ಇಂಧನ ಸಚಿವಾಲಯ
ಇಂಧನ ಕಾರ್ಯದರ್ಶಿಯವರು ದೇಶದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಬಳಕೆಯ ಸ್ಥಿತಿಯನ್ನು ಪರಿಶೀಲಿಸಿದರು
ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಕೋ-ಫೈರಿಂಗ್ ಮೂಲಕ ವಿದ್ಯುತ್ ಉತ್ಪಾದನೆಗೆ ಬಯೋಮಾಸ್ ಬಳಕೆಯ ಕುರಿತು ಪರಿಷ್ಕೃತ ನೀತಿಯನ್ನು ಅಕ್ಟೋಬರ್ 8, 21 ರಂದು ಬಿಡುಗಡೆ ಮಾಡಲಾಗಿದೆ.
ಎನ್‍ಟಿಪಿಸಿ 9,30,000 ಟನ್‌ಗಳಷ್ಟು ಬಯೋಮಾಸ್ ಪೆಲೆಟ್‌ಗಳ ಖರೀದಿ ಆದೇಶವನ್ನು ನೀಡಿದೆ
ಹರಿಯಾಣ, ಪಂಜಾಬ್ ಮತ್ತು ಯುಪಿ ತಮ್ಮ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗಾಗಿ ಕೋ-ಫೈರಿಂಗ್‌ಗಾಗಿ 13,01,000 ಟನ್‌ಗಳಷ್ಟು ಬಯೋಮಾಸ್ ಪೆಲೆಟ್‌ಗಳನ್ನು ಸಂಗ್ರಹಿಸುತ್ತಿವೆ
ಹರಿಯಾಣ ಮತ್ತು ಪಂಜಾಬ್‌ನಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಕೋ-ಫೈರಿಂಗ್‌ನ ಮೌಲ್ಯ ಸರಪಳಿಯಲ್ಲಿ ಭಾಗವಹಿಸಲು ಮಧ್ಯಸ್ಥಗಾರರಿಗೆ ಅದರ ಪರಿಚಯ ಮತ್ತು ತರಬೇತಿ ನೀಡಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Posted On:
31 OCT 2021 9:05AM by PIB Bengaluru
ಕೇಂದ್ರ ಇಂಧನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್ ಅವರು ಅಕ್ಟೋಬರ್ 28 ರಂದು ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಕೋ-ಫೈರಿಂಗ್ ಸ್ಥಿತಿಯ ಕುರಿತು ಪರಿಶೀಲನಾ ಸಭೆಯನ್ನು ನಡೆಸಿದರು. ಸಭೆಯಲ್ಲಿ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ, ಸಿಎಂಡಿ, ಎನ್‍ಟಿಪಿಸಿ, ಪಂಜಾಬ್, ಹರಿಯಾಣ, ಯುಪಿ, ರಾಷ್ಟ್ರ ಬಯೋ ಮಿಷನ್ ನಿರ್ದೇಶಕರು, ಪ್ರತಿನಿಧಿಗಳು ಮತ್ತು ವಿದ್ಯುತ್ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇಂಧನ ಸಚಿವಾಲಯವು ಕೈಗೊಂಡ ವಿವಿಧ ಕ್ರಮಗಳ ಪರಿಣಾಮವಾಗಿ, ಎನ್‍ಟಿಪಿಸಿ ಮತ್ತು ವಿವಿಧ ರಾಜ್ಯಗಳು ಈ ಕೆಳಗಿನಂತೆ ಬಯೋಮಾಸ್ ಸಂಗ್ರಹಣೆಯ ಉಪಕ್ರಮಗಳನ್ನು ಕೈಗೊಂಡಿವೆ:
(i) ಎನ್‍ಟಿಪಿಸಿ 8,65,000 ಟನ್ ಬಯೋಮಾಸ್ ಪೆಲೆಟ್‌ಗಳಿಗೆ ಖರೀದಿ ಆದೇಶವನ್ನು ಮಾಡಿದೆ, ಈಗಾಗಲೇ ಇದರ ಪೂರೈಕೆ ಪ್ರಗತಿಯಲ್ಲಿದೆ. ಇದಲ್ಲದೆ, ಎನ್‍ಟಿಪಿಸಿ ಅಕ್ಟೋಬರ್ '21 ರಲ್ಲಿ 65,000 ಟನ್‌ಗಳ ಹೆಚ್ಚುವರಿ ಆದೇಶ ನೀಡಿದೆ. 25,00,000 ಟನ್‍ಗಳ ಸಂಗ್ರಹಣೆಯ ಮತ್ತೊಂದು ಭಾಗವು ಪ್ರಗತಿಯಲ್ಲಿದೆ, ಇದಕ್ಕಾಗಿ ಮಾರಾಟಗಾರರು 1ನೇ ನವೆಂಬರ್ 21 ರೊಳಗೆ ಪ್ರಸ್ತಾಪಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ.
