ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

2030ರ ವೇಳೆಗೆ ಜಾಗತಿಕವಾಗಿ 1 ಟ್ರಿಲಿಯನ್ ಅಮೆರಿಕನ್‌ ಡಾಲರ್ ಸೌರ ಹೂಡಿಕೆ ಸಾಧಿಸುವ ಭರವಸೆಯೊಂದಿಗೆ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ (ಐಎಸ್‌ಎ) ನಾಲ್ಕನೇ ಅಧಿವೇಶನವು ಸಂಪನ್ನಗೊಂಡಿತು


ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಹವಾಮಾನ ಶೃಂಗಸಭೆಯ (ಸಿಒಪಿ26) ವೇಳೆ ʻಒಬ್ಬ ಸೂರ್ಯ- ಒಂದು ಜಗತ್ತು – ಒಂದು ಗ್ರಿಡ್ʼ (ಜಿಜಿಐ-ಒಎಸ್‌ಒಡಬ್ಲ್ಯುಒಜಿ) ಎಂಬ ಹಸಿರು ಗ್ರಿಡ್ಸ್ ಉಪಕ್ರಮಕ್ಕೆ ಚಾಲನೆ ನೀಡಲಾಗುವುದು, ಈ ಹಿನ್ನೆಲೆಯಲ್ಲಿ  "ಒಬ್ಬ ಸೂರ್ಯ " ರಾಜಕೀಯ ಘೋಷಣೆಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧಿವೇಶನದಲ್ಲಿ ಹಸಿರು ನಿಶಾನೆ ತೋರಲಾಯಿತು

2030ರ ವೇಳೆಗೆ ಸೌರ ಹೂಡಿಕೆಯಲ್ಲಿ ಒಂದು ಟ್ರಿಲಿಯನ್ ಅಮೆರಿಕನ್‌ ಡಾಲರ್‌ ಕ್ರೋಡೀಕರಿಸುವ ದೃಢ ಕ್ರಿಯಾ ಕಾರ್ಯಸೂಚಿಗೆ ಅಧಿವೇಶನದಲ್ಲಿ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ಅಗ್ಗದರದ-ಸಾಲಸೌಲಭ್ಯ

(ಬ್ಲೆಂಡೆಡ್‌ ಫಿನಾನ್ಸ್‌) ಸೇರಿದೆ

ʻಬ್ಲೂಮ್ ಬರ್ಗ್ ಫಿಲಾಂತ್ರಫೀಸ್‌ʼ ಮತ್ತು ʻಗ್ಲೋಬಲ್ ಎನರ್ಜಿ ಅಲಾಯನ್ಸ್ ಫಾರ್ ಪೀಪಲ್ ಅಂಡ್ ಪ್ಲಾನೆಟ್ʼನೊಂದಿಗೆ ʻಐಎಸ್ಎʼ ಸಹಯೋಗ ಮಾಡಿಕೊಂಡಿದೆ

ಸೌರ ಪಿವಿ ಪ್ಯಾನೆಲ್‌ಗಳ ನಿರ್ವಹಣೆ ಮತ್ತು ಬ್ಯಾಟರಿ ಬಳಕೆ ತ್ಯಾಜ್ಯ ಹಾಗೂ ಸೌರ ಹೈಡ್ರೋಜನ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ʻಐಎಸ್ಎʼನ  ಹೊಸ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು

Posted On: 22 OCT 2021 11:52AM by PIB Bengaluru

ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ (ಐಎಸ್ಎ) ನಾಲ್ಕನೇ ಮಹಾಧಿವೇಶನವು 2021 ಅಕ್ಟೋಬರ್ 18ರಿಂದ ಅಕ್ಟೋಬರ್ 21ರವರೆಗೆ ವರ್ಚ್ಯುಯಲ್‌ ರೂಪದಲ್ಲಿ ನಡೆಯಿತು. ಭಾರತ ಸರಕಾರದ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಹಾಗೂ ʻಐಎಸ್ಎʼ ಅಧ್ಯಕ್ಷರಾದ ಶ್ರೀ ಆರ್.ಕೆ. ಸಿಂಗ್ ಅವರು ಮಹಾಧಿವೇಶನದ ಅಧ್ಯಕ್ಷತೆ ವಹಿಸಿದ್ದರು. 74 ಸದಸ್ಯ ದೇಶಗಳು ಮತ್ತು 34 ವೀಕ್ಷಕ ಹಾಗೂ ಭಾವಿ ಸದಸ್ಯರು ಸೇರಿದಂತೆ ಒಟ್ಟು 108 ರಾಷ್ಟ್ರಗಳು, 23 ಪಾಲುದಾರ ಸಂಸ್ಥೆಗಳು ಮತ್ತು 33 ವಿಶೇಷ ಆಹ್ವಾನಿತ ಸಂಸ್ಥೆಗಳು ಮಹಾಧಿವೇಶನದಲ್ಲಿ ಭಾಗವಹಿಸಿದ್ದವು. ಹವಾಮಾನ ಕುರಿತಾದ ಅಮೆರಿಕದ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ ಜಾನ್ ಕೆರ್ರಿ ಪ್ರಧಾನ ಭಾಷಣ ಮಾಡಿದರು ಮತ್ತು ʻಯುರೋಪಿಯನ್ ಗ್ರೀನ್‌ ಡೀಲ್‌ʼಗಾಗಿ ಐರೋಪ್ಯ ಆಯೋಗದ ಕಾರ್ಯಕಾರಿ ಉಪಾಧ್ಯಕ್ಷ ಫ್ರಾನ್ಸ್ ಟಿಮ್ಮರ್ಮನ್ಸ್ ಅವರು ಅಕ್ಟೋಬರ್ 20ರಂದು  ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು, ಸೌರ ಮತ್ತು ನವೀಕರಿಸಬಹುದಾದ ಇಂಧನವನ್ನು ಬಳಸಿಕೊಂಡು ಇಂಧನ ಲಭ್ಯತೆಯನ್ನು ಹೆಚ್ಚಿಸಲು ನಾವೆಲ್ಲರೂ ಕೈಜೋಡಿಸಲು ಇದು ಸಕಾಲ ಎಂದು ಹೇಳಿದರು. ನಾವು ಇದನ್ನು ಭಾರತದಲ್ಲಿ ಯಶಸ್ವಿಯಾಗಿ ಮಾಡಿದ್ದೇವೆ, ಜಾಗತಿಕವಾಗಿಯೂ ಇದರ ಪುನರಾವರ್ತನೆಗೆ ಅವಕಾಶವಿದೆ. ಇಂಧನ ಲಭ್ಯತೆಯ ಸಮಸ್ಯೆಯನ್ನು ಪರಿಹರಿಸುವುದು ಇಂಧನ ಪರಿವರ್ತನೆಗಿಂತಲೂ ಹೆಚ್ಚು ಮುಖ್ಯವಾಗಿದೆ. ಇಂಧನವೇ ಇಲ್ಲದವರಿಗೆ ಇಂಧನದ ಪರಿವರ್ತನೆಯು ಅರ್ಥಹೀನವಾದುದು. ʻಐಎಸ್ಎʼ ವಿಶ್ವದಾದ್ಯಂತ 800 ದಶಲಕ್ಷ ಜನರಿಗೆ ಇಂಧನ ಲಭ್ಯತೆಯನ್ನು ಒದಗಿಸಬಲ್ಲದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಿಂದಿನ ಹವಾಮಾನ ಶೃಂಗಸಭೆಯಲ್ಲಿ ತಾವು ಮಾಡಿದ ವಾಗ್ದಾನದಂತೆ ಇಂಧನ ನಿಧಿಯನ್ನು ಹಂಚಲು ಇದು ಇದು ಸಕಾಲ ಎಂದು ಅವರು ಒತ್ತಿ ಹೇಳಿದರು. ʻಐಎಸ್ಎʼ ಸಾಲದ ಖಾತರಿಯನ್ನು ಒಳಗೊಂಡಿದ್ದು, ದೇಶಗಳಲ್ಲಿ ಹಸಿರು ಇಂಧನ ಹೂಡಿಕೆ ಉತ್ತೇಜಿಸಲು ನೆರವು ನೀಡುತ್ತದೆ. ಆರ್ಥಿಕ ಅಭಿವೃದ್ಧಿ ಶುದ್ಧ ಇಂಧನದ ಮೂಲಕ ನಡೆಯಬೇಕೇ ಅಥವಾ ಕಲ್ಲಿದ್ದಲು ಮತ್ತು ಇತರೆ ಪಳಿಯುಳಿಕೆ ಇಂಧನಗಳನ್ನು ದಹಿಸುವ ಮೂಲಕ ನಡೆಯಬೇಕೆ ಎಂಬುದನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನಿರ್ಧರಿಸಬೇಕು ಎಂದು ಶ್ರೀ ಸಿಂಗ್ ಹೇಳಿದರು.

