ಚುನಾವಣಾ ಆಯೋಗ

ಲೋಕಸಭಾ/ ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ವೇಳಾಪಟ್ಟಿ– ಕುರಿತಂತೆ

Posted On: 28 SEP 2021 12:23PM by PIB Bengaluru

ಸಾಂಕ್ರಾಮಿಕ, ಪ್ರವಾಹ, ಹಬ್ಬಗಳು, ಕೆಲವು ಪ್ರದೇಶಗಳಲ್ಲಿನ ಶೀತ ಪರಿಸ್ಥಿತಿಯನ್ನು ಪರಾಮರ್ಶಿಸಿದ ಚುನಾವಣಾ ಆಯೋಗ, ಸಂಬಂಧಿತ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆ ಪಡೆದು, ಎಲ್ಲಾ ಅಂಶಗಳು ಮತ್ತು ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡು, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶ ಗಳಲ್ಲಿ ಖಾಲಿ ಇರುವ ಮೂರು ಸಂಸದೀಯ ಕ್ಷೇತ್ರಗಳು ಮತ್ತು ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಮೂವತ್ತು (30) ವಿಧಾನಸಭಾ ಕ್ಷೇತ್ರಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ಉಪ ಚುನಾವಣೆಗಳನ್ನು ನಡೆಸಲು ನಿರ್ಧರಿಸಿದ್ದು ಕೆಳಗಿನ ವಿವರಗಳ ಪ್ರಕಾರ ನಡೆಸಲು ತೀರ್ಮಾನಿಸಿದೆ:

ಕ್ರ. ಸಂ

ರಾಜ್ಯ/ ಕೇಂದ್ರಾಡಳಿತ ಪ್ರದೇಶ

ಸಂಸದೀಯ ಕ್ಷೇತ್ರದ ಸಂಖ್ಯೆ ಮತ್ತು ಹೆಸರು

 

  1.  

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳು

ದಾದ್ರಾ ಮತ್ತು ನಗರ ಹವೇಲಿ

  1.  

ಮಧ್ಯ ಪ್ರದೇಶ

28-ಖಾಂಡ್ವಾ

  1.  

ಹಿಮಾಚಲ ಪ್ರದೇಶ

2-ಮಂಡಿ

 

 

ಕ್ರ.ಸಂ.

ರಾಜ್ಯ

ಕ್ಷೇತ್ರದ ಸಂಖ್ಯೆ ಮತ್ತು ಹೆಸರು

 

  1.  

ಆಂಧ್ರಪ್ರದೇಶ

124-ಬದ್ವೆಲ್ (ಎಸ್ ಸಿ)

  1.  

ಅಸ್ಸಾಂ

28-ಗೋಸೈಗಾಂವ್

  1.  

ಅಸ್ಸಾಂ

41-ಭವಾನಿಪುರ

  1.  

ಅಸ್ಸಾಂ

58-ತಮುಲ್ಪುರ್

  1.  

ಅಸ್ಸಾಂ

101-ಮರಿಯಾನಿ

  1.  

ಅಸ್ಸಾಂ

107-ಥೌರಾ

  1.  

ಬಿಹಾರ

78-ಕುಶೇಶ್ವರ ಆಸ್ಥಾನ್ (ಎಸ್.ಸಿ.)

  1.  

ಬಿಹಾರ

164-ತಾರಾಪುರ್

  1.  

ಹರಿಯಾಣ

46-ಲ್ಲೆನಾಬಾದ್

  1.  

ಹಿಮಾಚಲ ಪ್ರದೇಶ

08-ಫತೇಪುರ್

  1.  

ಹಿಮಾಚಲ ಪ್ರದೇಶ

50-ಅರ್ಕಿ

  1.  

ಹಿಮಾಚಲ ಪ್ರದೇಶ

65-ಜುಬ್ಬಲ್- ಕೋಟ್ಖಾಯ್

  1.  

ಕರ್ನಾಟಕ

33-ಸಿಂದಗಿ

  1.  

ಕರ್ನಾಟಕ

82-ಹಾನಗಲ್

  1.  

ಮಧ್ಯ ಪ್ರದೇಶ

45-ಪೃಥ್ವಿಪುರ

  1.  

ಮಧ್ಯ ಪ್ರದೇಶ

62-ರೈಗಾಂವ್ (ಎಸ್.ಸಿ.)

  1.  

ಮಧ್ಯ ಪ್ರದೇಶ

192-ಜೋಬತ್ (ಎಸ್ ಟಿ)

  1.  

ಮಹಾರಾಷ್ಟ್ರ

90-ಡೆಗ್ಲುರ್ (ಎಸ್.ಸಿ.)

  1.  

ಮೇಘಾಲಯ

13-ಮಾವ್ರಿಂಗ್ನೆಂಗ್ (ಎಸ್ ಟಿ)

  1.  