(ii) ಹರಿಯಾಣ, ಪಂಜಾಬ್ ಮತ್ತು ಯುಪಿ ಒಟ್ಟಾಗಿ ಸುಮಾರು 13,01,000 ಟನ್ ಬಯೋಮಾಸ್ ಪೆಲೆಟ್‌ಗಳನ್ನು ತಮ್ಮ ವಿದ್ಯುತ್ ಸ್ಥಾವರಗಳಲ್ಲಿ ಕೋ-ಫೈರಿಂಗ್‌ಗಾಗಿ ಸಂಗ್ರಹಿಸುತ್ತಿವೆ. ನವೆಂಬರ್ 2021 ರಲ್ಲಿ ಆದೇಶಗಳು ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಈ ಹಿಂದೆ, ವಿದ್ಯುತ್ ಸಚಿವಾಲಯವು 17 ನವೆಂಬರ್, 2017 ರಂದು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಕೋ-ಫೈರಿಂಗ್ ಮೂಲಕ ವಿದ್ಯುತ್ ಉತ್ಪಾದನೆಗೆ ಬಯೋಮಾಸ್ ಬಳಕೆಯ ನೀತಿಯನ್ನು ಬಿಡುಗಡೆ ಮಾಡಿತು. ಈ ಹಿಂದಿನ ನೀತಿಯಲ್ಲಿ, ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು, ಬಾಲ್ ಮತ್ತು ಟ್ಯೂಬ್ ಮಿಲ್ ಹೊಂದಿರುವ ವಿದ್ಯುತ್ ಉತ್ಪಾದನಾ ಉಪಯುಕ್ತತೆಗಳನ್ನು ಹೊರತುಪಡಿಸಿ, ತಾಂತ್ರಿಕ ಕಾರ್ಯಸಾಧ್ಯತೆಯನ್ನು ಅಂದರೆ. ಸುರಕ್ಷತೆ ಅಂಶ ಇತ್ಯಾದಿಗಳನ್ನು ಪರಿಗಣಿಸಿದ ನಂತರ ಕಲ್ಲಿದ್ದಲಿನ ಜೊತೆಗೆ,ಪ್ರಾಥಮಿಕವಾಗಿ ಕೃಷಿ ಉಳಿಕೆಗಳಿಂದ ತಯಾರಿಸಿದ 5-10% ಬಳಸಲು ಪ್ರಯತ್ನಿಸಬೇಕೆಂದು ನೀತಿಯಲ್ಲಿ ಸಲಹೆ ನೀಡಲಾಯಿತು.