ʻಐಎಸ್ಎʼ ಮಹಾ ನಿರ್ದೇಶಕ ಡಾ. ಅಜಯ್ ಮಾಥುರ್ ಅವರು ಮಾತನಾಡಿ, "ಕಡಿಮೆ ಇಂಗಾಲ ಹೊರಸೂಸುವಿಕೆ ಆರ್ಥಿಕತೆಯತ್ತ ವಿಶ್ವದ ಪರಿವರ್ತನೆಗೆ ಸೌರಶಕ್ತಿಯು ವೇಗ ನೀಡುತ್ತದೆ. ಇದು ದೇಶಗಳಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಂತ ಅಗ್ಗದ ಮತ್ತು ಅತ್ಯಂತ ಮಿತವ್ಯಯದ ಪರಿಹಾರವಾಗಿದೆ. ಒಂದು ಶತಕೋಟಿಗಿಂತಲೂ ಅಧಿಕ ಜನರನ್ನು ಇಂಧನ ಬಡತನದಿಂದ ಮೇಲೆತ್ತಲು ಸಹಾಯ ಮಾಡುವ ಸಾಮರ್ಥ್ಯವನ್ನು ಈದು ಹೊಂದಿದೆ. ಆದರೆ ಸಾಕಷ್ಟು ಹೂಡಿಕೆಗಳನ್ನು ಸಜ್ಜುಗೊಳಿಸಿದರೆ ಮತ್ತು ಸರಿಯಾದ ನೀತಿ ಚೌಕಟ್ಟುಗಳನ್ನು ನಿರ್ಮಿಸಿದರೆ ಮಾತ್ರ ಇದು ಸಾಧ್ಯ,” ಎಂದರು. 2030 ವೇಳೆಗೆ ಸೌರಕ್ಷೇತ್ರದಲ್ಲಿ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯನ್ನು ʻಐಎಸ್ಎʼ ಗುರಿಯಾಗಿಸಿಕೊಂಡಿದೆ, ಇದು ಜಗತ್ತನ್ನು ಅಗತ್ಯ ಇಂಧನ ಪರಿವರ್ತನೆಗೆ ಹತ್ತಿರತರುವಲ್ಲಿ ಮಹತ್ವದ್ದಾಗಿದೆ." ಎಂದು ಅವರು ಹೇಳಿದರು.

ಫ್ರೆಂಚ್ ಪರಿಸರ ಪರಿವರ್ತನೆ ಸಚಿವ ಮತ್ತು ʻಐಎಸ್ಎʼ ಅಧಿವೇಶನದ ಸಹ-ಅಧ್ಯಕ್ಷ ಶ್ರೀಮತಿ ಬಾರ್ಬರಾ ಪಾಂಪಿಲಿ ಅವರು ಮಾತನಾಡಿ, "ಆಧುನಿಕ ಮತ್ತು ಸುಸ್ಥಿರ ಇಂಧನವನ್ನು ಪಡೆಯಲು ನಮ್ಮೆಲ್ಲರಿಗೂ ಇದು ಪ್ರಮುಖ ವರ್ಷವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಕರೆದ ಮೊದಲ ಇಂಧನ ಶೃಂಗಸಭೆಯಲ್ಲಿ ಹಂಚಿಕೊಂಡ ವಿಚಾರಗಳು ʻಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲಿʼ ನಮ್ಮ ಆದ್ಯತೆಗಳಾಗಿವೆ. 2030 ವೇಳೆಗೆ ಇಂಧನ ಲಭ್ಯತೆ ಅಂತರವನ್ನು ತೊಡೆದುಹಾಕುವುದು; ಸೌರ ಮತ್ತು ಪವನ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಇಂಧನ ವ್ಯವಸ್ಥೆಗಳನ್ನು ಇಂಗಾಲಮುಕ್ತಗೊಳಿಸುವುದು; ನವೀಕರಿಸಬಹುದಾದ ಇಂಧನದಲ್ಲಿ ದೊಡ್ಡ ಪ್ರಮಾಣದ ಹಣಕಾಸು ಕ್ರೋಡೀಕರಣ ಹಾಗೂ ದೊಡ್ಡ ಮಟ್ಟದಲ್ಲಿ ತಂತ್ರಜ್ಞಾನ ಹಂಚಿಕೆಯು ಪ್ರಮುಖ ಗುರಿಗಳಾಗಿವೆ. ʻಸಿಒಪಿ26ʼ ವಿಚಾರದಲ್ಲಿ ಯಾರೂ ಹಿಂದೆ ಉಳಿಯದಂತೆ ಖಾತರಿಪಡಿಸಲು ನಾವು ಶ್ರಮಿಸುತ್ತಿದ್ದೇವೆ. ಹೀಗಾಗಿ, ಅಂತರರಾಷ್ಟ್ರೀಯ ಸಹಕಾರವು ಅಧಿವೇಶನದ ಹೃದಯಭಾಗವಾಗಿದೆ,” ಎಂದರು.