ಮೇಘಾಲಯ

24-ಮಾವ್ ಪ್ಲಾಂಗ್ (ಎಸ್ ಟಿ)

  1.  

ಮೇಘಾಲಯ

47-ರಾಜಬಾಲಾ

  1.  

ಮಿಜೋರಾಂ

4-ತುರಿಯಾಲ್ (ಎಸ್ ಟಿ)

  1.  

ನಾಗಾಲ್ಯಾಂಡ್

58-ಶಾಮ್ಟೋರ್-ಚೆಸ್ಸೋರ್ (ಎಸ್ ಟಿ)

  1.  

ರಾಜಸ್ಥಾನ

155-ವಲ್ಲಭನಗರ

  1.  

ರಾಜಸ್ಥಾನ

157-ಧರಿಯಾವಾಡ್ (ಎಸ್ ಟಿ)

  1.  

ತೆಲಂಗಾಣ

31-ಹುಜುರಾಬಾದ್

  1.  

ಪಶ್ಚಿಮ ಬಂಗಾಳ

7-ದಿನ್ಹಾತಾ

  1.  

ಪಶ್ಚಿಮ ಬಂಗಾಳ

86-ಶಾಂತಿಪುರ

  1.  

ಪಶ್ಚಿಮ ಬಂಗಾಳ

109-ಖಾರ್ದಾಹಾ

  1.  

ಪಶ್ಚಿಮ ಬಂಗಾಳ

127-ಗೋಸಾಬಾ(ಎಸ್.ಸಿ.)

ಖಾಲಿ ಇರುವ ಕ್ಷೇತ್ರಗಳನ್ನು ಭರ್ತಿ ಮಾಡಲು ಆಯೋಗವು ಉಪ ಚುನಾವಣೆಗಳನ್ನು ನಡೆಸಲು ನಿರ್ಧರಿಸಿದ್ದು 1951 ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 30 ಅಡಿಯಲ್ಲಿ ಮತ್ತು ಸೆಕ್ಷನ್ 30 (ಸಿ) ಅಡಿಯಲ್ಲಿ ಹಿಂತೆಗೆದುಕೊಳ್ಳುವ ದಿನಾಂಕದ ನಿಬಂಧನೆಗಳ ಪ್ರಕಾರ ಚುನಾವಣಾ ವೇಳಾಪಟ್ಟಿಯ ದಿನಾಂಕಗಳನ್ನು ನಿಗದಿಪಡಿಸಿದೆ. ಉಪ ಚುನಾವಣೆಯ ವೇಳಾಪಟ್ಟಿ ಕೆಳಕಂಡಂತಿದೆ:

ವೇಳಾಪಟ್ಟಿ 1: ಆಂಧ್ರಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ತೆಲಂಗಾಣಗಳ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶ ದದ್ರಾ ನಗರ ಹವೇಲಿ ಮತ್ತು ದಮನ್ ಹಾಗೂ ದಿಯು, ಹಿಮಾಚಲ ಪ್ರದೇಶ, ಮಧ್ಯಪ್ರದೇಶದ ಸಂಸದೀಯ ಕ್ಷೇತ್ರಕ್ಕೆ.

ಚುನಾವಣೆ ಪ್ರಕ್ರಿಯೆ

ವೇಳಾಪಟ್ಟಿ 1

ಗೆಜೆಟ್ ಅಧಿಸೂಚನೆ ಹೊರಡಿಸುವ ದಿನಾಂಕ

01.10.2021

(ಶುಕ್ರವಾರ)

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ

08.10.2021

(ಶುಕ್ರವಾರ)

ನಾಮಪತ್ರಗಳ ಪರಿಶೀಲನೆಯ ದಿನಾಂಕ

11.10.2021

(ಸೋಮವಾರ)

ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ

13.10.2021 (ಬುಧವಾರ)

ಮತದಾನದ ದಿನಾಂಕ

30.10.2021 (ಶನಿವಾರ)

ಮತಎಣಿಕೆಯ ದಿನಾಂಕ

02.11.2021

(ಮಂಗಳವಾರ)

ದಿನಾಂಕಕ್ಕೆ ಮುನ್ನ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು

05.11.2021

(ಶುಕ್ರವಾರ)

 

ವೇಳಾಪಟ್ಟಿ 2: ಅಸ್ಸಾಂ, ಬಿಹಾರ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರಗಳಿಗೆ

ಚುನಾವಣೆ ಪ್ರಕ್ರಿಯೆ

ವೇಳಾಪಟ್ಟಿ 2

ಗೆಜೆಟ್ ಅಧಿಸೂಚನೆ ಹೊರಡಿಸುವ ದಿನಾಂಕ

01.10.2021

(ಶುಕ್ರವಾರ)

