ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಜೀ ಅವರ 125 ನೇ ಜನ್ಮವರ್ಷಾಚರಣೆ ಸಂದರ್ಭ ಪ್ರಧಾನ ಮಂತ್ರಿ ಅವರ ಭಾಷಣ

Posted On: 01 SEP 2021 6:47PM by PIB Bengaluru

ಹರೇ ಕೃಷ್ಣ! ಪವಿತ್ರ ಸಂದರ್ಭದಲ್ಲಿ ನಮ್ಮೊಂದಿಗಿರುವ ದೇಶದ ಸಂಸ್ಕೃತಿ ಸಚಿವರಾದ ಶ್ರೀ ಜಿ.ಕಿಶನ್ ರೆಡ್ಡಿ, ಇಸ್ಕಾನ್ ಬ್ಯೂರೋ ಅಧ್ಯಕ್ಷರಾದ ಶ್ರೀ ಗೋಪಾಲ ಕೃಷ್ಣ ಗೋಸ್ವಾಮೀ ಜೀ, ಮತ್ತು ಜಗತ್ತಿನ ವಿವಿಧ ದೇಶಗಳ ಕೃಷ್ಣ ಭಕ್ತರೇ!

ಮೊನ್ನೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಇತ್ತು ಮತ್ತು ಇಂದು ನಾವು ಶ್ರೀಲ ಪ್ರಭುಪಾದ ಅವರ 125 ನೇ ಜನ್ಮವರ್ಷವನ್ನಾಚರಿಸುತ್ತಿದ್ದೇವೆ. ಇದು ಸಂತೋಷ ಮತ್ತು ಸಾಧನೆಯ ತೃಪ್ತಿ ಸಂಗಮಿಸಿದ ಸಂದರ್ಭ. ಅನುಭವ ವಿಶ್ವದಾದ್ಯಂತ ಹರಡಿರುವ ಶ್ರೀಲ ಪ್ರಭುಪಾದ ಸ್ವಾಮಿಯವರ ಮಿಲಿಯಾಂತರ ಅನುಯಾಯಿ  ಮತ್ತು ಕೃಷ್ಣ ಭಕ್ತರದಾಗಿದೆ. ನಾನು ಪರದೆಯ ಮೇಲೆ ವಿವಿಧ ದೇಶಗಳ ಸಂತರನ್ನು ಕಾಣುತ್ತಿದ್ದೇನೆ. ಮಿಲಿಯಾಂತರ ಮನಸ್ಸುಗಳು ಒಂದು ಭಾವನೆಯೊಂದಿಗೆ ಮತ್ತು ಮಿಲಿಯಾಂತರ ದೇಹಗಳು ಒಂದು ಸಮಾನ ಪ್ರಜ್ಞೆಯ ಜೊತೆ ಬೆಸೆದುಕೊಂಡಿರುವಂತೆ ಕಾಣುತ್ತಿದೆ!. ಇದು ಪ್ರಭುಪಾದ ಸ್ವಾಮೀಜಿ ಅವರು ಇಡೀ ಜಗತ್ತಿಗೆ ಹರಡಿದ ಕೃಷ್ಣ ಪ್ರಜ್ಞೆ.

