ಕಲ್ಲಿದ್ದಲು ಸಚಿವಾಲಯ

ಆಜಾ಼ದಿ ಕಾ ಅಮೃತ ಮಹೋತ್ಸವ (ಎಕೆಎಂಎಂ) ಆಚರಣೆ ಭಾಗವಾಗಿ ಕಲ್ಲಿದ್ದಲು ಸಚಿವಾಲಯದ ಕೋಲ್ ಇಂಡಿಯಾ ಲಿಮಿಟೆಡ್ ಕೈಗೊಂಡಿರುವ ಪರಿಸರ ಸ್ನೇಹಿ ಉಪಕ್ರಮಗಳು


ಕ್ಯಾಬ್ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸೆಣಬು ಮತ್ತು ಬಟ್ಟೆ ಕೈಚೀಲ ವಿತರಣೆ

Posted On: 01 SEP 2021 2:42PM by PIB Bengaluru

ಆಜಾ಼ದಿ ಕಾ ಅಮೃತ ಮಹೋತ್ಸವ (ಎಕೆಎಂಎಂ) ಆಚರಣೆ ಭಾಗವಾಗಿ ಕಲ್ಲಿದ್ದಲು ಸಚಿವಾಲಯದ ಕೋಲ್ ಇಂಡಿಯಾ ಲಿಮಿಟೆಡ್ ಕೊಲ್ಕತ್ತಾ ನಗರದ ಒಳಗೆ ಮತ್ತು ಹೊರವಲಯದ ಸುತ್ತಮುತ್ತ ನೂರಾರು ಕ್ಯಾಬ್/ರಿಕ್ಷಾ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸೆಣಬು ಮತ್ತು ಬಟ್ಟೆಯ ಕೈಚೀಲಗಳನ್ನು ವಿತರಿಸುವ ಮೂಲಕ ವಿನೂತನ ಕ್ರಮ ಕೈಗೊಂಡಿದೆ. ಪರಿಸರ ಸ್ನೇಹಿ ಉಪಕ್ರಮದಡಿ ನಗರದ ನಾನಾ ಭಾಗಗಳಲ್ಲಿ ಕೈಚೀಲಗಳ ವಿತರಣೆ ಕಾರ್ಯಕ್ರಮ ಒಂದು ವಾರದವರೆಗೆ ನಡೆಯಲಿದೆ. ಎಕೆಎಎಂ ಬ್ಯಾನರ್ ಗಳಿಂದ ಅಲಂಕೃತಗೊಂಡಿರುವ -ರಿಕ್ಷಾ ಮತ್ತು ವಿತರಣಾ ತಂಡ ಸಂಚಾರ ಕೈಗೊಂಡು ಹಸಿರು ಇಂಧನದ ಸಂದೇಶವನ್ನು ಸಾರಲಿದೆ.

ಅಭಿಯಾನದ ಮೂಲಕ ಆಜಾ಼ದಿ ಕಾ ಅಮೃತ ಮಹೋತ್ಸವದ ಸಂದೇಶವನ್ನು ಪಸರಿಸಲಾಗುವುದು ಮತ್ತು ಜನರು ತಮ್ಮ ದೈನಂದಿನ ಜೀವನದಲ್ಲಿ  ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸಿ, ಪರಿಸರ ಸ್ನೇಹಿ ಆಯ್ಕೆಗಳಾದ ಸೆಣಬು ಮತ್ತು ಬಟ್ಟೆಯ ಕೈಚೀಲಗಳನ್ನು ಬಳಕೆ ಮಾಡಲು ಉತ್ತೇಜನ ನೀಡಲಾಗುವುದು

ಇದಲ್ಲದೆ, ಡಿಎವಿ ಗಿರಿಧ್ ಸಿಸಿಎಲ್ ಗಿರಿಧ್ ಪ್ರದೇಶದಲ್ಲಿ ವಿಶೇಷ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯ ವಿಷಯಗೋ ಗ್ರೀನ್- ಡ್ರಿಂಕ್ ಗ್ರೀನ್’’ ಎಂಬುದಾಗಿತ್ತು. ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲ ಮತ್ತು ಸ್ಫೂರ್ತಿದಾಯಕ ಚಿತ್ರಗಳ ಮೂಲಕ ಸುಸ್ಥಿರ ಅಭಿವೃದ್ಧಿಯ ಸಂದೇಶಗಳನ್ನು ಮತ್ತು ಚಿಂತನೆಗಳನ್ನು ಪ್ರಮುಖವಾಗಿ ಚಿತ್ರಿಸಿದ್ದರು.

***



(Release ID: 1751104) Visitor Counter : 239