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ

08.10.2021

(ಶುಕ್ರವಾರ)

ನಾಮಪತ್ರಗಳ ಪರಿಶೀಲನೆಯ ದಿನಾಂಕ

11.10.2021

(ಸೋಮವಾರ)

ಉಮೇದುವಾರಿಕೆಗಳನ್ನು ಹಿಂಪಡೆಯುವ ಕೊನೆಯ ದಿನಾಂಕ

16.10.2021

(ಶನಿವಾರ)

ಮತದಾನದ ದಿನಾಂಕ

30.10.2021 (ಶನಿವಾರ)

ಮತಎಣಿಕೆಯ ದಿನಾಂಕ

02.11.2021

(ಮಂಗಳವಾರ)

ದಿನಾಂಕಕ್ಕೆ ಮುನ್ನ ಚುನಾವಣೆ ಪೂರ್ಣಗೊಳ್ಳಬೇಕು

05.11.2021

(ಶುಕ್ರವಾರ)

  1. ಮತದಾರರ ಪಟ್ಟಿ

ಮೇಲೆ ತಿಳಿಸಲಾದ ವಿಧಾನಸಭಾ ಕ್ಷೇತ್ರಗಳಿಗೆ 01.01.2021ಕ್ಕೆ ಸಂಬಂಧಿಸಿದಂತೆ ಪ್ರಕಟಿಸಲಾದ ಮತದಾರರ ಪಟ್ಟಿಯನ್ನು ಚುನಾವಣೆಗಳಿಗೆ ಬಳಸಲಾಗುತ್ತದೆ.

  1. ವಿದ್ಯುನ್ಮಾನ ಮತಯಂತ್ರಗಳು (ಇವಿಎಂಗಳು) ಮತ್ತು ವಿವಿಪ್ಯಾಟ್ ಗಳು

ಉಪ ಚುನಾವಣೆಯ ಎಲ್ಲಾ ಮತದಾನ ಕೇಂದ್ರಗಳಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ಬಳಸಲು ಆಯೋಗ ನಿರ್ಧರಿಸಿದೆ. ಸಾಕಷ್ಟು ಸಂಖ್ಯೆಯ ಇವಿಎಂಗಳು ಮತ್ತು ವಿವಿ ಪ್ಯಾಟ್ ಗಳು ಲಭ್ಯವಿದ್ದು, ಯಂತ್ರಗಳ ಸಹಾಯದಿಂದ ಮತದಾನವನ್ನು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

  1. ಮತದಾರರ ಗುರುತಿಸುವಿಕೆ

ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿ (ಎಪಿಕ್) ಮತದಾರನನ್ನು ಗುರುತಿಸುವ ಮುಖ್ಯ ದಾಖಲೆಯಾಗಿರುತ್ತವೆ. ಆದಾಗ್ಯೂ, ಕೆಳಗೆ ಉಲ್ಲೇಖಿಸಲಾದ ಯಾವುದೇ ಗುರುತಿನ ದಾಖಲೆಗಳನ್ನು ಮತದಾನ ಕೇಂದ್ರದಲ್ಲಿ ತೋರಿಸಬಹುದು:

  1. ಆಧಾರ್ ಕಾರ್ಡ್,
  2. ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್,
  3. ಬ್ಯಾಂಕ್/ಅಂಚೆ ಕಚೇರಿ ನೀಡಿದ ಛಾಯಾ ಚಿತ್ರವಿರುವ ಪಾಸ್ ಬುಕ್ ಗಳು,
  4. ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್,
  5. ವಾಹನ ಚಾಲನಾ ಪರವಾನಗಿ,
  6. ಪ್ಯಾನ್ ಕಾರ್ಡ್,
  7. ಎನ್ ಪಿಆರ್ ಅಡಿಯಲ್ಲಿ ಆರ್.ಜಿ. ನೀಡಿದ ಸ್ಮಾರ್ಟ್ ಕಾರ್ಡ್,
  8. ಭಾರತೀಯ ಪಾಸ್ ಪೋರ್ಟ್,
  9. ಛಾಯಾಚಿತ್ರ ಸಹಿತ ಪಿಂಚಣಿ ದಾಖಲೆ,
  10. ಕೇಂದ್ರ/ರಾಜ್ಯ ಸರ್ಕಾರ/ಪಿಎಸ್.ಯುಗಳು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು ಮತ್ತು
  11. ಸಂಸದರು/ಶಾಸಕರು/ಎಂಎಲ್ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು.
  1. ಮಾದರಿ ನೀತಿ ಸಂಹಿತೆ