ಸ್ನೇಹಿತರೇ,

ನಮಗೆಲ್ಲಾ ತಿಳಿದಿದೆ ಪ್ರಭುಪಾದ ಸ್ವಾಮೀಜಿ ಅವರು ಕೃಷ್ಣನ ಅಲೌಕಿಕ ಭಕ್ತರು ಮಾತ್ರವಲ್ಲ ಅವರು ಭಾರತದ ಅತ್ಯಂತ ದೊಡ್ಡ ಭಕ್ತರು. ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಅಸಹಕಾರ ಚಳವಳಿಯ ಬೆಂಬಲಾರ್ಥ ಸ್ಕಾಟಿಶ್ ಕಾಲೇಜಿನಿಂದ ತಮ್ಮ ಡಿಪ್ಲೊಮಾವನ್ನು ಪಡೆದುಕೊಳ್ಳಲು ನಿರಾಕರಿಸಿದ್ದರು. ಇಂದು ದೇಶವು ಇಂತಹ ದೊಡ್ಡ ದೇಶಭಕ್ತರ 125 ಜನ್ಮವರ್ಷಾಚರಣೆಯನ್ನು ದೇಶದ ಸ್ವಾತಂತ್ರ್ಯದ 75  ವರ್ಷಾಚರಣೆಯಾದ ಅಮೃತ ಮಹೋತ್ಸವದ  ಜೊತೆ ಆಚರಿಸುವಂತಾಗಿರುವುದು ಒಂದು ಯೋಗಾಯೋಗ ಮತ್ತು ಅದು ಸಂತಸದ ಸಂಗತಿ. ಶ್ರೀಲ ಪ್ರಭುಪಾದ ಸ್ವಾಮಿ ಅವರು ಭಾರತದ ಬೆಲೆ ಕಟ್ಟಲಾಗದ ನಿಧಿಯನ್ನು ಹಂಚುವುದಕ್ಕಾಗಿ ತಾವು ದೇಶಗಳನ್ನು ಸುತ್ತುತ್ತಿರುವುದಾಗಿ ಸದಾ ಹೇಳುತ್ತಿದ್ದರು. ಭಾರತದ ಜ್ಞಾನ ಮತ್ತು ವಿಜ್ಞಾನದ ಸ್ಪೂರ್ತಿ, ಜೀವನ ಸಂಸ್ಕೃತಿ, ಮತ್ತು ನಾವು ಹೊಂದಿರುವ ಸಂಪ್ರದಾಯಗಳು  अथ-भूत दयाम् प्रति, ಅಂದರೆ ಸಕಲ ಜೀವಾತ್ಮಗಳ ಕಲ್ಯಾಣಕ್ಕಾಗಿರುವಂತಹವು !. इदम् ममम, ಅಂದರೆಇದು ನನ್ನದಲ್ಲ, ಇದು ನಮ್ಮ ಆಚರಣೆಗಳ ಕೊನೆಯ ಮಂತ್ರ. ಇದು ಇಡೀ ವಿಶ್ವಕ್ಕೆ ಸೇರಿದ್ದು, ಇಡೀ ಜೀವರಾಶಿಯ ಪ್ರಯೋಜನಕ್ಕಾಗಿರುವುದು ಮತ್ತು ಅದರಿಂದಾಗಿ ಸ್ವಾಮೀಜಿ ಅವರ ಪೂಜ್ಯ ಗುರೂಜಿ ಶ್ರೀಲ ಭಕ್ತಿಸಿದ್ದಾಂತ ಸರಸ್ವತಿ ಜೀ ಅವರು ಅವರಲ್ಲಿ ಸಾಮರ್ಥ್ಯವನ್ನು ಕಂಡರು ಮತ್ತು ಭಾರತದ ಚಿಂತನೆ ಹಾಗು ತತ್ವಜ್ಞಾನವನ್ನು ಜಗತ್ತಿಗೆ ಪ್ರಸಾರ ಮಾಡುವಂತೆ ಅವರಿಗೆ ಸೂಚಿಸಿದರು. ಶ್ರೀಲ ಪ್ರಭುಪಾದ ಜೀ ತಮ್ಮ ಗುರುಗಳ ಆದೇಶವನ್ನು ತಮ್ಮ ಜೀವನೋದ್ದೇಶವನ್ನಾಗಿಸಿಕೊಂಡರು ಮತ್ತು ಅವರ ಪ್ರಯತ್ನಗಳ ಫಲ ಇಂದು ಜಗತ್ತಿನ ಪ್ರತೀ ಮೂಲೆಯಲ್ಲಿಯೂ ಕಾಣ ಬರುತ್ತಿದೆ.

