ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಬ್ಲ್ಯೂ.ಎಚ್.ಒ ಸೆರೋನಲ್ಲಿ ಭಾರತ


ಡಬ್ಲ್ಯೂ.ಎಚ್.ಒ ಸೆರೋ ಸಚಿವರ ದುಂಡು ಮೇಜಿನ ಸಭೆಯಲ್ಲಿ ಕೋವಿಡ್ – 19 ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತದಲ್ಲಿ ಸವಾಲುಗಳು ಮತ್ತು ಅವಕಾಶಗಳ ಕುರಿತು ಡಾ. ಭಾರತಿ ಪ್ರವೀಣ್ ಪವಾರ್ ಚರ್ಚೆ

“ಸಂಪೂರ್ಣ ಸರ್ಕಾರಿ ವಿಧಾನದೊಂದಿಗೆ ನಾವು ವಿಕೇಂದ್ರೀಕರಣ ಆದರೆ ಏಕೀಕೃತವಾಗಿ ಕೋವಿಡ್ ಗೆ ಮೀಸಲಾದ ಮೂಲ ಸೌಕರ್ಯವನ್ನು ತ್ವರಿತವಾಗಿ ಸೃಷ್ಟಿಸುವತ್ತ ಗಮನ ಹರಿಸಿದ್ದೇವೆ ಮತ್ತು ಆರೋಗ್ಯ ರಕ್ಷಣಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ”

Posted On: 07 SEP 2021 3:36PM by PIB Bengaluru

ವಿಶ್ವ ಆರೋಗ್ಯ ಸಂಘಟನೆಯದಕ್ಷಿಣ ಏಷ್ಯಾ ಪ್ರಾದೇಶಿಕ ಕಚೇರಿ [ಡಬ್ಲ್ಯೂ.ಎಚ್.-ಸೆರೋ] ಸಮಾವೇಶದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಡಾ, ಭಾರತಿ ಪ್ರವೀಣ್ ಪವಾರ್ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾರತವನ್ನು ಪ್ರತಿನಿಧಿಸಿದ್ದರು.

ಡಬ್ಲ್ಯೂ.ಎಚ್. ಪ್ರಾದೇಶಿಕ ಸಮಿತಿಯ 74 ನೇ ಅಧಿವೇಶನದ ಆಗ್ನೇಯ ಏಷ್ಯಾ ವಿಭಾಗದ ಸಚಿವರ ದುಂಡು ಮೇಜಿನ ಸಭೆಯಲ್ಲಿ ಅವರು ಭಾರತದ ಪರವಾಗಿ ಪಾಲ್ಗೊಂಡಿದ್ದರು.

https://static.pib.gov.in/WriteReadData/userfiles/image/image0022ZYC.jpg

https://static.pib.gov.in/WriteReadData/userfiles/image/image003J618.jpg

ಏಕೀಕೃತ ಆರೋಗ್ಯ ವ್ಯವಸ್ಥೆ ಮತ್ತು ಆರೋಗ್ಯ ಸಂಬಂಧಿತ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮತ್ತು ಭವಿಷ್ಯದಲ್ಲಿ ಆರೋಗ್ಯ ವ್ಯವಸ್ಥೆಯ ಪರಿಸ್ಥಿತಿಯನ್ನು ಬಲಪಡಿಸಿ ಉತ್ತಮ ವ್ಯವಸ್ಥೆಯನ್ನು ನಿರ್ಮಿಸಲು ಯೋಜಿಸಲಾದ ಪ್ರಮುಖ ಕ್ರಮಗಳು ಮತ್ತು ಕಾರ್ಯತಂತ್ರದ ಬಗ್ಗೆ ಅವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.