ಮಾದರಿ ನೀತಿ ಸಂಹಿತೆಯು, ಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಅಥವಾ ಯಾವುದೇ ಭಾಗ ಸೇರಿದ ಜಿಲ್ಲೆ (ಗಳು) ಗಳಲ್ಲಿ ತಕ್ಷಣದಿಂದ ಜಾರಿಗೆ ಬರುತ್ತದೆ, ಆದಾಗ್ಯೂ ಆಯೋಗದ ಸೂಚನೆ ಸಂಖ್ಯೆ 437/6/1ಎನ್.ಎಸ್.ಟಿ/2016-ಸಿಸಿಎಸ್, ದಿನಾಂಕ 29 ಜೂನ್, 2017 (ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದೆ)ರೀತ್ಯ ಭಾಗಶಃ ಮಾರ್ಪಡಿಗೆ ಒಳಪಟ್ಟಿರುತ್ತದೆ.

  1. ಕ್ರಿಮಿನಲ್ ಅಪರಾಧಗಳ ಪೂರ್ವಾಪರಗಳ ಬಗ್ಗೆ ಮಾಹಿತಿ

ಆಯೋಗವು ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕದ ನಂತರದ ದಿನದಿಂದ ಪ್ರಾರಂಭವಾಗುವ ಅವಧಿಯಲ್ಲಿ ಮತ್ತು ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮೊದಲು ಕ್ರಿಮಿನಲ್ ಅಪರಾಧಗಳ ಪೂರ್ವಾಪರಗಳ ಪ್ರಚಾರಕ್ಕಾಗಿ ಗಡುವು ನಿಗದಿಪಡಿಸಿದೆ.

ವಿಷಯದ ಬಗ್ಗೆ ಕ್ರೋಢೀಕೃತ ಸೂಚನೆಗಳು ಆಯೋಗದ ವೆಬ್ ಸೈಟ್ ನಲ್ಲಿ ಕೆಳಗಿನ ಹೈಪರ್ ಲಿಂಕ್ ನಲ್ಲಿ ಲಭ್ಯ. https://eci.gov.in/files/file/12265-broad-guidelines-of-election-commission-of-india-on-publicity-of-criminal-antecedents-by-political-parties-candidates/

ಇದು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ದಿನಾಂಕ 13.02.2020 ಮತ್ತು 10.08.2021 ರಂದು ನ್ಯಾಯಾಂಗ ನಿಂದನೆ ಅರ್ಜಿ (ಸಿ) ಸಂಖ್ಯೆ 656 ರಲ್ಲಿ ಬ್ರಜೇಶ್ ಸಿಂಗ್ ವರ್ಸಸ್ ಸುನಿಲ್ ಅರೋರಾ ಮತ್ತು ಇತರರು ಎಂಬ ಶೀರ್ಷಿಕೆಯ ಪ್ರಕರಣದ ತೀರ್ಪಿನ ಅನುಸಾರವಾಗಿದೆ, ಇದನ್ನು ರಾಜಕೀಯ ಪಕ್ಷಗಳಿಗೆ ಆಯೋಗದ ಪತ್ರ ದಿನಾಂಕ 26.08.2021ರಲ್ಲಿ ಪ್ರಸಾರ ಮಾಡಲಾಗಿದೆ. ತೀರ್ಪಿನ ಪ್ಯಾರಾ 73.ವಿ ಅಡಿಯಲ್ಲಿ ನೀಡಲಾದ ನಿರ್ದೇಶನಕ್ಕೆ ಅನುಗುಣವಾಗಿ, ಈಗ, ನಮೂನೆ ಸಿ-7ರಂತೆ ಅಭ್ಯರ್ಥಿಯ ಆಯ್ಕೆಯ 48 ಗಂಟೆಗಳ ಮುನ್ನ ರಾಜಕೀಯ ಪಕ್ಷಗಳು ಪ್ರಕಟಿಸಬೇಕು ಮತ್ತು ನಾಮಪತ್ರ ಸಲ್ಲಿಸುವ ಮೊದಲ ದಿನಾಂಕಕ್ಕೆ ಎರಡು ವಾರಗಳ ಮೊದಲು ಅಲ್ಲ.

ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕದ ನಂತರದ ದಿನದಿಂದ ಪ್ರಾರಂಭವಾಗುವ ಅವಧಿಯಲ್ಲಿ ಮತ್ತು ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವ ಮುನ್ನ 48 ಗಂಟೆಗಳವರೆಗೆ ಕ್ರಿಮಿನಲ್ ಅಪರಾಧದ ಪೂರ್ವಾಪರಗಳ ಪ್ರಚಾರಕ್ಕಾಗಿ ಆಯೋಗವು ಕೆಳಗಿನ ಸಮಯವನ್ನು ನಿಗದಿಪಡಿಸಿದೆ.

