ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಯಶಸ್ಸು ಆಕೆಯ ಹವ್ಯಾಸ
Posted On:
29 SEP 2021 11:30AM by PIB Bengaluru
ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಇತಿಹಾಸ ಸೃಷ್ಟಿಸಿದ ನಂತರ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಮನೆ ಮಾತಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಒಂದಾದ ಮೇಲೊಂದು ಪದಕಗಳನ್ನು ಪಡೆದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎನಿಸಿಕೊಂಡರು. ಇದಕ್ಕೂ ಮುನ್ನ ಅವರು ರಿಯೊ ಒಲಿಂಪಿಕ್ಸ್|ನಲ್ಲಿ ಬೆಳ್ಳಿ ಪದಕ ಬಾಚಿಕೊಂಡಿದ್ದರು. ಅಲ್ಲಿಂದ ಅವರು ಅದೇ ಗೆಲುವಿನ ಹಾದಿ ಉಳಿಸಿಕೊಂಡು ಬಂದ ಸಿಂಧು, ಟೋಕಿಯೊ ಒಲಿಂಪಿಕ್ಸ್|ನಲ್ಲಿ ಚೀನಾದ ಹೆ ಬಿಂಗ್|ಜಿಯೊ ಅವರನ್ನು 21-13, 21-15 ಸೆಟ್|ಗಳಿಂದ ಮಣಿಸಿ ಕಂಚಿನ ಪದಕ ಗೆದ್ದರು. ಸಿಂಧು ಈಗಾಗಲೇ ವಿಶ್ವ ಚಾಂಪಿಯನ್‌ಶಿಪ್ ಕ್ರೀಡಾಕೂಟ ಹಾಗೂ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಸಿಂಧು ಅವರು ಯಶಸ್ಸನ್ನು ತನ್ನ ಹವ್ಯಾಸವಾಗಿಸಿಕೊಂಡಿದ್ದಾರೆ. ಅವರ ಪಯಣ ಇನ್ನೂ ಮುಂದುವರೆದಿದೆ.
ಸಿಂಧು ಇತಿಹಾಸ ಸೃಷ್ಟಿಸಿದ ಬ್ಯಾಡ್ಮಿಂಟನ್ ರಾಕೆಟ್ ಮೌಲ್ಯವನ್ನು ಊಹಿಸಿ. ಇದು ನಿಸ್ಸಂದೇಹವಾಗಿ ಅಮೂಲ್ಯವಾದುದು. ಆದರೆ ಯಾರಾದರೂ ಆ ರಾಕೆಟ್ ಅನ್ನು ತಮ್ಮದಾಗಿಸಿಕೊಳ್ಳಬಹುದು. ಹೌದು, ನೀವು ಕೇಳಿಸಿಕೊಂಡಿದ್ದು ಸರಿ ಇದೆ. ರಾಷ್ಟ್ರದ ಹಿತದೃಷ್ಟಿಯಿಂದ ನೀವು ಸಿಂಧು ಅವರ ಅಮೂಲ್ಯ ರಾಕೆಟ್‌ನ ಭಾಗವಾಗಬಹುದು.
ಒಲಿಂಪಿಕ್ಸ್|ನಲ್ಲಿ ಅದ್ಭುತ ಪ್ರದರ್ಶನ ನೀಡಿ ಇಡೀ ರಾಷ್ಟ್ರವನ್ನೇ ಮಂತ್ರಮುಗ್ಧಗೊಳಿಸಿ ತಾಯ್ನಾಡಿಗೆ ಮರಳಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ತಾವು ಒಲಿಂಪಿಕ್ಸ್|ನಲ್ಲಿ ಆಟಕ್ಕೆ ಬಳಸಿದ ರಾಕೆಟ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ನೀಡಿದರು. ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವೀಕರಿಸಿದ ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಆರಂಭವಾಗಿದೆ. ಹರಾಜು ಆಗುತ್ತಿರುವ ಅತ್ಯಮೂಲ್ಯ ಉಡುಗೊರೆಗಳ ಪಟ್ಟಿಯಲ್ಲಿ ಪಿ.ವಿ. ಸಿಂಧು ಅವರ ರಾಕೆಟ್ ಕೂಡ ಸೇರಿಕೊಂಡಿದೆ. ಇ-ಹರಾಜು ಸೆಪ್ಟೆಂಬರ್ 17ರಂದು ಆರಂಭವಾಗಿದ್ದು, ಅಕ್ಟೋಬರ್ 7ರ ತನಕ ಮುಂದುವರೆಯಲಿದೆ. ವಿಶ್ವವಿಖಅಯಾತ ಯಾಡ್ಮಿಂಟನ್ ತಾರೆ ಟೋಕಿಯೊ ಒಲಿಂಪಿಕ್ಸ್|ನಲ್ಲಿ ಪದಕ ಗೆಲ್ಲಲು ಬಳಸಿದ ರಾಕೆಟ್|ಗೆ ನೀವು ಹೆಮ್ಮೆಯ ಮಾಲಿಕರಾಗಲು ಇದೀಗ ಸದವಕಾಶ ನಿಮ್ಮೆಲ್ಲರಿಗೂ ಲಭಿಸಿದೆ. ನೀವು ಇ-ಹರಾಜಿನಲ್ಲಿ ಭಾಗವಹಿಸಲು ಮಾಡಬೇಕಾದ್ದು ಇಷ್ಟೆ. ನೀವು ಸುಲಭವಾಗಿ www.pmmementos.gov.in ಪೋರ್ಟಲ್|ಗೆ ಲಾಗ್-ಇನ್ ಆಗಿ. ಪಿ.ವಿ. ಸಿಂಧು ಬಳಸಿದ ರಾಕೆಟ್|ಗೆ 80 ಲಕ್ಷ ರೂಪಾಯಿ ಮೂಲದರ ನಿಗದಿಪಡಿಸಲಾಗಿದೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಕರಿಸಿದ್ದ ಅಪಾರ ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಈ ಮೊದಲು ಸಹ ನಡೆದಿತ್ತು. 2019ರಲ್ಲಿ ಇ-ಹರಾಜು ಪ್ರಕ್ರಿಯೆ ನಡೆದಿತ್ತು. ಆ ಹರಾಜಿನಲ್ಲಿ ಕೇಂದ್ರ ಸರ್ಕಾರಕ್ಕೆ 15.13 ಕೋಟಿ ರೂಪಾಯಿ ಹಣ ಕ್ರೋಡೀಕರಣವಾಗಿತ್ತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ, ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗೆ ಕೋಶ್ ಖಾತೆಗೆ ಠೇವಣಿ ಮಾಡಲಾಗಿದೆ. ಗಂಗಾ ನದಿ ಸ್ವಚ್ಛತೆ ಮತ್ತು ಶುದ್ಧೀಕರಣಕ್ಕಾಗಿ ಹರಾಜು ಹಣವನ್ನು ಬಳಸಲಾಗುತ್ತದೆ. ಈ ಬಾರಿಯ ಹರಾಜು ಮೊತ್ತವೂ ನಮಾಮಿ ಗಂಗೆ ಕೋಶ್ ಖಾತೆಗೆ ಹೋಗಲಿದೆ.
***
(Release ID: 1759247)
Visitor Counter : 227