ಕೋವಿಡ್19 ಸಾಂಕ್ರಾಮಿಕ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ, ಪ್ರಮುಖವಾಗಿ ಜೀವನ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ ಮತ್ತು ದೊಡ್ಡ ಪ್ರಮಾಣದ ಜೀವ ಹಾನಿ ಉಂಟು ಮಾಡಿದೆ. “ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳ ಮಾರ್ಗದರ್ಶನದಲ್ಲಿ ದೇಶ ಸಾಂಕ್ರಾಮಿಕವನ್ನು ನಿರ್ವಹಿಸಲು ಸಕಾರಾತ್ಮಕ, ಪೂರ್ವಭಾವಿ, ಸಂಪೂರ್ಣ ಸರ್ಕಾರ, ಇಡೀ ಸಮಾಜ ಮತ್ತು ಜನ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಂಡಿದೆಎಂದು ಅವರು ಹೇಳಿದರುನಮ್ಮ ಸನ್ನದ್ಧತೆ ಮತ್ತು ಪ್ರತಿಕ್ರಿಯೆ ತಂತ್ರಗಳು ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿಗಳನ್ನು ನಿರ್ವಹಿಸುವ ನಮ್ಮ ಹಿಂದಿನ ಅನುಭವಗಳನ್ನು ಸಮರ್ಥವಾಗಿ ಬಳಸಿಕೊಂಡಿದೆ ಮತ್ತು ಅಗತ್ಯವಾದ ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆಗಳನ್ನು ನಿರ್ಧರಿಸುವ ಮತ್ತು ಆಧುನಿಕ ಜ್ಞಾನದ ಮೂಲಕ ರೋಗದ ವೈಜ್ಞಾನಿಕ ಸ್ಪರೂಪವನ್ನು ತಿಳಿದುಕೊಂಡಿದ್ದೇವೆ. ಭಾರತದಲ್ಲಿ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪರೀಕ್ಷೆ, ಜಾಡು ಪತ್ತೆ, ಚಿಕಿತ್ಸೆ, ಲಸಿಕೆ ಮತ್ತು ಕೋವಿಡ್ ಸೂಕ್ತ ವರ್ತನೆಯಂತಹ ಐದು ಆಧಾರ ಸ್ಥಂಭಗಳ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದೇವೆ. “ಸಂಪೂರ್ಣ ಸರ್ಕಾರಿ ವಿಧಾನದೊಂದಿಗೆ ನಾವು ವಿಕೇಂದ್ರೀಕರಣ ಆದರೆ ಏಕೀಕೃತವಾಗಿ ಕೋವಿಡ್ ಗೆ ಮೀಸಲಾದ ಮೂಲ ಸೌಕರ್ಯವನ್ನು ತ್ವರಿತವಾಗಿ ಸೃಷ್ಟಿಸುವತ್ತ ಗಮನ ಹರಿಸಿದ್ದೇವೆ ಮತ್ತು ಆರೋಗ್ಯ ರಕ್ಷಣಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ

ಭಾರತದ ಬಲಿಷ್ಠ ಮತ್ತು ನಿರ್ಣಾಯಕ ನಾಯಕತ್ವದ ಪೂರ್ವಭಾವಿ ದಿಟ್ಟ ನಿರ್ಧಾರಗಳನ್ನು ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ಕೈಗೊಂಡಿದ್ದೇವೆ ಮತ್ತು ಇದರ ಪರಿಣಾಮ ಕೋವಿಡ್19 ಪ್ರವೇಶ ಮತ್ತು ಹರಡುವಿಕೆ ನಿಧಾನಗೊಂಡಿತು. ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ದೇಶಕ್ಕೆ ಸಾರ್ವಜನಿಕ ಆರೋಗ್ಯ ಸಾಮರ್ಥ್ಯ ಮತ್ತು ಮೂಲ ಸೌಕರ್ಯಗಳನ್ನು ನಿರ್ಮಿಸಲು ಸಾಕಷ್ಟು ಸಮಯಾವಕಾಶವೂ ದೊರೆಯಿತು. ಅಂತರ್ ಸಚಿವಾಲಯಗಳ ಗುಂಪುಗಳನ್ನು ರಚಿಸುವ ಮೂಲಕ ಆಂತರಿಕ ಸಮನ್ವಯ ವ್ಯವಸ್ಥೆಯನ್ನು ಕಲ್ಪಿಸಲಾಯಿತು ಮತ್ತು ರಾಜ್ಯಗಳು, ಇತರೆ ಪಾಲುದಾರರ ನಡುವೆ ಸಂಪರ್ಕ ಮತ್ತು ಸಾಂಕ್ರಾಮಿಕವನ್ನು ನಿರ್ವಹಿಸಲು ಸಮುದಾಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಜನಾಂದೋಲನ [ ಜನರ ಆಂದೋಲನ] ನಡೆಸಲಾಯಿತು. ಸಾಂಕ್ರಾಮಿಕ ರೋಗಗಳ [ತಿದ್ದುಪಡಿ] ಕಾಯಿದೆ 2020 ಕಾನೂನು ಮತ್ತು ನೀತಿ ನಿಬಂಧನೆಗಳನ್ನು ಜಾರಿಗೊಳಿಸಲಾಯಿತು. ಕೇಂದ್ರ ಮತ್ತು ರಾಷ್ಟ್ರೀಯ ಉಪ ವಲಯಗಳಲ್ಲಿ ಈಗಾಗಲೇ ವಿಪತ್ತು ನಿರ್ವಹಣಾ ಕಾಯ್ದೆ 2005 ಜಾರಿಯಲ್ಲಿದ್ದು, ಸಾಂಕ್ರಾಮಿಕದ ಕಾರ್ಯನಿರ್ವಹಣೆಯ ಎಲ್ಲಾ ಅಂಶಗಳನ್ನು ಕಾರ್ಯಗತಗೊಳಿಸಲು ಇದು ಅನುವು ಮಾಡಿಕೊಡಲು ಮತ್ತು ಕುರಿತು ಸೂಕ್ತ ಚೌಕಟ್ಟನ್ನು ಒದಗಿಸಿದೆ. ಅವರ ಪಾತ್ರಗಳು, ಜವಾಬ್ದಾರಿಗಳನ್ನು ಸ್ಪಷ್ಟಪಡಿಸುವ ಮೂಲಕ ರಾಷ್ಟ್ರೀಯ, ಸ್ಥಳೀಯ ಹಂತದವರೆಗೆ ಅಂತರ್ ವಲಯದ ಸಮನ್ವಯತೆಯನ್ನು ಕಾಯ್ದುಕೊಳ್ಳಲಾಗಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ಚಿಕಿತ್ಸಾ ಶಿಷ್ಟಾಚಾರಗಳು ಮತ್ತು ಏಕರೂಪವಾಗಿ ಕೋವಿಡ್ ನಿರ್ವಹಣೆಯ ಎಲ್ಲಾ ಆಯಾಮಗಳಿಗೆ ಕೇಂದ್ರ ಸರ್ಕಾರ ತಾಂತ್ರಿಕ ನೆರವು ಕಲ್ಪಿಸಿತ್ತು ಎಂದರು

