ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ನಾಳೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ ಡಿ ಎಮ್‌ ಎ) 17 ನೇ ಸ್ಥಾಪನಾ ದಿನವನ್ನು ಉದ್ಘಾಟಿಸಲಿದ್ದಾರೆ


ಪ್ರಧಾನ ಮಂತ್ರಿಶ್ರೀ ನರೇಂದ್ರ ಮೋದಿ ಯವರ ನೇತೃತ್ವದಲ್ಲಿ, ಎನ್‌ ಡಿ ಎಮ್‌ ಎ ಭಾರತದಲ್ಲಿ ವಿಪತ್ತು ನಿರ್ವಹಣೆಗೆ ಇರುವ ಅತ್ಯುನ್ನತ ಸಂಸ್ಥೆಯಾಗಿದೆ

ಈ ವರ್ಷದ ಸ್ಥಾಪನಾ ದಿನದ ವಿಷಯ ಹಿಮಾಲಯದ ಪ್ರದೇಶದಲ್ಲಿ ಸಂಭವಿಸುವ ವಿಪತ್ತು ಘಟನೆಗಳ ಪರಿಣಾಮಗಳು

Posted On: 27 SEP 2021 3:07PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ ಡಿ ಎಮ್ ಎ) 17 ನೇ ಸ್ಥಾಪನಾ ದಿನವನ್ನು ನವದೆಹಲಿಯಲ್ಲಿ ನಾಳೆ ಉದ್ಘಾಟಿಸಲಿದ್ದಾರೆ. ಈ ವರ್ಷದ ಸ್ಥಾಪನಾ ದಿನದ ವಿಷಯ ಹಿಮಾಲಯ ಪ್ರದೇಶದಲ್ಲಿ ಸಂಭವಿಸುವ ವಿಪತ್ತು ಘಟನೆಗಳ ಪರಿಣಾಮಗಳು. ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾವಿಲ್ ಅವರು ಈ ಸಂದರ್ಭದಲ್ಲಿ ಸಮಾರೋಪ ಭಾಷಣ ಮಾಡಿದರು. ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ, ಶ್ರೀ ಅಜಯ್ ಕುಮಾರ್ ಮಿಶ್ರಾ ಮತ್ತು ಶ್ರೀ ನಿಸಿತ್ ಪ್ರಮಾಣಿಕ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಸಹ ಸ್ಥಾಪನಾ ದಿನದ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ತಾಂತ್ರಿಕ ಅಧಿವೇಶನವು ಭೂಕುಸಿತಗಳು, ಮೋಡದ ಸ್ಫೋಟಗಳು, ಭೂಕಂಪಗಳು ಮತ್ತು ಹಿಮನದಿ ಸರೋವರದ ಪ್ರವಾಹಗಳು (GLOF ಗಳು) ಸೇರಿದಂತೆ ದೇಶದ ಹಿಮಾಲಯ ಪ್ರದೇಶದ ವಿಪತ್ತು ಘಟನೆಗಳ ಪರಿಣಾಮಗಳ ಕುರಿತು ಪ್ರಮುಖ ತಜ್ಞರು ಚರ್ಚೆಗಳನ್ನು ಹೊಂದಿರುತ್ತದೆ.

ಎನ್ ಡಿ ಎಮ್ ಎ ಸದಸ್ಯರು ಮತ್ತು ಅಧಿಕಾರಿಗಳು, ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ ಡಿ ಎಮ್ ಎ) ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ ಐ ಡಿ ಎಮ್), ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳು, ರಾಜ್ಯ ಸರ್ಕಾರಗಳು, ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು, ವಿವಿಧ ರಾಜ್ಯಗಳ ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆಗಳು, ನಾಗರಿಕ ಸಮಾಜದ ವ್ಯಕ್ತಿಗಳು ಮತ್ತು ಎನ್‌ ಐ ಡಿ ಎಮ್ ನ ಮಾಜಿ ಸದಸ್ಯರು ಮತ್ತು ಸಲಹಾ ಸಮಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಈ ಸಂದರ್ಭದಲ್ಲಿ ಈ ಕೆಳಗಿನ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ:

1. ಆಪದಾ ಮಿತ್ರ

a.) ಆಪದಾ ಮಿತ್ರದ ತರಬೇತಿ ಕೈಪಿಡಿಯ ಬಿಡುಗಡೆ

b.) ಆಪದಾ ಮಿತ್ರ ಯೋಜನೆಯ ದಾಖಲೆ ಬಿಡುಗಡೆ

2. ಸಿಎಪಿ (ಸಾಮಾನ್ಯ ಎಚ್ಚರಿಕೆ ಮಾರ್ಗದರ್ಶಿ) ಸಾಮಾನ್ಯ ಎಚ್ಚರಿಕೆ ಮಾರ್ಗದರ್ಶಿ (ಸಿಎಪಿ)ಯ ಸ್ಕೀಮ್ ಡಾಕ್ಯುಮೆಂಟ್ ದಸ್ತಾವೇಜು ಬಿಡುಗಡೆ

3. ಭೂಕಂಪ ನಿರೋಧಕ ನಿರ್ಮಿತ ಪರಿಸರಕ್ಕೆ ಸರಳೀಕೃತ ಮಾರ್ಗಸೂಚಿಗಳು

4. ಶೀತದಲೆಯ ಬಗ್ಗೆ ಮಾರ್ಗಸೂಚಿಗಳು.

 ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ಭಾರತದಲ್ಲಿ ವಿಪತ್ತು ನಿರ್ವಹಣೆಯ ಅತ್ಯುನ್ನತ ಸಂಸ್ಥೆಯಾಗಿದೆ. ಎನ್‌ಡಿಎಂಎ ಸ್ಥಾಪನೆ ಮತ್ತು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಂಸ್ಥಿಕ ಕಾರ್ಯವಿಧಾನಗಳಿಗೆ ಅನುಕೂಲವಾಗುವ ವಾತಾವರಣವನ್ನು ಸೃಷ್ಟಿಸುವುದು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಪ್ರಕಾರ ಕಡ್ಡಾಯವಾಗಿದೆ . ವಿಪತ್ತು ನಿರ್ವಹಣೆಗೆ ನೀತಿಗಳು, ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ಎನ್‌ಡಿಎಂಎಗೆ ಅಧಿಕಾರವಿದೆ. ಭಾರತವು ತಡೆಗಟ್ಟುವಿಕೆ, ತಗ್ಗಿಸುವಿಕೆ, ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ತತ್ವವನ್ನು ಯೋಜಿಸುತ್ತದೆ.

***



(Release ID: 1758739) Visitor Counter : 192