ದೇಶದಲ್ಲಿ ಇಂಧನ ಪರಿವರ್ತನೆಯನ್ನು ಮತ್ತಷ್ಟು ಬೆಂಬಲಿಸುವ ಸಲುವಾಗಿ ಮತ್ತು ಶುದ್ಧ ಇಂಧನ ಮೂಲಗಳ ಗುರಿಯನ್ನು ಸಾಧಿಸಲು, ನೀತಿಯನ್ನು ಮಾರ್ಪಡಿಸಿ 8.10.2021 ರಂದು ಹೊರಡಿಸಲಾಗಿದೆ. ಈ ಮಾರ್ಪಡಿಸಿದ ನೀತಿಯು ಅಪೇಕ್ಷಿತ ಗುರಿಗಳನ್ನು ಸಾಧಿಸುವಲ್ಲಿ ಅಗತ್ಯವಾದ ನಿರ್ದೇಶನವನ್ನು ಒದಗಿಸುತ್ತದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಕೋ-ಫೈರಿಂಗ್ ಮೂಲಕ ವಿದ್ಯುತ್ ಉತ್ಪಾದನೆಗೆ ಬಯೋಮಾಸ್ ಬಳಕೆಗಾಗಿ ಪರಿಷ್ಕೃತ ನೀತಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
(i) ಎಲ್ಲಾ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಈ ಮಾರ್ಗಸೂಚಿಯ ಬಿಡುಗಡೆಯ ದಿನಾಂಕದ ಒಂದು ವರ್ಷದಿಂದ ಅನ್ವಯವಾಗುವಂತೆ ಕಲ್ಲಿದ್ದಲಿನ ಜೊತೆಗೆ ಕೃಷಿ ಉಳಿಕೆಗಳ 5% ರಷ್ಟು ಬಯೋಮಾಸ್ ಪೆಲೆಟ್ ಮಿಶ್ರಣವನ್ನು ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಆದೇಶದ ಬಿಡುಗಡೆಯ ದಿನಾಂಕದ ನಂತರ ಮತ್ತು ನಂತರದ ಎರಡು ವರ್ಷಗಳಿಂದ ಜಾರಿಗೆ ಬರುವಂತೆ ಈ ಪ್ರಮಾಣವು 7% ಕ್ಕೆ ಹೆಚ್ಚಾಗುತ್ತದೆ (ಬಾಲ್ ಮತ್ತು ಟ್ಯೂಬ್ ಮಿಲ್ ಅನ್ನು ಹೊರತುಪಡಿಸಿ ಬಯೋಮಾಸ್‍ನ ಬಳಕೆಯು 5% ರಷ್ಟೇ ಇರುತ್ತದೆ).
(ii) ಪ್ರತಿ ವರ್ಷ ಉತ್ಪಾದಿಸುವ ಕಂಪನಿಗಳಿಂದ ಗುತ್ತಿಗೆಗಳನ್ನು ನೀಡುವಲ್ಲಿ ವಿಳಂಬವನ್ನು ತಪ್ಪಿಸಲು ಮತ್ತು ದೀರ್ಘಾವಧಿಯ ಪೂರೈಕೆ ಸರಪಳಿಯನ್ನು ನಿರ್ಮಿಸಲು ಉಪಯುಕ್ತತೆಗಳನ್ನು ಉತ್ಪಾದಿಸುವ ಮೂಲಕ ಬಯೋಮಾಸ್ ಪೆಲೆಟ್‌ಗಳನ್ನು ಸಂಗ್ರಹಿಸಲು ಕನಿಷ್ಠ ಒಪ್ಪಂದದ ಅವಧಿಯು 7 ವರ್ಷಗಳವರೆಗೆ ಇರಬೇಕೆಂದು ನೀತಿಯಲ್ಲಿ ಸಲಹೆ ನೀಡಲಾಗಿದೆ.
(iii) ಬೆಲೆಯ ನಿರ್ಣಯ ಮತ್ತು ವೇಳಾಪಟ್ಟಿಗೆ ಸಂಬಂಧಿಸಿದ ನಿಬಂಧನೆಗಳು ಈ ಕೆಳಗಿನಂತಿರಬೇಕು:
ಎ) ವಿದ್ಯುಚ್ಛಕ್ತಿ ಕಾಯಿದೆ 2003 ರ ಸೆಕ್ಷನ್ 62 ರ ಅಡಿಯಲ್ಲಿ ಸ್ಥಾಪಿಸಲಾದ ಯೋಜನೆಗಳಿಗೆ, ಬಯೋಮಾಸ್ ಪೆಲೆಟ್‌ಗಳ ಕೋ-ಫೈರಿಂಗ್‌ನಿಂದ ಉಂಟಾಗುವ ವೆಚ್ಚದ ಹೆಚ್ಚಳವನ್ನು ಎನರ್ಜಿ ಚಾರ್ಜ್ ದರಕ್ಕೆ (ಇಸಿಆರ್) ವರ್ಗಾಯಿಸಲಾಗುತ್ತದೆ
ಬಿ) ವಿದ್ಯುಚ್ಛಕ್ತಿ ಕಾಯಿದೆ 2003 ರ ಸೆಕ್ಷನ್ 63 ರ ಅಡಿಯಲ್ಲಿ ಸ್ಥಾಪಿಸಲಾದ ಯೋಜನೆಗಳಿಗೆ, ಬಯೋಮಾಸ್ ಕೋ-ಫೈರಿಂಗ್‌ನಿಂದಾಗಿ ಇಸಿಆರ್ ನಲ್ಲಿನ ಹೆಚ್ಚಳವನ್ನು ಕಾನೂನು ನಿಬಂಧನೆಗಳಲ್ಲಿನ ಬದಲಾವಣೆಯ ಅಡಿಯಲ್ಲಿ ಕೋರಬಹುದು.
