ವಾರ್ತಾ ಮತ್ತು ಪ್ರಸಾರ ಸಚಿವಾಲಯ

ನಮ್ಮ ತಂತ್ರಜ್ಞರ ಕ್ರಿಯಾಶೀಲತೆಯನ್ನು ಬಳಸಿಕೊಳ್ಳಬೇಕು: ಬ್ರಿಕ್ಸ್ ರಾಷ್ಟ್ರಗಳ ಪ್ರತಿಯೊಬ್ಬ ನಾಗರೀಕರಲ್ಲಿ ರಾಷ್ಟ್ರ ನಿರ್ಮಾಣದ ಸ್ಪೂರ್ತಿ ಮೂಡಿಸಬೇಕು: ಶ್ರೀ ಅನುರಾಗ್ ಸಿಂಗ್ ಠಾಕೂರ್


ಚಲನಚಿತ್ರ ವ್ಯಾಪಾರದಲ್ಲಿ ಸಹಕಾರ ಮತ್ತು ಬೆಳವಣಿಗೆಗೆ ಮಾರ್ಗಗಳನ್ನು ಮುಕ್ತಗೊಳಿಸಿದ ಬ್ರಿಕ್ಸ್ ರಾಷ್ಟ್ರಗಳ ಚಲನಚಿತ್ರ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣ

Posted On: 01 SEP 2021 6:10PM by PIB Bengaluru

ಏಷ್ಯಾದಲ್ಲಿ ಭಾರತ ಪ್ರಮುಖ ಒಂದು ಪ್ರಮುಖ ಶಕ್ತಿಯಾಗಿದೆ ಮತ್ತು ಬ್ರಿಕ್ಸ್ ಒಕ್ಕೂಟದ ಸದಸ್ಯನಾಗಿ, ಸದಸ್ಯ ರಾಷ್ಟ್ರಗಳ ನಡುವಿನ ಬಾಂಧವನ್ನು ಬಲಪಡಿಸಲು ನಿರ್ಣಾಯಕ ಪಾತ್ರ ವಹಿಸಲು ಬಯಸಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. “ ಸದಸ್ಯ ರಾಷ್ಟ್ರಗಳ ಜನರನ್ನು ಒಂದೇ ವೇದಿಕೆ ತರುವ ನಿಟ್ಟಿನಲ್ಲಿ ಮೊದಲ ಬಾರಿಗೆ ಬ್ರಿಕ್ಸ್ ರಾಷ್ಟ್ರಗಳ ತಂತ್ರಜ್ಞಾನ ವಿಚಾರ ಸಂಕಿರಣ ಪ್ರಥಮ ಹೆಜ್ಜೆಯಾಗಿದೆ. ಚಲನ ಚಿತ್ರ ಮಾಧ್ಯಮದ ಮೂಲಕ, ಕಲೆ ಮತ್ತು ಸಂಸ್ಕೃತಿಗಾಗಿ ವೇದಿಕೆಯನ್ನು ಮುಕ್ತಗೊಳಿಸಿದ್ದು, ಇದರಿಂದ ಚಿತ್ರೋದ್ಯಮದಲ್ಲಿ ಸಹಕಾರ ಮತ್ತು ಚಲನಚಿತ್ರ ವ್ಯಾಪಾರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಎಫ್.ಐ.ಸಿ.ಸಿ.ಐ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಎಫ್.ಟಿ.ಟಿ.ಐ ಜಂಟಿಯಾಗಿ ಆಯೋಜಿಸಿದ್ದ “ ಬ್ರಿಕ್ಸ್ ಫಿಲ್ಮ್ ಟೆಕ್ನಾಲಜಿ ಸಿಂಪೋಸಿಯಂ” ನಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಅವರು, “ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗ ಸಭೆಗೆ ಪೂರ್ವಭಾವಿಯಾಗಿ ಮೊದಲ ಬಾರಿಗೆ  ಬ್ರಿಕ್ಸ್ ರಾಷ್ಟ್ರಗಳ ಚಲನಚಿತ್ರ ತಂತ್ರಜ್ಞಾನ ವೇದಿಕೆಯನ್ನು ಆರಂಭಿಸಿರುವುದಕ್ಕೆ ಹೆಮ್ಮೆಪಡುತ್ತೇವೆ ಎಂದರು. 

