ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಶ್ರೀ ನಿತಿನ್ ಗಡ್ಕರಿ ಮತ್ತು ಡಾ.ಭಾರತಿ ಪವಾರ್ ಅವರು ನಾಗಪುರದ ಏಮ್ಸ್ ನ 3ನೇ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿದ್ದರು

"ಮಹಾರಾಷ್ಟ್ರ ಮಾತ್ರವಲ್ಲ, ಮಧ್ಯ ಭಾರತ ಭಾಗಕ್ಕೆ ಹೊಂದಿಕೊಂಡಿರುವ ಎಲ್ಲಾ ರಾಜ್ಯಗಳ ರೋಗಿಗಳು ಕೈಗೆಟುಕುವ ಮತ್ತು ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಾರೆ": ಶ್ರೀ ನಿತಿನ್ ಗಡ್ಕರಿ

"ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದಲ್ಲಿ ಪ್ರತಿ ರಾಜ್ಯದಲ್ಲೂ ಏಮ್ಸ್ ವೈದ್ಯಕೀಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ನೀತಿಯನ್ನು ಸರ್ಕಾರ ಅಭಿವೃದ್ಧಿಪಡಿಸಿದೆ": ಡಾ ಭಾರತಿ ಪವಾರ್

"ವೈದ್ಯಕೀಯ ಚಿಕಿತ್ಸೆಯಂತೆ, ರೋಗಿಗೆ ಸಹಾನುಭೂತಿ ಮತ್ತು ಭಾವನಾತ್ಮಕ ಆರೈಕೆಯೂ ಅಷ್ಟೇ ಮುಖ್ಯ"

Posted On: 26 SEP 2021 1:10PM by PIB Bengaluru

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಡಿಜಿಟಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ನಾಗ್ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ( ಏಮ್ಸ್ ) ಯ 3 ನೇ ಸಂಸ್ಥಾಪನಾ ದಿನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಡಾ.ಭಾರತಿ ಪ್ರವೀಣ್ ಪವಾರ್ ಅವರ ಸಮ್ಮುಖದಲ್ಲಿ ನಡೆಸಲಾಯಿತು. ರಾಜ್ಯಸಭೆಯ ಸಂಸತ್ ಸದಸ್ಯ ಡಾ.ವಿಕಾಸ್ ಮಹಾತ್ಮೆ ಮತ್ತು ಮಹಾರಾಷ್ಟ್ರ ಸರ್ಕಾರದ ಇಂಧನ ಸಚಿವ ಮತ್ತು ಪಾಲನಾ ಸಚಿವ (ನಾಗ್ಪುರ) ಡಾ. ನಿತಿನ್ ರಾವುತ್ ಕೂಡ ಹಾಜರಿದ್ದರು.

ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರು, ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ  ಶ್ರೀ ಗಡ್ಕರಿ ಅವರು, "ನಾಗಪುರದಲ್ಲಿ ಏಮ್ಸ್ ನಂತಹ ಪ್ರತಿಷ್ಠಿತ ಸಂಸ್ಥೆಯನ್ನು ಸ್ಥಾಪಿಸುವುದರೊಂದಿಗೆ ವಿದರ್ಭ ಪ್ರದೇಶದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮಧ್ಯ ಭಾರತ ಭಾಗಕ್ಕೆ ಅಂಟಿಕೊಂಡಿರುವ ಎಲ್ಲಾ ರಾಜ್ಯಗಳ ರೋಗಿಗಳು ಕೈಗೆಟುಕುವ ಮತ್ತು ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಾರೆ.   ಈ ಸೌಲಭ್ಯಗಳ ಪ್ರಯೋಜನಗಳು ನಗರಗಳಿಗೆ ಮಾತ್ರವಲ್ಲದೆ ನಮ್ಮ ಪ್ರದೇಶದ ದೂರದ ಹಳ್ಳಿಗಳ ಜನರಿಗೆ ತಲುಪುವಂತೆ ನಾವು ನೋಡಿಕೊಳ್ಳಬೇಕು.” ಎಂದು ಹೇಳಿದರು.

ಇತ್ತೀಚೆಗೆ ನಿರ್ಮಿಸಲಾದ ಏಮ್ಸ್ ಸಂಸ್ಥೆಗಳು ದೀರ್ಘಕಾಲೀನ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ ಸಚಿವರು, ಪ್ರಸ್ತುತ ಏಮ್ಸ್ ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದರಿಂದ ಭಾರತದ ಆಕಾಂಕ್ಷೆಗಳನ್ನು ಈಡೇರಿಸಿದಂತಾಗುವುದು ಎಂದು ಹೇಳಿದರು.