ಸಿ) ವಿದ್ಯುತ್ ಸ್ಥಾವರದ ಮೆರಿಟ್ ಆರ್ಡರ್ ಡೆಸ್ಪಾಚ್ (MOD) ಅನ್ನು ನಿರ್ಧರಿಸುವಲ್ಲಿ ಇಸಿಆರ್ ಮೇಲೆ ಅಂತಹ ಹೆಚ್ಚುವರಿ ಪರಿಣಾಮವನ್ನು ಪರಿಗಣಿಸಲಾಗುವುದಿಲ್ಲ.
ಡಿ) ಡಿಸ್ಕಾಮ್‌ಗಳಂತಹ ಕಡ್ಡಾಯ ಘಟಕಗಳು ಅಂತಹ ಕೋ-ಫೈರಿಂಗ್ ಅನ್ನು ಖರೀದಿಸುವ ಮೂಲಕ ತಮ್ಮ ನವೀಕರಿಸಬಹುದಾದ ಖರೀದಿ ಹೊಣೆಗಾರಿಕೆಗಳನ್ನು (ಆರ್‍ಪಿಒ) ಪೂರೈಸಬಹುದು.
ಪರಿಷ್ಕೃತ ನೀತಿಯ ಪ್ರತಿಯು ಇಂಧನ ಸಚಿವಾಲಯದ ಈ ಕೆಳಗಿನ ಕೊಂಡಿಯಲ್ಲಿ ಲಭ್ಯವಿದೆ:
https://powermin.gov.in/sites/default/files/Revised_Biomass_Policy_dtd_08102021.pdf
ಇಂಧನ ಸಚಿವಾಲಯವು ಈಗಾಗಲೇ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಅನ್ನು ಬಳಸುವ ರಾಷ್ಟ್ರೀಯ ಮಿಷನ್ ಅನ್ನು ಸ್ಥಾಪಿಸಿದೆ. ಇದು ಕೃಷಿಯ ಉಳಿಕೆಗಳ ಸುಡುವಿಕೆಯಿಂದ ಉಂಟಾಗುವ ವಾಯು ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಮತ್ತು ಉಷ್ಣ ವಿದ್ಯುತ್ ಉತ್ಪಾದನೆಯ ಇಂಗಾಲವನ್ನು ಕಡಿಮೆ ಮಾಡಲು, ನಮ್ಮ ಗುರಿಗಳು ಶುದ್ಧ ಇಂಧನ ಮೂಲಗಳತ್ತ ಸಾಗಲು ದೇಶದಲ್ಲಿ ಶಕ್ತಿಯ ಪರಿವರ್ತನೆಯನ್ನು ಬೆಂಬಲಿಸುತ್ತದೆ.
