ಪ್ರಧಾನ ಮಂತ್ರಿಯವರ ಕಛೇರಿ

ಹೆಸರಾಂತ ಸಾಹಿತಿ ಮನೋರಮಾ ಮೊಹಾಪಾತ್ರ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ

Posted On: 18 SEP 2021 11:26PM by PIB Bengaluru

ಹೆಸರಾಂತ ಸಾಹಿತಿ, ಬರಹಗಾರ್ತಿ, ಲೇಖಕಿ ಮನೋರಮಾ ಮೊಹಾಪಾತ್ರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
“ಜನಪ್ರಿಯ ಸಾಹಿತಿ, ಬರಹಗಾರ್ತಿ ಮನೋರಮಾ ಮೊಹಾಪಾತ್ರ ಅವರ ನಿಧನದಿಂದ ತುಂಬಾ ಬೇಸರ ಉಂಟಾಗಿದೆ. ವೈವಿಧ್ಯಮಯ ವಿಷಯಗಳ ಕುರಿತ ಅವರು ಬರೆದಿರುವ ಸಾಹಿತ್ಯದಿಂದಲೇ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಮಾಧ್ಯಮ ರಂಗಕ್ಕೆ ಅವರು ಶ್ರೀಮಂತ ಕೊಡುಗೆ ನೀಡಿದ್ದಾರೆ. ಅಲ್ಲದೆ, ವಿಸ್ತೃತ ಸಮುದಾಯ ಸೇವೆ ಮಾಡಿದ್ದಾರೆ. ಮನೋರಮಾ ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.”
 


 

***
 



(Release ID: 1756236) Visitor Counter : 321