ವಿಷಯದ ಬಗ್ಗೆ ಕ್ರೋಡೀಕೃತ ಸೂಚನೆಗಳು ಆಯೋಗದ ವೆಬ್ ಸೈಟ್ ನಲ್ಲಿ ಕೆಳಗಿನ ಹೈಪರ್ ಲಿಂಕ್ ನಲ್ಲಿ ಲಭ್ಯ. https://eci.gov.in/files/file/12265-broad-guidelines-of-election-commission-of-india-on-publicity-of-criminal-antecedents-by-political-parties-candidates/

  1. ಕೋವಿಡ್-19 ಅವಧಿಯಲ್ಲಿ ಉಪ-ಚುನಾವಣೆ /ಮುಂದೂಡಿದ ಮತದಾನದ ಸಂದರ್ಭದಲ್ಲಿ ಅನುಸರಿಸಬೇಕಾದ ವಿಸ್ತೃತ ಮಾರ್ಗಸೂಚಿಗಳು

ಆಯೋಗವು 2020 ಆಗಸ್ಟ್ 21ರಂದು ವಿಸ್ತೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಆಯೋಗದ ವೆಬ್ ಸೈಟ್ eci.gov.in ಅಥವಾ ಲಿಂಕ್ https://eci.gov.in/candidate-political-parties/instructions-on-covid-19/ನಲ್ಲಿ ಲಭ್ಯವಿರುವ 09.10.2020, 09.04.2021, 16.04.2021, 21.04.2021, 22.04.2021, 23.04.2021 ಮತ್ತು 28.04.2021ರಲ್ಲಿ ಮತ್ತಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, 2021 ಆಗಸ್ಟ್ 28 ಪತ್ರ ಸಂಖ್ಯೆ 40-3/2020-ಡಿಎಂ-1() ಕೋವಿಡ್ ನಿರ್ವಹಣೆಗೆ ಉದ್ದೇಶಿತ ಮತ್ತು ತ್ವರಿತ ಕ್ರಮಗಳ ಅನುಷ್ಠಾನಕ್ಕೆ ಸೂಚನೆಗಳನ್ನು ಎಂಎಚ್ಎ 2021 ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ. ರಾಜಕೀಯ ಪಕ್ಷಗಳು/ಮುಖ್ಯ ಚುನಾವಣಾ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮತ್ತು ಎಂಎಚ್ /ಎಂಒಎಚ್.ಎಫ್.ಡಬ್ಲ್ಯೂ. ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಆಯೋಗವು ಮಾರ್ಗಸೂಚಿಗಳನ್ನು ಮತ್ತಷ್ಟು ಬಲಪಡಿಸಿದೆ. ಇದಲ್ಲದೆ, ಕೋವಿಡ್-19 ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಸಂಬಂಧಿಸಿದ ಆಯೋಗದ ಎಲ್ಲಾ ಸೂಚನೆಗಳು ಉಪ ಚುನಾವಣೆಗಳು / ಮುಂದೂಡಿದ ಮತದಾನಕ್ಕೆ ಅನ್ವಯವಾಗುವ ಎಲ್ಲ ಅಗತ್ಯ ತಿದ್ದುಪಡಿಗಳನ್ನು (ಮ್ಯೂಟಾಟಿಸ್ ಮುಟಾಂಡಿ) ಒಳಗೊಂಡಿವೆ.

ಎಲ್ಲಾ ಬಾಧ್ಯಸ್ಥರು ಸೂಚನೆಗಳಿಗೆ ಬದ್ಧರಾಗಿರಬೇಕು. ಸಂಬಂಧಪಟ್ಟ ರಾಜ್ಯ ಸರ್ಕಾರವು ಸೂಚನೆಗಳಿಗೆ ಅನುಸಾರವಾಗಿ ಎಲ್ಲಾ ಸೂಕ್ತ ಕ್ರಮ/ಕ್ರಮಗಳನ್ನು ಕೆಳಗಿನಂತೆ ತೆಗೆದುಕೊಳ್ಳಬೇಕು.

1

ನಾಮಪತ್ರ ಸಲ್ಲಿಕೆ

ನಾಮ ಪತ್ರ ಸಲ್ಲಿಕೆ ಪೂರ್ವ ಮತ್ತು ನಂತರದ ಸಮಯದಲ್ಲಿ ಮೆರವಣಿಗೆ, ಸಾರ್ವಜನಿಕ ಸಭೆಯನ್ನು ನಿಷೇಧಿಸಲಾಗಿದೆ / ಆರ್ ಕಚೇರಿಯ 100 ಮೀಟರ್ ಗಳ ಪರಿಧಿಯೊಳಗೆ ಕೇವಲ ಮೂರು ವಾಹನಗಳನ್ನು ಮಾತ್ರ ಅನುಮತಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಯಾವುದೇ ಮೆರವಣಿಗೆಗೆ ಅನುಮತಿಸಬಾರದು.

