ಪ್ರಧಾನ ಮಂತ್ರಿಯವರ ಕಛೇರಿ

ಶ್ಯಾಮ್ ಜೀ ಕೃಷ್ಣ ವರ್ಮಾ ಅವರ ಜಯಂತಿ ಸಂದರ್ಭದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ

Posted On: 04 OCT 2021 10:36AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಯಾಮ್ ಜೀ ಕೃಷ್ಣ ವರ್ಮಾ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. 2003ರಲ್ಲಿ ಶ್ಯಾಮ್ ಜೀ ಕೃಷ್ಣ ವರ್ಮಾ ಅವರ ಚಿತಾಭಸ್ಮವನ್ನು ಸ್ವಿಟ್ಜರ್ಲೆಂಡ್‌ನಿಂದ ಭಾರತಕ್ಕೆ ಮರಳಿ ತಂದದ್ದನ್ನು 2015 ರಲ್ಲಿ ಬ್ರಿಟನ್‌ನಿಂದ ಮರುನೇಮಕ ಪ್ರಮಾಣಪತ್ರವನ್ನು ಪಡೆದದ್ದನ್ನು ಪ್ರಧಾನಿ ಸ್ಮರಿಸಿದ್ದಾರೆ.

ಬಗ್ಗೆ ಪ್ರಧಾನಿ ಹೀಗೆ ಸರಣಿ ಟ್ವೀಟ್‌ ಮಾಡಿದ್ದಾರೆ.

ಮಹಾನ್ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ ಜೀ ಕೃಷ್ಣ ವರ್ಮಾ  ಅವರ ಜನ್ಮ ದಿನದಂದು ಅವರಿಗೆ ಗೌರವ ನಮನಗಳುದೇಶವನ್ನು ಗುಲಾಮಗಿರಿಯಿಂದ  ಮುಕ್ತಗೊಳಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸ್ವಾತಂತ್ರ್ಯ ಹೋರಾಟಕ್ಕೆ  ಅವರ ಕೊಡುಗೆಯನ್ನು ದೇಶವು ಎಂದಿಗೂ ಮರೆಯುವುದಿಲ್ಲ.”

ಶ್ಯಾಮ್ ಜಿ ಕೃಷ್ಣ ವರ್ಮಾ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು”.

“2003ರಲ್ಲಿ ಶ್ಯಾಮ್ ಜಿ ಕೃಷ್ಣ ವರ್ಮಾ ಅವರ ಚಿತಾಭಸ್ಮವನ್ನು ಸ್ವಿಟ್ಜರ್ಲೆಂಡ್‌ನಿಂದ ಮರಳಿ ಭಾರತಕ್ಕೆ ತರಲು ಮತ್ತು 2015ರಲ್ಲಿ ನನ್ನ ಬ್ರಿಟನ್‌ ಭೇಟಿಯ ಸಮಯದಲ್ಲಿ ಅವರ ಮರುನೇಮಕ ಪ್ರಮಾಣಪತ್ರವನ್ನು ಸ್ವೀಕರಿಸಲು ಅವಕಾಶ ಸಿಕ್ಕಿದ್ದು ನನ್ನ ಸುದೈವ ಎಂದು ನಾನು ಭಾವಿಸುತ್ತೇನೆ. ಅವರ ಧೈರ್ಯ ಮತ್ತು ಶ್ರೇಷ್ಠತೆಯ ಬಗ್ಗೆ ಯುವ ಭಾರತ ಹೆಚ್ಚಾಗಿ ತಿಳಿಯಬೇಕಿದೆ.

***(Release ID: 1760733) Visitor Counter : 297