ಆಯುಷ್

ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯ ಸಾಮರ್ಥ್ಯ ವೃದ್ಧಿ ಮತ್ತು ಶೈಕ್ಷಣಿಕ ಸಂಶೋಧನೆಗೆ ಭಾರತ ಮತ್ತು ಕ್ರೊಯೇಷಿಯಾ ನಡುವೆ ಸಹಭಾಗಿತ್ವ


ಎಐಐಎ-ಕ್ವರ್ನರ್ ನಡುವೆ ಆರೋಗ್ಯ ಪ್ರವಾಸೋದ್ಯಮ ಕಸ್ಲರ್ ಗೆ ಜಾಗ್ರೆಬ್ ನಲ್ಲಿ ಒಪ್ಪಂದಕ್ಕೆ ಸಹಿ

Posted On: 08 OCT 2021 11:57AM by PIB Bengaluru

ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯಲ್ಲಿ, ವಿಶೇಷವಾಗಿ ಆಯುರ್ವೇದ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವೆ ಶೈಕ್ಷಣಿಕ ಸಹಭಾಗಿತ್ವಕ್ಕೆ ಭಾರತದ ಆಯುಷ್ ಸಚಿವಾಲಯ ಮತ್ತು ಕ್ರೊಯೇಷಿಯಾ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿವೆ

ಆಖಿಲ ಭಾರತ ಆಯುರ್ವೇದ ಕೇಂದ್ರ (ಎಐಐಎ) ಮತ್ತು ಕ್ರೊಯೇಷಿಯಾದ ಕ್ವರ್ನರ್ ಹೆಲ್ತ್ ಟೂರಿಸಂ ಕ್ಲಸ್ಟರ್ ನಡುವೆ ಒಪ್ಪಂದಕ್ಕೆ ಸಹಿ ಹಾಕಿಲಾಗಿದೆ. ಎಐಐಎ ಆಯುಷ್ ಸಚಿವಾಲಯದಡಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ.

ಕ್ರೊಯೇಷಿಯಾದೊಂದಿಗಿನ ಒಪ್ಪಂದವು ಭಾರತ ಇತರೆ ದೇಶಗಳ ನಡುವಿನ ಸಂಬಂಧ ಬಲಪಡಿಸುವ ಮತ್ತು ಶೈಕ್ಷಣಿಕ ಸಂಶೋಧನೆ, ಕ್ಲಿನಿಕಲ್ ಮತ್ತು ಶೈಕ್ಷಣಿಕ ಚಟುವಟಿಕೆಗಳು, ವೈದ್ಯಕೀಯ ಶಿಕ್ಷಣ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಆಯುಷ್ ಸಚಿವಾಲಯದ ಸಲಹೆಗಾರ-ಡಾ.ಮನೋಜ್ ನೇಸರಿ ಎಐಐಎ ಪರವಾಗಿ ಆಯುಷ್ ಇಲಾಖೆ ವಿಶೇಷ ಕಾರ್ಯದರ್ಶಿ ಶ್ರೀ ಪ್ರಮೋದ್ ಕುಮಾರ್ ಪಾಠಕ್ ಮತ್ತು ಭಾರತದಲ್ಲಿನ ಕ್ರೊಯೇಷಿಯಾ ರಾಯಭಾರಿ ಶ್ರೀ ರಾಜ್ ಶ್ರೀವಾತ್ಸವ ಅವರ ಸಮಕ್ಷಮದಲ್ಲಿ  ಒಪ್ಪಂದಕ್ಕೆ ಸಹಿ ಹಾಕಿದರು.

ಕ್ರೊಯೇಷಿಯಾ ಕಡೆಯಿಂದ ಕ್ಲಸ್ಟರ್ ಅಧ್ಯಕ್ಷ, ಸಹಾಯಕ ಪ್ರೊಫೆಸರ್ ವ್ಲಾದಿಮಿರ್ ಮೊಜೆಟಿಕ್, ಕ್ಲಸ್ಡರ್ ಆಡಳಿತ ಮಂಡಳಿ ಅಧ್ಯಕ್ಷೆ ಐರಿನಾ ಪೆರ್ಸಿಶಿವಾಡಿನೋವ್ ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಸಂದ್ರಾ ಜನ್ಕೋವಿಕ್, ಸಂದ್ರಾ ಮಾರ್ಟಿನ್ ಸಿಕ್ ಮತ್ತು ಅನ್ನಾ ಮರಿಯಾ ಲಿಬ್ರಿಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾರದ ಆರಂಭದಲ್ಲಿ ಮೊದಲ ಅಂತಾರಾಷ್ಟ್ರೀಯ ಯೋಗ ಮತ್ತು ಆಯುರ್ವೇದ ಸಮ್ಮೇಳನದಲ್ಲಿ ಭಾಗವಹಿಸಲು ಆಯುಷ್ ವಿಶೇಷ ಕಾರ್ಯದರ್ಶಿ ಶ್ರೀ ಪ್ರಮೋದ್ ಕುಮಾರ್ ಪಾಠಕ್ ನೇತೃತ್ವದ ಆರು ಮಂದಿಯ ನಿಯೋಗ ಕ್ರೊಯೇಷಿಯಾದಲ್ಲಿದೆ.