2

ಪ್ರಚಾರದ ಅವಧಿ

 

() ಯಾವುದಕ್ಕಾಗಿ ಸಭೆ

 

(1) ಒಳಾಂಗಣ

 

ಅನುಮತಿಸಿದ ಸಾಮರ್ಥ್ಯದ ಶೇ.30 ಅಥವಾ 200 ವ್ಯಕ್ತಿಗಳು, ಯಾವುದು ಕಡಿಮೆಯೋ ಅದು. ಸಭೆಗೆ ಹಾಜರಾಗುವ ಜನರ ಸಂಖ್ಯೆಯನ್ನು ಎಣಿಸಲು ರಿಜಿಸ್ಟರ್ ಅನ್ನು ನಿರ್ವಹಿಸಲಾಗುತ್ತದೆ.

 

 

 

(2) ಹೊರಾಂಗಣ

 

ಶೇ.50 ಸಾಮರ್ಥ್ಯದೊಂದಿಗೆ (ಕೋವಿಡ್-19 ಮಾರ್ಗಸೂಚಿಗಳ ಪ್ರಕಾರ) ಅಥವಾ ಸ್ಟಾರ್ ಪ್ರಚಾರಕರ ವಿಷಯದಲ್ಲಿ 1000 ಮತ್ತು ಇತರ ಎಲ್ಲಾ ಸಂದರ್ಭಗಳಲ್ಲಿ ಸಾಮರ್ಥ್ಯದ ಶೇ.50 ಅಥವಾ 500. ಎರಡೂ ಸಂದರ್ಭಗಳಲ್ಲಿ, ಅನುಮತಿಸಿದ ಸಂಖ್ಯೆಯು ಯಾವುದು ಕಡಿಮೆಯೋ ಅದು. ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರೆಯುವರು ಮತ್ತು ರಕ್ಷಿಸುವರು. ಮೈದಾನವನ್ನು ಪ್ರವೇಶಿಸುವ ಜನರ ಎಣಿಕೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಸುತ್ತುವರೆಯುವ/ಬ್ಯಾರಿಕೇಡಿಂಗ್ ಮಾಡುವ ವೆಚ್ಚವನ್ನು ಅಭ್ಯರ್ಥಿ/ಪಕ್ಷ ಭರಿಸುತ್ತದೆ. ಸಂಪೂರ್ಣವಾಗಿ ಸುತ್ತುವರಿದ/ಬ್ಯಾರಿಕೇಡ್ ಮಾಡಲಾದ ಮೈದಾನಗಳನ್ನು ಮಾತ್ರ ರಾಲಿಗಳಿಗೆ ಬಳಸಬೇಕು.

 

(ಬಿ) ತಾರಾ ಪ್ರಚಾರಕರು

ಕೋವಿಡ್-19 ಸಾಂಕ್ರಾಮಿಕರೋಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ /ರಾಜ್ಯ ಮಾನ್ಯತೆ ಪಡೆದ ಪಕ್ಷಗಳಿಗೆ ಉಪಚುನಾವಣೆಗಳಿಗೆ ತಾರಾ ಪ್ರಚಾರಕರ ಸಂಖ್ಯೆಯನ್ನು 20ಕ್ಕೆ ಮತ್ತು ಮಾನ್ಯತೆ ಪಡೆಯದ ನೋಂದಾಯಿತ ಪಕ್ಷಗಳಿಗೆ 10ಕ್ಕೆ ಸೀಮಿತಗೊಳಿಸಲಾಗಿದೆ.

 

(ಸಿ) ರೋಡ್ ಶೋ

 

ಯಾವುದೇ ರೋಡ್ ಶೋಗೆ ಅನುಮತಿಸಬಾರದು ಮತ್ತು ಯಾವುದೇ ಮೋಟಾರ್/ಬೈಕ್/ಸೈಕಲ್ ರಾಲಿಗಳಿಗೆ ಅನುಮತಿ ನೀಡಬಾರದು

 

 

(ಡಿ) ರಸ್ತೆ ಮೂಲೆಗಳ ಸಭೆ

 

ಗರಿಷ್ಠ 50 ಜನರಿಗೆ ಅವಕಾಶ ನೀಡಬೇಕು (ಸ್ಥಳದ ಲಭ್ಯತೆ ಮತ್ತು ಕೋವಿಡ್-19 ಮಾರ್ಗಸೂಚಿಗಳ ಅನುಸರಣೆಗೆ ಒಳಪಟ್ಟು.)

 

 

() ಮನೆ ಮನೆಗೆ ಪ್ರಚಾರ

ಅಭ್ಯರ್ಥಿಗಳು/ಅವರ ಪ್ರತಿನಿಧಿಗಳು ಸೇರಿದಂತೆ 5 ಜನರೊಂದಿಗೆ ಮನೆ ಮನೆ ಪ್ರಚಾರ ಮಾಡಬಹುದು.