ಅಮೃತ ಮಹೋತ್ಸವದಲ್ಲಿ ಕೂಡಾ, ಭಾರತದ ದೃಢ ನಿರ್ಧಾರಗಳು ಸಬ್ ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ನ್ನು ಆಧಾರವಾಗಿಸಿಕೊಂಡಿವೆ. ಜಾಗತಿಕ ಕ್ಷೇಮವು ನಿರ್ಧಾರಗಳ ಕೇಂದ್ರ ಬಿಂದುವಾಗಿದೆ ಮತ್ತು ಅದು ನಮ್ಮ ಗುರಿಗಳ ತಿರುಳೂ ಆಗಿದೆ. ಮತ್ತು ದೃಢ ನಿರ್ಧಾರಗಳನ್ನು ಅನುಷ್ಟಾನಕ್ಕೆ ತರಲು ಪ್ರತಿಯೊಬ್ಬರ ಪ್ರಯತ್ನಗಳೂ ಎಷ್ಟು ಅಗತ್ಯ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಗಳಾಗಿದ್ದೀರಿ. ಪ್ರಭುಪಾದಾ ಜೀ ಅವರು ಒಬ್ಬಂಟಿಯಾಗಿಯೇ ಇಷ್ಟೊಂದನ್ನು ಜಗತ್ತಿಗೆ ನೀಡಿರುವಾಗ ಅವರ ಆಶೀರ್ವಾದದೊಂದಿಗೆ ನಾವೆಲ್ಲರೂ ಒಗ್ಗೂಡಿ ದೃಢ ಪ್ರಯತ್ನಗಳನ್ನು ಮಾಡಿದರೆ ಅದರ ಫಲಿತಾಂಶ ಏನಾಗಿರಲಿದೆ ಎಂಬುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ? ನಾವು ಮಾನವ ಪ್ರಜ್ಞೆಯ ಔನ್ನತ್ಯವನ್ನು ಮುಟ್ಟಬಹುದು ಮತ್ತು ಜಗತ್ತಿನಲ್ಲಿ ನಾವು ಪ್ರಮುಖ ಪಾತ್ರವನ್ನು ವಹಿಸಬಹುದು ಹಾಗು ಜನಸಮೂಹಕ್ಕೆ ಪ್ರೀತಿಯ ಸಂದೇಶವನ್ನು ಹರಡಬಹುದು.

ಸ್ನೇಹಿತರೇ,

ಭಾರತವು ಮಾನವತೆಯ ಹಿತಾಸಕ್ತಿಗಾಗಿ ಜಗತ್ತಿಗೆ ಏನೇನೆಲ್ಲ ಕೊಡಬಹುದು ಎಂಬುದಕ್ಕೆ ಒಂದು ಉದಾಹರಣೆ ಜಗತ್ತಿನಾದ್ಯಂತ ಹರಡಿರುವ ನಮ್ಮ ಜ್ಞಾನ ಮತ್ತು ಯೋಗದ ಪರಂಪರೆ. ಭಾರತದ ಸುಸ್ಥಿರ ಜೀವನ ವಿಧಾನದ ಮೂಲಕ ಮತ್ತು ಆಯುರ್ವೇದದಂತಹ ವಿಜ್ಞಾನದ ಮೂಲಕ ಇಡೀ ವಿಶ್ವಕ್ಕೆ ಪ್ರಯೋಜನವಾಗಬೇಕು ಎಂಬುದು ನಮ್ಮ ನಿರ್ಧಾರ. ಶ್ರೀಲ ಪ್ರಭುಪಾದ ಅವರು ಆಗಾಗ ಹೇಳುತ್ತಿದ್ದ ಸ್ವಾವಲಂಬನೆಯನ್ನು ಭಾರತವು ಮಂತ್ರವನ್ನಾಗಿಸಿದೆ. ಮತು ದೇಶವು ದಿಕ್ಕಿನಲ್ಲಿ ಮುಂದುವರೆಯುತ್ತಿದೆ. ನಾನು ಹಲವಾರು ಬಾರಿ ಆತ್ಮನಿರ್ಭರ ಭಾರತದ ಮತ್ತು ಮೇಕ್ ಇನ್ ಇಂಡಿಯಾದ ಗುರಿಗಳ ಬಗ್ಗೆ ಮಾತನಾಡುತ್ತಿರುವಾಗ ನಾನು ಇಸ್ಕಾನ್ ಹರೇ ಕೃಷ್ಣ ಚಳವಳಿಯ ಉದಾಹರಣೆಯನ್ನು ನನ್ನ ಅಧಿಕಾರಿಗಳಿಗೆ ಮತ್ತು ಉದ್ಯಮಪತಿಗಳಿಗೆ ನೀಡುತ್ತೇನೆ. ನಾವು ಯಾವುದೇ ದೇಶಕ್ಕೆ ಭೇಟಿ ನೀಡಿರುವಾಗ ಮತ್ತು ಜನರು ನಮ್ಮನ್ನುಹರೇ ಕೃಷ್ಣಎಂದು ಸ್ವಾಗತಿಸುವಾಗ ನಾವು ಬಹಳ ಆನಂದ ಮತ್ತು ಹೆಮ್ಮೆಯನ್ನು ಅನುಭವಿಸುತ್ತೇವೆ. ಇಂತಹದೇ ಬಾಂಧವ್ಯ ನಮ್ಮ ಮೇಕ್ ಇನ್ ಇಂಡಿಯಾ ಉತ್ಪನ್ನಗಳಿಗೆ ದೊರೆತಾಗ ನಾವು ಯಾವ ಭಾವನೆಯನ್ನು ಹೊಂದುತ್ತೇವೆ ಎಂಬುದನ್ನು ಕಲ್ಪಿಸಿಕೊಳ್ಳಿ!. ನಾವು ಗುರಿಗಳನ್ನು ಇಸ್ಕಾನ್ ನಿಂದ ಕಲಿತುಕೊಳ್ಳುವ ಮೂಲಕ ಸಾಧಿಸಬಹುದು