ಕೆಲವು ಗುರುತಿಸಲಾದ ಸಂಸ್ಥೆಗಳ ಸಹಯೋಗದೊಂದಿಗೆ ಎರಡೂ ದೇಶಗಳು ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳಲಿವೆ. ಅಧ್ಯಯನದ ವಿನ್ಯಾಸ ಮತ್ತು ಅದನ್ನು ಕಾರ್ಯಗತಗೊಳಿಸುವುದು, ಸಂಶೋಧನೆಯಲ್ಲಿ ನಿಕಟ ಸಹಕಾರ ಮತ್ತು ಸಹಭಾಗಿತ್ವ, ಆಧುನಿಕ ಔಷಧಗಳೊಂದಿಗೆ ಆಯುರ್ವೇದ ತತ್ವಗಳು ಮತ್ತು ಪದ್ದತಿಗಳನ್ನು ಸಂಯೋಜಿಸಲು ಸಾಕ್ಷ್ಯ ಆಧಾರಿತ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು, ಉಪನ್ಯಾಸ, ಕಾರ್ಯಾಗಾರ, ವಿಚಾರ ಸಂಕಿರಣ ಮತ್ತು ಸಮ್ಮೇಳನ ಮತ್ತಿತರ ಆಯುರ್ವೇದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳುವುದು ಇದರಲ್ಲಿ ಸೇರಿದೆ

ಎರಡೂ ದೇಶಗಳು ಸಂಸ್ಥೆಗಳು, ಬಳಕೆದಾರರು ಮತ್ತು ಪಾಲುದಾರರ ಅಗತ್ಯಗಳಿಗೆ ತಕ್ಕಂತೆ ಕೋರ್ಸ್ ಗಳನ್ನು ಮತ್ತು ಶೈಕ್ಷಣಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸಲಿದ್ದಾರೆ. ಜೊತೆಗೆ ಕ್ರೊಯೇಷಿಯಾದಲ್ಲಿ ಆಯುರ್ವೇದ ಶಿಕ್ಷಣಕ್ಕೆ ಆಯುರ್ವೇದಿಕ್ ವೈದ್ಯಕೀಯ ಶಿಕ್ಷಣ ಮಾರ್ಗಸೂಚಿಯನ್ನು ರೂಪಿಸಲಾಗುವುದು.

ಒಪ್ಪಂದ ಶೈಕ್ಷಣಿಕ ಸಂಶೋಧನೆ, ಕ್ಲಿನಿಕಲ್ ಮತ್ತು  ಶೈಕ್ಷಣಿಕ ಚಟುವಟಿಕೆಗಳು, ವೈದ್ಯಕೀಯ ಶಿಕ್ಷಣ, ತರಬೇತಿ ಮತ್ತು ಸಾಮರ್ಥ್ಯವೃದ್ಧಿಗೆ ಉತ್ತೇಜನ  ನೀಡಲಿದೆ’’ಎಂದು ಆಯುಷ್  ಸಚಿವಾಲಯದ ಆಯುರ್ವೇದ ಸಲಹೆಗಾರರಾದ ಡಾ.ಮನೋಜ್ ನೇಸರಿ ಹೇಳಿದ್ದಾರೆ

ಆರೋಗ್ಯ ಮತ್ತು ಪ್ರವಾಸೋದ್ಯಮ ಉತ್ಪನ್ನಗಳನ್ನು ಹೆಚ್ಚು ಸಮಗ್ರವಾಗಿ ಒದಗಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪಾಲುದಾರರು ಮತ್ತು ಸದಸ್ಯರ ನಡುವೆ ಸಂಪರ್ಕ ಕಲ್ಪಿಸುವುದು ಕ್ಲಸ್ಟರ್ ಒಂದು ಪ್ರಮುಖ ಗುರಿಯಾಗಿರುವುದನ್ನು ಪರಿಗಣಿಸಿ,ಸಂಘದ ಸದಸ್ಯರಿಗೆ ಜಾಗೃತಿ ಮೂಡಿಸುವುದು, ಭಾರತೀಯ ಸಚಿವಾಲಯದೊಂದಿಗಿನ ವ್ಯಾಪಾರ ಸಹಕಾರ ನಮ್ಮ 32 ಸದಸ್ಯರಿಗೆ ಭಾರತದ ಸಂಭಾವ್ಯ ಪಾಲುದಾರರ ನಡುವೆ ಸಂಪರ್ಕಿಸಲು ಹೊಸ ಅವಕಾಶಗಳನ್ನು ಒದಗಿಸಿಕೊಡುತ್ತದೆ ಎಂದು ನಾವು ನಂಬಿದ್ದೇವೆ.   ಆರೋಗ್ಯ ಮತ್ತು ಪ್ರವಾಸೋದ್ಯಮ ಮಾತ್ರವಲ್ಲದೆ, ಕ್ವರ್ನರ್ ಹೆಚ್ಚುವರಿಯಾಗಿ ಶಿಕ್ಷಣ, ತರಬೇತಿ ಮತ್ತು ಸಾಮರ್ಥ್ಯ  ಬಲವರ್ಧನೆ ನಿಟ್ಟಿನಲ್ಲೂ ಹೊಸ ಪಾಲುದಾರರೊಂದಿಗೆ ಕಾರ್ಯನಿರ್ವಹಿಸಲಿದೆ’’ ಎಂದು ಡಾ. ವ್ಲಾದಿಮಿರ್ ಮೊಜೆಟಿಕ್ ಹೇಳಿದ್ದಾರೆ

***



(Release ID: 1762083) Visitor Counter : 266