 

(ಎಫ್) ವೀಡಿಯೊ ವ್ಯಾನ್ ಮೂಲಕ ಪ್ರಚಾರ

ಸ್ಥಳದ ಲಭ್ಯತೆ ಮತ್ತು ಕೋವಿಡ್ ಮಾರ್ಗಸೂಚಿಗಳ ಅನುಸರಣೆಗೆ ಒಳಪಟ್ಟು ಒಂದು ಕ್ಲಸ್ಟರ್ ಪಾಯಿಂಟ್ ನಲ್ಲಿ 50 ಕ್ಕಿಂತ ಹೆಚ್ಚು ಪ್ರೇಕ್ಷಕರನ್ನು ಅನುಮತಿಸಬಾರದು.

 

(ಜಿ) ಪ್ರಚಾರಕ್ಕಾಗಿ ವಾಹನಗಳ ಬಳಕೆ

 

ಅಭ್ಯರ್ಥಿ/ರಾಜಕೀಯ ಪಕ್ಷಗಳಿಗೆ ಅನುಮತಿಸಲಾದ ಒಟ್ಟು ವಾಹನಗಳು (ಸ್ಟಾರ್ ಪ್ರಚಾರಕನನ್ನು ಹೊರತುಪಡಿಸಿ):- ಗರಿಷ್ಠ ಸಂಖ್ಯೆ 20. ಪ್ರತಿ ವಾಹನಕ್ಕೆ ಅನುಮತಿಸಲಾದ ವ್ಯಕ್ತಿಗಳ ಸಂಖ್ಯೆ ಶೇ. 50 ಸಾಮರ್ಥ್ಯ.

3

ನಿಶ್ಶಬ್ಧ ಅವಧಿ

ಮತದಾನ ಮುಗಿಯುವ 72 ಗಂಟೆಗಳ ಮೊದಲು ನಿಶ್ಶಬ್ಧ ಅವಧಿ ಆಗಿರುತ್ತದೆ.

4

ಮತದಾನದ ದಿನದ ಚಟುವಟಿಕೆಗಳು

 

1. ತಲಾ 3 ಜನರಿರುವ ಗರಿಷ್ಠ 2 ವಾಹನಗಳಿಗೆ ಅವಕಾಶ ನೀಡಬಹುದು. ಅನ್ವಯವಾಗುವ ಸೂಕ್ತ ಮಾರ್ಗಸೂಚಿಗಳ ಪ್ರಕಾರ ಭದ್ರತೆ.
2.
ಇಸಿಐ ಮಾರ್ಗಸೂಚಿಗಳ ಪ್ರಕಾರ ಮತದಾನ ಕೇಂದ್ರದಲ್ಲಿ ಮತದಾನ ದಿನದ ಚಟುವಟಿಕೆ.

5

ಮತ ಎಣಿಕೆ ದಿನ

 

ಜನಸಂದಣಿಯನ್ನು ತಡೆಗಟ್ಟಲು ಡಿಇಒಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಣಿಕೆಯ ಸಮಯದಲ್ಲಿ ವ್ಯಕ್ತಿಗತ ಅಂತರ ಮತ್ತು ಇತರ ಕೋವಿಡ್ ಸುರಕ್ಷತಾ ಶಿಷ್ಟಾಚಾರಗಳನ್ನು ಎಲ್ಲಾ ಸಮಯದಲ್ಲೂ ಕಟ್ಟುನಿಟ್ಟಾಗಿ ಪಾಲಿಸಬೇಕು.