ಸ್ನೇಹಿತರೇ,

ಭಗವಾನ್ ಕೃಷ್ಣ ಅರ್ಜುನನಿಗೆ ಹೇಳಿದ್ದ- हि ज्ञानेन सदृशम् पवित्र-मिह विद्यते

ಅಂದರೆ ಜ್ಞಾನಕ್ಕಿಂತ ಪವಿತ್ರವಾದುದು ಇನ್ನೊಂದಿಲ್ಲ. ಜ್ಞಾನದ ಸರ್ವೋತ್ಕೃಷ್ಟತೆಯನ್ನು ಹೇಳಿದ ಬಳಿಕ, ಆತ ಇನ್ನೊಂದು ಸಂಗತಿಯನ್ನೂ ಹೇಳಿದ್ದ. मय्येव मन आधत्स्व मयि बुद्धिम निवेशयಅಂದರೆ ಜ್ಞಾನದ ವಿಜ್ಞಾನವನ್ನು ತಲುಪಿದ  ಬಳಿಕ  ನಿನ್ನ ಮನಸ್ಸನ್ನು ಮತ್ತು ಬುದ್ಧಿಮತ್ತೆಯನ್ನು ಕೃಷ್ಣನಿಗೆ ಅರ್ಪಣೆ ಮಾಡು. ನಂಬಿಕೆ ಮತ್ತು ಶಕ್ತಿ ಕೂಡಾ ಯೋಗ. ಅದನ್ನು ಗೀತೆಯ ಹನ್ನೆರಡನೇಯ ಅಧ್ಯಾಯದಲ್ಲಿ ಭಕ್ತಿ ಯೋಗ ಎಂದು ಕರೆಯುತ್ತಾರೆ. ಮತ್ತು ಭಕ್ತಿ ಯೋಗದ ಶಕ್ತಿ ಬಹಳ ದೊಡ್ಡದು. ಭಾರತದ ಚರಿತ್ರೆ ಇದಕ್ಕೆ ಸಾಕ್ಷಿ. ಭಾರತವು ಆಳವಾದ ಗುಲಾಮಗಿರಿಯಲ್ಲಿ ತೊಳಲಾಡುತ್ತಿದ್ದಾಗ ಮತ್ತು ಅದರ ಜ್ಞಾನದ ಮೇಲೆ ಗಮನ ಹರಿಸಲು ಸಾಧ್ಯವಿಲ್ಲದೇ ಇದ್ದಾಗ ಅನ್ಯಾಯ, ದಮನ, ಶೋಷಣೆಗಳಿಂದಾಗಿ ಶಕ್ತಿ ತೋರಿಸಲು ಅಸಮರ್ಥವಾಗಿದ್ದಾಗ ಭಾರತದ ಗುರುತಿಸುವಿಕೆ ಮತ್ತು ಪ್ರಜ್ಞೆಯನ್ನು ಜೀವಂತವಾಗಿಟ್ಟದ್ದು ಮತ್ತು ಅವಿಚ್ಛಿನ್ನವಾಗಿರುವಂತೆ ನೋಡಿಕೊಂಡದ್ದು ಭಕ್ತಿ. ಭಕ್ತಿ ಕಾಲಘಟ್ಟದ ಸಾಮಾಜಿಕ ಕ್ರಾಂತಿ ಸಂಭವಿಸದೇ ಇದ್ದಿದ್ದರೆ ಭಾರತ ಏನಾಗಿರುತ್ತಿತ್ತು ಮತ್ತು ಯಾವ ರೀತಿಯಲ್ಲಿರುತ್ತಿತ್ತು ಎಂಬುದನ್ನು ಕಲ್ಪಿಸುವುದು ಕೂಡಾ ಕಷ್ಟವಾಗುತ್ತಿತ್ತು ಎಂದು ಇಂದು ವಿದ್ವಾಂಸರ ಮೌಲ್ಯಮಾಪನಗಳು ಹೇಳುತ್ತಿವೆ. ಆದರೆ ಕಠಿಣ ಪರಿಸ್ಥಿತಿಗಳಲ್ಲಿ ಚೈತನ್ಯ ಮಹಾಪ್ರಭು ಅವರಂತಹ ಸಂತರು ಭಕ್ತಿಯ ಸ್ಪೂರ್ತಿಯಲ್ಲಿ ನಮ್ಮ ಸಮಾಜವನ್ನು ಒಗ್ಗೂಡಿಸಿ ಏಕತ್ರಗೊಳಿಸಿದರು. “ನಂಬಿಕೆಯಿಂದ ಆತ್ಮವಿಶ್ವಾಸ ಮಂತ್ರವನ್ನು ನೀಡಿದರು. ಭಕ್ತಿಯು ನಂಬಿಕೆಯಲ್ಲಿಯ ಅಸಮಾನತೆಯನ್ನು , ಮೇಲು ಕೀಳೆಂಬ ವಿಭಜನೆಯನ್ನು ಸರಿ ಮತ್ತು ತಪ್ಪುಗಳೆಂಬ ತಾರತಮ್ಯವನ್ನು ಕೊನೆಗಾಣಿಸಿತು ಹಾಗು ಶಿವ ಮತ್ತು ಜೀವನದ ನಡುವೆ ನೇರ ಸಂಬಂಧವನ್ನು ಸ್ಥಾಪಿಸಿತು.