ರೋಗ ಸ್ವರೂಪದ ಬಗ್ಗೆ ಭಾರತ ಸರ್ಕಾರ ನಿರಂತರವಾಗಿ ನಿಗಾವಹಿಸುತ್ತಿತ್ತು ಮತ್ತು  ಇದು ದೇಶದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಸಾಂಕ್ರಾಮಿಕದ ವಿವಿಧ ಪಥವನ್ನು ಆಧರಿಸಿ ದೇಶದಾದ್ಯಂತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಕ್ಷೇತ್ರಕಾರ್ಯ ಚಟುವಟಿಗಳಿಗೆ ಸಹಕಾರ ನೀಡಿತು. ಪ್ರಯೋಗಾಲಯ, ಆಸ್ಪತ್ರೆ ಮೂಲ ಸೌಕರ್ಯ, ಸಂಶೋಧನೆ ಮತ್ತು ಅಭಿವೃದ್ಧಿ, ರೋಗ ಹರಡುವಿಕೆ ನಿಧಾನಗೊಳಿಸುವ, ಲಸಿಕೆಗಳು, ಮಾನವ ಸಂಪನ್ಮೂಲಗಳ ಉನ್ನತೀಕರಣದ ವಿಷಯದಲ್ಲಿ ಪ್ರಮುಖ ಸಾಮರ್ಥ್ಯಗಳನ್ನು ಬಲಪಡಿಸುವಂತಹ ನಿರ್ದಿಷ್ಟ ಪ್ರಯತ್ನಗಳನ್ನು ನಡೆಸಲಾಗಿದೆ. ವೈಯಕ್ತಿಕ ರಕ್ಷಣಾ ಸಾಧನಗಳು, ಲಸಿಕೆ ಉತ್ಪಾದನಾ ಸಾಮರ್ಥ್ಯ ವೃದ್ಧಿ, ವೆಂಟಿಲೇಟರ್ ಗಳು. ರೋಗ ನಿರ್ಣಯ ಸೇರಿದಂತೆ ಅಗತ್ಯವಾದ ಲಾಜಿಸ್ಟಿಕ್ ವಿಷಯದಲ್ಲಿ ಸ್ಥಳೀಯ ಸಾಮರ್ಥ್ಯಗಳ ಅಭಿವೃದ್ಧಿಯೊಂದಿಗೆ ಕೈಗೊಳ್ಳಲಾಗಿದೆ. ಅಂತೆಯೇ .ಸಿ.ಎಂ.ಆರ್ ಟೆಸ್ಟಿಂಗ್ ಪೋರ್ಟಲ್ ನಂತಹ ಡಿಜಿಟಲ್ ಅವಿಷ್ಕಾರಗಳು ದೇಶಾದ್ಯಂತ ಸೋಂಕಿನ ಮೇಲೆ ನಿಗಾವಹಿಸಲು ಸಹಾಯ ಮಾಡಿದವು. “ಆರೋಗ್ಯ ಸೇತುವಿನಂತಹ ಐಟಿ ಅಪ್ಲಿಕೇಶನ್ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡಲು ಸಹಾಯ ಮಾಡಿತು ಮತ್ತು ಕೊವಿನ್ ಪೋರ್ಟಲ್ ಬಹುದೊಡ್ಡ ಲಸಿಕಾ ಪ್ರಯತ್ನಗಳ ಮೇಲೆ ನಿಗಾವಹಿಸಿತು. ಟೆಲಿಮೆಡಿಸನ್ ಮತ್ತು -ಐಸಿಯು ವ್ಯವಸ್ಥೆಗಳು ಕೋವಿಡ್ ಮತ್ತು ಕೋವಿಡೇತರ ಆರೋಗ್ಯ ಸೇವೆಗಳನ್ನು ಸುಧಾರಿಸಿ ದೂರದ ಪ್ರದೇಶಗಳಿಗೆ ಸೇವೆ ತಲುಪಿಸಲು ಸಹಕಾರಿಯಾಯಿತು ಎಂದರು.

ಸಾಂಕ್ರಾಮಿಕದಿಂದ ಮಾನವ ವೆಚ್ಚದ ಕುರಿತು ಮಾತನಾಡಿದ ಅವರುಸಮಾಜದ ಅಂಚಿನಲ್ಲಿರುವ ಮತ್ತು ಬಡವರ್ಗದವರ ಮೇಲೆ ಕೋವಿಡ್19 ಬೀರಿದ ಪರೋಕ್ಷ ಪರಿಣಾಮವನ್ನು ಅರಿತು ಆಹಾರ ಧಾನ್ಯಗಳ ಪೂರೈಕೆ, ಕನಿಷ್ಠ ಆದಾಯ ಬೆಂಬಲ ಯೋಜನೆಗಳು, ಸಣ್ಣ ಕೈಗಾರಿಕೆಗಳಿಗೆ ನೆರವುಕೋವಿಡ್19 ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಬೆಂಬಲ ಮತ್ತು ಕೋವಿಡ್19 ಪರಿಣಾಮಗಳನ್ನು ತಗ್ಗಿಸಲು ಇತರೆ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

