ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಇ ಆಡಳಿತದ ಪಾಲುದಾರರನ್ನೆಲ್ಲ ಒಂದೇ ವೇದಿಕೆಗೆ ತರಲು ಅಂತರ್ಜಾಲ ಆಡಳಿತ ವೇದಿಕೆ 2021ನ್ನು ಆಯೋಜಿಸಲಾಗುತ್ತಿದೆ
ಅಂತರ್ಜಾಲ ಬಳಕೆದಾರರ ಧ್ವನಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸಲಿ: ಭಾರತೀಯ ಅಂತರ್ಜಾಲ ಆಡಳಿತ ವೇದಿಕೆ (ಐಐಜಿಎಫ್) ಉದ್ಘಾಟನಾ ಸಮಾರಂಭದಲ್ಲಿ ರಾಜೀವ್ ಚಂದ್ರಶೇಖರ್
ಅಂತರ್ಜಾಲ ಬಳಕೆದಾರರಿಗೆ ಮುಕ್ತ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಮತ್ತು ಗಣನೀಯ ಸೇವೆಯು ಸಿಗುವಂತಾಗಬೇಕು: ಶ್ರೀ ರಾಜೀವ್ ಚಂದ್ರಶೇಖರ್
Posted On:
21 OCT 2021 4:28PM by PIB Bengaluru
ಭಾರತೀಯ ಅಂತರ್ಜಾಲ ಆಡಳಿತ ವೇದಿಕೆ (ಐಐಜಿಎಫ್)ನ ಉದ್ಘಾಟನಾ ಸಮಾರಂಭವು ಭಾರತದಲ್ಲಿ ಡಿಜಿಟೈಸೇಷನ್ ಮಾಡುವ ಕುರಿತು ನೀಲನಕ್ಷೆ ತಯಾರಿಸುವುದರೊಂದಿಗೆ ಸಮಾರೋಪವಾಯಿತು. ಈ ಆರಂಭೋತ್ಸವವನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, NIXI, ಮತ್ತು ಇತರ ಭಾಗೀದಾರರ ಗುಂಪುಗಳು ನ.8–11ರವರೆಗೆ ಸಂಯುಕ್ತವಾಗಿ ಆಯೋಜಿಸಿರುವ ಐಐಜಿಎಫ್2021ರ ಸಮಾರಂಭದಲ್ಲಿ ಪಾಲ್ಗೊಳ್ಳಲಿವೆ. ‘ಅಂತರ್ಜಾಲದ ಬಲದಿಂದ ಭಾರತದ ಸಬಲೀಕರಣ’ ಘೋಷ ವಾಕ್ಯದಡಿ ಆಯೋಜಿಸಲಾಗುತ್ತಿದೆ. ಭಾರತದ ಡಿಜಿಟೈಸೇಷನ್‌ಗೆ ಇರುವ ರಹದಾರಿಗಳ ಕುರಿತು ಸಾಕಷ್ಟು ಚರ್ಚಿಸುವ, ಹೊಸ ಹೊಳಹುಗಳತ್ತ ಬೆಳಕುಚೆಲ್ಲುವ ಚರ್ಚೆಗಳು ಆಗಲಿವೆ. ಈ ಇಡೀ ಕಾರ್ಯಕ್ರಮದಲ್ಲಿ ಮೂರು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತ ಮತ್ತು ಅಂತರ್ಜಾಲ, ಭಾರತದ ಡಿಜಿಟಲ್ ಯಾನ ಮತ್ತು ಜಾಗತಿಕ ಪಾತ್ರ, ಗುಣಮಟ್ಟ, ಲಭ್ಯತೆ ಹಾಗೂ ಪಾಲ್ಗೊಳ್ಳುವಿಕೆ, ಅಂತರ್ಜಾಲ ಆಡಳಿತದಲ್ಲಿ ಎಲ್ಲರಿಗೂ ಹೈಸ್ಪೀಡ್ ಅಂತರ್ಜಾಲ ಹಾಗೂ ಸೈಬರ್ ನೀತಿ ಮತ್ತು ನಿಯಮಗಳು ಎಂಬ ಮೂರು ವಿಷಯಗಳ ಮೇಲೆ ಚರ್ಚಿಸಲಾಗುವುದು.
