ಹಣಕಾಸು ಸಚಿವಾಲಯ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಶಾಸಕಾಂಗ ಹೊಂದಿರುವ) ಜಿಎಸ್ಟಿ ಪರಿಹಾರಕ್ಕೆ ಬದಲಾಗಿ ಸಮಾನಾಂತರ ಸಾಲ ಸೌಲಭ್ಯದ ಅಡಿಯಲ್ಲಿ 44,000 ಕೋಟಿ ರೂ. ಬಾಕಿ ಮೊತ್ತವನ್ನು ಬಿಡುಗಡೆ ಮಾಡಿದ ಭಾರತ ಸರಕಾರ

Posted On: 28 OCT 2021 3:57PM by PIB Bengaluru

ಹಣಕಾಸು ಸಚಿವಾಲಯವು ಜಿಎಸ್‌ಟಿ ಪರಿಹಾರಕ್ಕೆ ಬದಲಾಗಿ ʻಸಮಾನಾಂತರ ಸಾಲʼ (ಬ್ಯಾಕ್-ಟು-ಬ್ಯಾಕ್) ಸೌಲಭ್ಯದಅಡಿಯಲ್ಲಿ ಶಾಸಕಾಂಗ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು 44,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ, ಈ ಹಿಂದೆ ಬಿಡುಗಡೆ ಮಾಡಲಾದ 1,15,000 ಕೋಟಿ ರೂ. ಒಳಗೊಂಡಂತೆ (2021ರ ಜುಲೈ 15ರಂದು ಬಿಡುಗಡೆಯಾದ ₹ 75,000 ಕೋಟಿ ಮತ್ತು 2021ರ ಅಕ್ಟೋಬರ್ 07ರಂದು ಬಿಡುಗಡೆಯಾದ ₹ 40,000 ಕೋಟಿ),  ಜಿಎಸ್‌ಟಿ ಪರಿಹಾರಕ್ಕೆ ಬದಲಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಮಾನಾಂತರ ಸಾಲ ಸೌಲಭ್ಯದ ಅಡಿಯಲ್ಲಿ ಒಟ್ಟು ಒಟ್ಟು 1,59,000 ಕೋಟಿ ರೂ. ಬಿಡುಗಡೆ ಮಾಡಿದಂತಾಗಿದೆ.ಮೊತ್ತವು ನೈಜ ಉಪಕರ (ಸೆಸ್) ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುವ ಸಾಮಾನ್ಯ ಜಿಎಸ್‌ಟಿ ಪರಿಹಾರದೊಂದಿಗೆ ಪಾವತಿಸಿದ ಹೆಚ್ಚುವರಿ ಮೊತ್ತವಾಗಿದೆ.

ಪರಿಹಾರ ನಿಧಿಯಲ್ಲಿ ಖೋತಾ ಕಾರಣದಿಂದಾಗಿ ರಾಜ್ಯಗಳಿಗೆ ಕಡಿಮೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ, ಸಂಪನ್ಮೂಲ ಅಂತರವನ್ನು ಸರಿದೂಗಿಸಲು ಕೇಂದ್ರ ಸರಕಾರವು ₹1.59 ಲಕ್ಷ ಕೋಟಿ ರೂ.ಸಾಲ ಪಡೆದು ಶಾಸಕಾಂಗ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮಾನಾಂತರ ಸಾಲ ಸೌಲಭ್ಯದ ಆಧಾರದ ಮೇಲೆ ಅದನ್ನು ಬಿಡುಗಡೆ ಮಾಡಲು 28.05.2021ರಂದು ನಡೆದ 43ನೇ ಜಿಎಸ್‌ಟಿ ಮಂಡಳಿ ಸಭೆಯ ನಂತರ ನಿರ್ಧರಿಸಲಾಯಿತು. 2020-21ನೇ ಹಣಕಾಸು ವರ್ಷದಲ್ಲಿ ಇದೇ ರೀತಿಯ ಸೌಲಭ್ಯಕ್ಕಾಗಿ ಅಳವಡಿಸಿಕೊಳ್ಳಲಾದ ತತ್ವಗಳ ಅನುಸಾರವೇ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಆಗಲೂ ಇದೇ ರೀತಿಯ ವ್ಯವಸ್ಥೆಯ ಅಡಿಯಲ್ಲಿ ರಾಜ್ಯಗಳಿಗೆ 1.10 ಲಕ್ಷ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಈ 1.59 ಲಕ್ಷ ಕೋಟಿ ರೂ. ಮೊತ್ತವು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶಾಸಕಾಂಗ ಹೊಂದಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಬಹುದೇಂದು ಅಂದಾಜಿಸಲಾದ 1 ಲಕ್ಷ ಕೋಟಿ ರೂ.ಗಿಂತಲೂ (ಸೆಸ್ ಸಂಗ್ರಹದ ಆಧಾರದ ಮೇಲೆ) ಅಧಿಕ ಪರಿಹಾರ ಮೊತ್ತಕ್ಕೆ ಹೆಚ್ಚುವರಿಯಾಗಿ ಮಾಡಿದ ಪಾವತಿಯಾಗಿದೆ. 2021-22ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಮೊತ್ತವು ಒಟ್ಟು ₹2.59 ಲಕ್ಷ ಕೋಟಿ ರೂ. ಮೀರುವ ನಿರೀಕ್ಷೆಯಿದೆ.

