ಪ್ರಧಾನ ಮಂತ್ರಿಯವರ ಕಛೇರಿ

20ರಂದು ಜಾಗತಿಕ ತೈಲ ಮತ್ತು ಅನಿಲ ವಲಯದ ತಜ್ಞರು ಮತ್ತು ಸಿಇಓಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿ

Posted On: 19 OCT 2021 12:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021 ಅಕ್ಟೋಬರ್ 20ರಂದು ಸಂಜೆ 6 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಾಗತಿಕ ತೈಲ ಮತ್ತು ಅನಿಲ ವಲಯದ ತಜ್ಞರು ಮತ್ತು ಸಿ...ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇದು ತೈಲ ಮತ್ತು ಅನಿಲ ವಲಯದಲ್ಲಿ ಜಾಗತಿಕ ನಾಯಕರ ಭಾಗವಹಿಸುವಿಕೆಯನ್ನು ಗುರುತಿಸಲು, ಅವರುಗಳು ಕ್ಷೇತ್ರದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಭಾರತದೊಂದಿಗೆ ಸಹಯೋಗ ಮತ್ತು ಹೂಡಿಕೆಯ ಸಂಭಾವ್ಯ ಕ್ಷೇತ್ರಗಳನ್ನು ಅನ್ವೇಷಿಸಲು 2016ರಲ್ಲಿ ಆರಂಭವಾದ ಇಂತಹ ಸಂವಾದದ ಪೈಕಿ ಆರನೆಯದಾಗಿದೆ.

ಸಂವಾದದ ವಿಸ್ತೃತ ಉದ್ದೇಶ ಶುದ್ಧ ಬೆಳವಣಿಗೆ ಮತ್ತು ಸುಸ್ಥಿರತೆಯ ಉತ್ತೇಜನವಾಗಿದೆ. ಸಂವಾದವು ಭಾರತದಲ್ಲಿ ಹೈಡ್ರೋಕಾರ್ಬನ್ ವಲಯದಲ್ಲಿ ಪರಿಶೋಧನೆ ಮತ್ತು ಉತ್ಪಾದನೆ, ಇಂಧನ ಸ್ವಾತಂತ್ರ್ಯ, ಅನಿಲ ಆಧಾರಿತ ಆರ್ಥಿಕತೆ, ಸ್ವಚ್ಛ ಮತ್ತು ಇಂಧನ ದಕ್ಷ ಪರಿಹಾರಗಳ ಮೂಲಕ ಹೊರಸೂಸುವಿಕೆ ತಗ್ಗಿಸುವುದು, ಹಸಿರು ಹೈಡ್ರೋಜನ್ ಆರ್ಥಿಕತೆ, ಜೈವಿಕ ಇಂಧನ ಉತ್ಪಾದನೆ ಮತ್ತು ತ್ಯಾಜ್ಯದಿಂದ ಸಂಪತ್ತು ಸೃಷ್ಟಿಯನ್ನು ಉತ್ತೇಜಿಸುವಂತಹ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತದೆ. ವಿಚಾರ ವಿನಿಮಯದಲ್ಲಿ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಉನ್ನತ ಅಂತಾರಾಷ್ಟ್ರೀಯ ಸಂಸ್ಥೆಗಳ ಸಿಇಒಗಳು ಮತ್ತು ತಜ್ಞರು ಭಾಗವಹಿಸಲಿದ್ದಾರೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರು ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

***



(Release ID: 1765072) Visitor Counter : 167