ವಿಶ್ವಸಂಸ್ಥೆಯ ಅಂತರ್ಜಾಲ ಆಡಳಿತ ವೇದಿಕೆಯ ಟ್ಯುನಿಸ್‌ನ ಅಜೆಂಡಾದ ಐಜಿಎಫ್ ಖಂಡಿಕೆ 72ರ ಪ್ರಕಾರ ಐಐಜಿಎಫ್ ಅನ್ನು ಆರಂಭಿಸಲಾಯಿತು. ಐಐಜಿಎಫ್ ಮೂಲಕ ಜಾಗತಿಕ ಅಂತರ್ಜಾಲ ಆಡಳಿತ ವ್ಯವಸ್ಥೆಯ ಪ್ರತಿ ಭಾಗೀದಾರರನ್ನೂ ಒಂದೇ ವೇದಿಕೆಯಡಿ ತರಲಾಗುವುದು. ಸರ್ಕಾರ, ಕೈಗಾರಿಕೆ, ನಾಗರಿಕ ಸಮಾಜ, ಶೈಕ್ಷಣಿಕ ಸಂಸ್ಥೆ ಮುಂತಾದವುಗಳೆಲ್ಲವೂ ಅಂತರ್ಜಾಲ ಆಡಳಿತದ ಸಮ ಭಾಗೀದಾರರಾಗಿಸುತ್ತವೆ.
ಈ ಐಐಜಿಎಫ್‌ನ ಮೂಲ ಉದ್ದೇಶ ಭಾರತದ ಡಿಜಿಟೈಸೇಷನ್‌ಗೆ ರಹದಾರಿ ನಿರ್ಮಿಸುವುದು ಆಗಿದೆ. ಜೊತೆಗೆ ಜಾಗತಿಕ ವೇದಿಕೆಯಲ್ಲಿ ಅಂತರರಾಷ್ಟ್ರೀಯ ನೀತಿ ಅಭಿವೃದ್ಧಿ ಮತ್ತು ಅಂತರ್ಜಾಲ ಆಡಳಿತದಲ್ಲಿ ಭಾರತದ ಪಾತ್ರವನ್ನು ಎತ್ತಿಹಿಡಿಯುವುದು, ಜಾಗತಿಕ ವೇದಿಕೆಯಲ್ಲಿ ಭಾರತೀಯ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಪ್ರತಿಪಾದಿಸುವುದೇ ಆಗಿದೆ. ಈ ಕಾರ್ಯಕ್ರವನ್ನು ದೀಪ ಮುಡಿಸುವುದರೊಂದಿಗೆ ಶ್ರೀ ರಾಜೀವ್ ಚಂದ್ರಶೇಖರ್‌ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಉದ್ಘಾಟಿಸುವರು. UASG ಅಧ್ಯಕ್ಷರಾದ ಡಾ. ಅಜಯ್ ಡಾಟಾ, C-DEP ಅಧ್ಯಕ್ಷರಾದ ಜೈಜೀತ್ ಭಟ್ಟಾಚಾರ್ಯ, CCAOI ನಿರ್ದೇಶಕಿ ಅಮೃತಾ ಚೌಧರಿ, NIXIಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಜೈನ್ ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು, ಐಐಜಿಎಫ್ ಗೆಭಾರತದಲ್ಲಿ ಅಂತರ್ಜಾಲ ಬೆಳೆದು ಬಂದ ಅವಧಿಯಲ್ಲಿ ಅತಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಕೊರೊನಾದಂಥ ದುರಿತ ಕಾಲದಿಂದಾಚೆ ಬರುತ್ತಿದ್ದು, ಚೇತರಿಕೆಯ ದಿನಗಳನ್ನು ಕಾಣುತ್ತಿದ್ದೇವೆ. ಈ ಕಾಲದಲ್ಲಿ ಡಿಜಿಟಲೈಸೇಷನ್‌ನ ಪ್ರಮಾಣ ಹೆಚ್ಚಿದೆ. ತೀವ್ರತರನಾದ ಬದಲಾವಣೆಯಾಯಿತು. ಆಡಳಿತ, ಸರ್ಕಾರ ಹಾಗೂ ವ್ಯಾಪಾರ, ವಹಿವಾಟುಗಳಲ್ಲಿಯೂ ಭಿನ್ನ ಪ್ರಯೋಗಗಳಾದವು.