ಡಾ. ಪವಾರ್ ಅವರು ಸರ್ಕಾರದ ಪ್ರಯತ್ನಗಳಿಂದಾಗಿ ದೇಶದ ಸೌಲಭ್ಯವಿಲ್ಲದ ಪ್ರದೇಶಗಳು ತೃತೀಯ ಆರೋಗ್ಯ ರಕ್ಷಣೆಗೆ ಪ್ರವೇಶ ಪಡೆಯುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು: “ಸ್ವಾತಂತ್ರ್ಯದ ಹಲವು ದಶಕಗಳ ನಂತರವೂ ದೇಶದಲ್ಲಿ ಕೇವಲ 6 ಏಮ್ಸ್ ನಿರ್ಮಿಸಲಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಂತರ 2014 ರಲ್ಲಿ, ಸರ್ಕಾರವು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಪ್ರತಿ ರಾಜ್ಯದಲ್ಲೂ ಏಮ್ಸ್ ಅನ್ನು ಅಭಿವೃದ್ಧಿಪಡಿಸುವ ನೀತಿಯನ್ನು ರೂಪಿಸಲಾಯಿತು.” ಎಂದು ಹೇಳಿದರು.

ಎಐಐಎಂಎಸ್ ನಾಗ್ ಪುರ್ ಶೈಕ್ಷಣಿಕ ಮತ್ತು ರೋಗಿಗಳ ಸೇವೆಗಳಲ್ಲಿ ಸಕಾರಾತ್ಮಕ ಪ್ರಭಾವ ಬೀರಿರುವುದರ ಬಗ್ಗೆ ತಿಳಿಸಿದ  ಅವರು “2020ರಲ್ಲಿ ಈ ಸಂಸ್ಥೆಯು ಸ್ನಾತಕೋತ್ತರ ಮತ್ತು ಪಿಎಚ್‌ಡಿ ಆರಂಭಿಸಿತು ಇವು ಗಮನಾರ್ಹ ಕಾರ್ಯಕ್ರಮಗಳಾಗಿವೆ. ಈ ಸಂಸ್ಥೆಯು ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿಯ ವಿವಿಧ ಮಾದರಿಗಳನ್ನು ಅಭಿವೃದ್ಧಿಪಡಿಸಿದೆ ಎಂದು ನನಗೆ ಹೇಳಲಾಗಿದೆ, ಇದು ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ  ಪ್ರತಿಬಿಂಬಿಸುತ್ತದೆ.” ಎಂದು ಹೇಳಿದರು.

ಭಾರತದ ಆರೋಗ್ಯ ಕಾರ್ಯಕರ್ತರ ನೆರವಿನಿಂದ ಕೋವಿಡ್‌ ಗೆ ತಕ್ಕುದಾದ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಕುರಿತು ಮಾತನಾಡುತ್ತಾ, ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರವು ಸಂಸ್ಥೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಆದ್ಯತೆಯ ಮೇರೆಗೆ, ವೆಂಟಿಲೇಟರ್‌ಗಳು, ಆಸ್ಪತ್ರೆ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್‌ಗಳು, ಪಿಪಿಇ ಕಿಟ್‌ಗಳ ಲಭ್ಯತೆ, ಮುಖಗವಸುಗಳು ಮತ್ತು ಜೀವರಕ್ಷಕ ಔಷಧಗಳು ಇತ್ಯಾದಿಗಳನ್ನು ಒದಗಿಸುವುದನ್ನು ಖಾತ್ರಿಪಡಿಸಿಕೊಂಡಿದೆ ಎಂದು ಹೇಳಿದರು. ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ರೋಗಿಗಳಿಗೆ ಕೋವಿಡ್ ಡಯಾಲಿಸಿಸ್ ಸೌಲಭ್ಯವನ್ನು ಒದಗಿಸಿದ್ದಕ್ಕಾಗಿ ಅವರು ಸಂಸ್ಥೆಯನ್ನು ಶ್ಲಾಘಿಸಿದರು.