ಬ್ರಿಟನ್ ಸಂಸದರುವಿಜ್ಞಾನ, ತಂತ್ರಜ್ಞಾನ ಮತ್ತು ಹೊಸತನ ಶೋಧದ ಸಚಿವರಾದ ಶ್ರೀ ಜಾರ್ಜ್ ಫ್ರೀಮನ್ ಅವರು ಮಾತನಾಡಿ,

"ಶುದ್ಧ ವಿದ್ಯುತ್ ಪರಿವರ್ತನೆಯನ್ನು ಮೊದಲ ಆದ್ಯತೆಯನ್ನಾಗಿ ಬ್ರಿಟನ್ ಪರಿಗಣಿಸಿದೆ. ಹಸಿರು ವಿದ್ಯುತ್ಗೆ ಪರಿವರ್ತನೆ, ವಿದ್ಯುತ್ ಗ್ರಿಡ್ಗಳ ಸ್ಥಾಪನೆ ಮತ್ತು ನಿರ್ವಹಣೆ ಹಾಗೂ ನಮ್ಮ ಜಾಗತಿಕ ವಿದ್ಯುತ್ ಅಗತ್ಯಗಳನ್ನು ಸುಸ್ಥಿರವಾಗಿ, ಅಗ್ಗದ ದರದಲ್ಲಿ ಹಾಗೂ ವಿಶ್ವಾಸಾರ್ಹವಾಗಿ ಪೂರೈಸುವುದು ಹೇಗೆಂಬುದು ಮುಖ್ಯ ಸವಾಲಾಗಿದೆ. ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ನಮಗೆ ಆಧುನಿಕ ವಿದ್ಯುತ್ ವ್ಯವಸ್ಥೆ ಆಧರಿತ ಮಿನಿ ಗ್ರಿಡ್ಗಳು ಮತ್ತು ಆಫ್-ಗ್ರಿಡ್ ಇಂಧನ ಲಭ್ಯತೆ ಪರಿಹಾರಗಳೊಂದಿಗೆ ಸಮನ್ವಯಿಸಲಾದ ಹೊಸ ಪ್ರಸರಣ ಮಾರ್ಗಗಳ ಅಗತ್ಯವಿದೆ. ಜಾಗತಿಕ ಸಹಕಾರವಿಲ್ಲದ ಹೊರತು, ಶುದ್ಧ ಇಂಧನಕ್ಕೆ ಪರಿವರ್ತನೆಯು ಕೆಲವು ದಶಕಗಳಷ್ಟು ವಿಳಂಬವಾಗಬಹುದು ಎಂಬುದನ್ನು ʻಐಇಎʼ ಈಗಾಗಲೇ ಸ್ಪಷ್ಟಪಡಿಸಿದೆ; ಆದರೆ ಅಷ್ಟು ಸಮಯಾವಕಾಶ ನಮ್ಮ ಬಳಿ ಇಲ್ಲ. ಮೋದಿ-ಜಾನ್ಸನ್ ನಾಯಕತ್ವದಲ್ಲಿ, ಬ್ರಿಟನ್ ಮತ್ತು ಭಾರತ ಎರಡೂ ದೇಶಗಳು ಒಟ್ಟಾಗಿ ಬಾರಿಯ ʻಸಿಒಪಿ26ʼ ಶೃಂಗಸಭೆಯಲ್ಲಿ 'ಗ್ರೀನ್ ಗ್ರಿಡ್ಸ್ ಉಪಕ್ರಮ' ಮತ್ತು 'ಒಬ್ಬ ಸೂರ್ಯ-ಒಂದು ಜಗತ್ತು-ಒಂದು ಗ್ರಿಡ್ʼಗೆ ಚಾಲನೆ ನೀಡಲಿವೆ. ಇದರ ಮೂಲಕ ಜಾಗತಿಕವಾಗಿ ತಾಂತ್ರಿಕ, ಹಣಕಾಸು ಮತ್ತು ಸಂಶೋಧನಾ ಸಹಕಾರವನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಲಾಗಿದೆ. ಏಕೆಂದರೆ ಒಟ್ಟಾಗಿ ಕೆಲಸ ಮಾಡುವ ಮೂಲಕ ಮಾತ್ರ ನಾವು ಶುದ್ಧ ವಿದ್ಯುತ್ ಪರಿವರ್ತನೆಯ ಗುರಿಯ ಪ್ರಮಾಣ ಮತ್ತು ವೇಗವನ್ನು ತಲುಪಲು ಸಾಧ್ಯವಾಗುತ್ತದೆ,” ಎಂದರು.

ಹವಾಮಾನ ಕುರಿತಾದ ಅಮೆರಿಕದ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ ಜಾನ್ ಕೆರ್ರಿ ಅವರು ಮಾತನಾಡಿ, "ಹವಾಮಾನ ಬಿಕ್ಕಟ್ಟನ್ನು ಎದುರಿಸಲು ವಿಶ್ವವು ತನ್ನ ʻಬತ್ತಳಿಕೆʼಯಲ್ಲಿ ಹೊಂದಿರುವ ಅತ್ಯಂತ ಶಕ್ತಿಶಾಲಿ ಸಾಧನವೆಂದರೆ ಅದು ಸೌರ ಶಕ್ತಿ ಮಾತ್ರ. ಸೌರ ಚಾಲಿತ ಆರ್ಥಿಕತೆಯನ್ನು ನಿರ್ಮಿಸುವುದೆಂದರೆ ಕೇವಲ ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸುವುದಿಲ್ಲ. ಇದರಿಂದ ಅಗಾಧ ಆರ್ಥಿಕ ಅವಕಾಶಗಳನ್ನು ತೆರೆದುಕೊಳ್ಳುತ್ತವೆ. ಸಣ್ಣ ದ್ವೀಪ ರಾಜ್ಯಗಳು ಸೇರಿದಂತೆ ಉದಯೋನ್ಮುಖ ಆರ್ಥಿಕತೆಗಳಿಗೆ ಸೌರಶಕ್ತಿಯನ್ನು ಹರಡುವತ್ತ ಗಮನ ಹರಿಸುವಲ್ಲಿ ʻಐಎಸ್ಎʼ ಪಾತ್ರ ಅನನ್ಯವಾಗಿದೆ. ಆದ್ದರಿಂದ, ಅಂತರರಾಷ್ಟ್ರೀಯ ಸೌರ ಮೈತ್ರಿಕೂಟದ ಭಾಗವಾಗಿ ಇಲ್ಲಿನ ಪ್ರತಿಯೊಂದು ದೇಶವೂ ಮಾಡುತ್ತಿರುವ ಅದ್ಭುತ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ. ನಮ್ಮ ಸಾಮೂಹಿಕ ಹವಾಮಾನ ಗುರಿಗಳಿಗೆ ಸೌರ ಶಕ್ತಿ ನಿರ್ಣಾಯಕವಾಗಿದೆ,” ಎಂದು ಹೇಳಿದರು.

2015ರಲ್ಲಿ ಪ್ಯಾರಿಸ್ನಲ್ಲಿ ʻಐಎಸ್ಎʼಗೆ ಚಾಲನೆ ನೀಡಿದ ಸಾಧಿಸಿದ ಪ್ರಮುಖ ಮೈಲುಗಲ್ಲುಗಳನ್ನು ಒತ್ತಿ ಹೇಳಿದ ʻಯುರೋಪಿಯನ್ ಗ್ರೀನ್ ಡೀಲ್ʼ ಐರೋಪ್ಯ ಆಯೋಗದ ಕಾರ್ಯಕಾರಿ ಉಪಾಧ್ಯಕ್ಷ ಘನತೆವೆತ್ತ. ಫ್ರಾನ್ಸ್ ಟಿಮ್ಮರ್ಮನ್ಸ್ ಅವರು, "ಕೋವಿಡ್ ಬಿಕ್ಕಟ್ಟಿನಿಂದ ನಮ್ಮ ಜಗತ್ತು ಚೇತರಿಸಿಕೊಳ್ಳಲು ಮತ್ತು ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಡುವ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನದ ಅಭಿವೃದ್ಧಿಯು ನಿರ್ಣಾಯಕವಾಗಿದೆ. ವಿದ್ಯುತ್ ಉತ್ಪಾದಿಸಲು ಮತ್ತು ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಇದು ಅತ್ಯಂತ ವೇಗದ ಮತ್ತು ಮಿತ ವ್ಯಯದ ಆಯ್ಕೆಯಾಗಿದೆ. ಶುದ್ಧ ಮತ್ತು ದಕ್ಷ ಇಂಧನ ಹೂಡಿಕೆಗಳು ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುತ್ತವೆ, ಹೊಸ ವ್ಯಾಪಾರ ಅವಕಾಶಗಳನ್ನು ತೆರೆಯುತ್ತವೆ ಮತ್ತು ಬೃಹತ್ ಸಂಖ್ಯೆಯಲ್ಲಿ ಸ್ಥಳೀಯ ಕೌಶಲ್ಯಯುತ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಇದು ಹವಾಮಾನ ಸಂಬಂಧಿತ ಉಪಕ್ರಮಕ್ಕಿಂತಲೂ ಮಿಗಿಲಾದದ್ದು. ಹೇಳಬೇಕೆಂದರೆ, ಇಂದು ಇದೊಂದು ಸ್ಮಾರ್ಟ್ ವ್ಯವಹಾರವಾಗಿದೆ," ಎಂದರು.

ʻಇಂಧನ ಪರಿವರ್ತನೆಗೆ ಬೆಂಬಲ ನೀಡಲು ಮಹಿಳೆಯರ ಸಾಮರ್ಥ್ಯ ಹೆಚ್ಚಳʼ ಎಂಬ ವಿಷಯ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಶೇಖರ ಚತುರ್ವೇದಿ ಅವರು, "ನವೀಕರಿಸಬಹುದಾದ ಇಂಧನ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಖಾಸಗಿ ವಲಯವು ದೊಡ್ಡ ರೀತಿಯಲ್ಲಿ ಕೊಡುಗೆ ನೀಡಬೇಕಾಗುತ್ತದೆ. ಉದ್ಯೋಗಕ್ಕೆ ಅರ್ಹತೆಯನ್ನು ಪಡೆಯಲು ಸಾಮರ್ಥ್ಯವು ಅತ್ಯಗತ್ಯ. ನಿಟ್ಟಿನಲ್ಲಿ ಸಚಿವಾಲಯದ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳಲ್ಲಿ ಮಹಿಳೆಯರತ್ತ ಹೆಚ್ಚು ಗಮನ ಹರಿಸಲಾಗುವುದು. ನವೀಕರಿಸಬಹುದಾದ ಇಂಧನ ಪರಿಕರಗಳ ವಿಕೇಂದ್ರೀಕರಣ ಪರಿಕಲ್ಪನೆಯ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆಮುಂಬರುವ ತಿಂಗಳುಗಳಲ್ಲಿ ಅದನ್ನು ಒಂದು ಯೋಜನೆಯನ್ನಾಗಿ ಪರಿವರ್ತಿಸಲು ಯೋಜಿಸಿದ್ದೇವೆ. ಇದರಡಿಯಲ್ಲಿ ಮಹಿಳೆಯರು ಸೌರಶಕ್ತಿ ಚಾಲಿತ ಡ್ರೈಯರ್ಗಳು ಮತ್ತು ಸೌರಶಕ್ತಿ ಚಾಲಿತ ಗ್ರೈಂಡರ್ಗಳು ಮುಂತಾದ ಸಾಧನಗಳನ್ನು ಬಳಸಬಹುದು. ಮೂಲಕ ಮಹಿಳೆಯರ ಜೀವನವನ್ನು ಸುಧಾರಿಸಲು ಮತ್ತು ಜೀವನೋಪಾಯವನ್ನು ಗಳಿಸಲು ಅನುವು ಮಾಡಿಕೊಡಲಾಗುವುದು,” ಎಂದರು.

ಅಧಿವೇಶನದಲ್ಲಿ ಎರಡು ಹೊಸ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು, ಅವೆಂದರೆ: ʻಸೌರ ಪಿವಿ ಪ್ಯಾನೆಲ್ಗಳು ಮತ್ತು ಬ್ಯಾಟರಿ ಬಳಕೆಯ ತ್ಯಾಜ್ಯದ ನಿರ್ವಹಣೆʼ ಹಾಗೂ ʻಸೌರ ಹೈಡ್ರೋಜನ್ ಕಾರ್ಯಕ್ರಮʼ. ಹೊಸ ಹೈಡ್ರೋಜನ್ ಉಪಕ್ರಮದ ಅಡಿಯಲ್ಲಿ ಸೌರ ವಿದ್ಯುತ್ ಅನ್ನು ಬಳಸಿ ಪ್ರಸ್ತುತ ಉತ್ಪಾದನಾ ದರಕ್ಕಿಂತ (ಪ್ರತಿ ಕೆಜಿಗೆ 5 ಅಮೆರಿಕನ್ ಡಾಲರು) ಅಗ್ಗದ ದರದಲ್ಲಿ ದರದಲ್ಲಿ ಹೈಡ್ರೋಜನ್ ಉತ್ಪಾದಿಸಲು ಅನುವು ಮಾಡಿಕೊಡುವ ಗುರಿಯನ್ನು ಹೊಂದಲಾಗಿದೆ. ಮೂಲಕ ಹೈಡ್ರೋಜನ್ ಉತ್ಪಾದನೆಯನ್ನು ಪ್ರತಿ ಕೆ.ಜಿ.ಗೆ 2 ಅಮೆರಿಕನ್ ಡಾಲರ್ ನಷ್ಟು ಇಳಿಸುವ ಗುರಿ ಹೊಂದಲಾಗಿದೆ. ನೈಸರ್ಗಿಕ ಅನಿಲದೊಂದಿಗೆ ಹೈಡ್ರೋಜನ್ ಉತ್ಪಾದನಾ ವೆಚ್ಚವನ್ನು ಸ್ಪರ್ಧಾತ್ಮಕಗೊಳಿಸುವುದು ಪೂರೈಕೆ ಹಾಗೂ ಕಾರ್ಯಕ್ಷಮತೆ ಎರಡಕ್ಕೂ ದೃಷ್ಟಿಯಿಂದ ಪ್ರಮುಖ ಸವಾಲಾಗಿದೆ. ಆದಾಗ್ಯೂ, ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಪ್ರಯೋಜನಗಳ ಸರಣಿಯನ್ನು ವಿಸ್ತರಿಸಬಹುದು. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ (ಎಂಎಸ್ಎಂಇ) ವಲಯವು ಡೀಸೆಲ್ ಜೆನ್ ಸೆಟ್‌ಗಳ ಬದಲಾಗಿ ಹೈಡ್ರೋಜನ್ ಬಳಸಬಹುದು. ಇಂದಿನ ಸೌರ ಹೈಡ್ರೋಜನ್ ಬೆಲೆಗಳಲ್ಲಿ ಇದು ಕಾರ್ಯಸಾಧುವಾಗಿದೆ ಅಧಿವೇಶನದಲ್ಲಿ ನಡೆದ ಚರ್ಚೆಗಳಲ್ಲಿ ಒತ್ತಿ ಹೇಳಲಾಯಿತು. ಹೆಚ್ಚುತ್ತಿರುವ ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳ ಪ್ರಮಾಣ, ತ್ಯಾಜ್ಯದ ಕುರಿತಾಗಿ ನಿರ್ದಿಷ್ಟ ಶಾಸನದ ಕೊರತೆ ಮತ್ತು ತ್ಯಾಜ್ಯ ಸಂಸ್ಕರಣೆಯ ಅತೀವ ವೆಚ್ಚದ ಹಿನ್ನೆಲೆಯಲ್ಲಿ ʻಐಎಸ್ಎʼ ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವು ವಿಚಾರದಲ್ಲಿ ಹೇಗೆ ನಿರ್ಣಾಯಕ ಪಾತ್ರ ವಹಿಸಬಲ್ಲದು ಎಂಬದರ ಬಗ್ಗೆಯೂ ಚರ್ಚೆಗಳಲ್ಲಿ ಗಮನ ಹರಿಸಲಾಯಿತು.