ಈ ಮಿಷನ್ ಪ್ರಸ್ತುತ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಕೋ ಫೈರಿಂಗನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಈ ಮಿಷನ್ ಬಯೋಮಾಸ್ ಪೂರೈಕೆ ಸರಪಳಿಯ ಅಭಿವೃದ್ಧಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಮಧ್ಯಸ್ಥಗಾರರಿಗೆ ಪರಿಚಯಿಸುತ್ತದೆ ಮತ್ತು ಉದಯೋನ್ಮುಖ ಉದ್ಯಮಿಗಳನ್ನು ಉತ್ತೇಜಿಸುತ್ತದೆ. ಇತ್ತೀಚೆಗೆ ಈ ತಿಂಗಳಿನಲ್ಲಿ ಹರಿಯಾಣದ ಫರಿದಾಬಾದ್ ಮತ್ತು ನಂಗಲ್, ರೋಪರ್‌ನಲ್ಲಿ ಎರಡು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎರಡೂ ಕಾರ್ಯಕ್ರಮಗಳು ಪ್ರದೇಶದ ರೈತರ ಸಕ್ರಿಯ ಭಾಗವಹಿಸುವಿಕೆಯನ್ನು ಕಂಡವು, ಮಣ್ಣಿನ ಉತ್ಪಾದಕತೆ ಮತ್ತು ಟಿಪಿಪಿಗಳಲ್ಲಿ ಬಯೋಮಾಸ್ ಕೋ ಫೈರಿಂಗ್ ಮೌಲ್ಯ ಸರಪಳಿಯಲ್ಲಿ ಭಾಗವಹಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸುವ ಮಾರ್ಗಗಳ ಮೇಲೆ, ಬೆಳೆಯ ಉಳಿಕೆಗಳನ್ನು ಸುಡುವುದರಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇದರ ಜೊತೆಗೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಜೀವರಾಶಿಯ ಪರಿಸರ ಸ್ನೇಹಿ ಬಳಕೆಯ ಪ್ರಯೋಜನಗಳ ಬಗ್ಗೆ ಬೃಹತ್ ಜಾಹೀರಾತುಗಳು ಮತ್ತು ಮಾಧ್ಯಮಗಳಲ್ಲಿ ಪ್ರಚಾರಗಳನ್ನು ಸಹ ಮಾಡಲಾಗುತ್ತಿದೆ.
ಈ ಪ್ರಯತ್ನಗಳ ಫಲವಾಗಿ, ಅಕ್ಟೋಬರ್ 2021 ರಲ್ಲಿ ಸುಮಾರು 1400 ಟನ್‌ಗಳಷ್ಟು ಬಯೋಮಾಸ್ ಗಳನ್ನು ಮತ್ತು ಒಟ್ಟು 53000 ಟನ್‌ಗಳಷ್ಟು ಬಯೋಮಾಸ್ ಗಳನ್ನು ವಿದ್ಯುತ್ ಸ್ಥಾವರಗಳಿಗೆ ಹಸುರು ಇಂಧನವಾಗಿ ಬಳಸಲಾಗಿದೆ. 2020 ರ ಇದೇ ಅವಧಿಗೆ ಹೋಲಿಸಿದರೆ 2021 ರಲ್ಲಿ ಇದುವರೆಗೆ ಶೇ.58.3ರಷ್ಟು ಕಡಿಮೆಯಾದ ಆರು ಹೆಚ್ಚು ಬಾಧಿತ ರಾಜ್ಯಗಳಾದ ಪಂಜಾಬ್, ಹರಿಯಾಣ, ಯುಪಿ, ದೆಹಲಿ, ರಾಜಸ್ಥಾನ ಮತ್ತು ಎಂಪಿಗಳಲ್ಲಿ ಹುಲ್ಲು ಸುಡುವ ಘಟನೆಗಳು ಕಡಿಮೆಯಾಗಿದೆ. ಹೊಸದಾಗಿ ರೂಪುಗೊಂಡ ರಾಷ್ಟ್ರೀಯ ಮಿಷನ್ ಮೂಲಕ ಇಂಧನ ಸಚಿವಾಲಯದ ಪ್ರಯತ್ನಗಳು ವಾಯುವ್ಯ ಭಾರತದಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕೃಷಿ ಭೂಮಿಯ ಫಲವತ್ತತೆಯ ನಷ್ಟವನ್ನು ತಡೆಯುತ್ತದೆ ಮತ್ತು ರೈತರು, ಪೂರೈಕೆದಾರರು ಮತ್ತು ಜೈವಿಕ ಇಂಧನ ತಯಾರಕರಿಗೆ ಸುಸ್ಥಿರ ಆದಾಯದ ಮೂಲವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
***
(Release ID: 1768200)
Visitor Counter : 261