಾಗಿದೆ. ಭಾರತದಾದ್ಯಂತ ಚಿತ್ರೀಕರಣಕ್ಕಾಗಿ ಏಕ ಗವಾಕ್ಷಿ ವ್ಯವಸ್ಥೆಯಡಿ ಚಿತ್ರೀಕರಣವನ್ನು ಸುಗಮಗೊಳಿಸುವ ಮತ್ತು ಭಾರತದಲ್ಲಿ ಚಿತ್ರೀಕರಣಕ್ಕಾಗಿ ಒಂದೇ ಕಡೆಯಲ್ಲಿ ಮಾಹಿತಿ ದೊರೆಯುವ ಭಂಡಾರ ವ್ಯವಸ್ಥೆ ಇದಾಗಿದೆ.
ಎಫ್.ಎಫ್.ಒ ಚಿತ್ರೀಕರಣವನ್ನು ಸುಲಭಗೊಳಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ ಮತ್ತು ಪ್ರಪಂಚದಾದ್ಯಂತ ಚಲನಚಿತ್ರ ನಿರ್ಮಾಪಕರಿಗೆ ಇದು ಆದ್ಯತೆಯ ತಾಣವಾಗಿದೆ. ಇದರ ವೆಬ್ ಪೋರ್ಟಲ್ ಭಾರತದಾದ್ಯಂತ ಚಿತ್ರೀಕರಣಕ್ಕಾಗಿ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ಸುಗಮಗೊಳಿಸುವ ಮತ್ತು ವಿಲೇವಾರಿ ಮಾಡುವ ಕಾರ್ಯವಿಧಾನವಾಗಿದೆ.
ರೈಲ್ವೆಯಲ್ಲಿ ಚಿತ್ರೀಕರಣ ಮಾಡಲು ಇದೀಗ ಅಂತರರಾಷ್ಟ್ರೀಯ ಮತ್ತು ಭಾರತೀಯ ಚಲನಚಿತ್ರ ನಿರ್ಮಾಪಕರು [ಮತ್ತು/ಅಥವಾ ಅವರ ಪ್ರತಿನಿಧಿಗಳು] ರೈಲ್ವೆಯ 17 ವಲಯಗಳ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಮತ್ತು ರೈಲ್ವೆ ಮಂಡಳಿ [ನವದೆಹಲಿ]ಗೆ ಚಿತ್ರೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈಗ ಎಫ್.ಎಫ್.ಒ ವೆಬ್ ಪೋರ್ಟಲ್ ಅನ್ನು (www.ffo.gov.in ) ಅನ್ನು ಏಕ ಗವಾಕ್ಷಿ ಸೌಲಭ್ಯವಾಗಿ ಪರಿಗಣಿಸಿ ಚಿತ್ರನಿರ್ಮಾಪಕರು ಒಂದಕ್ಕಿಂತ ಹೆಚ್ಚು ರೈಲ್ವೆ ವಲಯಗಳಲ್ಲಿ ಚಿತ್ರೀಕರಣಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಕೇಂದ್ರೀಕೃತ ವ್ಯವಸ್ಥೆಯಡಿ ಸಲ್ಲಿಸಬಹುದಾಗಿದೆ. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಅಧಿಕಾರಿ ತನ್ನ ವಲಯದಲ್ಲಿ ಆದೇಶ ಹೊರಡಿಸಬೇಕು ಮತ್ತು ಸಂಬಂಧಪಟ್ಟ ಅರ್ಜಿಯನ್ನು ಎಫ್.ಎಫ್.ಒ ಪೋರ್ಟಲ್ ಗೆ ಅನುಮೋದನೆಗಾಗಿ ಅರ್ಜಿಗಳನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ಚಿತ್ರೀಕರಣದ ಅನುಮತಿಯ ವಿನಂತಿಗಳನ್ನು ಪಾರದರ್ಶಕ ಮತ್ತು ಸಮಯೋಚಿತವಾಗಿ ವಿಲೇವಾರಿ ಮಾಡಿ ಯಾವುದೇ ಪ್ರಶ್ನೆಗಳನ್ನು ಬಗೆಹರಿಸಿ ಕಾರ್ಯಗತಗೊಳಿಸಲು ಸಹ ಅವಕಾಶ ಕಲ್ಪಿಸಲಾಗಿದೆ.
ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಕ್ಕಾಗಿ ಅನುಮತಿಗಳನ್ನು ಪಡೆಯಲು ನಿರ್ಮಾಪಕರು ಪ್ರವೇಶಿಸುವ ವಿಂಡೋಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಅರ್ಜಿಗಳಿಗೆ ಸಂಬಂಧಪಟ್ಟಂತೆ ಅರ್ಜಿದಾರರು ಯಾವುದೇ ಪ್ರಶ್ನೆಗಳನ್ನು ಕೇಳಿದರೆ ಅದನ್ನು ಪರಿಹರಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ. ಈ ಪಾರದರ್ಶಕ ಪರಿಸರ ವ್ಯವಸ್ಥೆ ಚಿತ್ರೀಕರಣದ ಅನುಮತಿಯ ಮನವಿಯನ್ನು ಸಮಯಬದ್ಧವಾಗಿ ಕಾರ್ಯಗತಗೊಳಿಸಬೇಕಾಗುತ್ತದೆ.
ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಸಿಇಒ ಶ್ರೀ ಸುನೀತ್ ಶರ್ಮಾ ಮಾತನಾಡಿ, “ ಭಾರತೀಯ ಸಿನೆಮಾದೊಂದಿಗೆ ಭಾರತೀಯ ರೈಲ್ವೆ ದೀರ್ಘ ಕಾಲೀನ ಸಹಭಾಗಿತ್ವ ಹೊಂದಿದೆ ಮತ್ತು ಸಿನೆಮಾಗಳು, ಹಾಡುಗಳು ಮತ್ತು ಸಾಕ್ಷ್ಯ ಚಿತ್ರಗಳನ್ನು ಚಿತ್ರೀಕರಿಸಲು ಯಾವಾಗಲೂ ರೈಲ್ವೆ ಬೆಂಬಲ ನೀಡುತ್ತಾ ಬಂದಿದೆ. ರೈಲ್ವೆಯನ್ನು ಸರಿಯಾದ ಮತ್ತು ಸುಂದರವಾಗಿ ಪ್ರದರ್ಶಿಸುವ ಮೂಲಕ ಭಾರತೀಯ ಚಲನಚಿತ್ರ ಸೂಕ್ತ ಪ್ರತಿಫಲ ನೀಡಿದೆ. ಈ ಹೊಸ ಪರಿಸರ ವ್ಯವಸ್ಥೆ ಚಲನಚಿತ್ರ ನಿರ್ಮಾಪಕರಿಗೆ ಬೌಗೋಳಿಕವಾಗಿ ಸೂಕ್ತ ಸೇವೆ ಒದಗಿಸುತ್ತಿದೆ. ವಿವಿಧ ರೈಲ್ವೆ ಪ್ರದೇಶಗಳಲ್ಲಿ ಚಿತ್ರೀಕರಣಕ್ಕಾಗಿ ಆನ್ ಲೈನ್ ಮೂಲಕ ಕೋರಿಕೆ ಸಲ್ಲಿಸಲು ಚಿತ್ರ ನಿರ್ಮಾಪಕರಿಗೆ ಸ್ವಾಗತವಿದೆ ಮತ್ತು ರೈಲ್ವೆಯಲ್ಲಿ ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ರೋಮಾಂಚಕ ಪಾತ್ರವಾಗಿ ಕಾಣಿಸಿಕೊಳ್ಳುವುದನ್ನು ಚಿತ್ರರಂಗ ಮುಂದುವರಿಸುತ್ತದೆ ಎಂದು ಬಾವಿಸುತ್ತೇವೆ” ಎಂದು ಹೇಳಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮಾತನಾಡಿ, “ರೈಲ್ವೆಯ ವಿವಿಧ ಪ್ರದೇಶಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಲು ವ್ಯವಸ್ಥೆಯನ್ನು ಸರಾಗೊಳಿಸುವ ಮೂಲಕ ಚಲನಚಿತ್ರ ನಿರ್ಮಾಪಕರಿಗೆ ಮೌಲ್ಯ ಸೃಷ್ಟಿ ಮಾಡುವುದು ಇದರ ಪರಿಕಲ್ಪನೆಯಾಗಿದೆ. ಚಿತ್ರೀಕರಣದ ನಿರೂಪಣೆಯನ್ನು ಹೆಚ್ಚಿಸುವ, ವಿಶಿಷ್ಟವಾದ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲು ಸಹಾಯ ಮಾಡಲಾಗುತ್ತದೆ. ವಿವಿಧ ಪಾಲುದಾರೊಂದಿಗೆ ಸಂಯೋಜನೆಗೆ ಅವಕಾಶ ಕಲ್ಪಿಸುವುದು ಈ ಪ್ರಯತ್ನದ ಭಾಗವಾಗಿದೆ. ರೈಲ್ವೆ ಭಾರತೀಯ ಸಿನೆಮಾದ ಭಾಗವಾಗಿದೆ ಮತ್ತು ಬಾರತದ ರೈಲ್ವೆಯ ವಿಸ್ತಾರ, ಸುಂದರ ರೈಲ್ವೆ ಸಂಪರ್ಕ ಜಾಲವನ್ನು ತಮ್ಮ ನಿರೂಪಣೆಯಲ್ಲಿ ಜೋಡಿಸಲು ಇದೀಗ ರಚಿಲಾಗಿರುವ ಹೊಸ ಪರಿಸರ ವ್ಯವಸ್ಥೆಯನ್ನು ಚಲನಚಿತ್ರ ನಿರ್ಮಾಪಕರು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದರು.
ಎಫ್.ಎಫ್.ಒನ www.ffo.gov.in ವೆಬ್ ಪೋರ್ಟಲ್ ಕಿರು ಚಿತ್ರ, ಟಿವಿ/ವೆಬ್ ವಾಹಿನಿಗಳ ಪ್ರದರ್ಶನಗಳು, ರೈಲ್ವೆಗೆ ಸಂಬಂಧಿಸಿದ ಸರಣಿಗಳ ಚಿತ್ರೀಕರಣ ಕುರಿತಾದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸಾಕ್ಷ್ಯ ಚಿತ್ರ/ ಸಂಗೀತ, ವಿಡಿಯೋಗಳು ಮತ್ತು ಎವಿ ಜಾಹೀರಾತುಗಳಿಗಾಗಿ ನಿರ್ಮಾಪಕರು ನೇರವಾಗಿ ರೈಲ್ವೆಗೆ ಅರ್ಜಿ ಸಲ್ಲಿಸಬಹುದಾಗಿದೆ.
***
(Release ID: 1768775)
Visitor Counter : 328