ಪ್ರಧಾನ ಮಂತ್ರಿಯವರ ಕಛೇರಿ

ಆಸ್ಟ್ರೇಲಿಯಾದ ಘನತೆವೆತ್ತ ವಿದೇಶಾಂಗ ವ್ಯವಹಾರಗಳು ಮತ್ತು ಮಹಿಳಾ ಸಚಿವೆ ಮರಿಸ್‌ ಪೇನ್ ಮತ್ತು ರಕ್ಷಣಾ ಸಚಿವ ಘನತೆವೆತ್ತ ಪೀಟರ್ ಡಟ್ಟನ್ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿದರು

Posted On: 11 SEP 2021 9:59PM by PIB Bengaluru

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ  ಸಚಿವರ ಮಟ್ಟದ 2+2 ಮೊದಲ ಮಾತುಕತೆ ಬಳಿಕ ಆಸ್ಟ್ರೇಲಿಯಾದ ಘನತೆವೆತ್ತ ವಿದೇಶಾಂಗ ವ್ಯವಹಾರಗಳು ಮತ್ತು ಮಹಿಳಾ ಸಚಿವೆ ಮರಿಸ್ ಪೇನ್ ಮತ್ತು ಘನತೆವೆತ್ತ ರಕ್ಷಣಾ ಸಚಿವ ಪೀಟರ್ ಡಟ್ಟನ್ ಅವರು ಶನಿವಾರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ ಭೇಟಿ ಮಾಡಿದರು. ಇದೊಂದು ಸೌಜನ್ಯದ ಭೇಟಿಯಾಗಿತ್ತು.

2+2 ಮಾತುಕತೆಯ ಸಂದರ್ಭದಲ್ಲಿ ರಚನಾತ್ಮಕ ಚರ್ಚೆಗಳಿಗಾಗಿ ಆಸ್ಟ್ರೇಲಿಯಾದ ಗಣ್ಯರ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ವ್ಯೂಹಾತ್ಮಕ ಒಗ್ಗೂಡುವಿಕೆಯ ಸಂಕೇತವಾಗಿದೆ ಎಂದರು.

ದ್ವಿಪಕ್ಷೀಯ ವ್ಯೂಹಾತ್ಮಕ ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಗಳು, ಇಂಡೋ-ಪೆಸಿಫಿಕ್ ವಲಯದ ಬಗ್ಗೆ ಎರಡೂ ದೇಶಗಳ ಸಾಮಾನ್ಯ ಕಾರ್ಯವಿಧಾನ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ಭಾರತೀಯ ಸಮುದಾಯದ ಪ್ರಾಮುಖ್ಯ ಹಾಗೂ ಮೂಲಕ ಎರಡೂ ದೇಶಗಳ ನಡುವೆ ನಡುವೆ ಮಾನವ ಸೇತುವೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಕಳೆದ ವರ್ಷ ಎರಡೂ ದೇಶಗಳ ನಡುವೆ ಸ್ಥಾಪಿಸಲಾದ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು ತ್ವರಿತವಾಗಿ ಮುನ್ನಡೆಸುವಲ್ಲಿ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ವಹಿಸಿರುವ ಪಾತ್ರದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರುತಮಗೆ ಅನುಕೂಲವಾದಾಗ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮಾರಿಸನ್ ಅವರಿಗೆ ಮೋದಿ ಅವರು ಮತ್ತೊಮ್ಮೆ ಆಹ್ವಾನ ನೀಡಿದರು.

***



(Release ID: 1754408) Visitor Counter : 169