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಾಂಸ್ಥಿಕ ವ್ಯವಸ್ಥೆ ರೂಪಿಸುವ, ಸುಸ್ಥಿರ, ಮತ್ತಷ್ಟು ಆಳವಾದ ಸಂಬಂಧವನ್ನು ಇದು ಉತ್ತೇಜಿಸಲಿದೆ. ಬ್ರಿಕ್ಸ್ ದೇಶಗಳ ಜನರ ನಡುವೆ ಹೃದಯ ಮತ್ತು ಮನಸ್ಸುಗಳನ್ನು ಗೆಲ್ಲುವುದು ಅತ್ಯಂತ ಮಹತ್ವದ್ದಾಗಿದೆ ಮತ್ತು  ಚಲನಚಿತ್ರ ತಂತ್ರಜ್ಞಾನ ಮಾಧ್ಯಮದ ಮೂಲಕ ಚಲನಚಿತ್ರ ವೇದಿಕೆ ಎಲ್ಲರನ್ನೂ ಹತ್ತಿರಕ್ಕೆ ತರಲು ಪ್ರಯತ್ನಿದೆ. ಬ್ರಿಕ್ಸ್ ದೇಶಗಳ ನಡುವಿನ ಚಲನಚಿತ್ರ ತಂತ್ರಜ್ಞಾನದ ನಾವೀನ್ಯತೆಯನ್ನು ಸಂಭ್ರಮಿಸುವ ಸಲುವಾಗಿ ಬ್ರಿಜಿ಼ಲ್ ನಲ್ಲಿ ನಡೆದ 11 ನೇ  ಬ್ರಿಕ್ಸ್ ಶೃಂಗ ಸಭೆಯಲ್ಲಿ ಈ ವಿಚಾರವನ್ನು ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದ್ದನ್ನು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. 

“ಬ್ರಿಕ್ಸ್ ಚಲನಚಿತ್ರ ತಂತ್ರಜ್ಞಾನ ವೇದಿಕೆಯು ಸೇವಾ ಕ್ಷೇತ್ರವನ್ನು ಗುರುತಿಸುವುದು ಮತ್ತು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ತಂತ್ರಜ್ಞರು ಮತ್ತು ಈ ಎರಡು ದಿನಗಳ ಕಾರ್ಯಕ್ರಮದ ನಂತರ ಬ್ರಿಕ್ಸ್ ಚಲನಚಿತ್ರ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವಕಾಶಗಳನ್ನು ಸೃಷ್ಟಿಸಲಿದೆ ಎಂಬ ಖಾತ್ರಿ ತಮಗಿದೆ. ಹೊಸ ದೃಷ್ಟಿಕೋನ ಮತ್ತು ಹೊಸ ತನದೊಂದಿಗೆ ಸಿನೆಮಾ ಪ್ರಪಂಚವನ್ನು ಅನ್ವೇಷಿಸಲು ಹಲವು ರಾಷ್ಟ್ರಗಳು ಮುಂದಾಗಿವೆ ಎಂದರು. 

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ‍್ರೀ ಅಪೂರ್ವ ಚಂದ್ರ ಮಾತನಾಡಿ, ಜಗತ್ತಿನಾದ್ಯಂತ ಇರುವ ವೈವಿದ್ಯಮಯ ಬಹು ಸಂಸ್ಕೃತಿಯನ್ನು ಸಂಭ್ರಮಿಸುವ ಚಿಂತನೆಯ ವೇದಿಕೆ ಇದಾಗಿದೆ. ಈ  ವಿಚಾರಸಂಕಿರಣ ಪಾಲುದಾರಿಕೆಯನ್ನು ರೂಪಿಸಲು ಮತ್ತು ಕಂಪೆನಿಗಳಿಗೆ ತಾಂತ್ರಿಕ ವೇದಿಕೆ ಒದಗಿಸಲು ಉದ್ದೇಶಿಸಿದೆ. ಚಲನಚಿತ್ರ ವಲಯವನ್ನು ಉತ್ತೇಜಿಸುವ ಮತ್ತು ಉತ್ತಮ ಸಂವಹನ ಹಾಗೂ ಸಹಯೋಗಕ್ಕಾಗಿ ಚಿತ್ರೋದ್ಯಮದ ಸಮುದಾಯವನ್ನು ಇದು ಒಗ್ಗೂಡಿಸುತ್ತದೆ  ಎಂದು ಹೇಳಿದರು.