ಸ್ನೇಹಿತರೇ,

ನೀವು ಭಾರತದ ಇತಿಹಾಸವನ್ನು ಅಧ್ಯಯನ ಮಾಡಿದರೆ, ಯತಿಗಳು ಮತ್ತು ಸ್ವಾಮೀಜಿಗಳು ವಿವಿಧ ಕಾಲಘಟ್ಟದಲ್ಲಿ ಸಮಾಜದ ಎದುರು ಬಂದು ಭಕ್ತಿಯ ಅವತಾರಗಳ ಎಳೆಗಳನ್ನು ಎತ್ತಿಹಿಡಿದಿರುವುದನ್ನು ಕಾಣುತ್ತೀರಿ. ಸ್ವಾಮಿ ವಿವೇಕಾನಂದರಂತಹ ಸಂತರು ವೇದ ಮತ್ತು ವೇದಾಂತವನ್ನು ಪಶ್ಚಿಮಕ್ಕೆ ಹರಡಿದರೆ, ಶ್ರೀಲ ಪ್ರಭುಪಾದ ಮತ್ತು ಇಸ್ಕಾನ್ ಬಹಳ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡು ಭಕ್ತಿ ಯೋಗವನ್ನು ಜಗತ್ತಿಗೆ ಪ್ರಸಾರಿಸಿತು. ಅವರು ಭಕ್ತಿ ವೇದಾಂತವನ್ನು ಜಗತ್ತಿನ ಪ್ರಜ್ಞೆಯೊಂದಿಗೆ ಬೆಸೆದರು. ಇದು ಸಾಮಾನ್ಯವಾದ ಕೆಲಸವೇನಲ್ಲ. ಅವರು ಜಾಗತಿಕ ಸಂಘಟನೆಯಾದ ಇಸ್ಕಾನ್ ನನ್ನು ಸಾಮಾನ್ಯವಾಗಿ ಜನರು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವ ವಯಸ್ಸಾದ ಸುಮಾರು 70 ನೇ ವಯಸ್ಸಿನಲ್ಲಿ ಸ್ಥಾಪಿಸಿದರು. ಇದು ನಮ್ಮ ಸಮಾಜಕ್ಕೆ ಮತ್ತು ಪ್ರತಿಯೊಬ್ಬರಿಗೂ ಬಹಳ ದೊಡ್ಡ ಪ್ರೇರಣೆ. ಹಲವು ಬಾರಿ ನಾವು ಜನರು ವಯಸ್ಸಾಗಿರದಿದ್ದರೆ ನಾವು ದೊಡ್ಡದೇನನ್ನಾದರೂ ಸಾಧಿಸುತ್ತಿದ್ದೆವು ಎಂದು ಹೇಳುವುದನ್ನು ಕೇಳಿರುತ್ತೇವೆಎಲ್ಲವನ್ನೂ ಮಾಡಲು ವಯಸ್ಸು ಬೇಕು ಎನ್ನುವುದು ಸರಿಯಲ್ಲ. ಪ್ರಭುಪಾದ ಸ್ವಾಮಿ ಅವರು ತಮ್ಮ ಬಾಲ್ಯ ಕಾಲದಿಂದ ಹಿಡಿದು ಇಡೀ ಜೀವಿತಾವಧಿಯಲ್ಲಿ ತಮ್ಮ ದೃಢ ನಿರ್ಧಾರಗಳಿಗೆ ಬದ್ಧರಾಗಿದ್ದರು. ಪ್ರಭುಪಾದ ಜೀ ಅವರು ಸಮುದ್ರ ಮಾರ್ಗದ  ಮೂಲಕ ಅಮೇರಿಕಾಕ್ಕೆ ಹೋದಾಗ ಅವರು ಖಾಲಿ ಕಿಸೆಯಲ್ಲಿದ್ದರು. ಅವರೊಂದಿಗೆ ಇದ್ದದ್ದು ಬರೇ ಗೀತಾ ಮತ್ತು ಶ್ರೀಮದ್ ಭಾಗವತ!. ಪ್ರಯಾಣದಲ್ಲಿ ಅವರು ಎರಡು ಬಾರಿ ಹೃದಯಾಘಾತಕ್ಕೆ ಒಳಗಾದರು. ಅವರು ನ್ಯೂಯಾರ್ಕ್ ತಲುಪಿದಾಗ ಅವರಿಗೆ ಆಹಾರಕ್ಕೆ ಯಾವುದೇ ವ್ಯವಸ್ಥೆಗಳಿರಲಿಲ್ಲ. ವಾಸ್ತವ್ಯ ಹೂಡಲು ಸ್ಥಳವೂ ಇರಲಿಲ್ಲ. ಆದರೆ ಮುಂದಿನ 11 ವರ್ಷಗಳಲ್ಲಿ ಜಗತ್ತು ಏನನ್ನು ನೋಡಿತು ಎಂಬುದನ್ನು ಪೂಜ್ಯ ಅಟಲ್ ಜೀ ಅವರ ಮಾತುಗಳಲ್ಲಿ ಹೇಳುವುದಾದರೆ, ಅದೊಂದು ಪವಾಡಕ್ಕಿಂತ ಕಡಿಮೆಯಾದುದಲ್ಲ.