ಎಲ್ಲಾ ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು(ಶಾಸಕಾಂಗ ಹೊಂದಿರುವ) ಸಮಾನಾಂತರ ಸಾಲ ಸೌಲಭ್ಯದ ಅಡಿಯಲ್ಲಿ ಪರಿಹಾರ ಕೊರತೆಯ ಧನಸಹಾಯದ ವ್ಯವಸ್ಥೆಗಳಿಗೆ ಸಮ್ಮತಿಸಿವೆ. ಕೋವಿಡ್-19 ಸಾಂಕ್ರಾಮಿಕ  ಪರಿಣಾಮಕಾರಿ ನಿರ್ವಹಣೆಗಾಗಿ ಹಾಗೂ ಬಂಡವಾಳ ವೆಚ್ಚದ ಏರಿಕೆಯನ್ನು ನಿರ್ವಹಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಹಳ ಪ್ರಮುಖ ಪಾತ್ರವಹಿಸಬೇಕಾಗಿದೆ. ಈ ಪ್ರಯತ್ನದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡಲು ಹಣಕಾಸು ಸಚಿವಾಲಯವು 2021-22ನೇ ಹಣಕಾಸು ವರ್ಷದಲ್ಲಿ ಸಮಾನಾಂತರ ಸಾಲ ಸೌಲಭ್ಯದಡಿ 1,59,000 ಕೋಟಿ ರೂ. ನೆರವು ಬಿಡುಗಡೆಯನ್ನು ಅನುಮೋದಿಸಿದೆ.

ಈಗ ಬಿಡುಗಡೆ ಮಾಡಲಾಗುತ್ತಿರುವ 44,000 ಕೋಟಿ ರೂ. ಮೊತ್ತವನ್ನು ಭಾರತ ಸರಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಡೆದ 5.69% ಬಡ್ಡಿ ದರದ 5 ವರ್ಷಗಳ ಭದ್ರತಾ ಪತ್ರ ಆಧರಿತ ಸಾಲದಿಂದ ಎತ್ತುವಳಿ ಮಾಡಲಾಗಿದೆ. ಈ ಬಿಡುಗಡೆಯ ಕಾರಣದಿಂದಾಗಿ ಕೇಂದ್ರ ಸರಕಾರವು ಯಾವುದೇ ಹೆಚ್ಚುವರಿ ಮಾರುಕಟ್ಟೆ ಸಾಲವನ್ನು ಪಡೆಯುವ ಅಗತ್ಯ ಇರುವುದಿಲ್ಲ.

ಹಣದ ಬಿಡುಗಡೆಯಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಸಾರ್ವಜನಿಕ ವೆಚ್ಚವನ್ನು ನಿಭಾಯಿಸಲು, ಆರೋಗ್ಯ ಮೂಲಸೌಕರ್ಯ ಸುಧಾರಿಸಲು ಹಾಗೂ ಇತರೆ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

****

"ಜಿಎಸ್‌ಟಿ ಪರಿಹಾರ ಕೊರತೆಗೆ ಬದಲಾಗಿ ಸಮಾನಾಂತರ ಸಾಲ”ದ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 28.10.2021 ರಂದು ಬಿಡುಗಡೆ ಮಾಡಲಾದ ಮೊತ್ತ

                              (ಕೋಟಿ ರೂ.)

ಕ್ರ.ಸಂ.

ರಾಜ್ಯದ ಹೆಸರು/ ಕೇಂದ್ರಾಡಳಿತ ಗಳು                      

ಮೊತ್ತ

1.

ಆಂಧ್ರಪ್ರದೇಶ

905.59

2.

ಅಸ್ಸಾಂ

490.76

3.

ಬಿಹಾರ

1885.69

4.

ತ್ತೀಸ್ಗಢ

1374.02

5.

ಗೋವಾ

234.28

6.

ಗುಜರಾತ್

3608.53

7.

ಹರಿಯಾಣ

2045.79

8.

ಹಿಮಾಚಲ ಪ್ರದೇಶ

745.95

9.

ಜಾರ್ಖಂಡ್

687.76

10.

ಕರ್ನಾಟಕ

5010.90

11.

ಕೇರಳ

2418.49

12.

ಮಧ್ಯ ಪ್ರದೇಶ

1940.20

13.

ಮಹಾರಾಷ್ಟ್ರ

3814.00

14.

ಮೇಘಾಲಯ

39.18

15.

ಒಡಿಶಾ

1779.45

16.

ಪಂಜಾಬ್

3357.48

17.

ರಾಜಸ್ಥಾನ

2011.42

18.

ತಮಿಳುನಾಡು

2240.22

19.

ತೆಲಂಗಾಣ

1264.78

20.

ತ್ರಿಪುರಾ

111.34

21.

ಉತ್ತರ ಪ್ರದೇಶ

2252.37

22.

ಉತ್ತರಾಖಂಡ

922.30

23.

ಪಶ್ಚಿಮ ಬಂಗಾಳ

1778.16

24.

ದೆಹಲಿ ಕೇಂದ್ರಾಡಳಿತ ಪ್ರದೇಶ

1713.34

25.

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ

1064.44

26.

ಪುದುಚೇರಿ ಕೇಂದ್ರಾಡಳಿತ ಪ್ರದೇಶ

303.56

 

ಒಟ್ಟು

44,000.00

 

****



(Release ID: 1767236) Visitor Counter : 415