“ಬ್ರಿಕ್ಸ್ ರಾಷ್ಟ್ರಗಳು ವಿ.ಎಫ್.ಎಕ್ಸ್ ಅನಿಮೇಷನ್, ಕಂಪ್ಯೂಟರ್ ಮೂಲಕ ಸೃಷ್ಟಿಸುವ ಚಿತ್ರಗಳು, ಮಾಧ್ಯಮ ಹೊರಗುತ್ತಿಗೆ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಚಲಚಿತ್ರ ನಿರ್ಮಾಣದಲ್ಲಿ ತಂತ್ರಜ್ಞಾನ ಹೆಚ್ಚಿಸಲು ಮನೋರಂಜನೆಯ ಜಗತ್ತಿಗೆ ಸಿನೆಮಾದ ಅನುಭವಗಳನ್ನು ವೃದ್ಧಿಸಲು ಪರಸ್ಪರ ಸಹಯೋಗದಲ್ಲಿ ಉತ್ತಮ ಸಾಮರ್ಥ್ಯವನ್ನು ಹೊಂದಿವೆ. 52 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ಭಾರತದಲ್ಲಿ ಬ್ರಿಕ್ಸ್ ಚಲನಚಿತ್ರೋತ್ಸವನ್ನು ಸಹ ಆಯೋಜಿಸಲಾಗುತ್ತಿದ್ದು, ನಮ್ಮ ಅತ್ಯುತ್ತಮ ಚಲನಚಿತ್ರಗಳನ್ನು ಹಂಚಿಕೊಳ್ಳಲು ಮತ್ತು ಸಂವಾದ ನಡೆಸಲು ಇದು ಉತ್ತಮ ಅವಕಾಶವಾಗಿದೆ ಎಂದು ಶ್ರೀ ಅಪೂರ್ವ ಚಂದ್ರ ಹೇಳಿದರು.

ಬ್ರಿಜಿ಼ಲ್ ಒಕ್ಕೂಟ ಸರ್ಕಾರದ ಸಂಸ್ಕೃತಿ ವಿಭಾಗದ ವಿಶೇಷ ಕಾರ್ಯದರ್ಶಿ ಮರಿಯೋ ಪ್ರಾನ್ಸಿಸ್ ಮಾತನಾಡಿ, ಬ್ರಿಕ್ಸ್ ಸದಸ್ಯ ರಾಷ್ಟ್ರಗಳನ್ನು ಉತ್ತೇಜಿಸಲು ನಾವು ಮಾಡುತ್ತಿರುವ ಕೆಲಸ ಅತ್ಯಂತ ಮುಖ್ಯವಾಗಿದೆ. ಸಾಂಸ್ಕೃತಿಕ ಕ್ಷೇತ್ರದ ಚೇತರಿಕೆಗೆ ಇದರಿಂದ ಸಹಕಾರಿಯಾಗಲಿದೆ. “ಈ ಕ್ರಮಗಳು ಸಾಂಸ್ಕೃತಿಕ ಆರ್ಥಿಕತೆಯ ಮೇಲಿನ ನಿರ್ಬಂಧಿತ ಕ್ರಮಗಳನ್ನು ತಗ್ಗಿಸಲು ಸಹಕಾರಿಯಾಗಲಿವೆ. ಬ್ರಿಕ್ಸ್ ದೇಶಗಳ ನಡುವಿನ ದೃಶ್ಯ, ಶ್ರವ್ಯ ಮಾಧ್ಯಮದ ಸಹಕಾರ, ಪ್ರಸ್ತುತ ಮಾರುಕಟ್ಟೆಯ ಪರಿಶೋಧನೆ, ಸಾಂಸ್ಕೃತಿಕ ಪ್ರಸರಣ ವಲಯಕ್ಕೆ ಸಹಕಾರಿಯಾಗಿವೆ ಎಂದು ಹೇಳಿದರು.

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನೀರಜ್ ಶೇಖರ್ ಅವರು ವಂದನಾರ್ಪಣೆ ಸಲ್ಲಿಸಿದರು. ಎಫ್.ಐ.ಸಿ.ಸಿ.ಐ ಪ್ರಧಾನ ಕಾರ್ಯದರ್ಶಿ ಶ್ರಿ ದಿಲೀಪ್ ಚೆನೊಯ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಬ್ರಿಕ್ಸ್ ದೇಶಗಳ ಪ್ರಮುಖ ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ. ವರ್ಚುವಲ್ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.

ವರ್ಚುವಲ್ ಪ್ರದರ್ಶನದಲ್ಲಿ ದಕ್ಷಿಣ ಆಫ್ರಿಕಾ, ಚೈನಾ ಮತ್ತು ರಷ್ಯಾ ರಾಷ್ಟ್ರಗಳು ಒಳಗೊಂಡಂತೆ ಹತ್ತು ಮಳಿಗೆಗಳನ್ನು ಹಾಕಲಾಗಿದೆ.

***



(Release ID: 1751261) Visitor Counter : 202