ʻಒಬ್ಬ ಸೂರ್ಯ- ಒಂದು ಜಗತ್ತು- ಒಂದು ಗ್ರಿಡ್ʼ (ಒಎಸ್ಒಡಬ್ಲ್ಯುಒಜಿ) ಉಪಕ್ರಮದ ಬಗ್ಗೆಯೂ ಅಧಿವೇಶನದಲ್ಲಿ ಚರ್ಚಿಸಲಾಯಿತು. ಸೌರ ಶಕ್ತಿಗಾಗಿ ಒಂದೇ ಜಾಗತಿಕ ಗ್ರಿಡ್ ಪರಿಕಲ್ಪನೆಯನ್ನು ಮೊದಲು 2018 ಕೊನೆಯಲ್ಲಿ ನಡೆದ ಮೊದಲ `ಐಎಸ್ಎಅಧಿವೇಶನದಲ್ಲಿ ವಿವರಿಸಲಾಯಿತು. ಉಪಕ್ರಮವು ವಿಶ್ವಾದ್ಯಂತ ಸೌರ ಶಕ್ತಿಯನ್ನು ಹಂಚಿಕೊಳ್ಳಲು ಅಂತರ-ಪ್ರಾದೇಶಿಕ ಇಂಧನ ಗ್ರಿಡ್ಗಳ ನಿರ್ಮಾಣ ಮತ್ತು ಅವುಗಳ ಸಾಮರ್ಥ್ಯ ವರ್ಧನೆಯತ್ತ ಗಮನ ಹರಿಸುತ್ತದೆ. ಇದಕ್ಕಾಗಿ ಉಪಕ್ರಮವು ವಿವಿಧ ಸಮಯ ವಲಯಗಳು, ಋತುಗಳು, ಸಂಪನ್ಮೂಲಗಳು ಮತ್ತು ದೇಶಗಳು ಹಾಗೂ ಪ್ರದೇಶಗಳ ನಡುವಿನ ಬೆಲೆಗಳ ವ್ಯತ್ಯಾಸಗಳನ್ನು ಬಳಸಿಕೊಳ್ಳುತ್ತದೆ. ಇಂದು ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯ ಅತಿದೊಡ್ಡ ಮೂಲವಾಗಿರುವ ಇಂಧನ ಉತ್ಪಾದನೆಯನ್ನು ಇಂಗಾಲಮುಕ್ತಗೊಳಿಸುವಲ್ಲಿ ʻಒಎಸ್ಒಡಬ್ಲ್ಯುಒಜಿʼ ಸಹಾಯ ಮಾಡುತ್ತದೆ. ಜಾಗತಿಕವಾಗಿ ಇದೇ ರೀತಿಯ ಇತರ ಉಪಕ್ರಮಗಳೊಂದಿಗೆ ತನ್ನ ಪ್ರಯತ್ನಗಳು ಮತ್ತು ಕ್ರಮಗಳನ್ನು ಸಮನ್ವಯಗೊಳಿಸುವ ಗುರಿಯೊಂದಿಗೆ ʻಜಿಜಿಐʼ ಜೊತೆಗೆ ʻಒಎಸ್ಒಡಬ್ಲ್ಯುಒಜಿʼ ಕೈಜೋಡಿಸಿದೆ. ಮೂಲಕ ಜಂಟಿಯಾಗಿ ʻಜಿಜಿಐ-ಒಎಸ್ಒಡಬ್ಲ್ಯುಒಜಿʼ ಉಪಕ್ರಮವನ್ನು ರೂಪಿಸಿದೆ. ಇದು ಜಾಗತಿಕವಾಗಿ ಸಹಯೋಗದ ಮೂಲಕ ಸ್ಥಿತಿಸ್ಥಾಪಕ ಗ್ರಿಡ್ ಗಳ ತ್ವರಿತ ಅಭಿವೃದ್ಧಿಗೆ ನೆರವಾಗುವ ಗುರಿಯನ್ನು ಹೊಂದಿದೆ. ಖಂಡಾಂತರ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಗ್ರಿಡ್ ಮೂಲಸೌಕರ್ಯ ಯೋಜನೆಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ. ಎರಡೂ ಉಪಕ್ರಮಗಳ ಜಂಟಿ ಗುರಿ ಸಾಧನೆಗೆ  ನೆರವಾಗಲು ತಾಂತ್ರಿಕ, ಹಣಕಾಸು ಮತ್ತು ಸಂಶೋಧನಾ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಿಂಗಳಾಂತ್ಯದಲ್ಲಿ ನಡೆಯುವ ಹವಾಮಾನ ಶೃಂಗಸಭೆಯಲ್ಲಿ (ʻಸಿಒಪಿ26ʼ) ಬ್ರಿಟನ್‌ ʻಸಿಒಪಿʼ ಅಧ್ಯಕ್ಷರು, ಭಾರತ ಸರಕಾರ ಮತ್ತು ʻಐಎಸ್ಎʼ ಅಧ್ಯಕ್ಷರು ಸಹಯೋಗವನ್ನು ಘೋಷಿಸುವ ನಿರೀಕ್ಷೆಯಿದೆ. ಸಹಯೋಗವು ಪರಸ್ಪರ ಪ್ರಯೋಜನಗಳಿಗಾಗಿ ಮತ್ತು ಜಾಗತಿಕ ಸುಸ್ಥಿರತೆಗಾಗಿ ಪರಸ್ಪರ ಹಂಚಿಕೊಳ್ಳಲಾದ ಅಂತರ-ಸಂಪರ್ಕಿತ ನವೀಕರಿಸಬಹುದಾದ ಜಾಗತಿಕ ಪರಿಸರ ವ್ಯವಸ್ಥೆಯತ್ತ ಮತ್ತೊಂದು ದೈತ್ಯ  ಹೆಜ್ಜೆಯಾಗಲಿದೆ. ಜೊತೆಗೆ ಒಟ್ಟಾರೆಯಾಗಿ ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮತ್ತು ಜಾಗತಿಕ ಇಂಧನ ಪರಿವರ್ತನೆಯನ್ನು ಬೆಂಬಲಿಸಲು ಅತ್ಯಂತ ಸ್ಥಿತಿಸ್ಥಾಪಕ ಕ್ರಮಗಳಲ್ಲಿ ಒಂದೆನಿಸಲಿದೆ.