ತಂತ್ರಗಾರಿಕೆಯನ್ನು ಆನ್ವಯಿಕಗೊಳಿಸುವ, ಅನುಷರ್ಠಾನಕ್ಕೆ ತರುವಲ್ಲಿ ಇರುವ ಅಪಾರವಾದ ಅವಕಾಶಗಳನ್ನು ಚರ್ಚಿಸುತ್ತ ರಾಜೀವ್ ಚಂದ್ರಶೇಖರ್ ಅವರು ಈ ಕ್ಷಣಕ್ಕೆ ನಮ್ಮಲ್ಲಿ 80 ಕೋಟಿ ಅಂತರ್ಜಾಲ ಬಳಕೆದಾರರು ಇದ್ದಾರೆ. ಭಾರತವೀಗ ಅತಿ ಅಂತರ್ಜಾಲ ಸಂಪರ್ಕ ಇರುವ ಅತಿ ದೊಡ್ಡ ದೇಶವಾಗಿದೆ. 120 ಕೋಟಿ ಜನರಿಗೂ ಅಂತರ್ಜಾಲ ವ್ಯವಸ್ಥೆ ಕಲ್ಪಿಸುವಲ್ಲಿ ನಮ್ಮ ಸರ್ಕಾರವು ಬದ್ಧವಾಗಿದೆ. ಸದ್ಯಕ್ಕೆ 40 ಕೋಟಿ ಜನಸಂಖ್ಯೆಯು ಅಂತರ್ಜಾಲ ಸಂಪರ್ಕದಿಂದ ಆಚೆ ಉಳಿದಿದೆ. ಅಂತರ್ಜಾಲದ ಬಲ ಎಲ್ಲರಿಗೂ ದೊರೆಯುವಂತೆ ಮಾಡಲಾಗುವುದು. ಡಿಜಿಟಲ್ ಲೋಕದಿಂದ ಹೊರಗುಳಿಯುವುದನ್ನು ತಡೆಯಬೇಕಿದೆ ಎಂದರು.
ಈ ಮಾತುಗಳನ್ನು ಆಡುತ್ತಲೇ ಅಂತರ್ಜಾಲ ಆಧರಿತ ಆಡಳಿತದತ್ತ ಇನ್ನೂ ದೂರದ ದಾರಿ ಕ್ರಮಿಸಬೇಕಿದೆ ಎಂಬುದಕ್ಕೆ ಹೆಚ್ಚು ಮಹತ್ವ ನೀಡಿದ ರಾಜೀವ್ ಚಂದ್ರಶೇಖರ್ ಅವರು, ನಾನು ಬಹು ಹೂಡಿಕೆದಾರ, ಭಾಗೀದಾರನಾಗಿರುವೆ ಎಂದು ಅತಿ ಹೆಮ್ಮೆಯಿಂದ ಹೇಳುವೆ. ನಮ್ಮ ಸರ್ಕಾರ ಆದರಣೀಯ ಪ್ರಧಾನಮಂತ್ರಿ ಸಾರ್ವಜನಿಕ ಭಾಗೀದಾರ ಹೂಡಿಕೆಯಲ್ಲಿ ಹೆಚ್ಚು ನಂಬಿಕೆ ಇರಿಸಿದ್ದಾರೆ. ಇಲ್ಲಿ ಅತಿ ದೊಡ್ಡ ಭಾಗೀದಾರರು ಎಂದರೆ ಅಂತರ್ಜಾಲ ಬಳಕೆದಾರರೇ ಆಗಿದ್ದಾರೆ. ಹಾಗಾಗಿ ಅಂತರ್ಜಾಲ ಬಳಕೆದಾರರ ಧ್ವನಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಧ್ವನಿಸಬೇಕು. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸಂಪರ್ಕ ಪಡೆದಿರುವ ದೇಶವಾಗಿರುವ ನಮ್ಮಲ್ಲಿ, ಅಂತರರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ನಮ್ಮ ಧ್ವನಿ ಗಟ್ಟಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮಲ್ಲಿ ಭಾಗೀದಾರರೆಲ್ಲರೂ ಒಟ್ಟುಗೂಡಬೇಕು. ಪರಸ್ಪರ ಭೇಟಿಯಾಗಿ, ಅಂತರ್ಜಾಲ ಸಂಪರ್ಕ ಹೇಗಿರಬೇಕು, ಸೌಲಭ್ಯಗಳ ಸವರೂಪದ ಕುರಿತು ಚರ್ಚಿಸಬೇಕು. ಸರ್ಕಾರದ ನಿಯಮಾವಳಿಯೂ ಇದೇ ಹೇಳುತ್ತದೆ, ನಮ್ಮ ಭಾಗೀದಾರರ ಅಗತ್ಯಗಳೇನು ಎಂಬುದರ ಕಡೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಅಂತರ್ಜಾಲ ಸೌಲಭ್ಯವು ಮುಕ್ತವಾಗಿರಬೇಕು. ಸುರಕ್ಷಿತವಾಗಿರಬೇಕು, ವಿಶ್ವಾಸಾರ್ಹವಾಗಿರಬೇಕು, ಗಣನೀಯವಾಗುವಂತಿರಬೇಕು ಎಂಬುದರ ಕಡೆಗೆ ಹೆಚ್ಚು ಒತ್ತು ನೀಡಿದರು.