  1. ಸಕ್ಷಮ ಪ್ರಾಧಿಕಾರಗಳು ಹೊರಡಿಸಿದ ಕೋವಿಡ್-19 ಮಾರ್ಗಸೂಚಿಗಳ ಪ್ರಕಾರ ಅಂತಹ ಎಲ್ಲಾ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಕೋವಿಡ್-19 ಶಿಷ್ಟಾಚಾರದ ಪ್ರಕಾರ ವ್ಯಕ್ತಿಗತ ಅಂತರ ಮತ್ತು ಮಾಸ್ಕ್, ಸ್ಯಾನಿಟೈಸರ್ ಗಳು, ಥರ್ಮಲ್ ಸ್ಕ್ಯಾನಿಂಗ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಇತ್ಯಾದಿಗಳ ಬಳಕೆಯನ್ನು ಅನುಸರಿಸಬೇಕು. ಕೋವಿಡ್ ಶಿಷ್ಟಾಚಾರದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸೋಂಕು ತಡೆಗಟ್ಟುವ ಮತ್ತು ತಗ್ಗಿಸುವ ಕ್ರಮಗಳಿಗೆ ಎಸ್.ಡಿಎಂಎ ಜವಾಬ್ದಾರವಾಗಿದೆ. ಕೋವಿಡ್-19 ಮಾರ್ಗಸೂಚಿಗಳ ಮೇಲ್ವಿಚಾರಣೆ, ಉಸ್ತುವಾರಿ ಮತ್ತು ಅನುಸರಣೆಯ ಜವಾಬ್ದಾರಿಯನ್ನು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿ ಮತ್ತು ಜಿಲ್ಲಾ ಮಟ್ಟದ ಪ್ರಾಧಿಕಾರಗಳು ಹೊಂದಿರುತ್ತವೆ.
  2. ಒಂದು ವೇಳೆ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷವು ಮೇಲಿನ ಯಾವುದೇ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ರಾಲಿಗಳು (rallies), ಸಭೆಗಳು ಇತ್ಯಾದಿಗಳಿಗೆ ಸಂಬಂಧಪಟ್ಟ ಅಭ್ಯರ್ಥಿ/ಪಕ್ಷಕ್ಕೆ ಇನ್ನು ಮುಂದೆ ಅನುಮತಿ ನೀಡಬಾರದು. ಯಾವುದೇ ತಾರಾ ಪ್ರಚಾರಕರು ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿದರೆ, ಕ್ಷೇತ್ರ/ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ಮಾಡಲು ಅವರಿಗೆ ಅವಕಾಶ ನೀಡಬಾರದು.
  3. ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಖಾಸಗಿ ವ್ಯಕ್ತಿಗಳು ಸೇರಿದಂತೆ ಎಲ್ಲಾ ಮತದಾನದ ಸಿಬ್ಬಂದಿ ಮತ್ತು ಚುನಾವಣಾ ಅಧಿಕಾರಿಗಳಿಗೆ ಅವರ ಸೇವೆಗಳನ್ನು ತೆಗೆದುಕೊಳ್ಳುವ ಮೊದಲು ಡಬಲ್ ಡೋಸ್ ಲಸಿಕೆ ಯನ್ನು ನೀಡಿರಬೇಕು.
  4. ಅಭ್ಯರ್ಥಿ/ಚುನಾವಣಾ ಏಜೆಂಟ್/ಪೋಲಿಂಗ್ ಏಜೆಂಟ್ ಎಣಿಕೆ ಏಜೆಂಟ್/ಚಾಲಕರು ಇತ್ಯಾದಿ ಯಾರೇ ಸಾರ್ವಜನಿಕರೊಂದಿಗೆ ಅಥವಾ ಚುನಾವಣಾ ಅಧಿಕಾರಿಗಳೊಂದಿಗೆ ಸಂಪರ್ಕಕ್ಕೆ ಬರುತ್ತಿದ್ದರೂ ಅವರಿಗೆ ಡಬಲ್ ಡೋಸ್ ಲಸಿಕೆಯನ್ನುಹಾಕಿಸಿರಬೇಕಾಗುತ್ತದೆ.
  5. ಪ್ರತಿ ಮತದಾನ ಕೇಂದ್ರಕ್ಕೆ ಕೋವಿಡ್ ನೋಡಲ್ ಅಧಿಕಾರಿಯಾಗಿ ಒಬ್ಬ ಆರೋಗ್ಯ ಕಾರ್ಯಕರ್ತರನ್ನು ನೇಮಿಸಬೇಕು.
  6. ಸಿಎಸ್/ಡಿಜಿ ಮತ್ತು ಸಂಬಂಧಪಟ್ಟ ಡಿಎಂಗಳು/ಎಸ್.ಪಿಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮತದಾನ ಪೂರ್ವ ಮತ್ತು ನಂತರದ ಸಮಯದಲ್ಲಿ ಮತದಾನಕ್ಕೆ ಸಂಬಂಧಿಸಿದ ಯಾವುದೇ ಹಿಂಸಾಚಾರ ಸಂಭವಿಸದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು.

ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಹೊರಡಿಸಿರುವ  ಸೂಚನೆಗಳ ಹಿನ್ನೆಲೆಯಲ್ಲಿ, ಇಸಿಐ ಹೊರಹೊಮ್ಮುತ್ತಿರುವ ಪರಿಸ್ಥಿತಿಯ ಮೇಲೆ ಆಪ್ತ ನಿಗಾ ಇಡುತ್ತದೆ ಮತ್ತು ಮುಂಬರುವ ಚುನಾವಣೆಗಳ ಮಾರ್ಗಸೂಚಿಗಳನ್ನು ಮತ್ತಷ್ಟು ಬಿಗಿಗೊಳಿಸುತ್ತದೆ.

***



(Release ID: 1758978) Visitor Counter : 347