ಪ್ರಧಾನ ಮಂತ್ರಿಯವರ ಕಛೇರಿ
ಅಮೆರಿಕದಿಂದ 157 ಕಲಾಕೃತಿಗಳು ಮತ್ತು ಪುರಾತನ ವಸ್ತುಗಳನ್ನು ಸ್ವದೇಶಕ್ಕೆ ತರಲಿರುವ ಪ್ರಧಾನಮಂತ್ರಿ
ಕಲಾಕೃತಿಗಳಲ್ಲಿ ಹಿಂದೂಧರ್ಮ, ಬೌದ್ಧ ಧರ್ಮ ಮತ್ತು ಜೈನಧರ್ಮಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಪ್ರಾಚೀನ ವಸ್ತು ಮತ್ತು ಪ್ರತಿಮೆಗಳು ಸೇರಿವೆ
ಬಹುತೇಕ ವಸ್ತುಗಳು ಕ್ರಿಸ್ತ ಶಕ 11ರಿಂದ ಕ್ರಿಸ್ತ ಶಕ 14 ಅವಧಿಗೆ ಸೇರಿವೆ ಮತ್ತು ಸಾಮಾನ್ಯ ಯುಗಕ್ಕೆ ಮುನ್ನದ ಐತಿಹಾಸಿಕ ಪ್ರಾಚೀನ ಕಲಾಕೃತಿಗಳು
ಜಗತ್ತಿನಾದ್ಯಂತ ಇರುವ ನಮ್ಮ ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಮರಳಿ ದೇಶಕ್ಕೆ ತರುವ ನರೇಂದ್ರ ಮೋದಿ ಸರ್ಕಾರದ ನಿರಂತರ ಪ್ರಯತ್ನಗಳ ಸಾಕಾರ
Posted On:
25 SEP 2021 9:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ವೇಳೆ 157 ಪ್ರಾಚೀನ ಕಲಾಕೃತಿಗಳು ಮತ್ತು ವಸ್ತುಗಳನ್ನು ಹಸ್ತಾಂತರಿಸಲಾಯಿತು. ಭಾರತಕ್ಕೆ ತನ್ನ ಪ್ರಾಚೀನ ಕೃತಿಗಳನ್ನು ಮರಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಅಮೆರಿಕಾಕ್ಕೆ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬೈಡನ್ ಅವರು ಸಾಂಸ್ಕೃತಿಕ ವಸ್ತುಗಳ ಕಳವು, ಅಕ್ರಮ ವ್ಯಾಪಾರ ಮತ್ತು ಕಳ್ಳ ಸಾಗಣೆ ನಿಗ್ರಹಕ್ಕೆ ತಮ್ಮ ಪ್ರಯತ್ನಗಳ ಬಲವರ್ಧನೆಗೆ ಬದ್ಧರಾಗಿದ್ದಾರೆ.
ಆ 157 ಕಲಾಕೃತಿಯ ಪಟ್ಟಿಯಲ್ಲಿ ವಿಭಿನ್ನ ಕೃತಿಗಳಿದ್ದು, ಕ್ರಿ.ಶ.10ಕ್ಕೆ ಸೇರಿದ ಮರಳುಗಲ್ಲಿನಲ್ಲಿರುವ ಒಂದೂವರೆ ಮೀಟರ್ ಕೃತಿಯಿಂದ ಹಿಡಿದು ಕ್ರಿ.ಶ 12ಕ್ಕೆ ಸೇರಿದ 8.5 ಮೀಟರ್ ಎತ್ತರದ ಕಂಚಿನ ನಟರಾಜ ವಿಗ್ರಹವೂ ಸೇರಿದೆ. ಇವುಗಳಲ್ಲಿ ಬಹುತೇಕ ವಸ್ತುಗಳು ಕ್ರಿ.ಶ11 ರಿಂದ ಕ್ರಿ.ಶ 14 ವರೆಗೆ ಸಂಬಂಧಿಸಿದವು ಮತ್ತು ಐತಿಹಾಸಿಕ ಕಲಾಕೃತಿಗಳಾಗಿದ್ದು, ಕ್ರಿಸ್ತ ಪೂರ್ವ 2000ರ ತಾಮ್ರದ ಮಾನವ ರೂಪದ ವಸ್ತು ಅಥವಾ ಕ್ರಿ.ಶ. 2ರ ಟೆರ್ರಾಕೋಟಾ ಹೂದಾನಿ ಇದೆ. ಸುಮಾರು 45 ಪ್ರಾಚೀನ ವಸ್ತುಗಳು ಸಾಮಾನ್ಯ ಯುಗಕ್ಕಿಂತ ಮುಂಚಿನ ಅವಧಿಗೆ ಸೇರಿದವು.
