ಸಂಪುಟ

ಅಟಲ್‌ ಮಿಶನ್‌ ನಗರ ಸುಧಾರಣೆ ಮತ್ತು ಪುನಃಶ್ಚೇತನ ಯೋಜನೆ, ಅಮೃತ್‌ 2.0ಅನ್ನು 2025–2026ರವರೆಗೆ ಮುಂದುವರಿಸಲು ಸಚಿವ ಸಂಪುಟದ ಅನುಮೋದನೆ


ನಗರದ ಮನೆಗಳಿಗೆ ವಿಶ್ವಾಸಾರ್ಹ ಮತ್ತು ಶುದ್ಧ ಜಲಮೂಲಗಳಿಂದ ಕೈಗೆಟಕುವ ಬೆಲೆಯಲ್ಲಿ ನೀರು ಒದಗಿಸುವುದು, ನೈರ್ಮಲ್ಯ ಕಾಪಾಡುವುದು ರಾಷ್ಟ್ರೀಯ ಆದ್ಯತೆಯಾಗಿದೆ.

ಅಮೃತ್‌ 2.0ನ ಸೂಚಕ ವೆಚ್ಚ ₹2,77,000 ಕೋಟಿ ರೂಪಾಯಿ ಅಂದಾಜು

4,378 ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿ ಮನೆಗೂ ನೀರು ಪೂರೈಕೆಯನ್ನು ಒದಗಿಸುವ ಉದ್ದೇಶ ಅಮೃತ್‌ 2.0ಗೆ ಇದೆ

500 ಅಮೃತ್‌ ನಗರಗಳಲ್ಲಿ ಶೇ 100ರಷ್ಟು ನೈರ್ಮಲ್ಯ ಸೇವೆ ಒದಗಿಸುವ ಉದ್ದೇಶ

2.68 ಕೋಟಿ ನಲ್ಲಿಗಳ ಸಂಪರ್ಕ ನೀಡುವುದು, 2.64 ಕೋಟಿ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಒಳಚರಂಡಿ ವ್ಯವಸ್ಥೆ ನಿರ್ಮಿಸುವುದಾಗಿದೆ

Posted On: 12 OCT 2021 8:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಅಟಲ್‌ ಮಿಶನ್‌ ನಗರಗಳ ಪುನಃಶ್ಚೇತನ ಹಾಗೂ ಸುಧಾರಣೆ (ಅಮೃತ್‌ 2.0) ಯೋಜನೆಯನ್ನು 2025–2026 ವರೆಗೂ ಮುಂದುವರಿಸಲು ಅನುಮೋದನೆ ನೀಡಲಾಗಿದೆ. ಆತ್ಮನಿರ್ಭರ್‌ ಭಾರತ ಮಾಡುವ ದಿಸೆಯಲ್ಲಿ, ನಗರ ಪ್ರದೇಶದ ಎಲ್ಲ ಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಹಾಗೂ ಸ್ವಸುಸ್ಥಿರ ವ್ಯವಸ್ಥೆಯನ್ನು ಕಲ್ಪಿಸಿ, ಜಲ ಸುರಕ್ಷೆಯನ್ನು ನೀಡಲು ಯೋಜನೆಯನ್ನು ಆರಂಭಿಸಲಾಗಿದೆನಗರದ ಪ್ರತಿ ಮನೆಗೂ ನೈರ್ಮಲ್ಯಕ್ಕಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಒದಗಿಸುವುದು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಬೇಕು ಎಂಬುದನ್ನು ಸಚಿವ ಸಂಪುಟ ಸಭೆ ಮನಗಂಡಿದೆ. ಇದು ಪ್ರತಿಮನೆಗೂ ಕುಡಿಯುವ ನೀರಿನ ನಲ್ಲಿ ಸ್ಥಾಪಿಸುವುದರಿಂದ, ಜಲಮೂಲ ಸಂರಕ್ಷಣೆ, ಉಳಿಕೆ, ಪುನಃಶ್ಚೇತನ ಜಲಮೂಲಗಳಾದ ಬಾವಿಗಳ ಸಂರಕ್ಷಣೆ ಮಾಡುವುದರಿಂದ ಗುರಿಯನ್ನು ಸಾಧಿಸಬಹುದಾಗಿದೆ. ನೀರಿನ ಮರುಬಳಕೆ, ಮಳೆಕೊಯ್ಲು ಮುಂತಾದವುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ, ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಬಹುದು.