ಇಂದು ಜಗತ್ತಿನ ಹಲವು ದೇಶಗಳಲ್ಲಿ ನೂರಾರು ಇಸ್ಕಾನ್ ದೇವಾಲಯಗಳಿವೆ ಮತ್ತು ಹಲವಾರು ಸಂಖ್ಯೆಯಲ್ಲಿರುವ ಗುರುಕುಲಗಳು ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ. ಭಾರತೀಯರಿಗೆ ನಂಬಿಕೆ ಎಂದರೆ ಉತ್ಸಾಹ, ಸಂಭ್ರಮ ಮತ್ತು ಮಾನವತೆಯಲ್ಲಿಯ ನಂಬಿಕೆ ಎಂಬುದನ್ನು ಇಸ್ಕಾನ್ ಜಗತ್ತಿಗೆ ಸಾರುತ್ತಾ ಬಂದಿದೆ. ಇಂದು ಜಗತ್ತಿನ ವಿವಿಧ ದೇಶಗಳ ಜನರು ಭಾರತೀಯ ವೇಷ ಭೂಷಣಗಳಲ್ಲಿ ಕೀರ್ತನೆಗಳನ್ನು ಮಾಡುತ್ತಿರುವುದನ್ನು ಕಾಣುತ್ತೇವೆ. ಬಟ್ಟೆ ಬರೆಗಳು ಬಹಳ ಸರಳ. ಅವರು ಸರಳ ಉಪಕರಣಗಳಾದಧೋಲಕ್” “ಮಂಜಿರಗಳನ್ನು ಕೈಯಲ್ಲಿ ಹಿಡಿದು ಹರೇ ಕೃಷ್ಣವನ್ನು ಧಾರ್ಮಿಕ ಶಾಂತಿಯೊಂದಿಗೆ ಹಾಡುತ್ತಾರೆ. ಜನರು ಅವರನ್ನು ನೋಡುತ್ತಲೇ ಅಲ್ಲಿ ಯಾವುದಾದರೋಂದು ಹಬ್ಬ ಅಥವಾ ಉತ್ಸವ ನಡೆಯುತ್ತಿರಬಹುದೆಂದು ಭಾವಿಸುತ್ತಾರೆ. ಆದರೆ ಕೀರ್ತನೆ, ಕಾರ್ಯಕ್ರಮ ನಮ್ಮ ದೇಶದಲ್ಲಿ ನಮಗೆ ಜೀವನ ವಿಧಾನವೇ ಆಗಿದೆ. ಉತ್ಸಾಹದ , ಸಂಭ್ರಮದ ನಂಬಿಕೆ ಜಗತ್ತಿನಾದ್ಯಂತ ಜನರನ್ನು ಆಕರ್ಷಿಸುತ್ತಿದೆ. ಮತ್ತು ಒತ್ತಡವನ್ನು ಅನುಭವಿಸುತ್ತಿರುವ ಜಗತ್ತಿಗೆ ಹೊಸ ಭರವಸೆಯನ್ನು ನೀಡುತ್ತಿದೆ.

