ರೈಲ್ವೇ ಸಚಿವಾಲಯ

ರಾಜಕೋಟ್‌ ಕನಾಲುಸ್ ನಡುವಿನ ರೈಲುಮಾರ್ಗವನ್ನು ದ್ವಿಮಾರ್ಗವಾಗಿ ಪರಿವರ್ತಿಸಲು ಕ್ಯಾಬಿನೆಟ್‌ ಅನುಮೋದನೆ


1,080.58 ಕೋಟಿ ರೂಪಾಯಿ ಅಂದಾಜು ವೆಚ್ಚ. 1,168.13 ಕೋಟಿ ರೂಪಾಯಿಗಳಲ್ಲಿ ಯೋಜನೆ ಪೂರ್ಣ

ಒಟ್ಟು 111.20 ಕಿ.ಮೀ. ಜೋಡಿ ಮಾರ್ಗದ ಉದ್ದ

ಈ ಜೋಡಿ ಮಾರ್ಗದಿಂದ ಸಂಚಾರ ಸಾಮರ್ಥ್ಯಹೆಚ್ಚುವುದು. ಇದೇ ಸಂಚಾರ ಮಾರ್ಗದಲ್ಲಿ ಟ್ರಾಫಿಕ್‌ ಸಹ ಹೆಚ್ಚಳವಾಗುವುದು. ರಾಜಕೋಟ್‌ ಹಾಗೂ ಕನಾಲುಸ್‌ ನಡುವಿನ ಜೋಡಿಮಾರ್ಗ ನಿರ್ಮಾಣದಿಂದ ಸೌರಾಷ್ಟ್ರ ಪ್ರದೇಶದ ಸಮಗ್ರ ಅಭಿವೃದ್ಧಿ

Posted On: 29 SEP 2021 3:56PM by PIB Bengaluru

ಆರ್ಥಿಕ ವ್ಯವಹಾರ ಸಮಿತಿಯು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಧ್ಯಕ್ಷರಾದ ಶ್ರೀ ನರೇಂದ್ರ ಮೋದಿ ಅವರು ರಾಜಕೋಟ್‌ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿದ್ದಾರೆ. ಇಡೀ ಯೋಜನೆಯ ಅಂದಾಜು ವೆಚ್ಚ ₹.1,080.58 ಕೋಟಿಗಳಷ್ಟಾಗಿದೆ. ಸಂಪೂರ್ಣಗೊಳಿಸುವ ವೆಚ್ಚ 1,168.13 ಕೋಟಿಯಾಗಿದೆ. ಈ ಇಡೀ ಯೋಜನೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು.  

ಈಗಿರುವ ಸರಕುಗಳ ಸಂಚಾರದ ಟ್ರಾಫಿಕ್‌ ಅನ್ನು ಕಲ್ಲಿದ್ದಲು, ಸಿಮೆಂಟು, ಗೊಬ್ಬರ, ಆಹಾರ ಧಾನ್ಯಗಳನ್ನು ಸಾಗಿಸಲಾಗುತ್ತದೆ. ಈ ಜೋಡಿ ಮಾರ್ಗದಿಂದಾಗಿ ಅಕ್ಕಪಕ್ಕದ ಕೈಗಾರಿಕೆಗಳಿಗೆ ಅನುಕೂಲವಾಗುತ್ತದೆ. ಖಾಸಗಿ ಕೈಗಾರಿಕೆಗಳೊಂದಿಗೆ ಸಹಭಾಗಿತ್ವದಲ್ಲಿ ಉತ್ಪನ್ನಗಳನ್ನು ಸಾಗಿಸಲು ಈ ಮಾರ್ಗವು ಅನುಕೂಲ ಮಾಡಿಕೊಡುತ್ತದೆ. ರೈಲು ಮಾರ್ಗದ ಉದ್ದಕ್ಕೂ ಬರುವ ಕೈಗಾರಿಕೆಗಳೊಂದಿಗೆ ಸಂಪರ್ಕ ಸಾಧಿಸಲಾಗುವುದು.

ರಿಲಯನ್ಸ್‌ ಪೆಟ್ರೋಲಿಯಂ, ESSAR ತೈಲ, ಟಾಟಾ ಕೆಮಿಕಲ್‌ ಈ ಎಲ್ಲ ಕೈಗಾರಿಕೆಗಳೊಂದಿಗೆ ವಹಿವಾಟು ಆರಂಭಿಸಲು ಅನುಕೂಲವಾಗುವುದು. ಈಗಿರುವ ಈ ಏಕಮಾರ್ಗವು ವಿಪರೀತದ ಟ್ರಾಫಿಕ್‌ ಎದುರಿಸುತ್ತಿದೆ. ಇದರ ಜೊತೆಗೆ ಇನ್ನೊಂದು ಪರ್ಯಾಯ ಮಾರ್ಗ ಬೇಕು. 30 ಜೋಡಿ, ಪ್ಯಾಸೆಂಜರ್‌, ಮೇಲ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಇದರಿಂದ ಅನುಕೂಲವಾಗುವುದು. ಈಗಿರುವ ಮಾರ್ಗದಲ್ಲಿ ಸಂಚಾರವು ವಿಪರೀತವಾಗಿದ್ದು, ನಿರ್ವಹಣೆಯ ತಡೆಗೆ ಶೇ 157/5ರಷ್ಟು ಹೆಚ್ಚಾಗಿದೆ. ಜೋಡಿ ಮಾರ್ಗದ ನಂತರ, ಸರಕು ಸಾಗಣೆಗೂ, ಪ್ರಯಾಣಿಕರ ರೈಲುಗಳಿಗೂ ಒತ್ತಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಇನ್ನಷ್ಟು ರೈಲುಗಳ ಸಂಚಾರಕ್ಕೂ ಅನುಕೂಲವಾಘುತ್ತದೆ. ಈ ನಿಟ್ಟಿನಲ್ಲಿ ಸೌರಾಷ್ಟ್ರ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ರಾಜಕೋಟ್‌ ಮತ್ತು ಕನಾಲುಸ್‌ ನಡುವಿನ ಜೋಡಿ ಮಾರ್ಗ ನಿರ್ಮಾಣ ಕಾರಣವಾಗುತ್ತದೆ.

***(Release ID: 1759396) Visitor Counter : 211