ಸುಮಾರು ಅರ್ಧದಷ್ಟು ಕಲಾಕೃತಿಗಳು(71) ಸಂಸ್ಕೃತಿಗೆ ಸಂಬಂಧಿಸಿದವು. ಉಳಿದ ಅರ್ಧದಷ್ಟು ಕೃತಿಗಳು ಹಿಂದೂ ಧರ್ಮ(60), ಬೌದ್ಧ ಧರ್ಮ(16) ಮತ್ತು ಜೈನಧರ್ಮ(9)ಕ್ಕೆ ಸಂಬಂಧಿಸಿದವು. ಅವುಗಳಲ್ಲಿ ಲೋಹ, ಕಲ್ಲು ಮತ್ತು ಟೆರ್ರಾಕೋಟಾದ ಕಲಾಕೃತಿಗಳು ಇವೆ. ಕಂಚಿನ ಕಲಾಕೃತಿಗಳಲ್ಲಿ ಮುಖ್ಯವಾಗಿ ಆಕೃತಿಗಳು ಹೆಸರಾಂತ ಲಕ್ಷ್ಮಿ ನಾರಾಯಣ, ಬುದ್ಧ, ವಿಷ್ಣು, ಶಿವ ಪಾರ್ವತಿ ಮತ್ತು 24 ಜೈನ ತೀರ್ಥಂಕರರಿದ್ದರೆ, ಸಾಮಾನ್ಯವಾದ ಕನಕಮೂರ್ತಿ, ಬ್ರಾಹ್ಮಿ ಮತ್ತು ನಂದಿಕೇಶನ ಪ್ರಸಿದ್ಧ ಭಂಗಿಗಳ ಅಲಂಕೃತ ದೇವರುಗಳ ಕಲಾಕೃತಿಗಳೂ ಸೇರಿವೆ.
ಕಲಾಕೃತಿಗಳ ಲಕ್ಷಣಗಳಲ್ಲಿ ಹಿಂದೂ ಧರ್ಮದ ಧಾರ್ಮಿಕ ಶಿಲ್ಪಗಳು (ಮೂರು ತಲೆ ಬ್ರಹ್ಮ, ರಥ ಓಡಿಸುತ್ತಿರುವ ಸೂರ್ಯ, ವಿಷ್ಣು ಮತ್ತು ಅವರ ಸಂಗಾತಿಗಳು, ಶಿವ ದಕ್ಷಿಣಾಮೂರ್ತಿಯಾಗಿ ಕಾಣಿಸಿರುವುದು, ನೃತ್ಯ ಮಾಡುವ ಗಣೇಶ ಇತ್ಯಾದಿಗಳಿವೆ). ಬೌದ್ಧ ಧರ್ಮಕ್ಕೆ ಸಂಬಂಧಿಸಿದಂತೆ(ಸ್ಥಾಯಿ ಬುದ್ಧ, ಬೋಧಿಸತ್ವ ಮಜುಶ್ರೀ, ತಾರಾ) ಮತ್ತು (ಜೈನ ಧರ್ಮಕ್ಕೆ ಸಂಬಂಧಿಸಿದಂತೆ(ಜೈನ ತೀರ್ಥಂಕರ, ಪದ್ಮಾಸನ ತೀರ್ಥಂಕರ, ಜೈನ ಬಸದಿಗಳು) ಅಲ್ಲದೆ ಜಾತ್ಯತೀತ ನಮೂನೆಗಳು (ಸಮಭಂಗದಲ್ಲಿರುವ ನಿರಾಕಾರ ದಂಪತಿಗಳು, ಚೌರಿ ಹೊತ್ತವರು, ಡೋಲು ಬಾರಿಸುತ್ತಿರುವ ಮಹಿಳೆಯರು ಇತ್ಯಾದಿ) ಇವೆ.
56 ಟೆರ್ರಾಕೋಟಾ ತುಣುಕುಗಳಿವೆ(ಕ್ರಿಶ. 2ರ ಹೂದಾನಿ, ಕ್ರಿ.ಶ 12ರ ಜಿಂಕೆಗಳ ಜೋಡಿ, ಕ್ರಿ.ಶ 14ರ ಮಹಿಳೆಯ ಪುತ್ಥಳಿ) ಮತ್ತು ಕ್ರಿ.ಶ 18ಕ್ಕೆ ಸೇರಿದ ಖಡ್ಗವಿದ್ದು, ಪರ್ಷಿಯನ್ ಭಾಷೆಯಲ್ಲಿ ಗುರು ಹರಿಗೋವಿಂದ್ ಸಿಂಗ್ ಹೆಸರು ಉಲ್ಲೇಖಿಸಿರುವ ಶಾಸನವಿದೆ)
ಪ್ರಪಂಚದಾದ್ಯಂತ ಇರುವ ನಮ್ಮ ಪ್ರಾಚೀನ ಕಲಾಕೃತಿಗಳು ಮತ್ತು ವಸ್ತುಗಳನ್ನು ಪುನಃ ಸ್ವದೇಶಕ್ಕೆ ತರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.
***
(Release ID: 1758236)
Visitor Counter : 277
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam