ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಸಿ.ಐ.ಎಲ್ ನಿಂದ ದೊಡ್ಡ ಪುಷ್ಟಿ, ಕಲ್ಲಿದ್ದಲು ಸಂಗ್ರಹ ಪ್ರದೇಶಗಳಲ್ಲಿ ಡೀಸೆಲ್ ಬಳಕೆಯನ್ನು ಸಿ.ಎನ್.ಜಿಗೆ ಬದಲಾಯಿಸಲು ಪ್ರಾಯೋಗಿಕ ಯೋಜನೆ ಪ್ರಾರಂಭಿಸಿದ ಕಲ್ಲಿದ್ದಲು ಸಚಿವಾಲಯ


ಈ ಕ್ರಮದಿಂದ ಸಿ.ಐ.ಎಲ್ ನಲ್ಲಿ ತನ್ನ ಇಂಗಾಲದ ಹೆಜ್ಜೆ ಗುರುತುಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ತನ್ನ ಗುರಿಗಳನ್ನು ಸಮರ್ಥವಾಗಿ ನಿಭಾಯಿಸಲು ಸಹಕಾರಿ

Posted On: 01 SEP 2021 4:32PM by PIB Bengaluru

ಇಂಗಾಲದ ಹೆಜ್ಜೆ ಗುರುತುಗಳನ್ನು ಗಣನೀಯವಾಗಿ ಕಡಿಮೆ ಮಾಡುವ ದೊಡ್ಡ ಪ್ರಯತ್ನದ ಭಾಗವಾಗಿ ಕಲ್ಲಿದ್ದಲು ಸಚಿವಾಲಯ ತನ್ನ ನ್ಯಾಷನಲ್ ಮೈನರ್ ಕೊಲ್ ಇಂಡಿಯಾ ಲಿಮಿಟೆಡ್ [ಸಿ.ಐ.ಎಲ್] ನ ತನ್ನ ಸಂಗ್ರಹ ವ್ಯವಸ್ಥೆಯಲ್ಲಿ ದೊಡ್ಡ ಸರಕು ಸಾಗಾಣೆ ವಾಹನಗಳು ಕಾರ್ಯನಿರತವಾಗಿದ್ದು, ಇಲ್ಲಿ ದ್ರವೀಕೃತ ನೈಸರ್ಗಿಕ ಅನಿಲ [ಸಿ.ಎನ್.ಜಿ]ದ ಕಿಟ್ ಗಳನ್ನು ಮರು ಹೊಂದಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ವಿಶ್ವದ ಅತಿದೊಡ್ಡ ವಲಯವಾಗಿರುವ ಗಣಿಗಾರಿಕೆಯಲ್ಲಿ ನಾಲ್ಕು ಲಕ್ಷ ಕಿಲೋಲೀಟರ್ ಗೂ ಹೆಚ್ಚು ಡಿಸೇಲ್ ಬಳಕೆಯಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ 3,500 ಕೋಟಿ ರೂ ಗೂ ಹೆಚ್ಚು ವೆಚ್ಚವಾಗಲಿದೆ.

ಗೇಲ್ [ಇಂಡಿಯಾ] ಲಿಮಿಟೆಡ್ ಮತ್ತು ಬೆಮೆಲ್ ಲಿಮಿಟೆಡ್ ಸಹಯೋಗದಲ್ಲಿ ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನ [ಎಂ.ಸಿ.ಎಲ್] ನಲ್ಲಿ ಎರಡು 100 ಟನ್ ಸಂಗ್ರಹ ಸಾಮರ್ಥ್ಯವಿರುವ ಸಂಗ್ರಹಾರಗಳಲ್ಲಿ ದ್ರವೀಕೃತ ಎಲ್.ಎನ್.ಜಿ ಕಿಟ್ ಗಳನ್ನು ಅಳವಡಿಸಲಾಗುತ್ತಿದೆ. ಈ ಪ್ರಾಯೋಗಿಕ ಯೋಜನೆ ಜಾರಿಗಾಗಿ ಸಿ.ಐ.ಎಲ್ ಕಂಪೆನಿ ಗೇಲ್ ಮತ್ತು ಬೆಮಲ್ ನೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿವೆ. ಒಮ್ಮೆ ಎಲ್.ಎನ್.ಜಿ ಕಿಟ್ ಗಳನ್ನು ಯಶಸ್ವಿಯಾಗಿ ಅಳವಡಿಸಿದ ನಂತರ ಈ ಡಂಪರ್ ಗಳು ಎರಡೂ ಬಗೆಯ ಇಂಧನಗಳ ಮೂಲಕ ಸಂಚರಿಸಲಿವೆ. ಎಲ್.ಎನ್.ಜಿ ಮತ್ತು ಡೀಸೆಲ್ ಮೂಲಕ ಇವು ಕಾರ್ಯನಿರ್ವಹಿಸಲಿವೆ ಮತ್ತು ಇದರಿಂದ ಗಣನೀಯವಾಗಿ ಅತ್ಯಂತ ಕಡಿಮೆ ದರದ ಜತೆ ಶುದ್ಧ ಎಲ್.ಎನ್.ಜಿ. ಬಳಕೆಗೆ ಸಹಕಾರಿಯಾಗಲಿದೆ.  

“ ಇದು ಪ್ರಮುಖ ಬದಲಾವಣೆಯಾಗಿದ್ದು, ಕಂಪೆನಿಯ ಮುಕ್ತ ಕಲ್ಲಿದ್ದಲು ಗಣಿಗಳಲ್ಲಿ 2,500 ಕ್ಕೂ ಹೆಚ್ಚು ಡಂಪರ್ ಗಳಿವೆ. ಇಲ್ಲಿ 65% ರಿಂದ 75% ರಷ್ಟು ಡೀಸೆಲ್ ಬಳಕೆಯಾಗುತ್ತಿದೆ. ಎಲ್.ಎನ್.ಜಿ. ಅವಳಡಿಕೆಯಿಂದ ಸುಮಾರು 30% ರಿಂದ 40% ರಷ್ಟು ಡೀಸೆಲ್ ಬಳಕೆ ತಗ್ಗಲಿದೆ ಮತ್ತು 15% ಇಂಧನ ವೆಚ್ಚ ತಗ್ಗಲಿದೆ. ಈ ಬೆಳವಣಿಗೆಯಿಂದ ಇಂಗಾಲ ಹೊರಸೂಸುವಿಕೆ ಗಣನೀಯವಾಗಿ ಕಡಿಮೆಯಾಗಲಿದೆಯಲ್ಲದೇ ಡಂಪರ್ ಗಳು, ಅರ್ಥ್ ಮೂವಿಂಗ್ ಮಿಷಿನ್ಸ್ [ಎಚ್.ಇ.ಎಂ.ಎಂ.ಗಳು] ಗಳಿಗೆ ಎಲ್.ಎನ್.ಜಿ. ಕಿಎಟ್ ಗಳ ಅಳವಡಿಕೆಯಿಂದ ಸುಮಾರು 500 ಕೋಟಿ ರೂ ಗೂ ಹೆಚ್ಚು ಉಳಿತಾಯವಾಗಲಿದೆ. ಡೀಸೆಲ್ ಕಳ್ಳತನ ಮತ್ತು ಕಲಬೆರಕೆ ಮಾಡುವುದನ್ನು ತಪ್ಪಿಸುವ ಮೂಲಕ ಹಲವು ರೀತಿಯಲ್ಲಿ ಕಂಪೆನಿಗೆ ಅನುಕೂಲವಾಗಲಿದೆ.” ಎಂದು ಸಿ.ಐ.ಎಲ್ ನ ಹಿರಿಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.  

ಈ ಪ್ರಾಯೋಗಿಕ ಯೋಜನೆಯ ಉದ್ದೇಶವೆಂದರೆ ವಿವಿಧ ಹಂತಗಳಲ್ಲಿ ಡೀಸೆಲ್ ಬದಲಿಗೆ ಸಿ.ಎನ್.ಜಿ ಬಳಕೆ, ಕಾರ್ಯಾಚರಣೆಯ ಪರಿಸ್ಥಿತಿ ಮತ್ತು ಡಂಪರ್ ಗಳ ಕಾರ್ಯನಿರ್ವಹಣೆ ಮತ್ತು ಎಂಜಿನ್ ನಲ್ಲಿನ ಸಾಮರ್ಥ್ಯದ ಬದಲಾವಣೆಗಳ ಮೇಲೆ ನಿಗಾ ವಹಿಸುವ ಉದ್ದೇಶ ಹೊಂದಲಾಗಿದೆ ಎಂದು ಹಿರಿಯ ಕಾರ್ಯನಿರ್ವಾಹಕರು ಮಾಹಿತಿ ನೀಡಿದ್ದಾರೆ.

