ನೀತಿ ಆಯೋಗ
ನೀತಿ ಆಯೋಗದ ಮಹಿಳಾ ಉದ್ಯಮಶೀಲತಾ ವೇದಿಕೆಯಿಂದ 2021-22ನೇ ಸಾಲಿನ ಭಾರತವನ್ನು ಪರಿವರ್ತಿಸುತ್ತಿರುವ ಮಹಿಳಾ ಪ್ರಶಸ್ತಿಗಳ 5ನೇ ಆವೃತ್ತಿಗೆ ಅರ್ಜಿಗಳ ಆಹ್ವಾನ
Posted On:
02 OCT 2021 1:25PM by PIB Bengaluru
75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ನೀತಿ ಆಯೋಗದ ಮಹತ್ವಾಕಾಂಕ್ಷೆಯ ಉಪಕ್ರಮ, ಮಹಿಳಾ ಉದ್ಯಮಶೀಲತಾ ವೇದಿಕೆ (ಡಬ್ಲೂ ಇಪಿ), ಆಜಾದಿ ಕಾ ಅಮೃತಮಹೋತ್ಸವ ಆಚರಣೆ ಭಾಗವಾಗಿ 75 ಮಹಿಳಾ ಸಾಧಕಿಯರನ್ನು ಸನ್ಮಾನಿಸಲಿದೆ. ಅದು ಸ್ಥಾಪನೆಯಾದಾಗಿನಿಂದ ನೀಡುತ್ತಿರುವ ಐದನೇ ಆವೃತ್ತಿಯ ಪ್ರಶಸ್ತಿ ಇದಾಗಿದ್ದು, ಭಾರತವನ್ನು ಪರಿವರ್ತಿಸುತ್ತಿರುವ ಮಹಿಳೆಯರ ಪ್ರಶಸ್ತಿ(ಡಬ್ಲೂಟಿಐ ) 2021 ರಲ್ಲಿ ‘ಸಶಕ್ತ ಔರ್ ಸಮರ್ಥ ಭಾರತ್’ ಹೆಸರಿನಲ್ಲಿ ಸ್ವಾವಲಂಬಿ ವ್ಯವಹಾರಗಳನ್ನು ರೂಪಿಸುವ ಮೂಲಕ ಮತ್ತು ಅಥವಾ ನವೀನ ವ್ಯಾಪಾರ ಪರಿಹಾರಗಳ ಮೂಲಕ ಸವಾಲುಗಳನ್ನು ಗೆದ್ದಿರುವುದನ್ನು ಆಚರಿಸಲಾಗುವುದು.
ಡಬ್ಲೂಟಿಐ ಪ್ರಶಸ್ತಿಗಳು ಭಾರತಾದ್ಯಂತ ಅಸಾಧಾರಣ ಮಹಿಳಾ ಪರಿವರ್ತಕಿಯರ ಕತೆಗಳನ್ನು ಗುರುತಿಸುವುದು ಮತ್ತು ಆಚರಿಸುವ ನೀತಿ ಆಯೋಗದ ಪ್ರಯತ್ನವಾಗಿದೆ. 2018ರಿಂದೀಚೆಗೆ, ‘ಮಹಿಳೆ ಮತ್ತು ಉದ್ಯಮಶೀಲತೆ’ ಗೆ ಒತ್ತು ನೀಡಿ ಮಹಿಳಾ ಉದ್ಯಮಶೀಲತಾ ವೇದಿಕೆಯ ಆಶ್ರಯದಲ್ಲಿ ಡಬ್ಲೂಟಿಐ ಪ್ರಶಸ್ತಿ ನೀಡುವುದನ್ನು ಆರಂಭಿಸಲಾಯಿತು. ಪ್ರಶಸ್ತಿಗಳು ಮುಂಚೂಣಿಗೆ ಬರುತ್ತಿದ್ದು, ದೇಶಾದ್ಯಂತ ಸ್ಪೂರ್ತಿದಾಯಕ ಮಹಿಳಾ ಮಾದರಿಗಳು ಪ್ರಭಾವ ಬೀರುತ್ತಿವೆ. ಹಿಂದಿನ ಆವೃತ್ತಿಗಳು ವಾಣಿಜ್ಯ ಮತ್ತು ಸಾಮಾಜಿಕ ವಲಯ ಎರಡರ ಮೇಲೂ ಮಹಿಳೆಯರ ನೇತೃತ್ವದ ವ್ಯವಹಾರಗಳು ಅದ್ಬುತ ಕೆಲಸಗಳಿಂದಾಗಿ ಗಮನ ಸೆಳೆಯುತ್ತಿವೆ.
ಡಬ್ಲೂಟಿಐ ಪ್ರಶಸ್ತಿಗಳನ್ನು ವಿಶ್ವಸಂಸ್ಥೆ, ಸಿಸ್ಕೋ ಸಿಎಸ್ ಆರ್, ಎಫ್ ಐಸಿಸಿಐ ಮತ್ತು ಗ್ರಾಂಟ್ ಥ್ರೋನ್ ಟನ್ ಭಾರತದ ಪಾಲುದಾರಿಕೆಯಲ್ಲಿ ಆರಂಭಿಸಲಾಗಿದೆ. ಅರ್ಜಿಗಳು https://wep.gov.in/ ಲಭ್ಯವಿವೆ ಮತ್ತು 2021ರ ಡಿಸೆಂಬರ್ 31ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು.