ವೈದ್ಯೆಯಾಗಿ ತನ್ನ ಸುಧೀರ್ಘ ಅನುಭವದಿಂದ ಮಾತನಾಡುತ್ತಾ, ಅವರು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ವೈದ್ಯಕೀಯ ಚಿಕಿತ್ಸೆಯಂತೆ  ಸಹಾನುಭೂತಿ ಮತ್ತು ಭಾವನಾತ್ಮಕ ಆರೈಕೆಯು ಅಷ್ಟೇ ಮುಖ್ಯ ಎಂದು ಸಲಹೆ ನೀಡಿದರು: "ಇದು ಆರೋಗ್ಯ ರಕ್ಷಣೆ ಒದಗಿಸುವವರು  ಮತ್ತು ಆರೈಕೆ ತಂಡದ ಪ್ರತಿಯೊಬ್ಬ ಸದಸ್ಯರ ಮುಖ್ಯ ಜವಾಬ್ದಾರಿ. ರೋಗಿಗಳು ತಮ್ಮ ಸಮಯದ ಗಮನಾರ್ಹ ಭಾಗವನ್ನು ದಾದಿಯರು, ವೈದ್ಯಕೀಯ ಸಹಾಯಕರು ಮತ್ತು ಸ್ವಾಗತಕಾರರೊಂದಿಗೆ ಸಂವಹನ ನಡೆಸುತ್ತಾರೆ. ಈ ಪರಸ್ಪರ ಕ್ರಿಯೆಗಳು ರೋಗಿಗಳ ಕಡೆಗೆ ಸಹಾನುಭೂತಿ ಮತ್ತು ಸಹಾನುಭೂತಿಯನ್ನು ಪ್ರದರ್ಶಿಸಲು ಹಲವು ಅವಕಾಶಗಳನ್ನು ಒದಗಿಸಬಲ್ಲವು. ಆದ್ದರಿಂದ, ತರಬೇತಿ, ಸಹಾನುಭೂತಿಯೊಂದಿಗೆ ರೋಗಿಗಳ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಯನ್ನು ಪ್ರೋತ್ಸಾಹಿಸುವುದು, ಇವುಗಳು  ಒಟ್ಟಾರೆ ರೋಗಿಯ  ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಬಡವರ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಆಧುನಿಕ ಚಿಕಿತ್ಸಾ ಸೌಲಭ್ಯಗಳಿಗೆ ಆದ್ಯತೆ ನೀಡುವುದು, ರೋಗ ನಿರೋಧಕತೆಗೆ  ಒತ್ತು ನೀಡುವ ಮೂಲಕ ಸಮಗ್ರವಾಗಿ ಕೆಲಸ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಅವರು ವಿವರಿಸಿದರು. ದೇಶದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಣೆ ಮತ್ತು ಪರಿಶ್ರಮದಿಂದ ಮುನ್ನಡೆಸಿ ಒಗ್ಗೂಡಿ ಕೆಲಸ ಮಾಡಲು  ಏಮ್ಸ್ ನಾಗ್ ಪುರ್ ಸಮುದಾಯವನ್ನು ಸ್ವಾಗತಿಸಿದರು.

ಭಾರತ ಸರ್ಕಾರದ ವಿವಿಧ ಆರೋಗ್ಯ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಈ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. "ಹಲವು ಸವಾಲುಗಳಿವೆ, ಆದರೆ ನನಗೆ ಖಾತ್ರಿಯಿದೆ, ನೀವು ಎಲ್ಲಾ ಅಡೆತಡೆಗಳನ್ನು ಮೀರುವಿರಿ, ಹೆಚ್ಚಿನ ಸಾಧನೆಯನ್ನು ಸಾಧಿಸುವಿರಿ ಮತ್ತು ರಾಜ್ಯದ ಇತರ ಆರೋಗ್ಯ ಸಂಸ್ಥೆಗಳಿಗೆ ಮಾದರಿಯಾಗುತ್ತೀರಿ" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪತ್ರಿಕೆ  "ಅಭಿಜ್ಞಾನಂ" ನ ಉದ್ಘಾಟನಾ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಶ್ರೀ ರಾಜೇಶ್ ಭೂಷಣ್, ಕೇಂದ್ರ ಆರೋಗ್ಯ ಕಾರ್ಯದರ್ಶಿ, ಡಾ.ಪಿ ಕೆ ದವೆ, ಅಧ್ಯಕ್ಷರು, ಎಐಐಎಂಎಸ್, ನಾಗ್ಪುರ್, ಎಐಐಎಂಎಸ್, ನಾಗ್ಪುರದ  ನಿರ್ದೇಶಕರು ಮತ್ತು ಸಿಇಒ ಆದ ಮೇಜರ್ ಜನರಲ್ ಡಾ. ವಿಭಾ ದತ್ತಾ ಮತ್ತು ಇತರ ಹಿರಿಯ ವೈದ್ಯರು ಮತ್ತು ಆಡಳಿತಾಧಿಕಾರಿಗಳು  ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.

***(Release ID: 1758307) Visitor Counter : 120