 ಜಾಗತಿಕ ಆರೋಗ್ಯದ ಮೇಲೆ ಉತ್ಪಾದನಾ ಸಾಮರ್ಥ್ಯಗಳ ವರ್ಧನೆಯೊಂದಿಗೆ ಭಾರತದ ಅಭಿವೃದ್ಧಿ ಮತ್ತು ಲಸಿಕೆಗಳ ನಿಯೋಜನೆ ಬೃಹತ್ ಪರಿಣಾಮ ಬೀರಿದ್ದು, ಕುರಿತು ಭಾರತದ ಲಸಿಕೆ ಕಾರ್ಯತಂತ್ರದ ಮೂಲಭೂತ ತತ್ವಗಳನ್ನು ಅವರು ಹಂಚಿಕೊಂಡರು. ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ, ದುರ್ಬಲ ವರ್ಗಗಳಿಗೆ ಲಸಿಕೆ ನೀಡಿಕೆಯಲ್ಲಿ ಆದ್ಯತೆ, ಬೇರೆ ದೇಶಗಳಿಂದ ಲಸಿಕೆಗಳನ್ನು ಖರೀದಿಸುವ ಪ್ರಯತ್ನಗಳು, ಲಸಿಕೆ ಪಡೆದವರಿಗೆ ಎರಡನೇ ಡೋಸ್ ನೀಡಲು ನಿಗಾ ವಹಿಸುವ ಜತೆಗೆ ಲಸಿಕೆ ಪಡೆದ ಡಿಜಿಟಲ್ ಪ್ರಮಾಣ ಪತ್ರ ಒದಗಿಸುವವರೆಗೆ ಸಾಕಷ್ಟು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಲಸಿಕೆ ಪ್ರಯೋಗಗಳು, ಲಸಿಕೆಯ ಸಮಾನ ವಿತರಣೆ, ಖರೀದಿ, ಹಣಕಾಸು, ವಿತರಣಾ ಕಾರ್ಯವಿಧಾನಗಳು, ಜನಸಂಖ್ಯೆ ವಿವಿಧ ಗುಂಪುಗಳಿಗೆ ಆದ್ಯತೆ ಮತ್ತಿತರ ವಿಚಾರಗಳಲ್ಲಿ  ಕೋವಿಡ್ -19 ಕುರಿತ ನಮ್ಮ ಲಸಿಕಾ ಆಡಳಿತದ ರಾಷ್ಟ್ರೀಯ ತಜ್ಞರ ತಂಡ ಸೂಕ್ತ ಮಾರ್ಗದರ್ಶನ ಮಾಡಿದೆ ಮತ್ತು ಲಸಿಕೆ ಅಭಿವೃದ್ಧಿ ವಲಯದಲ್ಲಿ ಬೆಂಬಲ, ಔಷಧದ ಸಂಶೋಧನೆ ಮತ್ತು ಅಭಿವೃದ್ಧಿ, ಕೊರೋನಾ ಸೋಂಕು ಪತ್ತೆ ಮತ್ತು ಲಸಿಕೆಗಳ ವಲಯದಲ್ಲಿ ನಮ್ಮ ರಾಷ್ಟ್ರೀಯ ಕಾರ್ಯಪಡೆ ಮಾರ್ಗದರ್ಶನ ಮಾಡಿದೆ. ಉದ್ದೇಶಿತ ವಿಭಾಗಗಳಿಗೆ ಲಸಿಕೆಯನ್ನು ಹಂತಹಂತವಾಗಿ ನೀಡುತ್ತಿರುವುದನ್ನು ವಿವರಿಸಿದ ಅವರು, ಭಾರತದ 680 ದಶಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತ ಏಕೀಕೃತ ಲಸಿಕಾ ಕಾರ್ಯಕ್ರಮದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮೂಲ ಸೌಕರ್ಯಗಳನ್ನು ಬಳಸಿಕೊಂಡಿತು. ಇದರಿಂದ ಲಸಿಕೆಗಳು ಮತ್ತು ಅಗತ್ಯವಿರುವ ಸಿರಂಜಿನ್ನು ನಿರ್ವಹಿಸುವ ಜತೆಗೆ ಶೀತಲಗೃಹ ಸರಪಳಿಯ ನಿರ್ವಹಣೆಯನ್ನು ಖಾತ್ರಿಪಡಿಸಿದೆ. ಎಲ್ಲಾ ಹಂತಗಳಲ್ಲೂ ಸೂಕ್ತ ತರಬೇತಿ ಮೂಲಕ ಸಾಮರ್ಥ್ಯವೃದ್ಧಿ ಮಾಡಿಕೊಳ್ಳಲಾಗಿದ್ದು, ರಾಜ್ಯಮಟ್ಟದಲ್ಲಿ 7,600 ಮಂದಿ ಮತ್ತು ಜಿಲ್ಲಾಮಟ್ಟದಲ್ಲಿ 61,500 ಮಂದಿಗೆ  ಜತೆಗೆ 2 ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕುವವರು ಮತ್ತು 3.9 ಲಕ್ಷಕ್ಕೂ ಹೆಚ್ಚು ಇತರೆ ತಂಡದ ಸದಸ್ಯರಿಗೆ ತರಬೇತಿ ನೀಡಲಾಗಿದೆ. ಲಸಿಕೆ ಉತ್ಪಾದನೆಯನ್ನು ವೃದ್ಧಿಸಿ, ಲಸಿಕೆ ಉತ್ಪಾದಕರಿಗೆ ಹಣಕಾಸು ಬೆಂಬಲ ಒದಗಿಸಲಾಗಿದೆ, ಮುಂಗಡವಾಗಿಯೇ ಹಣಪಾವತಿಸಿ ಲಸಿಕೆಗೆ ಬೇಡಿಕೆ ಸಲ್ಲಿಕೆ, ಉತ್ಪಾದನೆಗೆ ನೆರವಾಗುವ ಸಲುವಾಗಿ ತಂತ್ರಜ್ಞಾನ ವರ್ಗಾವಣೆ, ಜತೆಗೆ ಅಪಾಯದ ಉತ್ಪಾದನೆಗೂ ಸಹ ಅನುಮತಿ ನೀಡಲಾಯಿತು. ಕೋ-ವಿನ್ ಡಿಜಿಟಲ್ ವೇದಿಕೆ ಪಾರದರ್ಶಕವಾಗಿ ನೋಂದಣಿ ಮಾಡಲು ಬೆಂಬಲ ನೀಡಿತು ಮತ್ತು ಪ್ರತಿಯೊಬ್ಬ ಕೋವಿಡ್ - 19 ಫಲಾನುಭವಿಗಳನ್ನು ಪತ್ತೆ ಮಾಡುವಸೂಕ್ತ ಸಮಯದಲ್ಲಿ ಲಸಿಕೆ ದಾಸ್ತಾನು ಕುರಿತು ಸೂಕ್ತ ಮಾಹಿತಿ ಒದಗಿಸುವ, ಲಸಿಕೆ ಸಂಗ್ರಹಾಗಾರಗಳ ಉಷ್ಣಾಂಶ, ಡಿಜಿಟಲ್ ಸರ್ಟಿಫಿಕೇಟ್ ಗಳ ವಿವರಣೆ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

https://static.pib.gov.in/WriteReadData/userfiles/image/image004I9UN.jpg

https://static.pib.gov.in/WriteReadData/userfiles/image/image005RX6R.jpg

ಭಾರತದ ಕೋವಿಡ್19 ಲಸಿಕೆ ಕಾರ್ಯಕ್ರಮ ಎಲ್ಲಾ ಪಾಲುದಾರರನ್ನು ಒಳಗೊಂಡಂತೆ ವಿವರವಾದ ಯೋಜನೆ, ಪರಿಣಾಮಕಾರಿ ಸಂವಹನ, ದೃಢವಾದ ಪೂರೈಕೆಯ ನಿರ್ವಹಣೆ, ತಂತ್ರಜ್ಞಾನದ ಬಳಕೆ, ಹೊಂದಾಣಿಕೆಯಿಂದ ಕಾರ್ಯಕ್ರಮದ ಅನುಷ್ಠಾನವು ಕಠಿಣವಾದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿ ಅವರು ತಮ್ಮ ಭಾಷಣ ಕೊನೆಗೊಳಿಸಿದರು.

***(Release ID: 1753039) Visitor Counter : 226