ಮಹಿಳಾ ಉದ್ಯಮಿಗಳು ಸ್ವಯಂ ನಾಮಾಂಕನ ಸಲ್ಲಿಸಬಹುದು ಅಥವಾ ಇತರರೂ ಸಹ ನಾಮನಿರ್ದೇಶನ ಮಾಡಬಹುದು. ನಾಮಾಂಕನಗಳನ್ನು ಏಳು ವರ್ಗದಡಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವರ್ಗದಲ್ಲಿ ಸಲ್ಲಿಸಬಹುದು- ಸಾರ್ವಜನಿಕ ಮತ್ತು ಸಮುದಾಯ ಸೇವೆ, ಉತ್ಪಾದನಾ ವಲಯ, ಉತ್ಪಾದನೆಯೇತರ ವಲಯ, ಆರ್ಥಿಕ ಪ್ರಗತಿಗೆ ಪೂರಕ ಹಣಕಾಸು ಉತ್ಪನ್ನಗಳು, ಹವಾಮಾನ ಕ್ರಿಯೆ, ಕಲೆ, ಸಂಸ್ಕೃತಿ ಮತ್ತು ಕರಕುಶಲ ಕಲೆ ಉತ್ತೇಜನ ಮತ್ತು ಡಿಜಿಟಲ್ ನಾವಿನ್ಯ. ಅರ್ಜಿ ನಮೂನೆ ಮತ್ತು ಅರ್ಹತಾ ಮಾನದಂಡ ಮತ್ತಿತರ ವಿಸ್ತೃತ ಮಾರ್ಗಸೂಚಿಗಳು https://wep.gov.in/wep-faqs ನಲ್ಲಿ ಲಭ್ಯವಿವೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕದ ನಂತರ, ಸ್ವತಂತ್ರ ಮೌಲ್ಯಮಾಪನ, ಜ್ಯೂರಿ ಮತ್ತು ಸೂಪರ್ ಜ್ಯೂರಿ ಒಳಗೊಂಡಂತೆ ಮೂರು ಹಂತದಲ್ಲಿ ಪರಿಶೀಲನಾ ಕಾರ್ಯ ನಡೆಯಲಿದೆ. ಅಪ್ರತಿಮ ಸಾಧನೆಗೈಯ್ದಿರುವ 75 ಸ್ಪೂರ್ತಿದಾಯಕ ಮಹಿಳಾ ಉದ್ಯಮಶೀಲರನ್ನು ಗುರುತಿಸಲಾಗುವುದು. ಈ ವಿಜೇತರನ್ನು 75ನೇ ಸ್ವಾತಂತ್ರೋತ್ಸವ ಆಚರಿಸುವ ವೇಳೆ- ‘ಆಜಾದಿ ಕಾ ಅಮೃತ ಮಹೋತ್ಸವ’ ದ ಸಂದರ್ಭದಲ್ಲಿ 2022ರ ಮಾರ್ಚ್ 8ರ ಮಂಗಳವಾರದ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಗೌರವಿಸಲಾಗುವುದು.
ಮಹಿಳಾ ಉದ್ಯಮಶೀಲತಾ ವೇದಿಕೆಯು, ಎಲ್ಲಾ ಪಾಲುದಾರರನ್ನು ಒಗ್ಗೂಡಿಸುವ ಮೂಲಕ ಮಾಹಿತಿ ಹಾಗೂ ಸೇವೆಗಳನ್ನು ನೀಡಿ, ಹಾಲಿ ಮಾಹಿತಿ ಪ್ರಸರಣದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸಲು ಮತ್ತು ಮಹಿಳೆಯರಿಗೆ ಉದ್ಯಮಶೀಲತಾ ಪೂರಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇಚ್ಛಾಶಕ್ತಿ, ಜ್ಞಾನ ಶಕ್ತಿ ಮತ್ತು ಕರ್ಮ ಶಕ್ತಿ – ಈ ಮೂರು ಸ್ತಂಭಗಳನ್ನು ಆಧರಿಸಿ ಈಗಾಗಲೇ ಉದ್ಯಮಿಗಳಾಗಿರುವವರಿಗೆ ಮತ್ತು ಉದ್ಯಮಿಗಳಾಗುವ ಆಕಾಂಕ್ಷೆ ಇರುವವರಿಗೆ ವೇದಿಕೆಯನ್ನು ಒದಗಿಸಿಕೊಡಲಿದೆ. ವೇದಿಕೆಯು ಸಂಪೋಷಣಾ ಬೆಂಬಲ, ಮಾರ್ಗದರ್ಶನ, ಹೂಡಿಕೆ ಅವಕಾಶಗಳು, ಪಾಲನೆ/ತೆರಿಗೆ ಬೆಂಬಲ ಮತ್ತು ಕಲಿಕೆಯನ್ನು ಒದಗಿಸಲಿದೆ.
ಸದ್ಯ, ಮಹಿಳಾ ಉದ್ಯಮಶೀಲತಾ ವೇದಿಕೆಯು 21 ಸಾವಿರಕ್ಕೂ ಅಧಿಕ ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು ಅದು 37 ಪಾಲುದಾರರೊಂದಿಗೆ ಕಾರ್ಯಕ್ರಮಗಳನ್ನು (30 ಹಾಲಿ ಮತ್ತು 7 ಪಾಲುದಾರರನ್ನು ಹೊಸದಾಗಿ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ) ನಡೆಸುತ್ತಿದೆ.
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ :
***
(Release ID: 1760379)
Visitor Counter : 459