ಅಟಲ್‌ ಮಿಶನ್‌ ಫಾರ್‌ ರಿಜುವೆನ್ಶನ್‌ ಮತ್ತು ಅರ್ಬನ್‌ ಟ್ರಾನ್ಸ್‌ಫಾರ್ಮೇಷನ್‌ (ಅಮೃತ್‌) ನಗರಗಳ ಸುಧಾರಣೆ ಮತ್ತು ಪುನಃಶ್ಚೇತನದ ಅಟಲ್‌ ಮಿಶನ್‌ ಯೋಜನೆಯನ್ನು ಮೊದಲು ಜೂನ್‌ 2015ರಲ್ಲಿ ರಾಷ್ಟ್ರೀಯ ಜಲ ಅಭಿಯಾನದ ಮೂಲಕ ಆರಂಭಿಸಲಾಗಿತ್ತು. ಯೋಜನೆಯಲ್ಲಿ 500 ನಗರಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಿಕೊಡಲಾಗಿತ್ತು. 1.1 ಕೋಟಿ ಮನೆಗಳಿಗೆ ನೀರಿನ ಸಂಪರ್ಕ, 85 ಲಕ್ಷ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ನೀಡಲಾಗಿದೆ. 6,000 ಎಂಎಲ್‌ಡಿ ಒಳಚರಂಡಿ ನೀರು ಮರುಬಳಕೆಗೆ ಸಾಧ್ಯವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳಲ್ಲಿ 1,210 ಎಂಎಲ್‌ಡಿ ಸಾಮರ್ಥ್ಯದ ಜಲ ಮರುಬಳಕೆಗೆ ಸಾಧ್ಯವಾಗುವಂತೆ ಮಾಡಲಾಗಿದೆ. 907 ಎಂಎಲ್‌ಡಿ ಕೊಳಚೆ ನೀರನ್ನು ಜಲಸಂಸ್ಕರಣೆಯಿಂದ ಮರುಬಳಕೆಯಾಗುವಂತೆ ಮಾಡಲಾಗಿದೆ. 3600 ಎಕರೆ ವ್ಯಾಪ್ತಿ ಪ್ರದೇಶದ 1820 ಉದ್ಯಾನಗಳಿಗೆ ಸಂಸ್ಕರಿತ ನೀರನ್ನು ಬಳಸಲಾಗುತ್ತಿದೆ. 1,800 ಎಕರೆ ಪ್ರದೇಶದ ಹಸಿರೀಕರಣಕ್ಕಾಗಿ ಬಳಸಲಾಗುತ್ತಿದೆ. 1,700 ನೆರೆ ಪ್ರದೇಶವನ್ನು ಸುಧಾರಿಸಲಾಗಿದೆ.

4,378 ಪಟ್ಟಣ ಪಂಚಾಯಿತಿಗಳಲ್ಲಿ ಅಮೃತ್‌, ಅಮೃತ್‌ 2.0 ಅಭಿಯಾನದಲ್ಲಿ ಮನೆಗೆ ನೀರಿನ ಸಂಪರ್ಕವನ್ನು ನೀಡಲಾಗಿದೆ. ಶೇ 100ರಷ್ಟು ಒಳಚರಂಡಿ ಸಂಪರ್ಕ ನೀಡಲಾಗಿದೆ. ಅಮೃತ್‌ ಯೋಜನೆ ಅಡಿಯಲ್ಲಿರುವ 500 ನಗರಗಳಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯದ ಗುರಿ ಸಾಧಿಸಲಾಗಿದೆ. ಈಗ ಅಭಿಯಾನದಲ್ಲಿ 2.68 ಕೋಟಿ ನಲ್ಲಿ ಸಂಪರ್ಕ ಹಾಗೂ ನೈರ್ಮಲ್ಯಕ್ಕಾಗಿ ಒಳಚರಂಡಿ ವ್ಯವಸ್ಥೆ ಮಾಡಲಾಗುವುದು.

ಅಮೃತ್‌ 2.0 ಯೋಜನೆಗಾಗಿ ₹2,77,000 ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಿದೆ. ಇದರಲ್ಲಿ ಶೇ ₹76.760 ಕೋಟಿಗಳನ್ನೂ ಒಳಗೊಂಡಿದೆ. ಆರ್ಥಿಕ ವರ್ಷ 2021–2022ರಿಂದ 2025–2026 ಸಾಲಿನವರೆಗೂ ಯೋಜನೆಯನ್ನು ಕಾರ್ಯಾನುಷ್ಠಾನಕ್ಕೆ ತರಲಾಗುವುದು.