ಸ್ನೇಹಿತರೇ,

ಭಗವಾನ್ ಕೃಷ್ಣ ಗೀತೆಯಲ್ಲಿ ಹೇಳಿದ್ದಾರೆ

अद्वेष्टा सर्व-भूतानांमैत्रः करुण एव च।

निर्ममोनिर-हंकारः सम दु: सुखः क्षमी॥

ಅಂದರೆ, ಯಾರು ಜೀವಿಗಳನ್ನು ಪ್ರೀತಿಸುತ್ತಾರೋ, ಅನುಕಂಪವನ್ನು ಹೊಂದಿರುತ್ತಾರೋ   ಅವರು ಯಾರನ್ನೂ ದ್ವೇಷಿಸುವುದಿಲ್ಲ. ಅವರು ದೇವರಿಗೆ ಪ್ರಿಯರಾಗುತ್ತಾರೆ. ಮಂತ್ರವು ಸಾವಿರಾರು ವರ್ಷಗಳಿಂದ ಭಾರತದ ಚಿಂತನೆಯ ಮೂಲಾಧಾರವಾಗಿದೆ. ಮತ್ತು ನಮ್ಮ ದೇವಾಲಯಗಳು ಚಿಂತನೆಗೆ  ಸಾಮಾಜಿಕ  ಆಧಾರವನ್ನು ಒದಗಿಸುವಲ್ಲಿ ಭಾಗಿಯಾಗಿವೆ. ಇಸ್ಕಾನ್ ದೇವಾಲಯಗಳು ಸೇವಾ ಪರಂಪರೆಯ ಆಧುನಿಕ ಕೇಂದ್ರಗಳಾಗಿ ಮೂಡಿ ಬಂದಿವೆ. ಕಚ್ ನಲ್ಲಿ ಭೂಕಂಪ ಆದಾಗ ಇಸ್ಕಾನ್ ಜನರ ಸೇವೆಯನ್ನು ಹೇಗೆ ಮಾಡಿತು ಎಂಬ ಬಗ್ಗೆ ನನಗೆ ತಿಳಿದಿದೆ ಮತ್ತು ನಾನದನ್ನು ನೆನಪು ಮಾಡಿಕೊಳ್ಳುತ್ತೇನೆ. ದೇಶದಲ್ಲಿ ಯಾವುದೇ ವಿಕೋಪ ಸಂಭವಿಸಿದಾಗ ಅದು ಉತ್ತರಾಖಂಡದಲ್ಲಿ ಸಂಭವಿಸಿದ ದುರಂತ ಇರಲಿ, ಒಡಿಶಾದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಮಾಡಿದ ಅಪಾರ ಪ್ರಮಾಣದ ಹಾನಿ ಇರಲಿ ಇಸ್ಕಾನ್ ಸದಾ ಸಮಾಜಕ್ಕೆ ತನ್ನ ಬೆಂಬಲವನ್ನು ನೀಡಿದೆ. ಕೊರೊನಾ ಜಾಗತಿಕ ಸಾಂಕ್ರಾಮಿಕದಲ್ಲಿಯೂ ನೀವು ನಿರಂತರವಾಗಿ ಆಹಾರದ ವ್ಯವಸ್ಥೆ ಮಾಡಿದ್ದೀರಿ ಮತ್ತು ಇತರ ಮಿಲಿಯಾಂತರ ರೋಗಿಗಳ ಅವರ ಕುಟುಂಬಗಳ ಮತ್ತು ವಲಸೆಗಾರರ ಇತರ ಅವಶ್ಯಕತೆಗಳನ್ನು ಪೂರೈಸಿದ್ದೀರಿ. ಜಾಗತಿಕ ಸಾಂಕ್ರಾಮಿಕವಲ್ಲದೆ ನೀವು ನಿರಂತರವಾಗಿ ಮಿಲಿಯಾಂತರ ಬಡವರಿಗೆ ಉಚಿತ ಆಹಾರ ಮತ್ತು ಇತರ ಸೇವೆಗಳನ್ನು ಒದಗಿಸುವ ಆಂದೋಲನ ನಡೆಸುತ್ತಿದ್ದೀರಿ. ಕೋವಿಡ್ ರೋಗಿಗಳಿಗಾಗಿ ಇಸ್ಕಾನ್ ನಿರ್ಮಿಸಿದ ಆಸ್ಪತ್ರೆಗಳ ಬಗ್ಗೆ ನನಗೆ ತಿಳಿದಿದೆ ಮತ್ತು