ಎರಡೂ ಬಗೆಯ ಇಂಧನ [ ಎಲ್.ಎನ್.ಜಿ – ಡೀಸೆಲ್ ] ಬಳಕೆಯಿಂದ ವಿವಿಧ ಹಂತದ ಲೋಡ್ ಮತ್ತು ಕಾರ್ಯಾಚರಣೆ ಪರಿಸ್ಥಿತಿಗಳ ಮೇಲಿನ ಪರಿಣಾಮಗಳ ಬಗ್ಗೆ 90 ದಿನಗಳ ಕಾಲ ಪ್ರಾಯೋಗಿಕವಾಗಿ ಯೋಜನೆ ಜಾರಿ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು. ಪ್ರಾಯೋಗಿಕ ಹಂತದಲ್ಲಿ ಸಿ.ಐ.ಎಲ್ ಗಣಿಗಾರಿಕೆ ವ್ಯವಸ್ಥೆಯಲ್ಲಿನ ಬದಲಾವಣೆ ಕುರಿತು ತಾಂತ್ರಿಕ – ಆರ್ಥಿಕ ಅಧ್ಯಯನಗಳನ್ನು ಸಹ ನಡೆಸಲಾಗುತ್ತಿದೆ. ಪ್ರಾಯೋಗಿಕ ಯೋಜನೆ ಫಲಿತಾಂಶದ ಆಧಾರದ ಮೇಲೆ ಸಿ.ಐ.ಎಲ್ ಭಾರೀ ವಾಹನಗಳು [ಎಚ್.ಇ.ಎಂ.ಎಂಗಳಲ್ಲಿ], ನಿರ್ದಿಷ್ಟವಾಗಿ ಡಂಪರ್ ಗಳ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಲ್.ಎನ್.ಜಿ. ಬಳಸಲು ತೀರ್ಮಾನಿಸಲಿದೆ. ಪ್ರಯೋಗಿಕ ಯೋಜನೆ ಯಶಸ್ವಿಯಾದರೆ ಎಲ್.ಎನ್.ಜಿ. ಎಂಜಿನ್ ಹೊಂದಿರುವ ಎಚ್.ಇ.ಎಂ.ಎಂಗಳನ್ನು ಖರೀದಿಸಲು ಕಂಪೆನಿ ಯೋಜನೆ ರೂಪಿಸಲಿದೆ. ಈ ಮೂಲಕ ಸಿ.ಐ.ಎಲ್ ನಲ್ಲಿ ಇಂಗಾಲದ ಹೆಜ್ಜೆಗುರುತುಗಳನ್ನು ಗಣನೀಯವಾಗಿ ತಗ್ಗಿಸುವ ಮತ್ತು ಸುಸ್ಥಿರ ಗುರಿಗಳನ್ನು ಸಾಧಿಸಲು ಸಹಕಾರಿಯಾಗಲಿದೆ.

ಜಗತ್ತಿನಾದ್ಯಂತ ಇದೀಗ ಎರಡೂ ಬಗೆಯ ಇಂಧನ [ಎಲ್.ಎನ್.ಜಿ ಮತ್ತು ಡೀಸೆಲ್] ಬಳಕೆಯ ಎಂಜಿನ್ ಹೊಂದಿರುವ ಡಂಪರ್ ಗಳನ್ನು ಉತ್ಪಾದಿಸಲಾಗುತ್ತಿದೆ. ಕಲ್ಲಿದ್ದಲು ಗಣಿಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ವ್ಯವಸ್ಥೆಯಲ್ಲಿ ಹಸಿರು ಮತ್ತು ವೆಚ್ಚ ಪರಿಣಾಮಕಾರಿ ಕಾರ್ಯಾಚರಣೆಗಳ ಕಡೆಗೆ ಇದು ಒಂದು ದೊಡ್ಡ ಹೆಜ್ಜೆಯಾಗಿದೆ.

***


(Release ID: 1751198) Visitor Counter : 235