ಐಐಜಿಎಫ್‌ನ ಮುಖ್ಯಸ್ಥರಾದ ಅನಿಲ್ ಕುಮಾರ್ ಜೈನ್ ಅವರು ಮಾತನಾಡಿ, ಭಾರತದಲ್ಲಿ ಅಂತರ್ಜಾಲ ಬಳಸುವ ಅತಿ ದೊಡ್ಡ ಪ್ರಮಾಣದ ಜನಸಂಖ್ಯೆಯಿದೆ. ಈಗ ನೀತಿನಿಯಮಗಳ ಚೌಕಟ್ಟನ್ನು ರಚಿಸುವ, ನೂತನ ತಂತ್ರಜ್ಞಾನ, ನಾವೀನ್ಯ ಪ್ರಯೋಗಗಳು, ಡಿಜಿಟಲ್ ಆರ್ಥಿಕತೆಯತ್ತಲೂ ಗಮನಹರಿಸಬೇಕಿದೆ. ಭಾರತೀಯ ಅಂತರ್ಜಾಳ ಆಡಳಿತ ವೇದಿಕೆಯು ಅಂತರ್ಜಾಲ ಬಳಕೆದಾರರು ಎಲ್ಲರೂ ಪಾಲ್ಗೊಂಡು ಅಂತರ್ಜಾಲದ ಶಕ್ತಿಯನ್ನು ಅರ್ಥೈಸಿಕೊಳ್ಳಲು, ಸಂಪೂರ್ಣವಾಗಿ ಬಳಸಿಕೊಳ್ಳಲು ಸದ್ಬಳಕೆ ಮಾಡಿಕೊಳ್ಳಲು ಕೈದೀವಿಗೆಯಾಗಲಿದೆ ಎಂದರು.
UASGನ ಅಧ್ಯಕ್ಷರಾದ ಡಾ. ಅಜಯ್ ದಾತಾ ಭಾರತದಲ್ಲಿ 19000 ಭಾಷಾ ಧ್ವನಿಗಳಿವೆ. 121 ಭಾಷೆಗಳಿವೆ. 22 ಆಡಳಿತಾತ್ಮಕ ಅಧಿಕೃತ ಭಾಷೆಗಳಿವೆ. ಭಾರತೀಯ ನಾಗರಿಕರಿಗೆ ಅವರಿಷ್ಟದ ಡೊಮೇನ್ ಹೆಸರು ಸಿಗುವಂತಾಗಬೇಕು. ಈ ಸಾರ್ವತ್ರಿಕ ಸ್ವೀಕಾರ್ಹವಾಗುವಂಥ ಡೊಮೇನ್ ಹೆಸರುಗಳು ಅವರವರ ಆಯ್ಕೆಗೆ ತಕ್ಕಂತೆ ಸಿಗಬೇಕು. ಐಐಜಿಎಫ್ ಆರಂಭಿಸಿರುವುದು, ಜನರನ್ನು ಒಳಗೊಳ್ಳುತ್ತಿರುವುದು ಈ ನಿಟ್ಟಿನಲ್ಲಿ ಸಕಾಲಿಕವಾಗಿದೆ. ಇದೀಗಲಷ್ಟೆ ಈ ಪ್ರಯಾಣವನ್ನು ಆರಂಭಿಸಲಾಗಿದೆ. ಇದು ಆರಂಭವಷ್ಟೆ, ಅಂತ್ಯವಲ್ಲ, ಇಂಥ ಅನೇಕ ಆರಂಭಗಳನ್ನು ನಾವು ನೋಡಲಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಐಐಜಿಎಫ್ ಕುರಿತು
ಭಾರತೀಯ ಅಂತರ್ಜಾಲ ಆಡಳಿತ ವೇದಿಕೆ (ಐಐಜಿಎಫ್) ಇದು ವಿಶ್ವಸಂಸ್ಥೆಯ ಅಂತರ್ಜಾಲ ಆಡಳಿತ ವೇದಿಕೆಗೆ ಅನುಸಾರವಾಗಿ ರಚಿಸಲಾಗಿದೆ. ಐಜಿಎಫ್‌ನ ಅನುಸಾರವಾಗಿ ರಚಿಸಲಾಗುತ್ತದೆ. ಇಲ್ಲಿ ಬಹುತೇಕ ಭಾಗೀದಾರರನ್ನು ಒಟ್ಟುಗೂಡಿಸಿ, ಸಾರ್ವಜನಿಕ ನೀತಿಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ರಚಿಸಲಾಗಿದೆ.
***
(Release ID: 1766902)
Visitor Counter : 293