ನೀವು ಲಸಿಕಾಕರಣ ಆಂದೋಲನದಲ್ಲಿ ಹೇಗೆ ಭಾಗಿಯಾಗಿದ್ದೀರಿ ಎಂಬ ಬಗ್ಗೆಯೂ ನನಗೆ ತಿಳಿದಿದೆ. ನಾನು ಇಸ್ಕಾನ್ ಮತ್ತು ಅದರ ಎಲ್ಲಾ ಭಕ್ತಾದಿಗಳಿಗೆ ಸೇವೆಗಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು ನೀವು ಸತ್ಯ, ಸೇವಾ ಮತ್ತು ಸಾಧನಾ ಮಂತ್ರದೊಂದಿಗೆ ಕೃಷ್ಣನಿಗೆ ಮಾತ್ರ ಸೇವೆ ಮಾಡುತ್ತಿರುವುದಲ್ಲ, ನೀವು ಜಗತ್ತಿನಾದ್ಯಂತ ಭಾರತದ ಆದರ್ಶ ಮತ್ತು ಮೌಲ್ಯಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ಪಾತ್ರವನ್ನು ವಹಿಸುತ್ತಿದ್ದೀರಿ. ಭಾರತದ ಶಾಶ್ವತ ನೀತಿಗಳೆಂದರೆ सर्वे भवन्तु सुखिनः, सर्वे संतु निरामयः ಎಂಬುದು. (ಇದರರ್ಥ ಎಲ್ಲರೂ ಸಮೃದ್ಧಿ ಹೊಂದಲಿ ಮತ್ತು ಸಂತೋಷದಿಂದಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಿರಲಿ ಎಂದಾಗಿದೆ.) ಚಿಂತನೆ ಇಂದು ಇಸ್ಕಾನ್ ಮೂಲಕ ಮಿಲಿಯಾಂತರ ಜನರ ದೃಢ ಸಂಕಲ್ಪವಾಗಿದೆ. ದೇವರಲ್ಲಿ ಪ್ರೀತಿ ಮತ್ತು ಸಕಲ ಜೀವಿಗಳಲ್ಲಿ  ದೇವರ ಸಾಕ್ಷಾತ್ಕಾರ ದೃಢ ನಿರ್ಧಾರದ ಅನುಷ್ಟಾನಕ್ಕಿರುವ ಮಾರ್ಗವಾಗಿದೆ. ದಾರಿಯನ್ನು  ದೇವರು ನಮಗೆ ವಿಭೂತಿ ಯೋಗ ಅಧ್ಯಾಯದಲ್ಲಿ   ತೋರಿಸಿಕೊಟ್ಟಿದ್ದಾರೆ. ನಾವು 'वासुदेवः सर्वम्' (ದೇವರು ಎಲ್ಲೆಡೆಯೂ ಇದ್ದಾರೆ) ಎಂಬ ಮಂತ್ರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾನವರು  ಸೌಹಾರ್ದತೆಯನ್ನು ಅರಿತುಕೊಳ್ಳುವಂತೆ ಮಾಡುತ್ತೇವೆ ಎಂಬ ಬಗ್ಗೆ ನನಗೆ ಖಚಿತ ಭರವಸೆ ಇದೆ.   ಚಿಂತನೆ, ಚೈತನ್ಯದೊಂದಿಗೆ ನಿಮ್ಮೆಲ್ಲರಿಗೂ ಬಹಳ ಬಹಳ ಧನ್ಯವಾದಗಳು!

ಹರೇ ಕೃಷ್ಣ!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1752904) Visitor Counter : 235