ಇಡಿಯ ಅಭಿಯಾನವನ್ನು ರೋಬಸ್ಟ್‌ ತಂತ್ರಜ್ಞಾನ ಆಧಾರಿತ ಪೋರ್ಟಲ್‌ನ ಮೂಲಕ ನಿರ್ವಹಿಸಲಾಗುತ್ತದೆ. ಯೋಜನೆಯನ್ನು ಭೌಗೋಳಿಕ ಗುರುತನ್ನು ನೀಡಲಾಗುತ್ತದೆ. ಪೇಪರ್‌ ರಹಿತ ಅಭಿಯಾನ ಮಾಡಲು ಪ್ರಯತ್ನಿಸಲಾಗುವುದು. ನಗರಗಳು ಜಲಮೂಲಗಳನ್ನು ಪರಿಶೀಲಿಸಬೇಕು. ಜಲ ಬಳಕೆ, ಭವಿಷ್ಯದಲ್ಲಿ ನೀರಿನ ಬೇಡಿಕೆ ಮುಂತಾದವುಗಳನ್ನು ಯೋಜಿಸಲಾಗುತ್ತದೆ. ನಗರಗಳ ಜಲ ಸಮತೋಲನವನ್ನು ಅಂದಾಜಿಸುವ ಯೋಜನೆ ಇದಾಗಿದೆ. ಇದರ ಆಧಾರದ ಮೇಲೆ ಜಲ ಯೋಜನೆಯನ್ನು ಆಯೋಜಿಸಲಾಗುತ್ತದೆ. ನಗರ ಜಲ ಅನುಷ್ಠಾನಗಳ ಬಗ್ಗೆ, ಮನೆ ಹಾಗೂ ನಗರ ವ್ಯವಹಾರಗಳನ್ನು ಸುಲಲಿತಗೊಳಿಸಲು ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಕಾರ್ಯಾನುಷ್ಠಾನ ಯೋಜನೆಯನ್ನು ತಯಾರಿಸುತ್ತದೆ. ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಕೇಂದ್ರಗಳ ಅನುದಾನವನ್ನು ಬಳಸಲಾಗುವುದು. ಕೇಂದ್ರದ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಲಾಗುವುದು. ರಾಜ್ಯ ಜಲ ಕ್ರಿಯಾ ಯೋಜನೆಗೆ ಅನುಗುಣವಾಗಿ ರಾಜ್ಯಗಳಿಗೆ ಮೂರು ಭಾಗಗಳಲ್ಲಿ ನೀಡಲಾಗುತ್ತದೆ.

ಅಮೃತ್ 2.0 ಇತರ ಉಪಯೋಗಗಳೆಂದರೆ ಪೇ ಜಲ್‌ ಸರ್ವೇಕ್ಷಣವನ್ನೂ ಒಳಗೊಂಡಿದೆ. ನಗರಗಳ ನಡುವೆ ಜಲ ಸೇವೆಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಹತ್ತು ಲಕ್ಷಕ್ಕೂ ಮೀರಿದ ಜನಸಂಖ್ಯೆ ಇರುವ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಪಾಲ್ಗೊಳ್ಳುವಿಕೆಗೂ ಹೆಚ್ಚು ಮಹತ್ವ ನೀಡಲಾಗಿದೆ. ಇಂಥ ನಗರಗಳಲ್ಲಿ ಶೇ 10ರಷ್ಟು ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ ಮೂಲಕ ಹಣಕಾಸಿನ ವ್ಯವಸ್ಥೆಯನ್ನು ಮಾಡುವಂತೆ ಆಯೋಜಿಸಲಾಗಿದೆ. ಜಲ ಕ್ಷೇತ್ರದಲ್ಲಿ ಬರುವ ಹೊಸ ತಂತ್ರಗಳನ್ನು ಬಳಸಿಕೊಳ್ಳುವುದು, ಜಲ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಬಳಕೆ, ಅಳವಡಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು. ಮಾಹಿತಿ, ಶಿಕ್ಷಣ ಹಾಗೂ ಸಂವಹನದ ಮೂಲಕ ಅಭಿಯಾನವನ್ನು ಮುನ್ನಡೆಸಲಾಗುವುದು. ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತದೆ.

ಸ್ಥಳೀಯ ಸಂಸ್ಥೆಗಳ ಪುನರುಜ್ಜೀವನದ ಕಡೆಯೂ ಗಮನವಹಿಸಲಾಗುತ್ತಿದೆ. ನೀರಿನ ಬೇಡಿಕೆಯಲ್ಲಿ ಶೇ 20ರಷ್ಟು ನೀರನ್ನು ಸಂಸ್ಕರಿತ ಜಲವನ್ನೇ ನೀಡುವ ಗುರಿ, ನೀರಿನ ಮರುಬಳಕೆಯ ಮೂಲಕ ಬಳಸಲು ಹೆಚ್ಚು ಗಮನವಹಿಸಲಾಗುತ್ತಿದೆ. ಆದಾಯ ರಹಿತ ನೀರಿನ ಬಳಕೆಯನ್ನು ಶೇ 20ರಷ್ಟು ಕಡಿತಗೊಳಿಸಬೇಕು. ಜಲಮೂಲಗಳನ್ನು ಪುನಃಶ್ಚೇತನಗೊಳಿಸಬೇಕು. ಜಲಮೂಲಗಳಿಗೆ ಸಂಬಂಧಿಸಿದಂತೆ ಸುಧಾರಣೆ ಹಾಗೂ ಬದಲಾವಣೆಗಳಿಗೆ ಪ್ರಯತ್ನಿಸುವುದುಆಸ್ತಿ ತೆರಿಗೆ, ಬಳಕೆದಾರರ ವೆಚ್ಚಗಳ ಸುಧಾರಣೆ ಮಾಡಲಾಗುವುದು. ಸ್ಥಳೀಯ ಆಡಳಿತ ಸಂಸ್ಥೆಗಳ ಸುಧಾರಣೆಗೆ ಕ್ರಿಯಾಯೋಜನೆಯನ್ನು ನಿರ್ವಹಿಸಲಾಗುವುದು.

***



(Release ID: 1763502) Visitor Counter : 277