ಚುನಾವಣಾ ಆಯೋಗ

ಕೈಗೆಟುವ ರೀತಿಯ ಚುನಾವಣೆ ಕುರಿತು ಕೇಂದ್ರ ಚುನಾವಣಾ ಆಯೋಗ – ಇಸಿಐ ನಿಂದ ರಾಷ್ಟ್ರೀಯ ಸಮ್ಮೇಳನ 


ಸೂಕ್ತ ನೀತಿ ಚೌಕಟ್ಟು ರೂಪಿಸಲು ಮುಂದಿಟ್ಟ ಹೆಜ್ಜೆ

Posted On: 21 SEP 2021 5:43PM by PIB Bengaluru

ಚುನಾವಣೆಗಳಲ್ಲಿ ವಾಸ್ತವ ಕುರಿತ ರಾಷ್ಟ್ರೀಯ ಸಮ್ಮೇಳನ2021 ನಡೆದಿದ್ದು, ವಿಕಲಚೇತನ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಗಿದೆ. ವರ್ಚುವಲ್ ಸಮ್ಮೇಳನದಲ್ಲಿ ಮುಖ್ಯ ಚುನಾವಣಾಧಿಕಾರಿಗಳು, ವಿವಿಧ ವಲಯದ ವಿಶೇಷ ಚೇತನರು ಪ್ರತಿನಿಧಿಸುವ ನಾಗರಿಕ ಸಮಾಜದ ಸಂಸ್ಥೆಗಳು, ಸರ್ಕಾರಿ ಸಚಿವಾಲಯಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಚುನಾವಣೆಯನ್ನು ಹೆಚ್ಚು ಒಳಗೊಳ್ಳುವ, ಕೈಗೆಟುವ ಮತ್ತು ಮತದಾರರ ಸ್ನೇಹಿಯಾಗಿಸುವ ಚುನಾವಣಾ ಆಯೋಗದ ಬದ್ಧತೆಯನ್ನು ಸಮ್ಮೇಳನ ಪುನರುಚ್ಚರಿಸಿದೆ. ಮುಖ್ಯ ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ಮಾತನಾಡಿ, ಆಯೋಗ ಪ್ರಾಥಮಿಕ ಪಾಲುದಾರರು ಕೈಗೊಳ್ಳುವ ನಿರ್ಧಾರದ ಪಾತ್ರವನ್ನು ಗೌರವಿಸುತ್ತದೆ. ವಿಕಲಚೇತನರು ಸೇರಿದಂತೆ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಬಲ್ಲರು ಎಂದರು.

ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಸುಶೀಲ್ ಚಂದ್ರ ಮುಂದುವರೆದು ಮಾತನಾಡಿ, ಆಯೋಗ ಪ್ರಾಥಮಿಕ ಪಾಲುದಾರರು ಕೈಗೊ‍ಳ್ಳುವ ಪಾತ್ರವನ್ನು ಗೌರವಿಸಲಿದೆ. ವಿಕಲಚೇತರು ಸೇರಿದಂತೆ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಬಲ್ಲರು ಎಂದರು

ಶ್ರೀ ಸುಶೀಲ್ ಚಂದ್ರ ಅವರು ವಿವಿಧ ಅಂತಾರಾಷ್ಟ್ರೀಯ ನಿರ್ಣಯಗಳಲ್ಲಿ ಇಸಿಐ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ವಿಶೇಷ ಚೇತನರ ಸೇರ್ಪಡೆಗೆ ಆಯೋಗ ಒತ್ತು ನೀಡಿದೆ ಎಂದರು.

ಆಹ್ಲಾದಕರ ಮತ್ತು ಘನತೆಯ ಮತದಾನದ ಅನುಭವ ಕುರಿತು ಅವರು ಒತ್ತಿ ಹೇಳಿದರು. ಎಲ್ಲಾ ಮತದಾನ ಕೇಂದ್ರಗಳಲ್ಲಿ ವಿಶೇಷ ಚೇತನರಿಗಾಗಿ ಇಳಿಜಾರು [ರಾಂಪ್] ವ್ಯವಸ್ಥೆ ಮಾಡಲಾಗಿದ್ದು, ಸಾಕಷ್ಟು ಸ್ವಯಂ ಸೇವಕರನ್ನು ಇದು ಒಳಗೊಂಡಿದೆ. ಸುಗಮ ಮತ್ತು ಗಲಭೆ ಮುಕ್ತ ಚುನಾವಣಾ ಅನುಭವಕ್ಕಾಗಿ ಮತದಾನ ಕೇಂದ್ರಗಳನ್ನು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.   

ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮಾತನಾಡಿ, ವಿಶೇಷ ಚೇತನರ ಹಕ್ಕುಗಳ ಕಾಯ್ದೆ 2016 ಪ್ರಕಾರ ಎಲ್ಲಾ ಮತದಾನ ಕೇಂದ್ರಗಳನ್ನು ವಿಶೇಷಚೇತನರಿಗಾಗಿ ಲಭ್ಯವಾಗುವಂತೆ ಮಾಡಲು ಕಾನೂನು ಆದೇಶ ಹೊರಡಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲವನ್ನೂ ಅರ್ಥಮಾಡಿಕೊಳ್ಳಬಹುದು ಮತ್ತು ಎಲ್ಲಾ ವಸ್ತುಗಳನ್ನು ಬಳಸಬಹುದಾಗಿದೆ. ಚುನಾವಣಾಧಿಕಾರಿಗಳು ಮತ್ತು ಸಿ.ಎಸ್.ಒಗಳ ಮಧ್ಯಸ್ಥಿಕೆದಾರರ ಸಾಮೂಹಿಕ ಪ್ರಯತ್ನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ದಿವ್ಯಾಂಗರನ್ನು ತಲುಪುವಲ್ಲಿ ಗಮನಾರ್ಹ ಆಯೋಗ ಕೊಡುಗೆ ನೀಡಿದೆ. ಜತೆಗೆ ವಿವಿಧ ಜನ ಸಮೂಹಗಳನ್ನು ಚುನಾವಣೆ ತಲುಪಲು ಸುರಕ್ಷಿತ ಮತ್ತು ಗೌರವಪೂರ್ಣ ವ್ಯವಸ್ಥೆಯನ್ನು ಚುನಾವಣಾ ಆಯೋಗ ಕಲ್ಪಿಸಿದೆ ಎಂದು ಹೇಳಿದರು

ಚುನಾವಣಾ ಆಯುಕ್ತ ಶ್ರೀ ಅನೂಪ್ ಚಂದ್ರ ಪಾಂಡೆ ಮಾತನಾಡಿ, ಸುಧಾರಿತ ದತ್ತಾಂಶ ಸಂಸ್ಕರಣೆ ವಿಧಾನಗಳಿಂದ ಸಮುದಾಯದ ಬೆಂಬಲದ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರುಸಮುದಾಯದ ಉಲ್ಲೇಖಿತ ಅಂಶಗಳನ್ನು ಗುರುತಿಸುವುದು ಮತ್ತು ವಿಶೇಷ ವ್ಯಕ್ತಿಗಳು ಹಾಗೂ ಹಿರಿಯ ನಾಗರಿಕರಂತಹ ನಿರ್ದಿಷ್ಟ ಸಮೂಹದ ಗುಂಪುಗಳೊಂದಿಗೆ ಸೂಕ್ತ ವ್ಯವಸ್ಥೆ ರೂಪಿಸಲಾಗುತ್ತಿದೆ. ಕೈಗೆಟುವ ಚುನಾವಣೆ ಯಾವಾಗಲೂ ಚುನಾವಣಾ ಆಯೋಗದ ನಂಬಿಕೆಯ ವಲಯವಾಗಿದೆ. ಮೂಲಕ ಚುನಾವಣಾ ಆಯೋಗ ನಿರ್ದಿಷ್ಟವಾಗಿ ಎಲ್ಲಾ ಗುರಿ, ಗುಂಫುಗಳ ಸೇರ್ಪಡೆಗೆ ಗಮನಹರಿಸುತ್ತದೆ. ಇಡೀ ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ಎಲ್ಲರಿಗೂ ಚುನಾವಣೆ ಸಮಾನವಾಗಿ ಕೈಗೆಟುಕುವಂತೆ ಮಾಡುತ್ತದೆ ಎಂದು ಹೇಳಿದರು.

ಚುನಾವಣಾ ಆಯೋಗದ ಮಹಾ ನಿರ್ದೇಶಕ ಶ್ರೀ ಉಮೇಶ್ ಸಿನ್ಹಾ ಮಾತನಾಡಿ, ಭಾರತೀಯ ಚುನಾವಣಾ ಆಯೋಗ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಸಕಾಲದಲ್ಲಿ ಸಮ್ಮೇಳನ ಆಯೋಜಿಸಿದೆ. ಸಿ..ಒಗಳು, ಸಿ.ಎಸ್.ಒಗಳು ಮತ್ತು ಇಸಿಐ ಗಳಿಂದ ಪಡೆದ ಸಲಹೆಗಳ ಆಧಾರದ ಮೇಲೆ ಹಿರಿಯ ನಾಗರಿಕರಿಗೆ ಹೆಚ್ಚು ಕೈಗೆಟುವ, ಒಳಗೊಳ್ಳುವ ಮತ್ತು ಮತದಾರರ ಸ್ನೇಹಿಯಾಗಿರುವ ಚುನಾವಣಾ ಯೋಜನೆ ಮತ್ತು ತಯಾರಿಕೆಯನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಇದೀಗ ಒಟ್ಟು 77.4 ಲಕ್ಷ ಪಿ..ಬ್ಲ್ಯೂಗಳು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ. ಬಲವಾದ ಮತ್ತು ಉಜ್ವಲ ಪ್ರಜಾಪ್ರಭುತ್ವ ಸೇರ್ಪಡೆ ಮತ್ತು ಭಾಗಹಿಸುವಿಕೆಯು ಸೂಕ್ತ ತಳಹದಿಯ ಮೇಲೆ ಸ್ಥಾಪಿತವಾಗಿದೆ. ಇಂದಿನ ಚರ್ಚೆ ಪಿ..ಬ್ಲ್ಯೂಗಳ ಗುರುತಿಸುವಿಕೆ ಮತ್ತು ನಕ್ಷೆ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಕೈಗೆಟುಕುವಂತೆ ನೋಂದಣಿ, ಮತದಾನ ಕೇಂದ್ರಗಳಲ್ಲಿ ಸೌಲಭ್ಯ, ಚುನಾವಣೆ ಸುಲಭವಾಗುವಂತೆ ಮಾಡಲು ತಂತ್ರಜ್ಞಾನದ ಬಳಕೆ, ಮತದಾರರಗೆ ಶಿಕ್ಷಣ ದೊರಕಿಸುವಂತೆ ಮಾಡುವ, ಮಾಧ್ಯಮಗಳನ್ನು ತಲುಪುವ, ಸಹಭಾಗಿತ್ವ ಮತ್ತು ಪಾಲುದಾರಿಕೆಯ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ..ಡಿ. ಕಾರ್ಯಕಾರಿ ನಿರ್ದೇಶಕರು, ರಾಷ್ಟ್ರೀಯ ಕಿವುಡರ ಸಂಘದ ನಿರ್ದೇಶಕರು, ಎಸ್.ಪಿ..ಆರ್.ಸಿಇಂಡಿಯಾ ಎನ್.ಸಿ.ಪಿ..ಡಿ.ಪಿಯ ಕಾರ್ಯಕಾರಿ ನಿರ್ದೇಶಕರು, ಬಿ.ಪಿ.ಎನ ಕಾರ್ಯಕಾರಿ ನಿರ್ದೇಶಕರು, .ಎಸ್.ಎಲ್.ಆರ್.ಟಿ.ಸಿ ಮತ್ತು ಪಿ.ಡಿ.ಯು.ಎನ್..ಪಿ.ಪಿ.ಡಿ ಪ್ರತಿನಿಧಿಗಳು, ಬಾರತೀಯ ಚುನಾವಣಾ ಆಯೋಗದ ಪ್ರಮುಖರಾದ ಡಾ. ನಿರುಕುಮಾರ್ ಅವರು ಚುನಾವಣೆಯನ್ನು ಕೈಗೆಟುಕುವಂತೆ ಮಾಡಲು  ಮತ್ತು ಒಳಗೊಳ್ಳಲು ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಂಡರು.

ವಿವಿಧ ಪಾಲುದಾರರಿಂದ ಸ್ವೀಕರಿಸಿದ ಸಲಹೆಗಳ ಆಧಾರದ ಮೇಲೆ ಭವಿಷ್ಯದ ಚುನಾವಣೆಗಳನ್ನು ಕೈಗೆಟುಕುವಂತೆ ಮಾಡುವ ಸ್ವರೂಪದ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಸಮಗ್ರ ಮೇಲ್ವಿಚಾರಣಾ ಕಾರ್ಯವಿಧಾನ ಮತ್ತು ಎಲ್ಲಾ ಮತದಾನ ಕೇಂದ್ರಗಳನ್ನು ತಲುಪುವ, ಮೌಲ್ಯಮಾಪನ ಮಾಡುವ, ಮುಖ್ಯವಾಹಿನಿಯ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಒಂದುಗೂಡಿಸುವ ಉದ್ದೇಶವನ್ನು ಆಯೋಗ ಹೊಂದಿದೆ. ಚುನಾವಣಾ ಸಿಬ್ಬಂದಿಗೆ ತರಬೇತಿ ಮತ್ತು ಸಂವೇದನೆ, ವಿಶೇಷ ಚೇತನರ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಲು ಹೆಚ್ಚಿನ ಅರಿವು ಮೂಡಿಸುವ, ದತ್ತಾಂಶ ಸಂಗ್ರಹಣೆಯಲ್ಲಿ ಸುಧಾರಣಾ ವಿಧಾನಗಳು, ಪಿ..ಬ್ಲ್ಯೂಗಳಿಗೆ ಅಂಚೆ ಮತದಾನದ ಬಗ್ಗೆ ಅರಿವು, .ವಿ.ಆರ್.ಎಸ್ ಬಗ್ಗೆ ದೃಢವಾದ ಮಾಹಿತಿ ಮತ್ತು ಆನ್ ಲೈನ್ ಕುಂದುಕೊರತೆ ವ್ಯವಸ್ಥೆ, ವೀಕ್ಷಕರನ್ನು ಕೈಗೆಟುವಂತೆ ನಿಯೋಜನೆ ಮಾಡುವುದುಎಲ್ಲಾ ಹಂತದ ಚುನಾವಣಾ ಪ್ರಕ್ರಿಯೆಯನ್ನು ಕೈಗೆಟುಕುವಂತೆ ಮಾಡುವುದು ಸೇರಿದಂತೆ ಹಲವು ಅಂಶಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗಿದೆ.

ಸಮ್ಮೇಳನದಲ್ಲಿ ಮುಖ‍್ಯ ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ಅವರ ಜತೆ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಮತ್ತು ಶ್ರೀ ಅನೂಪ್ ಚಂದ್ರ ಪಾಂಡೆ ಅವರು ಕೆಳಕಂಡ ಮಾಹಿತಿ ಬಿಡುಗಡೆ ಮಾಡಿದರು.

1.  ಪಿ..ಬ್ಲ್ಯೂ ಮತದಾರರಿಗೆ ಅನುಕೂಲ ಮತ್ತು ಸಬಲೀಕರಣಕ್ಕಾಗಿ 2021 ಉಪಕ್ರಮಗಳು ಹೊಸ ಅಭ್ಯಾಸಗಳು ಮತ್ತು ಕೈಗೆಟುಕುವ ಅಂಶಗಳನ್ನೊಳಗೊಂಢ  ಉಪಕ್ರಮಗಳ ಮಾಹಿತಿ.

2.  ಇತ್ತೀಚೆಗೆ ಆರಂಭಿಸಲಾದ ಉಪಕ್ರಮಗಳಾದ ಬ್ರೈಲ್ ಭಾಷೆಯ ಆವೃತ್ತಿಗಳಾದ ಮತದಾರರ ಮಾರ್ಗದರ್ಶಿ ಕೈಪಿಡಿ, ಹೊಸ ಮತದಾರರಿಗೆ ಪತ್ರ ಮತ್ತು ಮತದಾರರ ಜಾಗೃತಿ ಕುರಿತು 50 ಉತ್ತೇಜನ ನೀಡುವ ಹಾಡುಗಳ ಪುಸ್ತಕ

3.  ಮತದಾರರ ಸಹಾಯವಾಣಿ ಅಪ್ಲಿಕೇಶನ್ ಮತ್ತು .ವಿ.ಎಂವಿ.ವಿ.ಪ್ಯಾಟ್ ಎರಡು ಜಾಗೃತಿ ವಿಡಿಯೋಗಳ ಸಂಕೇತ ಬಾಷೆಯ ಆವೃತ್ತಿಗಳು

4.  ಕರ್ನಾಟಕದಲ್ಲಿ 2018 ವಿಧಾನಸಭೆ ಮತ್ತು 2019 ಲೋಕಸಭಾ ಚುನಾವಣೆಯಲ್ಲಿ ಪಿ..ಬ್ಲ್ಯೂಗಳಿಗಾಗಿ ಸ್ವೀಪ್ ಚಟುವಟಿಕೆಗಳು ಮತ್ತು ಸೌಲಭ್ಯಗಳ ಫಲಿತಾಂಶಗಳ ಮೌಲ್ಯಮಾಪನದ ಅಧ್ಯಯನ ವರದಿಯನ್ನು ಆಯೋಗ ಬಿಡುಗಡೆ ಮಾಡಿದೆ.

ಚುನಾವಣಾ ಆಯೋಗ ಇಲ್ಲಿಯವರೆಗೆ ತೆಗೆದುಕೊಂಡ ಕೈಗೆಟುವ ಕುರಿತ ಉಪಕ್ರಮಗಳ ಮಾಹಿತಿ, ಇತ್ತೀಚೆಗೆ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿನ ಅನುಭವಗಳು, ಇತರೆ ಮಾಹಿತಿಗಳನ್ನು ಸಹ ಹಂಚಿಕೊಳ್ಳಲಾಗಿದೆ.

***



(Release ID: 1756944) Visitor Counter : 1297