ಅಂತಾರಾಷ್ಟ್ರೀಯ ಸೌರ ಮೈತ್ರಿಕ್ಕೂಟದ (ಐಎಸ್ಎ) ಸದಸ್ಯ ರಾಷ್ಟ್ರಗಳ ವ್ಯಾಪ್ತಿಯಲ್ಲಿ ಸೌರ ಶಕ್ತಿಗಾಗಿ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಜಾಗತಿಕ ಹೂಡಿಕೆ ಕ್ರೋಡೀಕರಿಸುವ ನಿಟ್ಟಿನಲ್ಲಿ ʻಬ್ಲೂಮ್ಬರ್ಗ್ ಫಿಲಾಂತ್ರಫೀಸ್ʼ ಜೊತೆ ʻಐಎಸ್ಎʼ ಸಹಯೋಗ ಘೋಷಿಸಿದೆ. ಎರಡೂ ಸಂಸ್ಥೆಗಳು ʻಸೌರ ಹೂಡಿಕೆ ಕ್ರಿಯಾ ಕಾರ್ಯಸೂಚಿ  ಮತ್ತು ಸೌರ ಹೂಡಿಕೆ ಮಾರ್ಗಸೂಚಿʼಯನ್ನು ಅಭಿವೃದ್ಧಿಪಡಿಸಲು ʻವಿಶ್ವ ಸಂಪನ್ಮೂಲ ಸಂಸ್ಥೆ (ಡಬ್ಲ್ಯುಆರ್ ) ಜೊತೆ ಕೆಲಸಮಾಡುತ್ತವೆ. ಸಹಯೋಗಕ್ಕೆ   ಹವಾಮಾನ ಶೃಂಗದಲ್ಲಿ ಚಾಲನೆ ನೀಡಲಾಗುವುದು.

***


(Release ID: 1766895) Visitor Counter : 292